RX 100 ಡಿಸೈನ್‌ನಲ್ಲಿ ಬಿಡುಗಡೆಗೆ ಸಜ್ಜಾದ ದೇಶೀಯ ಎಲೆಕ್ಟ್ರಿಕ್ ಮಸಲ್ ಬೈಕ್ ಇ-ಡೈರೋತ್

ಭಾರತದಲ್ಲಿನ ಎಲೆಕ್ಟ್ರಿಕ್ ವಾಹನಗಳ ತಯಾರಕರಾದ ಇಕೋ ತೇಜಸ್ ಈಗ ಮೇಕ್ ಇನ್ ಇಂಡಿಯಾದ ಮೊದಲ ಮಸಲ್ ಬೈಕ್ 'ಇ-ಡೈರೋತ್' ಅನ್ನು ಪರಿಚಯಿಸುವ ಮೂಲಕ ಹೈ ಸ್ಪೀಡ್ ಮೋಟಾರ್‌ಸೈಕಲ್‌ಗಳಲ್ಲಿ ತೊಡಗಿಸಿಕೊಂಡಿದೆ. ಇದು ಡಿಸೈನ್‌ನಲ್ಲಿ ತುಸು RX 100 ನಂತೆ ಕಾಣುತ್ತಿದ್ದರೂ, ಹಾರ್ಲೆ ಡೇವಿಡ್‌ಸನ್‌ನ ಅಭಿರುಚಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ಹೈಸ್ಪೀಡ್ ಕ್ರೂಸರ್ ಇ-ಬೈಕ್ 'ಇ-ಡೈರೋತ್', ಡಿಸೆಂಬರ್ 2022 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಮೊಟ್ಟಮೊದಲ 'ಮೇಡ್ ಇನ್ ಇಂಡಿಯಾ' ಮಸಲ್ ಇ-ಮೋಟಾರ್‌ಸೈಕಲ್ ಅನ್ನು ಹಾರ್ಲೆ ಡೇವಿಡ್‌ಸನ್‌ನ ಅಭಿರುಚಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇ- ಡೈರೋತ್ ಸ್ಮಾರ್ಟ್ ಬೈಕ್ ಬ್ಯಾಟರಿ, ಕಂಟ್ರೋಲ್ ಮತ್ತು ಕ್ಲಸ್ಟರ್ ನಡುವೆ ತಡೆರಹಿತ ಏಕೀಕರಣವನ್ನು ಹೊಂದಿದೆ. ಉತ್ತಮ ಚಾಲನಾ ಅನುಭವಕ್ಕಾಗಿ ಎಲ್ಲಾ ರೀತಿಯ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ.

ಇ-ಡೈರೋತ್‌ನ ಡ್ಯಾಶ್‌ಬೋರ್ಡ್‌ನಲ್ಲಿ ಇಂಡಿಕೇಟರ್‌ಗಳು, ಪಾಯಿಂಟ್‌-ಟು-ಪಾಯಿಂಟ್ ನ್ಯಾವಿಗೇಷನ್‌ನಂತಹ ವೈಶಿಷ್ಟ್ಯಗಳನ್ನು ಆಪರೇಟ್ ಮಾಡಲು ವಾಹನವನ್ನು ಸವಾರನ ಮೊಬೈಲ್ ಫೋನ್‌ನೊಂದಿಗೆ ಸಂಪರ್ಕಿಸಬಹುದು. ಇಕೋ ತೇಜಸ್ ಪ್ರಕಾರ, ಒಂದೇ ಚಾರ್ಜ್‌ನಲ್ಲಿ ಒಂದು ಬ್ಯಾಟರಿ ನಿಮ್ಮನ್ನು 150 ಕಿ.ಮೀ ವರೆಗೆ ಕರೆದೊಯ್ಯುತ್ತದೆ. ಇದು ಮತ್ತೊಂದು ಬಿಡಿ ಬ್ಯಾಟರಿಗೆ ಅವಕಾಶ ಕಲ್ಪಿಸುವ ಆಯ್ಕೆಯನ್ನು ಸಹ ಹೊಂದಿದೆ, ಈ ಮೂಲಕ ಚಾಲಕಗೆ 300 ಕಿ.ಮೀ ವರೆಗೆ ಪ್ರಯಾಣಿಸಲು ಈ ಬೈಕ್ ಸಹಾಯ ಮಾಡುತ್ತದೆ.

ಖರೀದಿದಾರರು ಖರೀದಿಯ ಮೇಲೆ 72 ವೋಲ್ಟ್/60ah ಬ್ಯಾಟರಿ ಪ್ಯಾಕ್ ಪಡೆಯುವ ಪ್ರಯೋಜನವನ್ನು ಹೊಂದಿದ್ದಾರೆ, ಹೆಚ್ಚುವರಿಯಾಗಿ ಒಬ್ಬರು ಸರ್ಕಾರದ ಸಬ್ಸಿಡಿಯನ್ನು ಸಹ ಪಡೆಯಬಹುದು. ಕಂಪನಿ ನೀಡಿದ ಚಾರ್ಜಿಂಗ್ ಸ್ಟೇಷನ್‌ನೊಂದಿಗೆ ವಾಹನವನ್ನು ಚಾರ್ಜ್‌ ಮಾಡಿಕೊಳ್ಳಬಹುದು, ವಿಶೇಷವಾಗಿ ಖರೀದಿದಾರರು ಅಪಾರ್ಟ್ಮೆಂಟ್‌ಬಲ್ಲಿ ವಾಸಿಸುತ್ತಿದ್ದರೆ ಅಂತವರಿಗಾಗಿ ಕಂಪನಿಯ ವಿತರಕರು ಖರೀದಿದಾರರ ಪಾರ್ಕಿಂಗ್ ಸ್ಥಳಗಳಲ್ಲಿ ಈ ಚಾರ್ಜರ್ ಅನ್ನು ಸ್ಥಾಪಿಸುತ್ತಾರೆ. ವಾಹನವು 100 Kmph ನಷ್ಟು ಉನ್ನತ ವೇಗವನ್ನು ಹೊಂದಿದ್ದು, ಅದರ 4 kW ಎತ್ತರದ RPM ಮಿಡ್ ಡ್ರೈವ್ ಮೋಟಾರ್‌ನೊಂದಿಗೆ ಬರುತ್ತದೆ.

ಇಕೋ ತೇಜಸ್‌ನ ನಿರ್ದೇಶಕ ಕೆ. ವೆಂಕಟೇಶ್ ತೇಜ ಮಾತನಾಡಿ, "ಭಾರತದ ಮೊದಲ ಮಸಲ್ ಬೈಕ್ ಅನ್ನು ಬಿಡುಗಡೆ ಮಾಡಲು ನಮಗೆ ತುಂಬಾ ಸಂತೋಷವಾಗಿದೆ. ಈ ಬೈಕ್ ಸ್ಮಾರ್ಟ್ ಆಟೊಮೇಷನ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಅಂತರ್ಗತ ನ್ಯಾವಿಗೇಷನ್, ಬ್ಲೂಟೂತ್ ಸಂಪರ್ಕ ಮತ್ತು ಕಾಲ್ ಅಲರ್ಟ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದು ಇಲ್ಲಿಯವರೆಗೆ EV ಬೈಕ್ ವಿಭಾಗಗಳಲ್ಲಿ ಕಂಡುಬರುವ ಅತ್ಯಂತ ಫ್ಯೂಚರಿಸ್ಟಿಕ್ ತಂತ್ರಜ್ಞಾನವಾಗಿದೆ. ಇಂದಿನ ಯುವಕರು ಇ-ಡೈರೋತ್ ಖರೀದಿ ಮಾಡುವಾಗ ಅವರಲ್ಲಿ ಪರಿಸರ ಸ್ನೇಹಿ ಉತ್ಸಾಹವನ್ನು ಒದಗಿಸುವುದು ನಮ್ಮ ಗುರಿಯಾಗಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಹರಿಯಾಣ, ಒರಿಸ್ಸಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ 10 ಭಾರತೀಯ ರಾಜ್ಯಗಳಲ್ಲಿ ಸ್ಥಾಪಿತ ಡೀಲರ್ ಉಪಸ್ಥಿತಿಯನ್ನು Ekotejas ಯಶಸ್ವಿಯಾಗಿ ಖಚಿತಪಡಿಸಿಕೊಂಡಿದೆ. ಸದ್ಯ ಮುಂಗಡ ಬುಕ್ಕಿಂಗ್‌ಗಳು ನಡೆಯುತ್ತಿವೆ. ಈ ಬೈಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಕೂಡ ನಮಗೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಗಳನ್ನು ಪರಿಚಯಿಸಲಿದ್ದೇವೆ ಎಂದರು.

ಈ ಬೈಕ್ ದೇಶೀಯ ನಿರ್ಮಿತ ಶುದ್ಧ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಡಿಸೈನ್, ಬ್ಯಾಟರಿ, ಮೈಲೇಜ್ ಹಾಗೂ ವೈಶಿಷ್ಟ್ಯಗಳಲ್ಲಿ ಪ್ರಮಾಣಿತವಾಗಿದೆ. ಮುಂಬರುವ ದಿನಗಳಲ್ಲಿ ಬೆಲೆಯನ್ನು ಕೂಡ ಬಹಿರಂಗಪಡಿಸುವುದಾಗಿ ಕಂಪನಿ ತಿಳಿಸಿದೆ. ಇದೇ ಕಂಪನಿಯಿಂದ ಇನ್ನಷ್ಟು ಹೊಸ ಮಾದರಿಗಳು ಹೊರಹೊಮ್ಮುವ ಸೂಚನೆ ಕೂಡ ನೀಡಲಾಗಿದೆ. ಈ ಮೂಲಕ ದೇಶೀಯ ಕಂಪನಿಯಾದ ಇಕೋ ತೇಜಸ್ ವಿದೇಶಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಸೆಡ್ಡುಹೊಡೆಯಲು ಎಲ್ಲಾ ತರಹದ ಯೋಜನೆಗಳೊಂದಿಗೆ ಸಜ್ಜಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Electric muscle bike e dyroth launched in rx 100 design
Story first published: Wednesday, November 30, 2022, 11:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X