ನೀವೂ ವೇಗದ ಚಾಲಕ ಆಗ್ಬೇಕಾ? ರಂಜಿತ್ ಬಲ್ಲಾಳ್ ಸಂದರ್ಶನ ಓದಿ

Posted By:

ಸುಟ್ಟ ಟೈರ್ ವಾಸನೆ, ಧೂಳು, ಎಂಜಿನ್ ಮೊರೆತದ ನಡುವೆ ಚಾಕಚಕ್ಯತೆಯಿಂದ ವೇಗದಲ್ಲಿ ವಾಹನಗಳನ್ನೂ ಚಲಾಯಿಸುವ ಆಟೋಕ್ರಾಸ್ ಅಂದ್ರೆ ವಾಹನಪ್ರಿಯರಿಗೆ ಅಚ್ಚುಮೆಚ್ಚು. ವೇಗದ ಆವೇಗಕ್ಕೆ ಸೆಡ್ಡು ಹೊಡೆದು ಕಾರು Rallyಗಳಲ್ಲಿ ಭಾಗವಹಿಸುವ ಬಯಕೆ ಹೆಚ್ಚಿನವರಿಗಿರುತ್ತದೆ. ಆದರೆ ಕಾರು ರಾಲಿಯ ಎಬಿಸಿಡಿ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಮೋಟಾರು ವಾಹನಗಳ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ? ಅನ್ನೋ ಕುತೂಹಲ, ಆಸಕ್ತಿ ಹೆಚ್ಚಿನ ಜನರಿಗಿರುತ್ತದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಟೋ ಕ್ರಾಸ್ ಚಾಂಪಿಯನ್‌ಷಿಪ್ ನಡೆದಿತ್ತು. ಅಲ್ಲಿ ನಡೆದ ಕಾರು ರೇಸಿನ 2 ಮತ್ತು 6ನೇ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಂಜಿತ್ ಬಲ್ಲಾಳ್ ಸಂದರ್ಶನ ಇಲ್ಲಿದೆ. ಇದು ವಾಹನ ರೇಸ್ ಆಸಕ್ತಿ ಇರೋವರಿಗೆ ಕೊಂಚ ಮಾರ್ಗದರ್ಶನ ನೀಡಬಹುದು ಅನ್ನೋದು ನಮ್ಮ ನಂಬಿಕೆ. ಇದು ಡ್ರೈವ್‌ಸ್ಪಾರ್ಕ್ ವಿಶೇಷ.

ನೀವು ಈ ಕಾರು ರಾಲಿ ಕ್ರೀಡೆಗೆ ಪ್ರವೇಶಿಸಿದ್ದು ಹೇಗೆ?

ರಂಜಿತ್ ಬಲ್ಲಾಳ್: ಮೊದಲಿನಿಂದಲೂ ಕಾರು ರೇಸ್ ನನ್ನ ಆಸಕ್ತಿಯ ವಿಷಯ. ನಾನೂ ಅತ್ಯುತ್ತಮ ವೇಗದ ರೇಸ್ ಚಾಲಕನಾಗಬೇಕೆಂದು ಬಯಸಿದ್ದೆ. ಆದರೆ ಅಂತಹ ಸ್ಪರ್ಧೆಗಳಿಗೆ ಪ್ರವೇಶಿಸುವುದು ಹೇಗೆಂದು ಅರಿವಿರಲಿಲ್ಲ. ಬೆಂಗಳೂರು ಆಸುಪಾಸಿನಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ರಾಲಿಯಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ತೋರಿದ್ದ ಅತ್ಯುತ್ತಮ ಪ್ರದರ್ಶನವು ನನ್ನನ್ನು ಇಂದು ಇಲ್ಲಿಗೆ ತಲುಪಿಸಿದೆ.

Rally ಚಾಲಕನಾಗಲು ಇರಬೇಕಾದ ಅರ್ಹತೆಗಳೇನು?

ರಂಜಿತ್ ಬಲ್ಲಾಳ್: ಅಂತಹ ಅರ್ಹತೆಗಳ ಅವಶ್ಯಕತೆಯಿಲ್ಲ. ವಾಹನದ ಮೇಲೆ ಹಿಡಿತ, ಚಾಲನೆ ನೈಪುಣ್ಯ ಅಗತ್ಯ. ದುರ್ಗಮ ಅಥವಾ ಅಂಕುಡೊಂಕಿನ ಹಾದಿಗಳಲ್ಲೂ ವೇಗ ಮತ್ತು ಚಾಣಾಕ್ಷ್ಯತೆಯಿಂದ ಡ್ರೈವಿಂಗ್ ಮಾಡಬೇಕಾಗುತ್ತದೆ. ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಲು ಹಣ ಮತ್ತು ಇತರ ಸಲಕರಣೆಗಳೂ ಬೇಕಾಗುತ್ತದೆ. ಹಣವಿದ್ದರೆ ಮಾತ್ರ ಅತ್ಯುತ್ತಮ ಅಭ್ಯಾಸ , ಸಾಧನೆ ಮತ್ತು ಕಾರ್ಯಕ್ಷಮತೆ ತೋರಲು ಸಾಧ್ಯ.

ಕಾರು ರಾಲಿ ಕರಿಯರ್ ಆರಂಭಿಸಲು ಏನು ಬೇಕು?

ರಂಜಿತ್ ಬಲ್ಲಾಳ್: ಭಾರತದಲ್ಲಿ ಕಾರು ರಾಲಿಗೆ ತನ್ನದೇ ಆದ ಹತ್ತು ಹಲವು ನಿಯಮಗಳಿವೆ. ಇವೆಲ್ಲದರ ಹೊರತಾಗಿ ನಿಮ್ಮಲ್ಲೊಂದು ಕಾರು ಇರಬೇಕು. ಅದನ್ನು ರಾಲಿಗೆ ತಕ್ಕಂತೆ ಮಾರ್ಪಾಡು ಮಾಡಬೇಕು.

ರಾಲಿಗೆ ಯಾವ ಕಾರು ಸೂಕ್ತ? ಎಷ್ಟು ವೆಚ್ಚ ಮಾಡಬೇಕು?

ರಂಜಿತ್ ಬಲ್ಲಾಳ್: ಹೆಚ್ಚಿನ ಜನರು ಮಾರುತಿ ಸುಜುಕಿ ಎಸ್ಟೀಮ್, ಬೊಲೆರೊ ಅಥವಾ ಮೊದಲ ತಲೆಮಾರಿನ ಹೋಂಡಾ ಸಿಟಿ ಕಾರಿನಿಂದ ರೇಸ್ ಆರಂಭಿಸುತ್ತಾರೆ. ಇವು rallyಗೆ ಸೂಕ್ತವಾಗಿವೆ ಮತ್ತು ರೇಸಿನಲ್ಲಿ ಎದ್ದು ಕಾಣುತ್ತವೆ.

ಸುಮಾರು 2 ಲಕ್ಷ ರುಪಾಯಿ ನೀಡಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಬಹುದು. ಆ ಕಾರನ್ನು ಮತ್ತೆ ಮರು ನಿರ್ಮಿಸಬೇಕು. ಅಂದ್ರೆ ಅದರಲ್ಲಿರುವ ಅನಗತ್ಯ ಭಾಗಗಳನ್ನೆಲ್ಲ ಕಿತ್ತು ತೆಗೆಯಬೇಕು. ಅದಕ್ಕೆ ಸ್ಪೋರ್ಟ್ಸ್ ಸೀಟ್, ನಾಲ್ಕು ಪಾಯಿಂಟ್ ಸೀಟ್ ಬೆಲ್ಟ್ ಇತ್ಯಾದಿ ಆಕ್ಸೆಸರಿ ಅಳವಡಿಸಬೇಕು.

ಒಟ್ಟಾರೆ ರಾಲಿ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು. ಇದಕ್ಕೆ ಸುಮಾರು 3 ಲಕ್ಷ ರುಪಾಯಿ ಬೇಕಾದೀತು. ಒಟ್ಟಾರೆ 5 ಲಕ್ಷ ರುಪಾಯಿಯಲ್ಲಿ ಒಂದು ರೇಸ್ ಕಾರ್ ರೆಡಿ ಮಾಡಬಹುದು.

ದೇಶದಲ್ಲಿ ಕಾರು ರಾಲಿ ಸ್ಥಿತಿಗತಿ ಹೇಗಿದೆ? ಇಷ್ಟು ದುಬಾರಿಯಾದ್ರೂ ಯಾಕೆ ಭಾಗವಹಿಸುತ್ತಾರೆ?

ರಂಜಿತ್ ಬಲ್ಲಾಳ್: ಹಣಕಾಸು ಪ್ರಶಸ್ತಿಗಳಿಗಿಂತ ಕಾರು ಚಾಲಕರಿಗೆ ಡ್ರೈವಿಂಗ್ ಅನ್ನೋದು ಫ್ಯಾಷನ್. ಕಾರನ್ನು ರೇಸಿಗೆ ರೆಡಿ ಮಾಡಲು ತಗುಲುವ ವೆಚ್ಚಕ್ಕೆ ಹೋಲಿಸಿದರೆ ಬಹುಮಾನದ ಮೊತ್ತ ಅತ್ಯಲ್ಪ. ಎಂಆರ್‌ಎಫ್ ಇತ್ಯಾದಿ ಪ್ರಾಯೋಜಿತ ಕಾರು ಚಾಲಕರು ಮಾತ್ರ ಕೈತುಂಬಾ ಹಣ ಪಡೆಯುತ್ತಾರೆ. ಉಳಿದವರೆಲ್ಲ ತಮ್ಮ ಕಿಸೆಯಿಂದಲೇ ಹಣ ಸುರಿದು ರೇಸಿನಲ್ಲಿ ಪಾಲ್ಗೊಳ್ಳುತ್ತಾರೆ.

ಕಾರು ರಾಲಿ ಕುರಿತು ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸಿ.

English summary
Car Rallying In India: The Ranjith Ballal Interview. Rally Racing is some thing many Indian drivers want to participate but do not know where to start from. We found our expert in veteran rally racer Ranjith Ballal in Indian National Autocross Championship Bangalore. Mr Ballal dominated the bangalore leg of the INAC by finishing in the top three of five of the seven segments and winning two races out of them.
Story first published: Wednesday, May 9, 2012, 12:46 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more