Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಜೀಪ್ ಮೆರಿಡಿಯನ್ ಜನಪ್ರಿಯ ಕಂಪಾಸ್ ಎಸ್‍ಯುವಿಯನ್ನು ಆಧರಿಸಿದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಹೊಸ ಮೆರಿಡಿಯನ್ ಅನ್ನು ಈ ವರ್ಷದ ಮೇ ತಿಂಗಳಿನಲ್ಲಿ ಮಹಾರಾಷ್ಟ್ರದ ಪುಣೆ ಬಳಿಯ ಬ್ರಾಂಡ್‌ನ ರಂಜನ್‌ಗಾಂವ್ ಘಟಕದಲ್ಲಿ ಉತ್ಪಾದಿಸಲಿದೆ. ಇದೇ ಮೇ ತಿಂಗಳಿನಲ್ಲಿ ಈ ಹೊಸ ಎಸ್‍ಯುವಿಯು ಬಿಡುಗಡೆಯಾಗಲಿದೆ. ಜೀಪ್ ಮೆರಿಡಿಯನ್ ಮಾದರಿ ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜೀಪ್ ಕಮಾಂಡರ್‌ನೊಂದಿಗೆ ಹಲವಾರು ಸಾಮ್ಯತೆಯನ್ನು ಹೊಂದಿದೆ. ಭಾರತದಲ್ಲಿ ಜೀಪ್ ಮೆರಿಡಿಯನ್ ಮಾದರಿಯು ನೇರವಾಗಿ ಟೊಯೊಟಾ ಫಾರ್ಚುನರ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಈ ಎರಡು ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳ ಮಾಹಿತಿ ಇಲ್ಲಿದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ವಿನ್ಯಾಸ

ಈ ಹೊಸ ಜೀಪ್ ಮೆರಿಡಿಯನ್‌ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್, ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಅನ್ನು ಹೊಂದಿದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಜೀಪ್ ಮೆರಿಡಿಯನ್‌ ಎಸ್‍ಯುವಿಯ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಸ್ಕ್ವೇರ್-ಆಫ್ ವ್ಹೀಲ್ ಆರ್ಚ್‌ಗಳು, ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಮತ್ತು ಮುಂಭಾಗದ ಡೋರುಗಳು, ದೊಡ್ಡ ವಿಂಡೋಗಲು ಮತ್ತು ಪ್ರಮುಖ ರೂಫ್ ರೈಲ್ ಗಳ ಮೇಲೆ ಮೆರಿಡಿಯನ್ ಎಂದು ಬರೆಯಲಾಗಿದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಬಿಡುಗಡೆಯಾಗಲಿರುವ ಈ ಹೊಸ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ ಸುತ್ತುವ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಮತ್ತು ನೇರವಾದ ಟೈಲ್‌ಗೇಟ್ ಅನ್ನು ಹೊಂದಿದೆ. ಮೆರಿಡಿಯನ್ ಅನ್ನು ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಜನಪ್ರಿಯ ಟೊಯೋಟಾ ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಇದರೊಂದಿಗೆ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಈ ಹೊಸ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಡಿಆರ್‌ಎಲ್‌ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು ಎಂದು ಕರೆಯಲಾಗುತ್ತದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಇಂಟಿರಿಯರ್ ಮತ್ತು ಫೀಚರ್ಸ್

ಈ ಮೆರಿಡಿಯನ್ ಎಸ್‍ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ವೆಂಟಿಲೇಟೆಡ್ ಸೀಟ್‌ಗಳು, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು ಮತ್ತು ಮೆಟಾಲಿಕ್ ಆಕ್ಸೆಂಟ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್ ಒಳಗೊಂಡಿವೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಇದರೊಂದಿಗೆ ಈ ಎಸ್‍ಯುವಿಯಲ್ಲಿ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಕೂಲ್ಡ್ ಗ್ಲೋವ್‌ಬಾಕ್ಸ್, ಕೀಲೆಸ್ ಎಂಟ್ರಿ ಮತ್ತು ಗೋ, ಪವರ್-ಆಪರೇಟೆಡ್ ಟೈಲ್‌ಗೇಟ್, ಪನೋರಮಿಕ್ ಸನ್‌ರೂಫ್, ಇತ್ಯಾದಿಗಳಂತಹ ಅನೇಕ ಇತರ ವೈಶಿಷ್ಟ್ಯಗಳನ್ನು ನೀಡುತ್ತದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರ್ಸ್ ಅನ್ನು ಹೊಂದಿದೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಹೊಂದಿವೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಎಂಜಿನ್

ಈ ಹೊಸ ಜೀಪ್ ಮೆರಿಡಿಯನ್‌ ಎಸ್‍ಯುವಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 9-ಸ್ಪೀಡ್ ಟಾರ್ಕ್-ಕನ್ವರ್ಟರ್ ಗೇರ್ ಬಾಕ್ಸ್ ಅನ್ನು ಒಳಗೊಂಡಿರುತ್ತದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಫಾರ್ಚೂನರ್ ಎಸ್‍ಯುವಿಯಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಇನ್ನು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯು ದ್ದು ಟೂ ವ್ಹೀಲ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ಗಳ ಆಯ್ಕೆಯನ್ನು ಹೊಂದಿದೆ.

Jeep Meridian Vs Toyota Fortuner: ಈ ಎಸ್‍ಯುವಿಗಳ ನಡುವಿನ ವ್ಯತ್ಯಾಸಗಳಿವು

ಬೆಲೆಗಳು

ಜೀಪ್ ಮೆರಿಡಿಯನ್‌ನ ಬೆಲೆಗಳು ಈ ವರ್ಷದ ಮೇ ತಿಂಗಳಲ್ಲಿ ಬಹಿರಂಗಗೊಳ್ಳುವ ನಿರೀಕ್ಷೆಯಿದೆ ಮತ್ತು ಇದು ಜೀಪ್ ಕಂಪಾಸ್‌ಗಿಂತಲೂ ಹೆಚ್ಚು ದುಬಾರಿಯಾಗಿದೆ. ಟೊಯೊಟಾ ಫಾರ್ಚುನರ್‌ಗೆ ಸಂಬಂಧಿಸಿದಂತೆ, ಇದರ ಆರಂಬಿಕೆ ಬೆಲೆಯು ರೂ.31.39 ಲಕ್ಷವಾಗಿದೆ. ಇನ್ನು ಇದರ ಟಾಪ್ ವೆರಿಯೆಂಟ್ ಫಾರ್ಚುನರ್ ಲೆಜೆಂಡರ್ ಬೆಲೆಯು ರೂ.39.71 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ನವದೆಹಲಿ ಎಕ್ಸ್ ಶೊರೂಂ ಪ್ರಕಾರವಾಗಿದೆ,

Most Read Articles

Kannada
Read more on ಜೀಪ್ jeep
English summary
Comparison of specs features between jeep meridian and toyota fortuner details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X