Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹುನಿರೀಕ್ಷಿತ ಆಡಿ A6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್ ಕಾರು ಅನಾವರಣ
ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ, ತನ್ನ ಬಹುನಿರೀಕ್ಷಿತ ಎ6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್ (Audi A6 Avant e-tron Concept) ಮಾದರಿಯನ್ನು ಅನಾವರಣಗೊಳಿಸಿದೆ. ಈ ಉತ್ಪಾದನಾ ಮಾದರಿಯು 2024ರಲ್ಲಿ ಮಾರುಕಟ್ಟೆಗೆ ಬರಲಿದೆ.

ಆಡಿ ಎ6 ಅವಂತ್ ಇ-ಟ್ರಾನ್, ಕಳೆದ ಎರಡು ವರ್ಷಗಳ ಹಿಂದೆ ಆಡಿಯ ವಾರ್ಷಿಕ ಮಾಧ್ಯಮ ಸಮ್ಮೇಳನದಲ್ಲಿ ಅನಾವರಣಗೊಂಡ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯ ಶೋ ಕಾರನ್ನು ಹೋಲುತ್ತದೆ. 2021ರ ಶಾಂಘೈ ಮೋಟಾರ್ ಶೋನಲ್ಲಿ ಬಹಿರಂಗಪಡಿಸಿದ A6 ಸ್ಪೋರ್ಟ್‌ಬ್ಯಾಕ್ ಎಲೆಕ್ಟ್ರಿಕ್ ಕಾರಿನ ನಂತರ ಹೊರಬರುತ್ತಿರುವ ಎರಡನೇ EV ಆಗಿ ಹೊಸ ಆಡಿ ಎ6 ಅವಂತ್ ಇ-ಟ್ರಾನ್ ಹೊರಹೊಮ್ಮುತ್ತಿದೆ.

ಹೊಸ ಆಡಿ ಎ6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್‌ನ ತಾಂತ್ರಿಕ ಅಭಿವೃದ್ಧಿ ಕುರಿತು ಮಾತನಾಡಿದ ಆಡಿ ಮಂಡಳಿಯ ಸದಸ್ಯ ಆಲಿವರ್ ಹಾಫ್‌ಮನ್, "ಆಡಿ ಎ6 ಅವಂತ್ ಇ-ಟ್ರಾನ್ ಪರಿಕಲ್ಪನೆಯೊಂದಿಗೆ ನಮ್ಮ ಹೊಸ PPE ತಂತ್ರಜ್ಞಾನ ವೇದಿಕೆಯಲ್ಲಿ ಭವಿಷ್ಯದ ಉತ್ಪಾದನಾ ಮಾದರಿಗಳ ಸಂಪೂರ್ಣ ಚಿತ್ರಣವನ್ನು ನೀಡುತ್ತಿದ್ದೇವೆಯೇ ಹೊರತು ಅವಂತ್‌ನ 45 ವರ್ಷಗಳ ಯಶಸ್ವಿ ಇತಿಹಾಸವನ್ನು ವಿದ್ಯುನ್ಮಾನಗೊಳಿಸುತ್ತಿಲ್ಲ. ಎಲ್ಲರನ್ನು ಆಶ್ಚರ್ಯಕ್ಕೆ ಗುರಿಪಡಿಸುವಂತಹ ತಾಂತ್ರಿಕ ಕೌಶಲ್ಯವನ್ನು ನಮ್ಮ ಮಾದರಿಗಳಲ್ಲಿ ನೀಡಲು ಶ್ರಮಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಶಕ್ತಿಯುತ 800 ವೋಲ್ಟ್ ತಂತ್ರಜ್ಞಾನ, 270 kW ಚಾರ್ಜಿಂಗ್ ಸಾಮರ್ಥ್ಯ ಮತ್ತು WLTP ಅನ್ನು ಅವಂತ್‌ನಲ್ಲಿ ಬಳಸಿದ್ದು, ಈ ಮೂಲಕ 700 ಕಿಲೋಮೀಟರ್ ವ್ಯಾಪ್ತಿ ನೀಡುವಂತೆ ನಿರ್ಮಿಸಲಾಗಿದೆ ಎಂದರು."

ಆಡಿ ಎ6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್‌ನ ವಿಶೇಷತೆಗಳು
ಜರ್ಮನಿ ಕಾರು ತಯಾರಕರು ನೀಡಿರುವ ಮಾಹಿತಿಯ ಪ್ರಕಾರ, ಆಡಿ ಎ6 ಅವಂತ್ ಇ-ಟ್ರಾನ್ ಸುಮಾರು 100kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಒಂದೇ ಚಾರ್ಜ್‌ನಲ್ಲಿ 700 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುತ್ತದೆ. A6 ಅವಂತ್ ಇ-ಟ್ರಾನ್ ಪರಿಕಲ್ಪನೆಯ ಬ್ಯಾಟರಿ ಪ್ಯಾಕ್ ಡ್ಯುಯಲ್-ಮೋಟರ್ ಸೆಟಪ್‌ನಿಂದಾಗಿ 469bhp ಮತ್ತು 800Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಬಲ್ಲದು.

ಈ ಅವಳಿ ಮೋಟಾರ್ ಸೆಟಪ್ ನಿಂದಾಗಿ ಕೇವಲ 4 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 100km/h ವೇಗವನ್ನು ತಲುಪುತ್ತದೆ. ಇನ್ನು ಎ6 ಅವಂತ್ ಇ-ಟ್ರಾನ್‌ನ ಸಿಂಗಲ್ ಮೋಟಾರು ಆವೃತ್ತಿಯು 7 ಸೆಕೆಂಡುಗಳಲ್ಲಿ 100km/h ಸ್ಪೀಡ್ ತಲುಪುತ್ತದೆ.

ಆಡಿ ಎ6 ಅವಂತ್ ಇ-ಟ್ರಾನ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಪ್ರೀಮಿಯಂ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಮುಂಬರುವ ಆಡಿ ಮತ್ತು ಪೋರ್ಷೆ EV ಗಳಿಗೆ ಆಧಾರವಾಗಿದೆ. ಆಡಿಯ ಇತ್ತೀಚಿನ ಇ-ಟ್ರಾನ್ ಕಾನ್ಸೆಪ್ಟ್ ಕಾರು 4.96 ಮೀಟರ್ ಉದ್ದ, 1.96 ಮೀಟರ್ ಅಗಲ ಮತ್ತು 1.44 ಮೀಟರ್ ಎತ್ತರವಿದೆ.

ಈ ಕಾನ್ಸೆಪ್ಟ್‌ನ ಎಲೆಕ್ಟ್ರಿಕ್ A6 ಎಸ್ಟೇಟ್, 800V ಎಲೆಕ್ಟ್ರಿಕ್ ಆರ್ಕಿಟೆಕ್ಚರ್‌ನಿಂದ ಪ್ರೇರಿತವಾಗಿರುವುದರಿಂದ ಇದು 270kW ವೇಗದಲ್ಲಿ ಚಾರ್ಜಿಂಗ್ ಮಾಡಲು ಸಹಾಯಕವಾಗಿದೆ. ಆಡಿ ಎ6 ಅವಂತ್ ಇ-ಟ್ರಾನ್ ಕೇವಲ 25 ನಿಮಿಷಗಳಲ್ಲಿ ಶೇ5 ರಿಂದ ಶೇ80ರ ವರೆಗೆ ಚಾರ್ಜ್ ಆಗುತ್ತದೆ ಎಂದು ಆಡಿ ಹೇಳಿಕೊಂಡಿದೆ. ಅಲ್ಲದೆ ಪ್ರತಿ 10-ನಿಮಿಷದ ಚಾರ್ಜ್‌ನಿಂದ ಈ ಎಲೆಕ್ಟ್ರಿಕ್ ಕಾರಿಗೆ 300 ಕಿಲೋಮೀಟರ್ ಚಲಿಸುವ ಸಾಮರ್ಥ್ಯವಿದೆ.

ಆಡಿ A6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್ ವಿನ್ಯಾಸ, ವೈಶಿಷ್ಟ್ಯಗಳು
ಆಡಿ ಎ6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್ 2024 ರಲ್ಲಿ ಬರಲಿರುವ ಭವಿಷ್ಯದ ಮಾದರಿಯ ವಿನ್ಯಾಸದ ಸಂಪೂರ್ಣ ಚಿತ್ರಣವನ್ನು ತೋರುತ್ತಿದೆ. ಕಾರಿನ ಮುಂಭಾಗದ ತುದಿಯಲ್ಲಿ, ಆಡಿ ಸಿಗ್ನೇಚರ್ ರಿಂಗ್‌ಗಳನ್ನು ಸಿಂಗಲ್-ಫ್ರೇಮ್ ಗ್ರಿಲ್ ಅಂಶದಲ್ಲಿ ಹುದುಗಿಸಲಾಗಿದೆ. ಮುಂಭಾಗದ ಆಡಿ ಬ್ಯಾಡ್ಜ್ ಪ್ರಕಾಶಿತ ಘಟಕವಾಗಿದ್ದು, 'ಗ್ರಿಲ್' ಸ್ಪೋರ್ಟ್ಸ್ ಕೋಲಿಂಗ್ ವೆಂಟ್‌ಗಳು ಎರಡೂ ಬದಿಯಲ್ಲಿದೆ. ಇವನ್ನು ಅಲ್ಟ್ರಾ-ಸ್ಲೀಕ್ ಮ್ಯಾಟ್ರಿಕ್ಸ್ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳ ಅಡಿಯಲ್ಲಿ ನೀಡಲಾಗಿದೆ.

ಕಾನ್ಸೆಪ್ಟ್ ಕಾರ್ ದೊಡ್ಡ 22-ಇಂಚಿನ ಡೈಮಂಡ್-ಕಟ್ ಮಿಶ್ರಲೋಹದ ವೀಲ್‌ಗಳ ಮೇಲೆ ನಿಂತಿದ್ದು ಆಕರ್ಷಕ ಲುಕ್‌ನಲ್ಲಿ ಕಾಣುತ್ತದೆ. ಆಡಿ ಎ6 ಅವಂತ್ ಇ-ಟ್ರಾನ್‌ನ ಬದಿಗಳು ಗಾಳಿಯ ಹರಿವನ್ನು ಅನುಮತಿಸುವಂತೆ ಡಿಸೈನ್ ಮಾಡಲಾಗಿದೆ. ಹಿಂಭಾಗದಲ್ಲಿ, ಲೈಟ್‌ಬಾರ್ ಶೈಲಿಯ OLED ಟೈಲ್‌ಲೈಟ್‌ಗಳು ಗ್ರಾಫಿಕ್ಸ್ ಅನ್ನು ಒಳಗೊಂಡು ಆಡಿ ಬ್ಯಾಡ್ಜ್ ಅನ್ನು ಸಹ ಸಂಯೋಜಿಸುತ್ತವೆ. ಕಾನ್ಸೆಪ್ಟ್ ಕಾರಿನ ಹಿಂಭಾಗದಲ್ಲಿ ದೊಡ್ಡ ಡಿಫ್ಯೂಸರ್ ವಿಭಾಗವನ್ನು ಕಾಣಬಹುದು, ಇದು ಕಾರಿನ ಅಡಿಯಲ್ಲಿ ಹರಿಯುವ ಗಾಳಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಆಡಿ ಎ6 ಅವಂತ್ ಇ-ಟ್ರಾನ್, ಆಡಿಯ ಸೂಪರ್ ಎಸ್ಟೇಟ್ ಕಾರಿನ ಭವಿಷ್ಯದ ಮಾದರಿಯಾಗಿದ್ದು, ಇದರ ವಿನ್ಯಾಸವು ಕ್ಲಾಸಿಕ್ ಆಡಿಯಂತಿದೆ. ಈಗಾಗಲೇ ಆಡಿ ಅಭಿಮಾನಿಗಳು ಈ ಕಾರಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಆರ್ಎಸ್ ವಿಭಾಗದಲ್ಲಿನ ಕೆಲ ಮಾದರಿಗಳನ್ನು ಆಡಿ ನೀಡುತ್ತಿದ್ದು ಅದರ ಭಾಗವಾಗಿ ಹೊರಹೊಮ್ಮಿರುವ ಬಾಂಕರ್ಸ್ RS6ನ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ 2024ರ ವರೆಗೆ ಅಭಿಮಾನಿಗಳು ಕಾಯುವಂತೆ ತಿಳಿಸಿದೆ.