ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಹೊಸದಾಗಿ 50ಎಂ ಜಹ್ರೇ ಎಂ ಎಡಿಷನ್ ಬಿಡುಗಡೆಗೊಳಿಸುತ್ತಿದೆ.

Recommended Video

590 ಕಿ.ಮೀ ಮೈಲೇಜ್ ನೀಡುವ BMW i4 ಬಿಡುಗಡೆ | 340bhp, 430Nm, 0-100 In 5.7 Seconds & More

ಕಂಪನಿಯು ಇದೀಗ ಹೊಸ ಎಕ್ಸ್7 40ಐ ಎಂ ಸ್ಪೋರ್ಟ್ ಮಾದರಿಯಲ್ಲೂ ಕೂಡಾ ವಿನೂತನ ವಿನ್ಯಾಸದ 50 ಜಹ್ರೇ ಎಂ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಹೊಸ ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್ ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.20 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರು ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಆರಂಭಗೊಳ್ಳುವುದಾಗಿ ಬಿಎಂಡಬ್ಲ್ಯು ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ವಿಶೇಷ ಆವೃತ್ತಿಯಾಗಿರುವುದರಿಂದ ಬಿಎಂಡಬ್ಲ್ಯ ಕಂಪನಿಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್ ಅನ್ನು ಕೇವಲ 10 ಯುನಿಟ್‌ಗಳೊಂದಿಗೆ ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಪರ್ಫಾಮೆನ್ಸ್‌ಗಾಗಿಯೇ ವಿಶೇಷವಾಗಿ ಸಿದ್ದವಾಗಿರುವ ಎಂ ಸರಣಿಯ ಮೂಲಕ ಕಂಪನಿಯು ಉತ್ತಮ ಬೇಡಿಕೆ ಹೊಂದಿದ್ದು, ಎಂ ಸರಣಿ ಬಿಡುಗಡೆ ಮಾಡಿದ 50ನೇ ವರ್ಷದ ಸಂಭ್ರಮಾಚರಣೆಗಾಗಿ 50 ಜಹ್ರೆ ಎಂ ಎಡಿಷನ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಈಗಾಗಗೇ ಬಿಎಂಡಬ್ಲ್ಯ ಕಂಪನಿಯು ಸುಮಾರು 5 ಕಾರು ಮಾದರಿಗಳಲ್ಲಿ 50 ಜಹ್ರೇ ಎಂ ಎಡಿಷನ್ ಬಿಡುಗಡೆ ಮಾಡಿದ್ದು, ಇದೀಗ ಹೊಸದಾಗಿ ಕಂಪನಿಯು ಎಕ್ಸ್7 40ಐ ಎಂ ಸ್ಪೋರ್ಟ್ 50 ನಲ್ಲೂ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಎಂ ಸೀರಿಸ್‌ನಲ್ಲಿ 50ನೇ ವರ್ಷದ ಸಂಭ್ರಮಾಚರಣೆಗಾಗಿ ಬಿಎಂಡಬ್ಲ್ಯು ಕಂಪನಿಯು ಇನ್ನು ಹತ್ತು ಹೊಸ ಮಾದರಿಗಳನ್ನು ಪರಿಚಯಿಸುವ ಸುಳಿವು ನೀಡಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಜಹ್ರೆ ಆವೃತ್ತಿಯು ಪ್ರಮುಖ ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡಿದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್‌ನಲ್ಲಿ ಕಂಪನಿಯು ಕಿಡ್ನಿ ಗ್ರಿಲ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಫಿನಿಶ್‌ ನೀಡಿದ್ದು, ವೀಲ್ ಹಬ್ ಕ್ಯಾಪ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದಲ್ಲಿ 'M' ಬ್ಯಾಡ್ಜ್ ಮೂಲಕ ಗಮನಸೆಳೆಯುತ್ತದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ವಿಷೇಷ ಆವೃತ್ತಿಯನ್ನು ಕಂಪನಿಯು ಹೊಸ ಸೌಲಭ್ಯಗಳೊಂದಿಗೆ ಮಿನರಲ್ ವೈಟ್ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳನ್ನು ನೀಡಿದ್ದು, 21-ಇಂಚಿನ ಜೆಟ್ ಬ್ಲ್ಯಾಕ್ ಮಿಶ್ರಲೋಹದ ಚಕ್ರಗಳೊಂದಿಗೆ ಬರುತ್ತದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಇದರೊಂದಿಗೆ ಹೊಸ ಕಾರಿನಲ್ಲಿ ಇನ್ನು ಫೀಚರ್ಸ್‌ಗಳನ್ನು ಬಯಸುವ ಗ್ರಾಹಕರಿಗ ಆಯ್ಕೆ ಮಾಡಲು M ಪರಿಕರಗಳ ಪ್ಯಾಕೇಜ್ ಅನ್ನು ಪರಿಚಯಿಸಿದ್ದು, ಅಲ್ಕಾಂಟರಾ ಇಂಟಿಯರ್ ಜೊತೆಗೆ ಕಾರ್ಬನ್ ಫೈಬರ್ ಎಂ ಸ್ಟೀರಿಂಗ್ ವ್ಹೀಲ್, ಮಿರರ್ ಕ್ಯಾಪ್‌ಗಳು ಮತ್ತು ಕೀ ಫೋಬ್ ಒಳಗೊಂಡಿದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಐಷಾರಾಮಿ ಕ್ಯಾಬಿನ್ ಸೇರಿದಂತೆ M ಬ್ಯಾಡ್ಜ್ ಹೊಂದಿರುವ ಸೀಟ್ ಬೆಲ್ಟ್‌ಗಳು, ವೆಂಟಿಲೆಷನ್ ಹೊಂದಿರುವ ವಿದ್ಯುತ್-ಹೊಂದಾಣಿಕೆಯ ಸೀಟುಗಳು ಮತ್ತು ಮಿರರ್‌ಗಳಿಗಳಲ್ಲಿ ಆಂಟಿ-ಡ್ಯಾಝಲ್ ವೈಶಿಷ್ಟ್ಯತೆಗಳನ್ನು ಹೊಂದಿವೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಒಳಭಾಗದಲ್ಲಿರುವ ಇತರೆ ತಾಂತ್ರಿಕ ಸೌಲಭ್ಯಗಳ ಬಗೆಗೆ ಹೇಳುವುದಾದರೇ ಅತ್ಯುತ್ತಮ ಪನೋರಮಿಕ್ ಸನ್‌ರೂಫ್, 12.3-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 12.3-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್, 3D ನ್ಯಾವಿಗೇಷನ್, ಹಿಂಬದಿಯ ಆಸನದಲ್ಲಿ 10.2-ಇಂಚಿನ ಪೂರ್ಣ-ಎಚ್‌ಡಿ ವ್ಯೂ ಹೊಂದಿರುವ ಹಿಂಭಾಗದ ಸೀಟ್ ಮನರಂಜನಾ ಪರದೆಗಳು, 16-ಸ್ಪೀಕರ್ ಹರ್ಮನ್ ಕಾರ್ಡನ್ ಸ್ಪೀಕರ್ ಸಿಸ್ಟಂ ಸೌಲಭ್ಯವಿವೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ 3.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್, 6-ಸಿಲಿಂಡರ್ ಎಂಜಿನ್‌ ನೀಡಲಾಗಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌‌ನೊಂದಿಗೆ 340 ಬಿಎಚ್‌ಪಿ ಮತ್ತು 450 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನಲ್ಲಿ ಆಟೋ ಸ್ಟಾರ್ಟ್/ಸ್ಟಾಪ್, ಇಸಿಒ ಪ್ರೊ, ಬ್ರೇಕ್-ಎನರ್ಜಿ ರೀಜೆನರೇಶನ್, ಎಲೆಕ್ಟ್ರಾನಿಕ್ ರೀಜೆನರೇಶನ್ ಸೇರಿದಂತೆ ಹಲವಾರು ತಾಂತ್ರಿಕ ಸೌಲಭ್ಯಗಳಿದ್ದು, ಎಕ್ಸ್‌7 ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡ್ರೈವ್ ಸೌಲಭ್ಯ ನೀಡಲಾಗುತ್ತದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಈ ಮೂಲಕ 50 ಜಹ್ರೇ ಎಂ ಆವೃತ್ತಿಯ ವಿವಿಧ ರೈಡ್ ಮೋಡ್‌ಗಳೊಂದಿಗೆ ಕೇವಲ 6.1 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತಿದ್ದು, ಪ್ರತಿ ಗಂಟೆ ಗರಿಷ್ಠ 250 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ.

ಬಿಎಂಡಬ್ಲ್ಯು ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್ ಭಾರತದಲ್ಲಿ ಬಿಡುಗಡೆ

ಇನ್ನು ಹೊಸ ಕಾರಿನಲ್ಲಿರುವ ಸುರಕ್ಷತಾ ಸೌಲಭ್ಯಗಳ ಬಗೆಗೆ ಹೇಳುವುದಾದರೇ ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಡಿಷನ್‌ನಲ್ಲಿ 6 ಏರ್‌ಬ್ಯಾಗ್‌ಗಳು, ಎಬಿಡಿ ಜೊತೆಗೆ ಎಬಿಎಸ್, ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಇಎಸ್‌ಸಿ, ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಕಂಟ್ರೊಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಸರೌಂಡ್-ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟಿಂಗ್ ಪಾಯಿಂಟ್‌ಗಳು ಮತ್ತು ಪಾರ್ಕಿಂಗ್-ಅಸಿಸ್ಟ್ ಪ್ಲಸ್ ಸೌಲಭ್ಯಗಳಿವೆ.

Most Read Articles

Kannada
English summary
Bmw x7 40i m sport 50 jahre m edition launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X