ಹೊಸ ವರ್ಷದಿಂದ ಕಾರು ಬೆಲೆ ಏರಿಕೆ: ಮಾರುತಿ, ಹುಂಡೈ, ಟಾಟಾ, ಹೋಂಡಾ, ಕಿಯಾ..

ಭಾರತದ ಮಾರುಕಟ್ಟೆಯಲ್ಲಿ ವಿವಿಧ ವಾಹನ ತಯಾರಿಕ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಹೊಸ ವರ್ಷದಿಂದ ಏರಿಕೆ ಮಾಡುತ್ತಿವೆ. ಇದು ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಹೇಳಲಾಗಿದೆ. ಒಂದೊಂದು ವಾಹನ ತಯಾರಿಕ ಸಂಸ್ಥೆಗಳು ತಮ್ಮ ವೆಚ್ಚಕ್ಕೆ ಅನುಗುಣವಾಗಿ ದರವನ್ನು ಹೆಚ್ಚಳ ಮಾಡುತ್ತಿವೆ. ಅದು ಮಾದರಿಗಳನ್ನು ಆಧಾರಿಸಿ, ಬೇರೆ-ಬೇರೆಯಾಗಿರುತ್ತದೆ.

ದೇಶದ ವಾಹನೋದ್ಯಮವು ಸದ್ಯ ಚೇತರಿಕೆಯ ಹಂತದಲ್ಲಿದೆ. ಕೊರೋನಾ ಸೋಂಕಿನ ಬಳಿಕ ಮೊದಲಿದ್ದ ಸ್ಥಿತಿಗೆ ತಲುಪಲು ವಾಹನ ತಯಾರಿಕ ಸಂಸ್ಥೆಗಳು ನಿರತವಾಗಿವೆ. ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಮಾರಾಟದ ಪ್ರಮಾಣವು ಸ್ಥಿರವಾಗಿ ಬೆಳೆಯುತ್ತಿದೆ. ಆದರೆ ವ್ಯವಸ್ಥಾಪನಾ ಅಡಚಣೆಗಳು, ಆರ್ಥಿಕ ಪರಿಸ್ಥಿತಿಗಳು, ಹೆಚ್ಚುತ್ತಿರುವ ಇನ್‌ಪುಟ್ ಮತ್ತು ಸರಕು ವೆಚ್ಚಗಳು ವಾಹನ ತಯಾರಕರು ತಮ್ಮ ಪ್ರಯಾಣಿಕ ಕಾರುಗಳ ಬೆಲೆಗಳನ್ನು ಒಂದಷ್ಟು ಮಟ್ಟದಲ್ಲಿ ಹೆಚ್ಚಿಸಲು ಕಾರಣವಾಗಿವೆ ಎಂದು ಹೇಳಬಹುದು.

ಬಹತೇಕ ವರ್ಷದ ಆರಂಭದಲ್ಲಿ ಬೆಲೆ ಏರಿಕೆಯನ್ನು ನೋಡುವುದು ವಾಡಿಕೆಯಾಗಿದೆ. 2023 ಅದರಿಂದ ಹೊರತಲ್ಲ. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ಮಹೀಂದ್ರಾ, ಹೋಂಡಾ, ಕಿಯಾ, ರೆನಾಲ್ಟ್, ವೋಕ್ಸ್‌ವ್ಯಾಗನ್, ಎಂಜಿ ಮುಂತಾದ ಪ್ರಮುಖ ಬ್ರ್ಯಾಂಡ್‌ಗಳು ಈಗಾಗಲೇ ತಮ್ಮ ಆಯಾ ಮಾದರಿಗಳಿಗೆ ಅನುಗುಣವಾಗಿ ಬೆಲೆ ಏರಿಕೆಯನ್ನು ಘೋಷಣೆ ಮಾಡಿವೆ. ಆಡಿ ಮತ್ತು ಮರ್ಸಿಡಿಸ್ ಬೆಂಜ್ ಸೇರಿದಂತೆ ಐಷಾರಾಮಿ ಬ್ರಾಂಡ್‌ಗಳು ಸಹ ಬೆಲೆಗಳನ್ನು ಹೆಚ್ಚಿಸುತ್ತಿವೆ. ಮಾರುತಿ ಸುಜುಕಿ, ಇನ್‌ಪುಟ್ ಮತ್ತು ಸರಕುಗಳ ಬೆಲೆಗಳ ಹೆಚ್ಚಳದ ಜೊತೆಗೆ ವಿವಿಧ ಕಾರಣಕ್ಕೆ ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದೆ.

ಜನವರಿ 2023 ರಿಂದ ಕಿಯಾ ಮೋಟಾರ್ ಇಂಡಿಯಾ ತನ್ನ ಭಾರತದ ಮಾರುಕಟ್ಟೆಯಲ್ಲಿ ತನ್ನ ಕಾರುಗಳ ಬೆಲೆಗಳನ್ನು ರೂ. 50,000 ದವರೆಗೆ ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಇದು ಡಿಸೆಂಬರ್ 31, 2022ರ ನಂತರ ಮಾಡಲಾದ ಎಲ್ಲಾ ಕಾಯ್ದಿರಿಸುವಿಕೆಗಳಿಗೆ ಅನ್ವಯಿಸುತ್ತದೆ. ಟಾಟಾ ಮೋಟಾರ್ಸ್, ತನ್ನ ಕಾರಗಳ ದರವನ್ನು ಏರಿಕೆ ಮಾಡುವುದಾಗಿ ಹೇಳಿದೆ. ಮುಂಬರುವ RDE (ಎಮಿಷನ್) ನಿಯಮಾವಳಿಗಳನ್ನು ಪೂರೈಸುವಲ್ಲಿ ಒಳಗೊಂಡಿರುವ ನವೀಕರಣಗಳಿಗೆ ಹೆಚ್ಚಿನ ವೆಚ್ಚವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ರೆನಾಲ್ಟ್ ಇಂಡಿಯಾ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಬೆಲೆಗಳನ್ನು ಹೆಚ್ಚಿಸಿದರೆ, ಸಿಟ್ರೊಯೆನ್ C3 ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮತ್ತು C5 ಏರ್‌ಕ್ರಾಸ್ ಪ್ರೀಮಿಯಂ ಎಸ್‌ಯುವಿ ಬೆಲೆಗಳನ್ನು ಶೇಕಡ 1.5 -2ರಷ್ಟು ಹೆಚ್ಚಿಸಲಿದೆ. MG ಮೋಟಾರ್ ಇಂಡಿಯಾ ಹೊಸ ವರ್ಷದಿಂದ ತನ್ನೆಲ್ಲ ಮಾದರಿಗಳ ಬೆಲೆಗಳನ್ನು 90,000 ರೂ.ವರೆಗೆ ಹೆಚ್ಚಿಸಲಾಗುವುದು ಎಂದು ಹೇಳಿದೆ. ಪ್ರಸ್ತುತ, ಎಂಜಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಐದು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ ಹೆಕ್ಟರ್, ಹೆಕ್ಟರ್ ಪ್ಲಸ್, ZS EV, ಆಸ್ಟರ್ ಮತ್ತು ಗ್ಲೋಸ್ಟರ್. ಮುಂಬರುವ ಆಟೋ ಎಕ್ಸ್‌ಪೋ 2023ರಲ್ಲಿ ಹೆಕ್ಟರ್ ಫೇಸ್‌ಲಿಫ್ಟ್ ಅನ್ನು ಅನಾವರಣ ಮಾಡಲಿದೆ.

ಅಮೇರಿಕದ ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಜೀಪ್, ಹೊಸದಾಗಿ ಬಿಡುಗಡೆಯಾದ 'ಗ್ರಾಂಡ್ ಚೆರೋಕೀ' ಸೇರಿದಂತೆ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಎಸ್‌ಯುವಿಗಳ ಬೆಲೆಯನ್ನು ಹೆಚ್ಚಿಸಲಿದೆ. ಜನವರಿ 1, 2023 ರಿಂದ ಜಾರಿಗೆ ಬರಲಿರುವ ಬೆಲೆ ಏರಿಕೆಯು ಶೇಕಡ 2 ರಿಂದ 4 ರವರೆಗೆ ಇರುತ್ತದೆ. ಆದರೆ, ಈ ದರ ಹೆಚ್ಚಳವು ಮಾದರಿಗಳನ್ನು ಆಧರಿಸಿ ವಿಭಿನ್ನವಾಗಿರುತ್ತದೆ. ಅಲ್ಲದೆ, ಕೇವಲ ಮೂರು ತಿಂಗಳೊಳಗೆ ಜೀಪ್ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಎಸ್‌ಯುವಿಗಳ ಬೆಲೆಯನ್ನು ಎರಡನೇ ಬಾರಿಗೆ ಏರಿಕೆ ಮಾಡಿದೆ.

ಹೋಂಡಾ ತನ್ನ ಮಾದರಿಗಳಾದ ಜಾಝ್, WR-V, ಸಿಟಿ ಮತ್ತು ಅಮೇಜ್‌ಗಳ ಬೆಲೆಗಳನ್ನು 30,000 ರೂ. ಹೆಚ್ಚಿಸಬಹುದು ಎಂದು ವರದಿಯಾಗಿದೆ. ಇಷ್ಟೇ ಅಲ್ಲದೆ, ಐಷಾರಾಮಿ ವಾಹನ ತಯಾರಿಕ ಕಂಪನಿ 'ಆಡಿ' ತನ್ನ ಎಲ್ಲ ಮಾದರಿಗಳ ಬೆಲೆಯನ್ನು ಶೇಕಡ 1.7ರಷ್ಟು ಹೆಚ್ಚಳವನ್ನು ಯೋಜಿಸುತ್ತಿದೆ. ಆದರೆ ಮರ್ಸಿಡಿಸ್-ಬೆನ್ಜ್ ಬೆಲೆಗಳನ್ನು ಶೇಕಡ 5ರಷ್ಟು ಹೆಚ್ಚಿಸಲಿದೆ ಎಂದು ಹೇಳಲಾಗಿದ್ದು, ನೂತನ ದರಗಳು 2023ರ ಹೊಸ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ಇಷ್ಟೇ ಅಲ್ಲದೇ, ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಬೆಲೆಯು ಹೆಚ್ಚಳವಾಗುವ ಸಾಧ್ಯತೆ ಇದೆ. ಹೊಸ ವರ್ಷದಲ್ಲಿ, ಟಾರ್ಕ್ ಮೋಟಾರ್ಸ್ ತನ್ನ ಎರಡು ಎಲೆಕ್ಟ್ರಿಕ್ ಬೈಕ್‌ಗಳಾದ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೆಲೆಯನ್ನು ರೂ.10,000 ಹೆಚ್ಚಿಸಲಿದೆ. ಬೆಲೆ ಏರಿಕೆಯ ನಂತರ ಕ್ರಾಟೋಸ್ ಬೆಲೆ ರೂ.1,32,499 ಮತ್ತು ಕ್ರಾಟೋಸ್ ದರ ರೂ.1,47,499 ಆಗಲಿದೆ (ಇದು ಆಯಾ ರಾಜ್ಯದ ಸಬ್ಸಿಡಿ ಹಾಗೂ ಎಕ್ಸ್ ಶೋ ರೂಂ ದರವನ್ನು ಅವಲಂಭಿಸಿರಲಿದೆ).

Most Read Articles

Kannada
English summary
Car prices hike from new year maruti hyundai tata honda kia
Story first published: Saturday, December 17, 2022, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X