ಟೊಯೊಟಾ ಇನೋವಾ ಹೈಕ್ರಾಸ್ VS ಕಿಯಾ ಕಾರ್ನಿವಲ್ ನಡುವಿನ ವ್ಯತ್ಯಾಸಗಳು: ಯಾವುದು ಬೆಸ್ಟ್ ಗೊತ್ತಾ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಭಾರತ-ಸ್ಪೆಕ್ ಇನೋವಾ ಹೈಕ್ರಾಸ್ ಹೈಬ್ರಿಡ್ ಎಂಪಿವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತು. 2023ರ ಜನವರಿ ತಿಂಗಳಿನಲ್ಲಿ ಇನೋವಾ ಹೈಕ್ರಾಸ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ, ಭಾರತದಾದ್ಯಂತ ಟೊಯೊಟಾ ಡೀಲರ್‌ಗಳು ಈ ಹೊಸ ಹೈಬ್ರಿಡ್ ಕಾರಿಗಾಗಿ ಬುಕಿಂಗ್ ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಟೊಯೊಟಾ ಇನೋವಾ ಹೈಕ್ರಾಸ್ ವಿತರಣೆಯು ಬಿಡುಗಡೆಯಾದ ಕೆಲವು ದಿನಗಳ ನಂತರ ನಡೆಯಲಿದೆ. ಈ ಹೈಕ್ರಾಸ್ ಅತ್ಯಂತ ವೇಗದ ಇನೋವಾ ಆಗಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಅಲ್ಲ ಟೊಯೊಟಾ ಫಾರ್ಚುನರ್ ಎಸ್‍ಯುವಿ ಗಿಂತಲೂ ವೇಗವಾಗಿದೆ, ಅಲ್ಲದೇ ಈ ಹೆಚ್ಚಿನ ಕಾರ್ಯಕ್ಷಮತೆಯು ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. ಈ ಇನೋವಾ ಹೈಕ್ರಾಸ್ ಅತ್ಯಂತ ಭರವಸೆಯ ವಾಹನವಾಗಿದ್ದರೂ, ಕಿಯಾ ಕಾರ್ನಿವಲ್ ಕೂಡ ವಿಭಾಗದಲ್ಲಿ ಅತ್ಯಂತ ಪ್ರೀಮಿಯಂ ಕೊಡುಗೆಯಾಗಿದೆ ಎಂಬ ಅಂಶವನ್ನು ನಿರ್ಲಕ್ಷಿಸಲಾಗುವುದಿಲ್ಲ. ಈ ಎರಆಡೂ ಎಂಪಿವಿಗಳ ನಡುವಿನ ವ್ಯತ್ಯಾಸಗಳು ಇಲ್ಲಿದೆ.

ಟೊಯೊಟಾ ಇನೋವಾ ಹೈಕ್ರಾಸ್ VS ಕಿಯಾ ಕಾರ್ನಿವಲ್ ನಡುವಿನ ವ್ಯತ್ಯಾಸಗಳು

ಉದ್ದಳತೆ ಮತ್ತು ವಿನ್ಯಾಸ
ಟೊಯೊಟಾ ಇನೋವಾ ಹೈಕ್ರಾಸ್ ಹೆಚ್ಚು ಎಸ್‍ಯುವಿ ತರಹದ ಥೀಮ್‌ನೊಂದಿಗೆ. ಇದು 4,755mm ಉದ್ದ, 1,850mm ಅಗಲ ಮತ್ತು 1,795mm ಎತ್ತರವಿದೆ. ಕಿಯಾ ಕಾರ್ನಿವಲ್ 5115 ಎಂಎಂ ಉದ್ದ, 1985 ಎಂಎಂ ಅಗಲ ಮತ್ತು 1755 ಎಂಎಂ ಎತ್ತರವಿದೆ. ಟೊಯೊಟಾ ಇನೋವಾ ಹೈಕ್ರಾಸ್‌ನ ಬಾಡಿವರ್ಕ್ ಬದಿಗಳಲ್ಲಿ ಮತ್ತು ಬಾನೆಟ್‌ನಲ್ಲಿ ಮೊದಲಿಗಿಂತ ಹೆಚ್ಚು ಕ್ರೀಸ್‌ಗಳನ್ನು ನೋಡುತ್ತದೆ, ಇನ್ನು ದೊಡ್ಡ 18-ಇಂಚಿನ ವ್ಹೀಲ್ ನೊಂದಿಗೆ ಎಸ್‍ಯುವಿ ವಿಷಯದ ರೀತಿಯಲ್ಲಿ ಮುಂದುವರಿಯುತ್ತದೆ.

ಫ್ಲಾಟ್ ಎಂಪಿವಿ ಶೈಲಿಯ ಬೂಟ್ ಲಿಡ್ ಅನ್ನು ಮತ್ತೆ ಹೆಚ್ಚು ಎಸ್‍ಯುವಿ ರೀತಿಯ ವಿನ್ಯಾಸದ ಸೂಚನೆಗಳೊಂದಿಗೆ ಸ್ಲೇಟೆಡ್ ವಿಂಡ್‌ಸ್ಕ್ರೀನ್ ಮತ್ತು ಬೀಫ್ಡ್-ಅಪ್ ಬಂಪರ್‌ಗಳೊಂದಿಗೆ ಬದಲಾಯಿಸಲಾಗಿದೆ, ಎರಡು-ಭಾಗದ ಟೈಲ್‌ಲ್ಯಾಂಪ್‌ಗಳು ಈಗ ಟೊಯೊಟಾದ ಇತರ ಎಸ್‍ಯುವಿಗಳಿಗೆ ಹೋಲುತ್ತವೆ. ಕಿಯಾ ಕಾರ್ನಿವಲ್ ದೇಹದ ಬಣ್ಣದ ಬಂಪರ್‌ಗಳು, ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳು, ಐಸ್ ಕ್ಯೂಬ್ ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಶಾರ್ಕ್ ಫಿನ್ ಆಂಟೆನಾಗಳು ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಕ್ರೋಮ್ ನೊಂದಿಗೆ ಕಂಪನಿಯ ವಿಶಿಷ್ಟವಾದ ಟೈಗರ್-ನೋಸ್ ಗ್ರಿಲ್ ಅನ್ನು ಸಹ ಹೊಂದಿದೆ.

ಎಂಜಿನ್
ಟೊಯೊಟಾ ಇನೋವಾ ಹೈಕ್ರಾಸ್‌ನಲ್ಲಿ 2.0 ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಮೋಟರ್ ಅನ್ನು ಬಳಸುತ್ತದೆ, ಇದು 154 ಬಿಹೆಚ್‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಲೆಕ್ಟ್ರಿಕ್ ಮೋಟರ್ ಜೊತೆಗೆ 186 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಪೆಟ್ರೋಲ್ ಮಾದರಿಯಾಗಿ ಬಿಡುಗಡೆಯಾಗಲಿದೆ. ಇನ್ನು ಕಿಯಾ ಕಾರ್ನಿವಲ್ 200 ಬಿಹೆಚ್‍ಪಿ ಪವರ್ ಮತ್ತು 440 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ 2.2-ಲೀಟರ್ CRDi ಡೀಸೆಲ್ ಮೋಟರ್ ಅನ್ನು ಒಳಗೊಂಡಿದೆ.

ಫೀಚರ್ಸ್
ಟೊಯೊಟಾ ಇನೋವಾ ಎಂಪಿವಿಯನ್ನು ದೊಡ್ಡ ಪನೋರಮಿಕ್ ಸನ್‌ರೂಫ್ ಮತ್ತು ADAS (ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ) ಯೊಂದಿಗೆ ನೀಡಲಾಗುತ್ತಿದೆ. ಡ್ಯುಯಲ್-ಟೋನ್ ಇಂಟೀರಿಯರ್ ಥೀಮ್, ಲೆದರ್ ಸೀಟ್‌ಗಳು, ವಿಸ್ತರಿಸಬಹುದಾದ ಫುಟ್‌ರೆಸ್ಟ್‌ಗಳೊಂದಿಗೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ದೊಡ್ಡ ಸೋಫಾ ಸೀಟ್‌ಗಳು ಹೊಂದಿದೆ. ಎಲ್‌ಇಡಿ ಮೂಡ್ ಲೈಟಿಂಗ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು. ಕೂಲ್ಡ್ ಸೀಟ್‌ಗಳು, ಕನೆಕ್ಟೆಡ್ ಕಾರ್ ಟೆಕ್ ಮತ್ತು ಮಧ್ಯದ ಸಾಲಿಗೆ ಪ್ರಯಾಣಿಕರಿಗಾಗಿ ಡ್ಯುಯಲ್ 10-ಇಂಚಿನ ಡಿಸ್ ಪ್ಲೇಯನ್ನು ನೀಡಿದೆ.

ಇದರೊಂದಿಗೆ ಎರಡನೇ ಸಾಲಿನ ಪ್ರಯಾಣಿಕರಿಗೆ ಮೀಸಲಾದ ಕ್ಲೈಮೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹೋಲ್ಡ್ ಫಂಕ್ಷನ್ ಮತ್ತು ಡ್ರೈವ್ ಮೋಡ್‌ಗಳು ಅದರ ಭಾವನೆ ಮತ್ತು ಆಕರ್ಷಣೆಗೆ ಹೆಚ್ಚಿನದನ್ನು ಸೇರಿಸುತ್ತವೆ. 2023ರ ಟೊಯೊಟಾ ಇನೋವಾ ಹೈಕ್ರಾಸ್ (ಝೆನಿಕ್ಸ್) ಟೊಯೋಟಾ ಸೇಫ್ಟಿ ಸೆನ್ಸ್ 3.0 (ADAS) ನೊಂದಿಗೆ ಸಜ್ಜುಗೊಂಡಿದೆ, ಸುರಕ್ಷತೆಗಾಗಿ ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹಲವಾರು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ.

ಈ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 18-ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವೀಲ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿದೆ. ಇದು ವಾಹನದ ಕಮಾಂಡಿಂಗ್ ನೋಟವನ್ನು ಒತ್ತಿಹೇಳುತ್ತದೆ. ಪ್ರೆಸ್ಟೀಜ್, ಲಿಮೋಸಿನ್ ಮತ್ತು ಲಿಮೋಸಿನ್ + ಈಗ ಪ್ರೀಮಿಯಂ ಲೆಥೆರೆಟ್ ಆಸನಗಳನ್ನು (ವಿಐಪಿ ಸೀಟುಗಳೊಂದಿಗೆ) ಹೊಂದಿರುತ್ತದೆ. ಮರುವಿನ್ಯಾಸಗೊಳಿಸಲಾದ ಕಾರ್ನೀವಲ್‌ನ ವಿಐಪಿ ಸೀಟುಗಳು ಬೋಲ್‌ಸ್ಟರ್‌ಗಳು ಸೊಗಸಾದ ವಜ್ರದ ಆಕಾರದ ಕ್ವಿಲ್ಟಿಂಗ್ ಅನ್ನು ಹೊಂದಿವೆ, ಇದು ಹೆಚ್ಚಿನ ಬೆಂಬಲ, ಸೌಕರ್ಯವನ್ನು ಒದಗಿಸುತ್ತದೆ ಮತ್ತು ಒಟ್ಟಾರೆ ನೋಟವನ್ನು ಹೆಚ್ಚಿಸುತ್ತದೆ.

Most Read Articles

Kannada
English summary
Comparison between toyota innova hycross vs kia carnival details
Story first published: Thursday, December 1, 2022, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X