ಮಿರಾಯ್ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ

ಟೊಯೊಟಾ ಕಂಪನಿಯ ತನ್ನ ಬಹುನೀರಿಕ್ಷಿತ ಮಿರಾಯ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ಕಾರು ಮಾದರಿಯನ್ನುಅಧ್ಯಯನ ಭಾಗವಾಗಿ ಭಾರತದಲ್ಲಿ ಮೌಲ್ಯಮಾಪನ ಆರಂಭಿಸಿದ್ದು, ಹೊಸ ಕಾರನ್ನು ಕಂಪನಿಯು ವಿವಿಧ ಹಂತದಲ್ಲಿ ಪರೀಕ್ಷೆ ಕೈಗೊಂಡಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಪರೀಕ್ಷಾರ್ಥವಾಗಿ ಭಾರತದಲ್ಲಿ ಸಂಚರಿಸುತ್ತಿರುವ ಟೊಯೊಟಾ ಮಿರಾಯ್ ಕಾರ್ಯಕ್ಷಮತೆ ಕುರಿತಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂದು ಹೊಸ ಕಾರಿನಲ್ಲಿ ಸ್ವತಃ ಕೇಂದ್ರ ಸಚಿವರೇ ಕೆಲವು ಸಮಯದವರೆಗೆ ಪ್ರಯಾಣ ಬೆಳಸುವ ಮೂಲಕ ಸಂಸತ್ ಅಧಿವೇಶಕ್ಕೆ ತಲುಪಿದ್ದು ವಿಶೇಷವಾಗಿತ್ತು.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಭಾರತದಲ್ಲಿ ಸಾಂಪ್ರಾದಾಯಿಕ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ಕಾರುಗಳಿಗೂ ಉತ್ತೇಜನ ನೀಡುತ್ತಿದ್ದು, ಜಾಗತಿಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟೊಯೊಟಾ ಮಿರಾಯ್ ಮೂಲಕ ಹೊಸ ವಾಹನ ಮಾದರಿಯ ಬಗೆಗೆ ಮೌಲ್ಯಮಾಪನ ಆರಂಭಿಸಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಭಾರತ ಸರ್ಕಾರದ ಆಟೋಮೋಟಿವ್ ಟೆಸ್ಟಿಂಗ್ ಏಜೆನ್ಸಿಯಾಗಿರುವ iCAT (ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ) ಸಂಸ್ಥೆಯು ಟೊಯೊಟಾ ಕಂಪನಿಯ ಮಿರಾಯ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವಾಹನವನ್ನು (ಎಫ್‌ಸಿಇವಿ) ಅಧ್ಯಯನಕ್ಕೆ ಚಾಲನೆ ನೀಡಿದ್ದು, ಕೇಂದ್ರ ಸರ್ಕಾರ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಹೀಗಾಗಿ ಪ್ರಾಯೋಗಿಕ ಯೋಜನೆಯ ಭಾಗವಾಗಿ ಎರಡನೇ ತಲೆಮಾರಿನ ಟೊಯೊಟಾ ಮಿರಾಯ್ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಯೋಜನೆಯನ್ನು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಇವು ಸಾಮಾನ್ಯ ಎಲೆಕ್ಟ್ರಿಕ್ ಕಾರು ಮಾದರಿಗಳಿಂತಲೂ ವಿಭಿನ್ನವಾಗಿ ಕಾರ್ಯನಿರ್ವಹಣೆ ಮಾಡಲಿವೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಹೊಸ ಪರೀಕ್ಷಾರ್ಥ ಯೋಜನೆಯ ಬಗೆಗೆ ಸಂತಸ ವ್ಯಕ್ತಪಡಿಸಿರುವ ನಿತಿನ್ ಗಡ್ಕರಿಯವರು ಭವಿಷ್ಯದಲ್ಲಿ ಹೈಡ್ರೋಜನ್ ಕೇಂದ್ರಗಳನ್ನು ಸ್ಥಾಪಿಸುವ ಸುಳಿವು ನೀಡಿದ್ದು, ಈ ಮೂಲಕ ಹೈಡ್ರೋಜ್ ಕಾರುಗಳಲ್ಲಿ ಒಂದು ರೂಪಾಯಿ ವೆಚ್ಚದಲ್ಲಿ ಗರಿಷ್ಠ ಎರಡು ಕಿಲೋಮೀಟರ್‌ನಷ್ಟು ಪ್ರಯಾಣಿಸಬಹುದಾದ ಅವಕಾಶಗಳಿವೆ ಎಂದಿದ್ದಾರೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಬ್ಯಾಟರಿ ಚಾಲಿತ ಕಾರುಗಳಿಗಿಂತ ಭಿನ್ನವಾಗಿರುವ ಎಫ್‌ಸಿಇವಿ (ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್) ತಮ್ಮದೇ ಆದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಿದ್ದು, ಭಾರತದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ವಿದ್ಯುತ್ ಕಲ್ಲಿದ್ದಲಿನಿಂದ ಉತ್ಪಾದನೆಯಾಗುತ್ತಿರುವದಿಂದ ಭವಿಷ್ಯ ಹೈಡ್ರೊಜನ್ ಕಾರುಗಳು ಮುಂಚೂಣಿ ಸಾಧಿಸಲಿವೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಹೀಗಾಗಿ ಕಲ್ಲಿದ್ದಲಿಗೆ ಹೋಲಿಸಿಕೊಂಡರೆ ಫ್ಯೂಯಲ್ ಸೆಲ್ (ಇಂಧನ ಕೋಶ) ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪರಿಸರ ಸ್ನೇಹಿಯಾಗಿದ್ದು, ದುಬಾರಿ ತಂತ್ರಜ್ಞಾನವನ್ನು ಸಾಮಾನ್ಯಕರಿಸುವ ಪ್ರಕ್ರಿಯೆಗೆ ಇದೀಗ ಚಾಲನೆ ನೀಡಲಾಗಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳ ಬದಲಿಗೆ ಹೈಡ್ರೋಜನ್ ಅನ್ನು ಟ್ಯಾಂಕ್‌ಗೆ ತುಂಬುವ ಮೂಲಕ ಇಂಧನ ಕೋಶದ ಎಲೆಕ್ಟ್ರಿಕ್ ವಾಹನಗಳಿಗೆ ಸಾಂಪ್ರದಾಯಿಕ ವಾಹನಗಳಂತೆ ಬಳಸಬಹುದಾಗಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಪ್ರಸ್ತುತ ಮಾರುಕಟ್ಟೆಯಲ್ಲಿನ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಅತ್ಯಂತ ಶಕ್ತಿಶಾಲಿ ಚಾರ್ಜರ್‌ಗಳನ್ನು ಬಳಸಿಯೂ ಸಂಪೂರ್ಣವಾಗಿ ಚಾರ್ಜ್ ಮಾಡಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳಲಿದ್ದು, ಹೈಡ್ರೊಜನ್ ಕಾರುಗಳಲ್ಲಿ ಇಂತಹ ಯಾವುದೇ ಕಾಯುವಿಕೆ ಸಮಸ್ಯೆಗಳಿಲ್ಲ ಎನ್ನಬಹುದು.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಅಲ್ಲದೆ, ಬ್ಯಾಟರಿ-ಚಾಲಿತ ಎಲೆಕ್ಟ್ರಿಕ್ ಮಾದರಿಗಳು ಅವುಗಳ ಅಗಾಧ ಬ್ಯಾಟರಿ ಪ್ಯಾಕ್‌ನಿಂದ ಸಾಮಾನ್ಯವಾಗಿ ಭಾರವನ್ನು ಹೆಚ್ಚಿಸುತ್ತವೆ. ಇದರಿಂದ ಕೆಲ ಸಂದರ್ಭಗಳಲ್ಲಿ ಕಾರಿಗೆ ಹಾನಿಯನ್ನುಂಟಾಗಬಹುದು. ಆದರೆ ಹೈಡ್ರೋಜನ್ ಹಗುರವಾಗಿರುವುದರಿಂದ ವಾಹನಗಳಿಗೆ ನಿಮಿಷಗಳಲ್ಲಿ ಹೈಡ್ರೋಜನ್‌ ಅನ್ನು ತುಂಬಬಹುದು.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಇದು ಟ್ರಕ್‌ ಮತ್ತು ಬಸ್‌ಗಳಂತಹ ದೂರದ ಪ್ರಯಾಣ ಮಾಡುವ ವಾಹನಗಳಿಗೆ ಶಕ್ತಿ ತುಂಬಲು ಕಾರ್ಯಸಾಧ್ಯವಾದ ಆಯ್ಕೆಯಾಗಿದ್ದು, ಹೈಡ್ರೋಜನ್‌ನ ಹೆಚ್ಚುವರಿ ಪ್ರಯೋಜನವು ಅದರ ಉತ್ಪಾದನೆಯೇ ಆಗಿದೆ. ಏಕೆಂದರೆ ಅದನ್ನು ನವೀಕರಿಸಬಹುದಾದ ಶಕ್ತಿ ಮೂಲಗಳಾದ ಬಯೋಮಾಸ್‌ ಅನ್ನು ಬಳಸಿ ಉತ್ಪಾದಿಸಬಹುದು.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಇದು ಮಾರುಕಟ್ಟೆಯಲ್ಲಿನ ಇತರ ಇಂಧನ ಮೂಲಗಳಿಗಿಂತ ಹೆಚ್ಚು ಸಮರ್ಥನೀಯವಾಗಿದೆ. ಅಲ್ಲದೇ ಒಂದು ಕೆ.ಜಿ ಹೈಡ್ರೋಜನ್ ಮೂಲಕ ಅತಿ ಕಡಿಮೆ ರನ್ನಿಂಗ್ ಕಾಸ್ಟ್‌ನೊಂದಿಗೆ ಕನಿಷ್ಠ 120 ಕಿ.ಮೀ. ದೂರವನ್ನು ಕ್ರಮಿಸಬಹುದಾಗಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಟೊಯೊಟಾ ಮಿರಾಯ್ ಬಗೆಗೆ ಹೇಳುವುದಾದರೆ ಇದರ ಮೊದಲ ಪರಿಕಲ್ಪನೆಯನ್ನು 2011ರಲ್ಲಿ ಟೊಕಿಯೋ ಮೋಟಾರ್ ಶೋನಲ್ಲಿ ಟೊಯೊಟಾ FCV-R ಎಂದು ಅನಾವರಣಗೊಳಿಸಿತ್ತು. ಇದಕ್ಕೂ ಮುಂಚೆ ಎಫ್‌ಸಿಇವಿ ತಂತ್ರಜ್ಞಾನದ ಆರಂಭಿಕ ಅಭಿವೃದ್ಧಿಯು 1992 ರಲ್ಲಿ ಪ್ರಾರಂಭಗೊಂಡಿತ್ತು.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಮೊದಲ ತಲೆಮಾರಿನ ಟೊಯೊಟಾ ಮಿರಾಯ್ ಎಫ್‌ಸಿಇವಿ ಅನ್ನು 2014 ರಿಂದ 2020 ರವರೆಗೆ ಉತ್ಪಾದಿಸಲಾಯಿತು. 335Nm ಟಾರ್ಕ್‌ನೊಂದಿಗೆ 152bhp ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ನಿರ್ಮಿಸಲಾಗಿತ್ತು. ಇದು ಒಟ್ಟು 122-ಲೀಟರ್ ಸಾಮರ್ಥ್ಯದ ಎರಡು ಹೈಡ್ರೋಜನ್ ಟ್ಯಾಂಕ್‌ಗಳನ್ನು ಹೊಂದಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

1.6kWh ಬ್ಯಾಟರಿ ಪ್ಯಾಕ್ ಜೊತೆಗೆ ಈ ಸೆಟಪ್ ಮೊದಲ ತಲೆಮಾರಿನ ಟೊಯೊಟಾ ಮಿರಾಯ್‌ಗೆ EPA (ಪರಿಸರ ಸಂರಕ್ಷಣಾ ಸಂಸ್ಥೆ) ಅಡಿಯಲ್ಲಿ 502kms ವ್ಯಾಪ್ತಿಯನ್ನು ನೀಡಿತ್ತು. ಎಫ್‌ಸಿಇವಿಗಳು ಉಪ-ಉತ್ಪನ್ನವಾಗಿ ನೀರನ್ನು ಉತ್ಪಾದಿಸುವುದರಿಂದ, ಟೊಯೊಟಾ ಮಿರಾಯ್ ಪ್ರತಿ 4kmsಗೆ 240ml ನೀರನ್ನು ಉತ್ಪಾದಿಸುತ್ತದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಮೊದಲ ತಲೆಮಾರಿನ ಮಾದರಿಗಿಂತಲೂ ಭಿನ್ನವಾಗಿ, ಎರಡನೇ ತಲೆಮಾರಿನ ಟೊಯೊಟಾ ಮಿರಾಯ್ ಹಿಂಬದಿ-ಚಕ್ರ-ಡ್ರೈವ್ ಆಗಿದೆ. 300Nm ಟಾರ್ಕ್‌ನೊಂದಿಗೆ ಹೆಚ್ಚು ಶಕ್ತಿಶಾಲಿ 182bhp ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರುತ್ತದೆ. ಈ ವಾಹನವು 141-ಲೀಟರ್ ಹೈಡ್ರೋಜನ್ ಸಂಗ್ರಹಣೆಗಾಗಿ 3 ಹೈಡ್ರೋಜನ್ ಟ್ಯಾಂಕ್‌ಗಳನ್ನು ಹೊಂದಿದೆ.

ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಚರಿಸಿ ಗಮನಸೆಳೆದ ಸಾರಿಗೆ ಸಚಿವ

ಈ ಸೆಟಪ್ ಎರಡನೇ ತಲೆಮಾರಿನ ಟೊಯೊಟಾ ಮಿರಾಯ್ಗೆ ಇಪಿಎ ಸೈಕಲ್ ಅಡಿಯಲ್ಲಿ ಒಟ್ಟು 647kms ವರೆಗೆ ಹೆಚ್ಚುವರಿ ಮೈಲೇಜ್ ಶ್ರೇಣಿಯನ್ನು ನೀಡುತ್ತದೆ. ಅಲ್ಲದೆ, ಎರಡನೇ ತಲೆಮಾರಿನ ಟೊಯೊಟಾ ಮಿರಾಯ್ ಯುರೋ-ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತೆಯ ರೇಟಿಂಗ್ ಅನ್ನು ಗಳಿಸಿದೆ.

Most Read Articles

Kannada
English summary
Central transport minister nitin gadkari uses green hydrogen powered car mirai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X