Just In
Don't Miss!
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- News
ಮೊಟ್ಟೆ ಕೊಡಲು ಕಾಸಿಲ್ಲ, ಶಿಕ್ಷಣ ಸಚಿವರ ಜಾಲತಾಣಕ್ಕೆ ಇದೆಯೇ?: ಕಾಂಗ್ರೆಸ್ ಟೀಕೆ
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಇ-ಕಾರು ನಿರ್ಮಾಣಕ್ಕಾಗಿ ಒಂದಾದ ಜಪಾನ್ ಮೂಲದ ಎರಡು ದೈತ್ಯ ಕಂಪನಿಗಳು
ಜಪಾನ್ ಮೂಲದ ಆಟೋಮೋಟಿವ್ ದೈತ್ಯ ಹೋಂಡಾ ಮತ್ತು ಎಲೆಕ್ಟ್ರಾನಿಕ್ಸ್ ದೈತ್ಯ ಸೋನಿ ಎಲೆಕ್ಟ್ರಿಕ್ ವಾಹನಗಳ ತಯಾರಿಗೆ ಮುಂದಾಗಿದ್ದು, ಈ ಸಂಬಂಧ ಈ ಎರಡು ಕಂಪನಿಗಳು ಹಲವು ಪ್ರತಕ್ರಿಯೆಗಳನ್ನು ಮುಗಿಸಿವೆ.

ಈ ಮೈತ್ರಿಯ ಆಧಾರದ ಮೇಲೆ, ಎರಡೂ ಕಂಪನಿಗಳು ಜಂಟಿಯಾಗಿ ವಿಶ್ವ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲಿವೆ. ವರದಿ ಪ್ರಕಾರ, ಸೋನಿ ಈಗಾಗಲೇ ವಿದ್ಯುತ್ ವಾಹನ ತಯಾರಿಕೆಯಲ್ಲಿ ತೊಡಗಿದ್ದು, ಎರಡು ರೀತಿಯ ಎಲೆಕ್ಟ್ರಿಕ್ ಕಾರುಗನ್ನು ಉತ್ಪಾದಿಸಲು ಯೋಜನೆ ರೂಪಿಸಿಕೊಂಡಿದೆ.

ಸೋನಿಯ ಯೋಜನೆಯ ಪ್ರಮುಖ ಮಾದರಿಗಳೆನ್ನಲಾದ ವಿಷನ್ 01 (ಸೆಡಾನ್) ಮತ್ತು ಸೋನಿ ವಿಷನ್ 02 (ಎಸ್‌ಯುವಿ ಎಲೆಕ್ಟ್ರಿಕ್ ಕಾರು). ಈ ಹಂತದಲ್ಲಿ ಸೋನಿ ಮತ್ತು ಹೋಂಡಾ ಜಂಟಿಯಾಗಿ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಲಿವೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಸಮ್ಮಿಶ್ರ ಬ್ರಾಂಡ್‌ಗಳ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗುತ್ತಿರುವ ಎಲೆಕ್ಟ್ರಿಕ್ ಕಾರನ್ನು 2025ರ ವೇಳೆಗೆ ಬಿಡುಗಡೆ ಮಾಡಲಾಗುವುದು. ಆದ್ದರಿಂದ ಈ ಮೂರು ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರನ್ನು ಪ್ರಸ್ತುತವಿರುವ ಪ್ರಮುಖ ಕಂಪನಿಗಳ ಮಾದರಿಗಳನ್ನು ವಿಶ್ಲೇಷಿಸಿ ಸೋನಿ ಮಾದರಿಗಳನ್ನು ಸುಧಾರಿಸುವ ನಿರೀಕ್ಷೆ ಇದೆ.

ಇದನ್ನು ದೃಢೀಕರಿಸಲು ಎರಡೂ ಕಂಪನಿಗಳು ಎಲೆಕ್ಟ್ರಿಕ್ ಕಾರು ಅಭಿವೃದ್ಧಿಯ ತಮ್ಮ ಕೆಲಸವನ್ನು ತೀವ್ರಗೊಳಿಸಿವೆ. ಮೂಲಗಳ ಪ್ರಕಾರ ಈ ವರ್ಷದ ಕೊನೆಯಲ್ಲಿ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ ಪ್ರಾರಂಭವಾಗಲಿದೆ. ಹೋಂಡಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕದಲ್ಲಿ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಲಾಗುವುದು.

ಈ ಪ್ರಮುಖ ಚಟುವಟಿಕೆಗಳ ಒಪ್ಪಂದಗಳಿಗೆ ಎರಡೂ ಕಂಪನಿಗಳು ಈಗಾಗಲೇ ಸಹಿ ಕೂಡ ಮಾಡಿವೆ. ಈ ಮೂಲಕ, ವಿನ್ಯಾಸ, ಅಭಿವೃದ್ಧಿ ಮತ್ತು ತಂತ್ರಜ್ಞಾನದಂತಹ ಪ್ರಮುಖ ಚಟುವಟಿಕೆಗಳನ್ನು ಎರಡೂ ಕಂಪನಿಗಳು ಒಟ್ಟಾಗಿ ಮಾಡಲಿವೆ. ಈ ಕಾರನ್ನು ವಿಶ್ವದ ಇ-ವಾಹನ ಪ್ರೇಮಿಗಳು ಉತ್ತಮವಾಗಿ ಸ್ವೀಕರಿಸುವ ನಿರೀಕ್ಷೆಯಿದೆ.

ಹೋಂಡಾ ಉತ್ಪನ್ನಗಳು ಈಗಾಗಲೇ ವಿಶ್ವದ ಜನರಲ್ಲಿ ಭಾರೀ ಬೇಡಿಕೆಯನ್ನು ಪಡೆಯುತ್ತಿವೆ. ಅದೇ ರೀತಿ ಸೋನಿ ಉತ್ಪಾದನೆಯಲ್ಲೂ ಜನರಲ್ಲಿ ಅತ್ಯತ್ತಮ ನಂಬಿಕೆ ಇದೆ. ಈ ಸಮ್ಮಿಲನದಿಂದ ಭವಿಷ್ಯದಲ್ಲಿ ಎರಡು ಕಂಪನಿಗಳ ಮೈತ್ರಿಯಲ್ಲಿ ಹೊರಹೊಮ್ಮುತ್ತಿರುವ ಎಲೆಕ್ಟ್ರಿಕ್ ಕಾರಿಗೆ ಉತ್ತಮ ಪ್ರತಿಕ್ರಿಯೆಯನ್ನು ಲಭಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಆದರೆ ಮುಂಬರುವ ವರ್ಷಗಳು ಸೋನಿ ಮತ್ತು ಹೋಂಡಾ ಅವರ ಹೊಸ ಮೈತ್ರಿ ಹೇಗಿರಲಿದೆ ಎಂಬುದನ್ನು ಊಹಿಸುವುದು ಅಸಾಧ್ಯ. ಆದ್ದರಿಂದ, ಈ ಕಂಪನಿಗಳು ನಿರ್ಮಿಸಲು ಹೊರಟಿರುವ ಎಲೆಕ್ಟ್ರಿಕ್ ಕಾರು ಮಾತ್ರವಲ್ಲ, ಎರಡು ಕಂಪನಿಗಳ ಮೈತ್ರಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಹಲವರ ಗೊಂದಲವಾಗಿದೆ.

ಎಲೆಕ್ಟ್ರಾನಿಕ್ ಪ್ರಪಂಚದ ದೈತ್ಯ ಸೋನಿ, ಎಲೆಕ್ಟ್ರಿಕ್ ವಾಹನ ತಯಾರಿಕೆ ಮಾತ್ರವಲ್ಲದೆ ಹೊಸ ಇ-ಮೊಬಿಲಿಟಿ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದೆ. ಇದು ವಾಣಿಜ್ಯಿಕವಾಗಿ ಉಪಯುಕ್ತವಾಗಲಿದೆ ಎಂದು ಕಂಪನಿ ಹೇಳಿದೆ.

ಇನ್ನು ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಮಾರ್ಚ್ ಅವಧಿಗಾಗಿ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಹೋಂಡಾ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಎಲ್ಲಾ ಮಾದರಿಗಳ ಮೇಲೂ ವಿವಿಧ ಆಫರ್ ಘೋಷಣೆ ಮಾಡಿದೆ. ಹೋಂಡಾ ಕಂಪನಿಯ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.35 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 15 ಸಾವಿರ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್ ಸೇರಿದಂತೆ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 26 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಸೇರಿದಂತೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಹೋಂಡಾ ಜಾಝ್ ಮಾದರಿಯ ಎಲ್ಲಾ ರೂಪಾಂತರಗಳ ಮೇಲೂ ಗ್ರಾಹಕರಿಗೆ ರೂ. 33,158 ತನಕ ಆಫರ್ ಲಭ್ಯವಿದ್ದು, ಇದರಲ್ಲಿ ರೂ. 10 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ, ಎಕ್ಸ್‌ಚೆಂಜ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.