ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಜರ್ಮನ್ ಕಾರು ಉತ್ಪಾದನಾ ಕಂಪನಿ ಫೋಕ್ಸ್‌ವ್ಯಾಗನ್ ತನ್ನ ಬಹುನೀರಿಕ್ಷಿತ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಐಡಿ ಸರಣಿ ಮೂಲಕ ಎಲೆಕ್ಟ್ರಿಕ್ ಪರ್ಫಾಮೆನ್ಸ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಹೊಸ ಮ್ಯಾಡುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವ ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಇವಿ ಕಾರು ಮಾದರಿಗಳು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದು, ಹೊಸದಾಗಿ ಅಭಿವೃದ್ದಿಪಡಿಸಲಾಗಿರುವ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ವಿಚಾರದಲ್ಲೂ ಗಮನಸೆಳೆಯಲಿದೆ.

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

2021ರ ಮೊದಲಾರ್ಧದಲ್ಲಿ ಐಡಿ.4 ಜಿಟಿಎಕ್ಸ್ ಅನ್ನು ಬಿಡುಗಡೆ ಯೋಜನೆಯನ್ನು ಖಚಿತಪಡಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಕಾರನ್ನು ಸ್ಪೋರ್ಟಿ ಡ್ಯುಯಲ್-ಮೋಟಾರ್ ಜೋಡಣೆಯೊಂದಿಗೆ ಅನಾವರಣಗೊಳಿಸಿದ್ದು, ಆಕರ್ಷಕ ಡ್ಯುಯಲ್ ಕಲರ್ ಆಯ್ಕೆಯೊಂದಿಗೆ ಗ್ರಾಹಕರನ್ನು ಸೆಳೆಯಲಿದೆ.

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಐಡಿ.4 ಜಿಟಿಎಕ್ಸ್ ರೂಪಾಂತರವು 6.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪಬಲ್ಲ ಶಕ್ತಿಶಾಲಿ ಪವರ್‌ಟ್ರೇನ್ ಹೊಂದಿದ್ದು, ಸ್ಟ್ಯಾಂಡರ್ಡ್ ಐಡಿ.4 ಮಾದರಿಯು 8.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಆದರೆ ಐಡಿ.4 ಜಿಟಿಎಕ್ಸ್ ರೂಪಾಂತರವು ವಿಶೇಷವಾಗಿ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಅಭಿವೃದ್ದಿಗೊಳಿಸುತ್ತಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಆಲ್-ವೀಲ್ ಡ್ರೈವ್ ವ್ಯವಸ್ಥೆಯನ್ನು ಜೋಡಿಸಿದ್ದು, ಹೊಸ ಎಲೆಕ್ಟ್ರಿಕ್ ಕಾರು 295 ಬಿಹೆಚ್‌ಪಿ (225 ಕಿ.ವ್ಯಾ / 306 ಪಿಎಸ್) ಮತ್ತು 339 ಎಲ್‌ಬಿ-ಅಡಿ (460 ಎನ್‌ಎಂ) ಟಾರ್ಕ್ ಉತ್ಪಾದನೆಯನ್ನು ಉತ್ಪಾದಿಸಲಿದೆ.

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಹೊಸ ಐಡಿ.4 ಜಿಟಿಎಕ್ಸ್ ಮಾದರಿಯನ್ನು ಸ್ಟ್ಯಾಂಡರ್ಡ್ ಐಡಿ.4 ಮಾದರಿಗಿಂತೂ ವೇಗವಾಗಿ ಚಾರ್ಜ್ ಮಾಡಬಹುದಾಗಿದ್ದು, ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮೂಲಕ 300 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಆಗಲು ಫಾಸ್ಟ್ ಚಾರ್ಜ್ ಮೂಲಕ ಸುಮಾರು 50 ನಿಮಿಷ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಪೂರ್ಣ ಪ್ರಮಾಣದ ಚಾರ್ಜ್ ಆದ ನಂತರ ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 410 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಬ್ಯಾಟರಿ ರೇಂಜ್ ಮತ್ತು ಪರ್ಫಾಮೆನ್ಸ್ ಆಧಾರದ ಮೇಲೆ ಐಡಿ.4 ಜಿಟಿಎಕ್ಸ್ ಮಾದರಿಯು ಸ್ಟ್ಯಾಂಡರ್ಡ್ ಐಡಿ.4 ಮಾದರಿಗಿಂತ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ. 5 ಲಕ್ಷದಷ್ಟ ದರರ ವ್ಯತ್ಯಾಸ ಹೊಂದಿದ್ದು, ಜರ್ಮನ್‌ನಲ್ಲಿ ಐಡಿ.4 ಜಿಟಿಎಕ್ಸ್ ಮಾದರಿಯು ಸದ್ಯ ರೂ.45 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಇನ್ನು 2025ರ ವೇಳೆಗೆ ಫೋಕ್ಸ್‌ವ್ಯಾಗನ್ ಕಂಪನಿಯು ಬರೋಬ್ಬರಿ 20ಕ್ಕೂ ಹೆಚ್ಚು ಹೊಸ ಎಲೆಕ್ಟ್ರಿಕ್ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜನೆಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಭಾರತದಲ್ಲೂ ತನ್ನ ಮೊದಲ ಇವಿ ಕಾರನ್ನು ಬಿಡುಗಡೆ ಮಾಡಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ

ಫೋಕ್ಸ್‌ವ್ಯಾಗನ್ ಕಂಪನಿಯು ಡೀಸೆಲ್ ಎಂಜಿನ್ ಹಗರಣದಲ್ಲಿ ಸಿಲುಕಿದ ನಂತರ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನೇ ಸ್ಥಗಿತಗೊಳಿಸಿ ಪೆಟ್ರೋಲ್ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಕಾರುಗಳ ಮಾರಾಟವನ್ನು ಸಹ ಹಂತ-ಹಂತವಾಗಿ ಸ್ಥಗಿತಗೊಳಿಸಲಿರುವ ಆಟೋ ಉತ್ಪಾದನಾ ಕಂಪನಿಗಳು ಹೈಬ್ರಿಡ್ ಅಥವಾ ಸಂಪೂರ್ಣವಾಗಿ ಎಲೆಕ್ಟ್ರಿಕ್ ಮಾದರಿಗಳನ್ನು ಮಾತ್ರ ಬಿಡುಗಡೆ ಮಾಡಲಿವೆ.

Most Read Articles

Kannada
English summary
Volkswagen Unveiled The ID.4 GTX Performance Model. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X