BYD ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ವಿಶೇಷ ಸಂದರ್ಶನ: EV ಬಗ್ಗೆ ಹೇಳಿದ್ದೇನು?

ಚೀನಿ ಸಂಸ್ಥೆ ಬಿಲ್ಡ್ ಯುವರ್ ಡ್ರೀಮ್ಸ್ (BYD) ದೇಶೀಯ ಪ್ಯಾಸೆಂಜರ್ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇತ್ತೀಚೆಗೆ ಭಾರತದಲ್ಲಿ 'Atto 3' ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನ್ನು ಅನಾವರಣಗಳಿಸಿತ್ತು. ಇದು ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಗೆ ಅದರ ಎರಡನೇ ಎಲೆಕ್ಟ್ರಿಕ್ ವಾಹನ ಕೊಡುಗೆಯಾಗಿದೆ ಎಂದು ಹೇಳಬಹುದು.

ಬಿಲ್ಡ್ ಯುವರ್ ಡ್ರೀಮ್ಸ್ ಅನ್ನು ಚಿಕ್ಕದಾಗಿ BYD ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಬಹುತೇಕ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಆದರೂ ದಶಕಗಳಿದಂದ ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಸಂಸ್ಥೆಯು 2007ರಲ್ಲಿ ದೇಶವನ್ನು ಪ್ರವೇಶಿಸಿತು. ಚೆನ್ನೈ ಬಳಿಯ ತನ್ನ ಉತ್ಪಾದನಾ ಘಟಕದಲ್ಲಿ ನೋಕಿಯಾ ಸೇರಿದಂತೆ ಮೊಬೈಲ್ ಫೋನ್‌ ಉತ್ಪಾದನೆಯೊಂದಿಗೆ ತನ್ನ ಕಾರ್ಯ ಚಟುವಟಿಕೆಯನ್ನು ಪ್ರಾರಂಭ ಮಾಡಿತು.

BYD ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ವಿಶೇಷ ಸಂದರ್ಶನ

2013ರಲ್ಲಿ, ಸಂಸ್ಥೆಯು K9 ಆಲ್-ಎಲೆಕ್ಟ್ರಿಕ್ ಬಸ್ ಅನ್ನು ಭಾರತಕ್ಕೆ ಆಮದು ಮಾಡಿಕೊಂಡಿತು. ನಾಲ್ಕು ವರ್ಷಗಳ ನಂತರ ಆಂದರೆ, ವ್ಯಾಪಕ ಪರೀಕ್ಷೆಗಳು ಮುಗಿದ ಮೇಲೆ BYD ಅಧಿಕೃತವಾಗಿ ಭಾರತೀಯ ಎಲೆಕ್ಟ್ರಿಕ್ ಬಸ್ ಮಾರುಕಟ್ಟೆಯನ್ನು ಪ್ರವೇಶಿಸಿತು. ಕಳೆದ ವರ್ಷದ ಕೊನೆಯಲ್ಲಿ, BYD e6ನೊಂದಿಗೆ ದೇಶೀಯ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿತು.ಇತ್ತೀಚೆಗೆ ಎಲೆಕ್ಟ್ರಿಕ್ ಎಂವಿಪಿಯನ್ನು ಖಾಸಗಿ ಖರೀದಿದಾರರಿಗೆ ಲಭ್ಯವಾಗುವಂತೆ ಮಾಡಿತು ಎಂದು ಹೇಳಬಹುದು.

'Atto 3' ರಿವ್ಯೂ ಡ್ರೈವ್‌ ಸಂದರ್ಭದಲ್ಲಿ ನಮ್ಮ ಪ್ರತಿನಿಧಿ, BYD ಇಂಡಿಯಾ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಅವರೊಂದಿಗೆ ಸಂದರ್ಶನ ನಡೆಸಿದ್ದಾರೆ. ಭಾರತದಲ್ಲಿ BYD ಬ್ರ್ಯಾಂಡ್‌ನ ವಿಸ್ತರಣೆ ಯೋಜನೆಗಳ ಕುರಿತು ಅವರಿಂದ ಪ್ರಮುಖ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

2022ರ ಜನವರಿಯಲ್ಲಿ BYDಯ ಭಾರತದ ಕಾರ್ಯಾಚರಣೆಗಳಿಗೆ ಅದರ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಸೇರಿದ ಗೋಪಾಲಕೃಷ್ಣನ್ ಅವರು, ಭಾರತದ ಭವಿಷ್ಯದ ಯೋಜನೆಗಳನ್ನು ವಿಸ್ತರಿಸುವಲ್ಲಿ ನಿರತರಾಗಿದ್ದಾರೆ. 2023 ರಲ್ಲಿ BYD ಇಂಡಿಯಾ ಭಾರತದಲ್ಲಿ 15,000 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆಯಿದೆ ಎಂದು ಗೋಪಾಲಕೃಷ್ಣನ್ ಹೇಳಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯು ಹೊಸ Atto 3 ಆಗಿರಬಹುದು ಎಂದು ಅವರು ನಿರೀಕ್ಷೆ ಹೊಂದಿದ್ದಾರೆ.

BYD ಜನವರಿ 2023 ರಲ್ಲಿ 'Atto 3' ವಿತರಣೆಯನ್ನು ಪ್ರಾರಂಭಿಸುತ್ತದೆ. ಸಂಸ್ಥೆಯು ಈಗಾಗಲೇ ಎಲೆಕ್ಟ್ರಿಕ್ ಎಸ್‍ಯುವಿಗಾಗಿ 1,500 ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಅನೇಕ e6 ಮಾಲೀಕರು ಎಲೆಕ್ಟ್ರಿಕ್ ಎಂವಿಪಿಯ ದಕ್ಷ ಕಾರ್ಯಚರಣೆ ಮನಸೋತು ಹೊಸ 'Atto 3'ಗಾಗಿ ಆರ್ಡರ್ ಮಾಡಿದ್ದಾರೆ ಎಂದು ಗೋಪಾಲಕೃಷ್ಣನ್ ಬಹಿರಂಗಪಡಿಸಿದ್ದಾರೆ. BYD ಈಗಾಗಲೇ ಭಾರತದಲ್ಲಿ 600 e6 ಕಾರುಗಳನ್ನು ಮಾರಾಟ ಮಾಡಿದೆ.

BYD ತನ್ನ ವಿವಿಧ ಟಚ್‌ಪಾಯಿಂಟ್‌ಗಳು, ಸರ್ವಿಸ್ ಸೆಂಟರ್ ಮತ್ತು ಡೀಲರ್‌ಶಿಪ್‌ಗಳಲ್ಲಿ ತನ್ನದೇ ಆದ ಫಾಸ್ಟ್ ಚಾರ್ಜರ್ ನೆಟ್‌ವರ್ಕ್ ಅನ್ನು ನಿರ್ಮಿಸುತ್ತಿದೆ. ಇತರೆ ಸ್ಥಳಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಇತರೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಗೋಪಾಲಕೃಷ್ಣನ್ ಅವರು, ಭಾರತೀಯ ಮಾರುಕಟ್ಟೆಗಾಗಿ BYDಯ ಹಲವು ಯೋಜನೆಗಳನ್ನು ವಿಸ್ತರಿಸಲಿದ್ದು, 2024ರಲ್ಲಿ BYD ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಿದೆ. ಬೇಡಿಕೆಗೆ ಅನುಗುಣವಾಗಿ ದೇಶದಲ್ಲಿ ಸಂಪೂರ್ಣ EV ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುವ ಆಲೋಚನಿಯಲ್ಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ದಶಕದ ದ್ವಿತೀಯಾರ್ಧದಲ್ಲಿ ನಿರೀಕ್ಷಿತ ಬೆಳವಣಿಗೆಯ ಸುವರ್ಣ ಅವಧಿಯೊಂದಿಗೆ ದೇಶದಲ್ಲಿ ಪ್ಯಾಸೆಂಜರ್ ಇವಿ ಮಾರುಕಟ್ಟೆಯನ್ನು ವಿಸ್ತರಿಸಲು ಕಂಪನಿಯು ನಿರೀಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.

Most Read Articles

Kannada
English summary
Byd senior vice president sanjay gopalakrishnan exclusive interview
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X