ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಭಾರತದಲ್ಲಿ ಇ6 ಎಲೆಕ್ಟ್ರಿಕ್ ಎಂಪಿವಿ ಬಿಡುಗಡೆಯ ನಂತರ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಬಿವೈಡಿ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರು ಮಾದರಿಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಬಹುನೀರಿಕ್ಷಿತ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿಯು ಹೊಸ ಸಂಚಲನ ಮೂಡಿಸಲಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಎಸ್‌ಯುವಿ ವಿಭಾಗಕ್ಕೆ ಹೊಸ ಅಟ್ಟೊ 3 ಪರಿಚಯಿಸುತ್ತಿರುವ ಬಿವೈಡಿ ಕಂಪನಿಯು ಟೀಸರ್ ಪ್ರಕಟಿಸುವ ಮೂಲಕ ಹೊಸ ಕಾರು ಬಿಡುಗಡೆ ಯೋಜನೆಯನ್ನು ಖಾತ್ರಿಪಡಿಸಿದ್ದು, ಮುಂದಿನ ತಿಂಗಳು ಅಕ್ಟೋಬರ್ 11ರಂದು ಹೊಸ ಕಾರು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ಬಿವೈಡಿ ಅಟ್ಟೊ 3 ಎಸ್‌ಯುವಿ ಮಾದರಿಯು ಇದೀಗ ಭಾರತದಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿ ಜೆಡ್ಎಸ್ ಇವಿ ಮತ್ತು ಹ್ಯುಂಡೈ ಕೊನಾ ಇವಿ ಕಾರುಗಳಿಗೆ ಇದು ಉತ್ತಮ ಪೈಪೋಟಿಯಾಗಲಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಅಟ್ಟೊ 3 ಕಾರು ಮಾದರಿಯನ್ನು ಸದ್ಯ ಕಂಪನಿಯು ಸಿಂಗಪುರ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡುತ್ತಿದ್ದು, ಲೆಫ್ಟ್ ಹ್ಯಾಂಡ್ ಚಾಲಾನಾ ಶೈಲಿ ಹೊಂದಿರುವ ಹೊಸ ಕಾರು ದೇಶಿಯ ಮಾರುಕಟ್ಟೆಗಾಗಿ ರೈಟ್ ಹ್ಯಾಂಡ್ ಚಾಲನಾ ಶೈಲಿ ಸೇರಿದಂತೆ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಹೊಸ ಅಟ್ಟೊ 3 ಕಾರು ಮಾದರಿಯನ್ನು ಕಂಪನಿಯು ವಿದೇಶಿ ಮಾರುಕಟ್ಟೆಗಳಿಂದಲೇ ಭಾರತಕ್ಕೆ ಸೆಮಿ ನಾಕ್ಡ್ ಡೌನ್ ಆಮದು ನೀತಿಯಡಿ ತರುವ ಸಾಧ್ಯತೆಗಳಿದ್ದು, ತನ್ನ ಹೊಸ ಕಾರಿನ ಬಿಡಿಭಾಗಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಂಡು ಹೊಸ ಉತ್ಪಾದನಾ ಘಟಕದಲ್ಲಿ ಮರುಜೋಡಣೆ ಮಾಡಿ ಮಾರಾಟ ಮಾಡಲಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ಲಾಂಗ್‌ವೀಲ್ಹ್ ಬೆಸ್ ಹೊಂದಿದ್ದು, ಆರಾಮದಾಯಕ ಪ್ರಯಾಣವನ್ನು ಒದಗಿಸುವುದರ ಜೊತೆಗೆ ಹೆಚ್ಚಿನ ಮೈಲೇಜ್ ಪ್ರೇರಣೆ ಹೊಂದಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಅಟ್ಟೊ 3 ಎಸ್‌ಯುವಿ ಮಾದರಿಯಲ್ಲಿ ಬಿವೈಡಿ ಕಂಪನಿಯು 60.48kWh ಮತ್ತು 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡುವ ಸಾಧ್ಯತೆಯಿದ್ದು, ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಖರೀದಿಸಬಹುದಾಗಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

60.48kWh ಬ್ಯಾಟರಿ ಪ್ಯಾಕ್ ಮಾದರಿಯು ಪ್ರತಿ ಚಾರ್ಜ್‌ಗೆ 420 ಕಿ.ಮೀ ಮೈಲೇಜ್ ಹೊಂದಿದ್ದರೆ 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಮಾದರಿಯು 320 ಕಿ.ಮೀ ಮೈಲೇಜ್ ಹೊಂದಿದ್ದು, ಉತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಹೊಸ ಕಾರಿನಲ್ಲಿ ಪರ್ಫಾಮೆನ್ಸ್ ಮೋಟಾರ್ ಕೇವಲ 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳಲಿದ್ದು, 201 ಬಿಎಚ್‌ಪಿ ಮತ್ತು 310 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎಂಟ್ರಿ ಲೆವಲ್ ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಳ್ಳುತ್ತದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಅಡ್ವಾನ್ಸ್ ಡ್ರೈವರ್ ಅಸಿಸ್ಟ್(ಎಡಿಎಎಸ್) ಸೌಲಭ್ಯವನ್ನು ಸಹ ಜೋಡಣೆ ಮಾಡಿದ್ದು, ಇದು ಹಲವಾರು ಸುರಕ್ಷಾ ಸೌಲಭ್ಯಗಳೊಂದಿಗೆ ಕಾರು ಚಾಲನೆಯನ್ನು ಸುರಕ್ಷಿತಗೊಳಿಸುತ್ತದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಹಾಗೆಯೇ ಹೊಸ ಕಾರಿನಲ್ಲಿರುವ ಇತರೆ ಫೀಚರ್ಸ್‌ಗಳು ಉತ್ತಮವಾಗಿದ್ದು, 4,455 ಎಂಎಂ ಉದ್ದಳತೆಯೊಂದಿಗೆ 1,875 ಅಗಲ, 2,720 ಎಂಎಂ ವ್ಹೀಲ್‌ಬೆಸ್ ಹೊಂದಿದೆ. ಇದು ಜೆಡ್ಎಸ್ ಇವಿಗಿಂತಲೂ 132 ಎಂಎಂ ಹೆಚ್ಚುವರಿ ಉದ್ದಳತೆಯೊಂದಿಗೆ ಅರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಈ ಮೂಲಕ ಹೊಸ ಕಾರು ಭಾರತದಲ್ಲಿ ಪ್ರಮುಖ ಎರಡು ಬ್ಯಾಟರಿ ಆಯ್ಕೆ ಹೊಂದಿರುವುದರಿಂದ ಎಕ್ಸ್‌ಶೋರೂಂ ಪ್ರಕಾರ ರೂ. 20 ಲಕ್ಷದಿಂದ ರೂ. 24 ಲಕ್ಷದ ತನಕ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಮಾದರಿಗಿಂತಲೂ ತುಸು ಕಡಿಮೆ ಮೈಲೇಜ್‌ ಹೊಂದಿದ್ದರೂ ಫೀಟರ್ಸ್ ಮತ್ತು ತಂತ್ರಜ್ಞಾನ ಸೌಲಭ್ಯದಲ್ಲಿ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಇನ್ನು ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಕಳೆದ ವರ್ಷದ ಕೊನೆಯಲ್ಲಿ ಚಾಲನೆ ನೀಡಿದ್ದ ಬಿವೈಡಿ ಕಂಪನಿಯು ಆರಂಭದಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳ ಜೊತೆಗೂಡಿ ಕೇವಲ ಬಿ ಟು ಬಿ ಉದ್ದೇಶಕ್ಕಾಗಿ ಹೊಸ ಇ6 ಇವಿ ಕಾರಿನ ಮಾರಾಟ ಆರಂಭಿಸಿತ್ತು. ಇದೀಗ ಕಂಪನಿಯು ವೈಯಕ್ತಿಕ ಕಾರು ಬಳಕೆದಾದರಿಗೂ ಹೊಸ ಇವಿ ಕಾರಿನ ವಿತರಣೆಯನ್ನು ಆರಂಭಿಸಿದ್ದು, ಇದಕ್ಕಾಗಿ ಕಂಪನಿಯು ಪ್ರತ್ಯೇಕ ಮಾರಾಟ ಸೌಲಭ್ಯಕ್ಕಾಗಿ ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೂಡಿ ಹೊಸ ಮಾರಾಟ ಮಳಿಗೆಯನ್ನು ಆರಂಭಿಸಿದ್ದು, ಪಿಪಿಎಸ್ ಮೋಟಾರ್ಸ್ ಜೊತೆಗೆ ದಕ್ಷಿಣ ಭಾರತದಲ್ಲಿ ಆರಂಭಿಸುವ ಎರಡನೇ ಮಾರಾಟ ಮಳಿಗೆ ಶುರುಮಾಡಿದೆ.

ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಕಳೆದ ತಿಂಗಳು ವಿಜಯವಾಡದಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೆ ಹೊಸ ಮಾರಾಟ ಮಳಿಗೆ ಆರಂಭಿಸಿದ್ದ ಬಿವೈಡಿ ಕಂಪನಿಯು ಇದೀಗ ನಮ್ಮ ಬೆಂಗಳೂರಿನ ಯಲಹಂಕದಲ್ಲಿ ಅತಿದೊಡ್ಡ ಇವಿ ಕಾರು ಮಾರಾಟ ಮಳಿಗೆಯನ್ನು ಆರಂಭಿಸಿದೆ. ಹೊಸ ಕಾರು ಮಾರಾಟ ಮಳಿಗೆಗಳಲ್ಲಿ ಮಾರಾಟ, ಮಾರಾಟ ನಂತರದ ಗ್ರಾಹಕರ ಸೇವೆಗಳು ಮತ್ತು ಚಾರ್ಜಿಂಗ್ ಸೌಲಭ್ಯವನನ್ನು ಹೊಂದಿದ್ದು, ಶೀಘ್ರದಲ್ಲಿಯೇ ಹೊಸ ಇ6 ಕಾರು ದೇಶದ ಪ್ರಮುಖ ನಗರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Most Read Articles

Kannada
English summary
Byd atto 3 electric suv launch date confirmed
Story first published: Wednesday, September 21, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X