ಒಂದೇ ಚಾರ್ಜಿಗೆ 1260 ಕಿ.ಮೀ ಮೈಲೇಜ್: ಹೊಸ ಬ್ಯಾಟರಿ ಆವಿಷ್ಕಾರ.. ಕಾರುಗಳ ಬೆಲೆ ತುಂಬಾ ಅಗ್ಗ?

ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಲಿಥಿಯಂ ಐಯಾನ್ ಬ್ಯಾಟರಿಗೆ ಪರ್ಯಾಯವಾಗಿ 'ಸೀ ಸಾಲ್ಟ್ ಬ್ಯಾಟರಿ'ಯನ್ನು ಸಂಶೋಧಕರು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ. ಇದು ಲಿಥಿಯಂ-ಐಯಾನ್ ಬ್ಯಾಟರಿಗಿಂತ 4 ಪಟ್ಟು ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.

ಭಾರತದಂತಹ ದೇಶದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳನ್ನು ಗ್ರಾಹಕರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಜೊತೆಗೆ ಅಂತಹ ವಾಹನಗಳನ್ನು ಖರೀದಿಸಲು ಬಯಸುತ್ತಿದ್ದಾರೆ. ಆದರೆ, ಅವರಿಗೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಬಿಟ್ಟು, ಎಲೆಕ್ಟ್ರಿಕ್ ಕಾರುಗಳನ್ನು ಕೊಂಡುಕೊಳ್ಳಬೇಕಾದರೆ ಒಂದಲ್ಲ ಎರಡು ಬಾರಿ ಯೋಚಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಅವುಗಳೆಂದರೆ, ಎಲೆಕ್ಟ್ರಿಕ್ ಕಾರುಗಳ ಬೆಲೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಚಾಲಿತ ಕಾರುಗಳ ಬೆಲೆಗಿಂತ ಕೊಂಚ ದುಬಾರಿ.

ಮತ್ತೊಂದು ದೊಡ್ಡ ಸಮಸ್ಯೆಯೆಂದರೆ, ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಿದರೂ ಅದರಿಂದ ಬರುವ ಮೈಲೇಜ್ ತುಂಬಾ ಕಡಿಮೆ. ಪರಿಣಾಮ ಲಾಂಗ್ ಡ್ರೈವ್ ಪ್ಲ್ಯಾನ್ ಗೆ ಎಲೆಕ್ಟ್ರಿಕ್ ಕಾರು ಸೂಕ್ತವಲ್ಲ ಎಂಬುದು ಹಲವು ಮಂದಿಯ ಅಭಿಪ್ರಾಯವಾಗಿದೆ. ರಸ್ತೆಗಳಲ್ಲಿ ಇವಿಗಳನ್ನು ಚಾರ್ಜ್ ಮಾಡಬಹುದಾದರೂ, ಭಾರತದಲ್ಲಿ ಸಾಕಷ್ಟು ಚಾರ್ಜಿಂಗ್ ಸ್ಟೇಷನ್‌ಗಳಿಲ್ಲ. ಇದರಿಂದಾಗಿ ಜನರು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಟಾಟಾ ಟಿಯಾಗೊ ಇವಿ ಪ್ರಸ್ತುತ ಭಾರತದಲ್ಲಿ ಅಗ್ಗದ ಎಲೆಕ್ಟ್ರಿಕ್ ಕಾರು ಆಗಿದೆ.

ಟಾಟಾ ಟಿಯಾಗೊ ಐವಿ ಬೆಲೆ 8.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಒಂದು ಚಾರ್ಜಿಗೆ 315 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು. ಆದರೆ, ಈ ಕಾರಿನ ಟಾಪ್ ಎಂಡ್ ಮಾದರಿ ಬೆಲೆ 10.79 ಲಕ್ಷ ರೂ. ಇದೆ. ಬಹುತೇಕ ಎಲೆಕ್ಟ್ರಿಕ್ ಕಾರಿನ ಬೆಲೆ ಹೆಚ್ಚಳ ಮತ್ತು ಕಡಿಮೆ ಮೈಲೇಜ್ ಸಾಮರ್ಥ್ಯಕ್ಕೆ ಅದರ ಬ್ಯಾಟರಿಯೇ ಕಾರಣ. ಸದ್ಯ ಲಿಥಿಯಂ-ಐಯಾನ್ ಬ್ಯಾಟರಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಪವರ್ ನೀಡುವ ಸಾಮರ್ಥ್ಯವಿರುವ ಬ್ಯಾಟರಿಗಳಾಗಿವೆ.

ಪ್ರಸ್ತುತ ದಿನಗಳಲ್ಲಿ ವಾಹನ ತಯಾರಿಕ ಕಂಪನಿಗಳು, ಈ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುತ್ತಿದ್ದಾರೆ. ಇದು ಬ್ಯಾಟರಿ ಬೆಲೆಯನ್ನು ಹೆಚ್ಚಿಸುವುದರಿಂದ ಸಾಮಾನ್ಯವಾಗಿ ಎಲೆಕ್ಟ್ರಿಕ್ ಕಾರಿನ ಬೆಲೆಯು ಅಧಿಕವಾಗಿರುತ್ತದೆ ಎಂದು ಹೇಳಬಹುದು. ಆದರೆ, ಈ ಬ್ಯಾಟರಿಗೆ ಪರ್ಯಾಯವಾಗಿ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಹತ್ವದ ಸಂಶೋಧನೆಯೊಂದನ್ನು ಮಾಡಿದ್ದಾರೆ. ಸಮುದ್ರದ ನೀರಿನಿಂದ ಉಪ್ಪಿನಂಶವನ್ನು ಹೊರತೆಗೆದು ಅದರಿಂದ ಬ್ಯಾಟರಿ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ.

ಈ ಸಮುದ್ರದ ನೀರಿನ ಉಪ್ಪು ಬ್ಯಾಟರಿಯು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಲಿಥಿಯಂ ಐಯಾನ್ ಬ್ಯಾಟರಿಗೆ ಪರ್ಯಾಯವಾಗಲಿದೆ ಎಂದು ಸಿಡ್ನಿ ವಿ.ವಿಯ ವಿಜ್ಞಾನಿಗಳು ಹೇಳಿದ್ದಾರೆ. ಈ ಬ್ಯಾಟರಿಯನ್ನು 'ಸೀ ಸಾಲ್ಟ್ ಬ್ಯಾಟರಿ' ಅಥವಾ 'ಸೋಡಿಯಂ ಸಲ್ಫರ್ ಬ್ಯಾಟರಿ' ಎಂದು ಕರೆಯಲಾಗುತ್ತದೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಸೋಡಿಯಂ ಸಲ್ಫರ್‌ನಿಂದ ಮಾಡಲಾಗಿದ್ದು, ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ 4 ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ ಎಂದು ಈ ಅಧ್ಯಯನದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಈ ಬ್ಯಾಟರಿ ಮಾರುಕಟ್ಟೆಗೆ ಬಂದರೆ ದೊಡ್ಡ ಕ್ರಾಂತಿಯೇ ಆಗಲಿದೆಯಂತೆ. ಈ ಬ್ಯಾಟರಿಯ ತಯಾರಿಕೆಯ ವೆಚ್ಚವು ತುಂಬಾ ಕಡಿಮೆ ಎಂದು ಹೇಳಲಾಗಿದೆ. ಸಮುದ್ರದ ನೀರಿನ ಉಪ್ಪು ಇದಕ್ಕೆ ಕಚ್ಚಾ ವಸ್ತುವಾಗಿರುವುದರಿಂದ ಇದು ಕೊರತೆಯಾಗುವ ಸಾಧ್ಯತೆಯೇ ಇಲ್ಲ. ಹಾಗಾಗಿ ಲೀಥಿಯಂ ಐಯಾನ್ ಬ್ಯಾಟರಿಗಳ ಬದಲಿಗೆ ಸೋಡಿಯಂ ಸಲ್ಫರ್ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ಕಾರುಗಳಲ್ಲಿ ಅಳವಡಿಸಿದರೆ, ಎಲೆಕ್ಟ್ರಿಕ್ ವಾಹನಗಳ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ. ಅದರ ಮೈಲೇಜ್ 4 ಪಟ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಉದಾಹರಣೆಗೆ, ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು ಟಾಟಾ ಟಿಯಾಗೊದಲ್ಲಿನ ಲಿಥಿಯಂ-ಐಯಾನ್ ಬ್ಯಾಟರಿ ಸದ್ಯ 315 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ, ಈ ಸೋಡಿಯಂ ಸಲ್ಫರ್ ಬ್ಯಾಟರಿಯೊಂದಿಗೆ ಎಲೆಕ್ಟ್ರಿಕ್ ಕಾರು ರೆಡಿಯಾದರೆ ಒಂದೇ ಚಾರ್ಜ್‌ನಲ್ಲಿ 1260 ಕಿ.ಮೀ ವರೆಗೆ ಮೈಲೇಜ್ ನೀಡಬಹುದು. ಅಷ್ಟೇ ಅಲ್ಲ 8 ಲಕ್ಷ ರೂ. ಅಸುಪಾಸಿನಲ್ಲಿರುವ ಇವಿ ಕಾರುಗಳ ಬೆಲೆ 5.39 ಲಕ್ಷ ರೂ.ಆಗಲಿದೆ. ಈ ಬ್ಯಾಟರಿ ಮಾತ್ರ ಮಾರುಕಟ್ಟೆಗೆ ಬಂದರೆ ಯಾರೂ ಸಹ ಪೆಟ್ರೋಲ್ ಡೀಸೆಲ್ ಕಾರುಗಳನ್ನು ಇಷ್ಟಪಡುವುದೇ ಇಲ್ಲ.

Most Read Articles

Kannada
English summary
1260 km mileage on single charge new battery innovation car too cheap
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X