ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಎಕ್ಸ್5 ಸರಣಿಯಲ್ಲಿ ಹೊಸ ವೆರಿಯೆಂಟ್ ಒಂದನ್ನು ಪರಿಚಯಿಸಿದ್ದು, ಹೊಸ ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಬಿಡುಗಡೆಯಾಗಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಹೊಸ ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಎಕ್ಸ್5 ಸರಣಿಯ ಟಾಪ್ ಎಂಡ್ ಆವೃತ್ತಿಯಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 97.90 ಲಕ್ಷ ಬೆಲೆ ಹೊಂದಿದೆ. ಹೊಸ ಮಾದರಿಯೊಂದಿಗೆ ಕಂಪನಿಯು ಹೆಚ್ಚಿನ ಮಟ್ಟದ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರನ್ನು ಸೆಳೆಯಲಿದ್ದು, ಸ್ಪೋರ್ಟಿ ವಿನ್ಯಾಸ ಮತ್ತು ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿರುವಂತೆ 3.0-ಲೀಟರ್, ಆರು ಸಿಲಿಂಡರ್ ಹೊಂದಿರುವ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 262 ಬಿಎಚ್‌ಪಿ ಮತ್ತು 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನಲ್ಲಿ xDrive ಆಲ್ ವ್ಹೀಲ್ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿ ಪೂರೈಸಲಿಸಲಿದ್ದು, ಸ್ಪೋರ್ಟ್ಎಕ್ಸ್ ಪ್ಲಸ್ ರೂಪಾಂತರಕ್ಕೆ ಹೋಲಿಸಿದರೆ, ಹೊಸ ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಮಾದರಿಯು ಸಾಕಷ್ಟು ಹೊಸ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಹೊಸ ವೈಶಿಷ್ಟ್ಯತೆಗಳ ಪಟ್ಟಿಯಲ್ಲಿ ಸ್ಟೀರಿಂಗ್ ಚಕ್ರದ ಹಿಂದೆ ಪ್ಯಾಡಲ್ ಶಿಫ್ಟರ್‌ಗಳು ಪ್ರಮುಖವಾಗಿದ್ದು, ಲಾಂಚ್ ಕಂಟ್ರೋಲ್ ಫಂಕ್ಷನ್, ಅಡಾಪ್ಟಿವ್ ಟು-ಆಕ್ಸಲ್ ಏರ್ ಸಸ್ಪೆನ್ಷನ್, ವಿದ್ಯುತ್ ಚಾಲಿತ ಟೈಲ್-ಗೇಟ್, ಬಿಎಂಡಬ್ಲ್ಯು ಲೇಸರ್‌ಲೈಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಮುಂಭಾಗದ ಪ್ರಯಾಣಿಕರಿಗೆ ಆರಾಮದಾಯಕ ಆಸನಗಳು, ಎಂ-ಸ್ಪೆಕ್ ಲೆದರ್ ಸ್ಟೀರಿಂಗ್ ವೀಲ್ಹ್ ಮತ್ತು ಟ್ರಾವೆಲ್ ವೀಲ್ಹ್ ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಇದರ ಹೊರತಾಗಿ ಹೊಸ ರೂಪಾಂತರದಲ್ಲಿ ಬಿಎಂಡಬ್ಲ್ಯು ಡಿಸ್ಪ್ಲೇ-ಕೀ, ಹೆಡ್ ಅಪ್ ಡಿಸ್ಲೈ, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, 16-ಸ್ಪೀಕರ್, 360-ಡಿಗ್ರಿ ಕ್ಯಾಮೆರಾ, ಹೊಸ ಇಂಟೀರಿಯರ್ ಟ್ರಿಮ್‌ಗಳು ಮತ್ತು ಲೆದರ್ ಅಪ್ಹೋಲ್ಸ್ಟರಿ ಮತ್ತು 20-ಇಂಚಿನ ಎಂ-ಸ್ಪೆಕ್ ಅಲಾಯ್ ಚಕ್ರಗಳನ್ನು ನೋಡಬಹುದು.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಮಾದರಿಯ ಹೊರಭಾಗದಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಎಂ ಸ್ಪೋರ್ಟ್ ಡಿಸೈನ್ ನೀಡಲಾಗಿದ್ದು, ಇದರಲ್ಲಿ ಎಂ-ಸ್ಪೆಕ್ ಮುಂಭಾಗದ ಏಪ್ರನ್, ಸೈಡ್ ಸ್ಕರ್ಟ್‌ಗಳು ಮತ್ತು ಬಾಡಿ ಕಲರ್ಡ್ ವೀಲ್ ಆರ್ಚ್ ಟ್ರಿಮ್‌ಗಳು, ಎಂ-ಸ್ಪೆಕ್ ನೀಲಿ ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳು, ಹಿಂಭಾಗದ ಡಿಫ್ಯೂಸರ್, ಎಂ ಸ್ಪೋರ್ಟ್- ಕಾರ್-ಕೀಗಳು, ಸೈಡ್ ಪ್ರೊಫೈಲ್‌ನಲ್ಲಿ ಎಂ ಸ್ಪೋರ್ಟ್ ಲೋಗೋ, ಹೊಸ ಟೈಲ್ ಪೈಪ್‌ಗಳಂತಹ ವಿಶೇಷ ಅಂಶಗಳನ್ನು ಸೇರಿಸಲಾಗಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಇನ್ನು ಜರ್ಮನ್ ಕಾರು ತಯಾರಕ ಕಂಪನಿಯಾಗಿರುವ ಬಿಎಂಡಬ್ಲ್ಯು ದೇಶಿಯ ಮಾರುಕಟ್ಟೆಯಲ್ಲಿನ ತನ್ನ ವಿವಿಧ ಕಾರು ಶ್ರೇಣಿಯ ಬೆಲೆ ಹೆಚ್ಚಿಸಿದ್ದು, ಕಳೆದ ತಿಂಗಳಿನಿಂದ ಪ್ರಮುಖ ಕಾರು ಮಾದರಿಗಳು ನಿರಂತರವಾಗಿ ಬೆಲೆ ಏರಿಕೆ ಪಡೆದುಕೊಳ್ಳುತ್ತಿವೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಆಟೋ ಬಿಡಿಭಾಗಗಳ ವೆಚ್ಚವು ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಿಸಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 26 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕೆಲವು ಮಾದರಿಗಳನ್ನು ಭಾರತದಲ್ಲಿ ಅಭಿವೃದ್ದಿಗೊಳಿಸುತ್ತಿದ್ದರೆ ಇನ್ನು ಕೆಲವು ಮಾದರಿಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುತ್ತದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಸಿಬಿಯು ಆಮದು ನೀತಿಯಲ್ಲಿ ಮಾರಾಟವಾಗುತ್ತಿರುವ ಬಿಎಂಡಬ್ಲ್ಯು ಪ್ರಮುಖ ಕಾರು ಮಾದರಿಗಳು ಹೆಚ್ಚಿನ ಮಟ್ಟದ ಬೆಲೆಯಲ್ಲೂ ಉತ್ತಮ ಬೇಡಿಕೆ ಹೊಂದಿದ್ದು, ಭಾರತದಲ್ಲಿ ಸದ್ಯ ಐಷಾರಾಮಿ ಕಾರು ಮಾರಾಟದಲ್ಲಿ ಮರ್ಸಿಸಿಡ್ ಬೆಂಝ್ ನಂತರ ಬಿಎಂಡಬ್ಲ್ಯು ಕಂಪನಿಯೇ ಎರಡನೇ ಸ್ಥಾನದಲ್ಲಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು 2 ಸೀರಿಸ್‌ನಲ್ಲಿ ಗ್ರ್ಯಾನ್ ಕೂಪೆ, ಸೀರಿಸ್ 3ರಲ್ಲಿ ಗ್ರ್ಯಾನ್ ಲಿಮೊಸಿನ್ ಮತ್ತು ಎಂ340ಐ ಎಕ್ಸ್‌ಡ್ರೈವ್, ಸೀರಿಸ್ 5ರಲ್ಲಿ ಸೀರಿಸ್ 5 ಸೆಡಾನ್, ಸೀರಿಸ್ 6 ರಲ್ಲಿ 6 ಸೀರಿಸ್ ಗ್ರ್ಯಾನ್ ಟ್ಯೂರಿಸ್ಮೊ, 7 ಸೀರಿಸ್‌ನಲ್ಲಿ 7 ಸೀರಿಸ್ ಸೆಡಾನ್, ಸೀರಿಸ್ 8ರಲ್ಲಿ ಗ್ರ್ಯಾನ್ ಕೂಪೆ, ಎಕ್ಸ್ ಸರಣಿಯಲ್ಲಿ ಎಕ್ಸ್1, ಎಕ್ಸ್3, ಎಕ್ಸ್4, ಎಕ್ಸ್5, ಎಕ್ಸ್6, ಎಕ್ಸ್7, ಜೆಡ್ ಸರಣಿಯಲ್ಲಿ ಜೆಡ್4 ರೋಡ್‌ಸ್ಟರ್ ಮಾದರಿಗಳನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಹಾಗೆಯೇ ಎಂ ಸರಣಿಯಲ್ಲಿ ಎಂ2 ಕಾಂಪಿಟೇಷನ್, ಎಂ4 ಕಾಂಪಿಟೇಷನ್ ಕೂಪೆ ಜೊತೆ ಎಂ ಎಕ್ಸ್‌ಡ್ರೈವ್, ಎಂ5 ಕಾಂಪಿಟೇಷನ್, ಎಂ760ಐ, ಜೆಡ್4 ಎಂ40ಐ, ಎಂ8 ಕೂಪೆ, ಎಕ್ಸ್5 ಎಂ ಕಾಂಪಿಟೇಷನ್, ಎಕ್ಸ್7 ಎಂ50ಡಿ, 3 ಸೀರಿಸ್ ಎಂ340ಐ ಎಕ್ಸ್‌ಡ್ರೈವ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಐಎಕ್ಸ್ ಎಲೆಕ್ಟ್ರಿಕ್ ಮಾದರಿಯನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರು ಮಾರಾಟವನ್ನು ತೀವ್ರಗೊಳಿಸುತ್ತಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

Most Read Articles

Kannada
English summary
Bmw x5 xdrive 30d m sport launched in india details
Story first published: Tuesday, July 26, 2022, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X