Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ವೆರಿಯೆಂಟ್ ಬಿಡುಗಡೆ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 2022ರ ಎಕ್ಸ್3 ಎಸ್‍ಯುವಿಯ ಎರಡು ಪೆಟ್ರೋಲ್ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯ ಡೀಸೆಲ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.65.50 ಲಕ್ಷವಾಗಿದೆ. ಸ್ಥಳೀಯವಾಗಿ ಉತ್ಪಾದಿಸಲಾದ X3 xDrive20d ಐಷಾರಾಮಿ ವೆರಿಯೆಂಟ್ ರಿಫ್ರೆಶ್ ಮಾಡಿದ ಎಕ್ಸ್3 ಸರಣಿಯನ್ನು ಸೇರುತ್ತದ. ಡೀಸೆಲ್ ವೆರಿಯೆಂಟ್ ನಲ್ಲಿ ಎಂಜಿನ್ ಬದಲಾವಣೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ, ನವೀಕರಿಸಿದ ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯು ಹೆಚ್ಚು ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿದೆ.

2022ರ ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ರೂಪಾಂತರದದಲ್ಲಿ 2.0-ಲೀಟರ್ ನಾಲ್ಕು-ಸಿಲಿಂಡರ್, ಟ್ವಿನ್ ಟರ್ಬೂ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿ ಕೇವಲ 7.9 ಸೆಕೆಂಡ್‌ಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಪಡೆಯುತ್ತದೆ ಇನ್ನು ಈ ಎಸ್‍ಯುವಿ 213 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ ಮರುವಿನ್ಯಾಸಗೊಳಿಸಲಾದ ಬಿಎಂಡಬ್ಲ್ಯು ಕಿಡ್ನಿ ಗ್ರಿಲ್, ಫ್ಲಾಟರ್ ಹೆಡ್‌ಲೈಟ್‌ಗಳು ಮತ್ತು ಹೊಸ ಮುಂಭಾಗದ ಏಪ್ರನ್‌ನೊಂದಿಗೆ, ಹೊಸ ಬಿಎಂಡಬ್ಲ್ಯು ಎಕ್ಸ್3 ಸಂಪೂರ್ಣವಾಗಿ ರಿಫ್ರೆಶ್ ವಿನ್ಯಾಸವನ್ನು ಒಳಗೊಂಡಿದೆ.

ಹೆಚ್ಚು ಗಮನಾರ್ಹವಾದ ಆಕಾರದ ಮತ್ತು ದೊಡ್ಡದಾದ ಬಿಎಂಡಬ್ಲ್ಯುಕಿಡ್ನಿ ಗ್ರಿಲ್ ಈಗ ಸಿಂಗಲ್-ಪೀಸ್ ಫ್ರೇಮ್ ಅನ್ನು ಒಳಗೊಂಡಿದೆ. ಮ್ಯಾಟ್ರಿಕ್ಸ್ ಫಂಕ್ಷನ್‌ನೊಂದಿಗೆ ಮುಂಭಾಗದ ವೈಶಿಷ್ಟ್ಯ ಅಡಾಪ್ಟಿವ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ. ಈ ಎಸ್‍ಯುವಿ ಹೊಸ ಸ್ಲಿಮ್ಮರ್ ಎಲ್ಇಡಿ ಟೈಲ್‌ಲೈಟ್‌ಗಳ ಜೊತೆಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ರಿಪ್ರೊಫೈಲ್ಡ್ ಬಂಪರ್‌ಗಳನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 19-ಇಂಚಿನ ಅಲಾಯ್ ವ್ಹೀಲ್ ಎದ್ದು ಕಾಣುವಂತೆ ಇದೆ,

ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯ ಒಳಭಾಗದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.

ಇನ್ನು ನವೀಕರಿಸಿದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹರ್ಮನ್-ಕಾರ್ಡನ್ ಮ್ಯೂಸಿಕ್ ಸಿಸ್ಟಂ, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಪನರೋಮಿಕ್ ಸನ್ ರೂಫ್, ಆಂಬಿಯೆಂಟ್ ಲೈಟಿಂಗ್, ಮೂರು-ವಲಯ ಕ್ಲೈಮೇಂಟ್ ಕಂಟ್ರೋಲ್ ಸೇರಿದಂತೆ ಇತ್ಯಾದಿ ಫೀಚರ್ಸ್ ಗಳನ್ನು ಹೊಂದಿವೆ.

ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿ ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಇ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಅಟೆನ್ಟಿವ್‌ನೆಸ್ ಅಸಿಸ್ಟೆನ್ಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC) ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (CBC), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಜೊತೆಗೆ ಆಟೋ ಹೋಲ್ಡ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬಿಲೈಸರ್ ಮತ್ತು ಕ್ರ್ಯಾಶ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟಿಂಗ್ ಮತ್ತು ಇತರ ಫೀಚರ್ಸ್ ಗಳನ್ನು ನೀಡಿದೆ,

ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿ ಪೆಟ್ರೋಲ್ ರೂಪಾಂತರಗಳಲ್ಲಿ 2.0-ಲೀಟರ್, ನಾಲ್ಕು-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 252 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ, ಈ ಎಂಜಿನ್ ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕೂಡ ಜೋಡಿಸಲಾಗುತ್ತದೆ.

ಬಿಎಂಡಬ್ಲ್ಯು ತನ್ನ ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಕಂಪನಿಯ ಭಾರತದ ಸಾಲಿನಲ್ಲಿ ಇದು 10 ನೇ ಉನ್ನತ-ಕಾರ್ಯಕ್ಷಮತೆಯ ಎಂ ಉತ್ಪನ್ನವಾಗಿದೆ. ಹೊಸ ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಮಾದರಿಯು 4 ಸೀರಿಸ್ ಮಾದರಿಯ ವಿನ್ಯಾಸ ಶೈಲಿಯನ್ನು ಆಧರಿಸಿದೆ, ಎರಡರ ನಡುವೆ ವ್ಯತ್ಯಾಸವನ್ನುಂಟುಮಾಡಲು ಎಂ ನಿರ್ದಿಷ್ಟ ಬದಲಾವಣೆಗಳೊಂದಿಗೆ, ಇದು ಅದರ ಸ್ಟ್ಯಾಂಡರ್ಡ್ ಮಾದರಿಯ ಅನುಪಾತದಲ್ಲಿರುತ್ತದೆ. ಈ ಹೊಸ ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ 3.0-ಲೀಟರ್, ಟ್ವಿನ್-ಟರ್ಬೊ, ನೇರ-ಆರು ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 501 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ M ಸ್ಟೆಪ್ಟ್ರಾನಿಕ್‌ಗೆ ಸಂಯೋಜಿತವಾಗಿದೆ, ಇದು ಎಕ್ಸ್‌ಡ್ರೈವ್ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ನೀಡುತ್ತದೆ. ಇದು ಸುಮಾರು 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಸಂಪೂರ್ಣ-ವೇರಿಯಬಲ್, ಸಿಸ್ಟಂ ಎಲೆಕ್ಟ್ರಾನಿಕ್ ನಿಯಂತ್ರಿತ ಮಲ್ಟಿ-ಪ್ಲೇಟ್ ಕ್ಲಚ್ ಮೂಲಕ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ನಡುವೆ ಟಾರ್ಕ್ ಅನ್ನು ವಿತರಿಸುತ್ತದೆ, ಎಂ ಆಕ್ಟಿವ್ ಡಿಫರೆನ್ಷಿಯಲ್ ಹಿಂಭಾಗದ ಆಕ್ಸಲ್‌ನಲ್ಲಿ ಟಾರ್ಕ್ ವಿತರಣೆಯನ್ನು ನೋಡಿಕೊಳ್ಳುತ್ತದೆ. ಇ

ಹೊಸ ಅಪ್‌ಡೇಟ್‌ಗಳು ಮತ್ತು ಟ್ವೀಕ್‌ಗಳೊಂದಿಗೆ ಫೇಸ್‌ಲಿಫ್ಟೆಡ್ ಬಿಎಂಡಬ್ಲ್ಯು ಎಕ್ಸ್3 ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ, ಆಡಿ ಕ್ಯೂ5 ಫೇಸ್‌ಲಿಫ್ಟ್, ಲೆಕ್ಸರ್ ಎನ್ಎಕ್ಸ್, ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.