ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಟೆಸ್ಲಾ (Tesla) ಅಮೆರಿಕಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯ ಎಲೆಕ್ಟ್ರಿಕ್ ಕಾರುಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ನೋಟ, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಅತ್ಯಾಧುನಿಕ ಫೀಚರ್'ಗಳಿಗೆ ಹೆಸರುವಾಸಿಯಾಗಿವೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಈ ಟೆಸ್ಲಾ ಕಂಪನಿಯು ಭಾರತಕ್ಕೆ ಕಾಲಿಡಲು ಕಳೆದ ಕೆಲವು ವರ್ಷಗಳಿಂದ ಸತತ ಪ್ರಯತ್ನಗಳು ನಡೆಯುತ್ತಿದೆ. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳ ಮಾರಾಟ ಆರಂಭಿಸುವ ಟೆಸ್ಲಾ ಕನಸನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದರು. ಆದರೆ ಅದು ಇನ್ನು ಕೂಡ ಸಾಧ್ಯವಾಗಿಲ್ಲ. ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಒಬ್ಬರು ಭಾರತದಲ್ಲಿ ಟೆಸ್ಲಾ ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆಗೆ ಸರ್ಕಾರದ ಜೊತೆ ಬಹಳಷ್ಟು ಸವಾಲುಗಳೊಂದಿಗೆ ಈಗಲೂ ಕೆಲಸ ಮಾಡುತ್ತಿದ್ದೇವೆ ಎಂದು ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟೆಸ್ಲಾ ಭಾರತದಲ್ಲಿ ಕಾರುಗಳ ಬಿಡುಗಡೆ ಮಾಡಲಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಎಲಾನ್ ಮಸ್ಕ್ ಮತ್ತು ಕೇಂದ್ರ ಸರ್ಕಾರದ ಜೊತೆ ಹಲವು ಸುತ್ತಿನ ಮಾತುಕತೆಗಳು ನಡೆದಿದೆ. ಆದರೆ ಭಾರತದಲ್ಲಿ ಟೆಸ್ಲಾ ಕಂಪನಿಗೆ ಕಾರು ಮಾರಾಟ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಟೆಸ್ಲಾ ಕಾರು ವಿಲಂಬಕ್ಕೆ ಕಾರಣಗಳನ್ನು ಎಲಾನ್ ಮಸ್ಕ್ ಈಗಾಗಲೇ ಹೇಳಿದ್ದಾರೆ. ಪ್ರಮುಖವಾಗಿ ಭಾರತದಲ್ಲಿ ಆಮದು ಸುಂಕದ ಸಮಸ್ಯೆಯನ್ನು ಟೆಸ್ಲಾ ಎದುರಿಸುತ್ತಿದೆ. ವಿಶ್ವದಲ್ಲಿ ಎಲ್ಲೂ ಇರದ ದುಬಾರಿ ತೆರಿಗೆ ಭಾರತದಲ್ಲಿದೆ ಇದೆ ಎಂದು ಟೆಸ್ಲಾ ಈ ಹಿಂದೆಯು ಅಸಮಾಧಾನ ಹೊರಹಾಕಿದ್ದರು.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಅಮೆರಿಕದಲ್ಲಿನ ಕೈಗೆಟುಕುವ ದರದ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.30 ಲಕ್ಷವಾದರೆ. ಇದೇ ಮಾಡೆಲ್ 3 ಎಲೆಕ್ಟ್ರಿಕ್ ಕಾರಿಗೆ ಭಾರತದಲ್ಲಿ ಶೇ.100 ರಷ್ಟು ತೆರಿಗೆ ಪಾವತಿಸಿಬೇಕು. ಹೀಗಾಗಿ ಈ ಕಾರಿನ ಬೆಲೆಯು ಸುಮಾರು ರೂ.60 ಲಕ್ಷವಾಗುತ್ತದೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಟೆಸ್ಲಾ ಮಾಡೆಲ್ 3 ಭಾರತದಲ್ಲಿ ಸೆಡಾನ್‌ನ ಸರಾಸರಿ ಬೆಲೆಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು. ಮೂಲಸೌಕರ್ಯಗಳ ಕೊರತೆಯಿಂದಾಗಿ ಇದು ಸ್ಥಾಪಿತ ಉತ್ಪನ್ನವಾಗಿದೆ, ಇದು ಅನೇಕರಿಗೆ ಶ್ರೇಣಿಯ ಆತಂಕವನ್ನು ಉಂಟುಮಾಡುತ್ತದೆ. ಹೀಗಾಗಿ ಭಾರತದಲ್ಲಿ ದುಬಾರಿ ಕಾರು ಮಾರಾಟ ಟೆಸ್ಲಾಗೆ ಹಿನ್ನಡೆಯಾಗಲಿದೆ ಎಂದು ಈಗಾಗಲೇ ಟೆಸ್ಲಾ ಹೇಳಿದೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಭಾರತದಲ್ಲಿನ ಟೆಸ್ಲಾ ಕಾರ್ಯನಿರ್ವಾಹಕರು ಆಮದು ಸುಂಕಗಳ ಮೇಲಿನ ತೆರಿಗೆ ವಿನಾಯಿತಿಗಳಿಗಾಗಿ ಲಾಬಿ ಮಾಡುತ್ತಿದ್ದಾರೆ, ಆದರೆ ಸರ್ಕಾರವು ಬಗ್ಗಲಿಲ್ಲ. ಆಪಲ್ ಒಂದೆರಡು ವರ್ಷಗಳ ಹಿಂದೆ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿತು ಮತ್ತು 2018 ರಲ್ಲಿ ತನ್ನ ಮಾರುಕಟ್ಟೆ ಪಾಲು ಕಡಿಮೆ ಮಟ್ಟಕ್ಕೆ ಇಳಿಯಿತು.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಆದರೆ 2019 ರಲ್ಲಿ ಹಳೆಯ ಮಾದರಿಗಳು ಸ್ಥಳೀಯ ಉತ್ಪಾದನೆಯನ್ನು ನೋಡಲಾರಂಭಿಸಿದವು ಮತ್ತು ಇಂದು, ಅದರ ಉತ್ಪನ್ನಗಳ ಪ್ರೀಮಿಯಂ ಸ್ವಭಾವದ ಹೊರತಾಗಿಯೂ ಅದರ ವ್ಯವಹಾರವು ನಿಜವಾಗಿಯೂ ಉತ್ತಮವಾಗಿದೆ. ಸರ್ಕಾರವು ಸ್ಥಳೀಯ ಉತ್ಪಾದನೆಯ ಬಗ್ಗೆ ಮುಂದೆ ಯಾವ ರೀತಿ ಟೆಸ್ಲಾಗೆ ಸಹಕಾರಿ ನೀಡುತ್ತಾರೆ ಎಂದುವುದು ಕಾದು ನೋಡಬೇಕಿದೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಟಾಟಾ ಮತ್ತು ಮಹೀಂದ್ರಾದಂತಹ ಭಾರತೀಯ ಬ್ರಾಂಡ್‌ಗಳು ಇವಿಗಳ ಅಭಿವೃದ್ಧಿಯತ್ತ ಆಕ್ರಮಣಕಾರಿಯಾಗಿ ಚಲಿಸುತ್ತಿವೆ ಮತ್ತು ಇದರಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ವೇಗವನ್ನು ಪಡೆಯುತ್ತಿದೆ. ಇದರ ಮೇಲೆ, ಹ್ಯುಂಡೈ ತನ್ನ ಅಂತರಾಷ್ಟ್ರೀಯ ಮಾದರಿಗಳನ್ನು ತರಲು ಮತ್ತು ಅವುಗಳನ್ನು ಭಾರತಕ್ಕೆ ಸ್ಥಳೀಕರಿಸಲು ಬದ್ಧತೆಯನ್ನು ಮಾಡಿದೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಫೋಕ್ಸ್‌ವ್ಯಾಗನ್ ಸಮೂಹವು ತನ್ನ ಆಡಿ ಮತ್ತು ಪೋರ್ಷೆ ಬ್ರಾಂಡ್‌ಗಳಿಂದ ಇವಿಗಳನ್ನು ಭಾರತಕ್ಕೆ ತರಲಿದೆ. ಆದರೆ ಮಸ್ಕ್ ಮತ್ತು ಟೆಸ್ಲಾಗೆ ಭಾರತವು ಆದ್ಯತೆಯಾಗದಿರಬಹುದು. ಇನ್ನು ಟೆಸ್ಲಾ ತನ್ನ ಉತ್ಪಾದನೆಯನ್ನು ಯುಎಸ್ ನಲ್ಲಿ ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿದೆ,

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಇನ್ನು ಟೆಸ್ಲಾ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಸಾಫ್ಟ್‌ವೇರ್ ಅಪ್ ಡೇಟ್ ನೀಡಲು ಸಿದ್ಧತೆ ನಡೆಸುತ್ತಿದೆ. ಕಂಪನಿಯು ಈ ಅಪ್ ಡೇಟ್ ಅನ್ನು ಹಾಲಿಡೇ ಸಾಫ್ಟ್‌ವೇರ್ ಅಪ್‌ಡೇಟ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿವೆ. ಈ ಸಾಫ್ಟ್‌ವೇರ್ ಅಪ್‌ಡೇಟ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳು ಸಂಗೀತಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತವೆ. ಟೆಸ್ಲಾ ಕಂಪನಿಯ ಹೊಸ ಹಾಲಿಡೇ ಸಾಫ್ಟ್‌ವೇರ್ ಅಪ್‌ಡೇಟ್‌, ಸಂಗೀತಕ್ಕೆ ಅನುಗುಣವಾಗಿ ಕಾರಿನಲ್ಲಿರುವ ಎಲೆಕ್ಟ್ರಿಕ್ ದೀಪಗಳನ್ನು ಆನ್ ಹಾಗೂ ಆಫ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೊಳಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಈ ಅಪ್ ಡೇಟ್ ಅನ್ನು ಬೇಸರದಲ್ಲಿರುವವರನ್ನು ಸಹ ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಈ ಫೀಚರ್ ಅನ್ನು ಮಿನಿ ಪಾರ್ಟಿ ಕವರ್ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸಾಫ್ಟ್‌ವೇರ್ ಅಪ್ ಡೇಟ್ ಕಂಪನಿಯ ಎಲ್ಲಾ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ಟೆಸ್ಲಾ ಕಂಪನಿ ತಿಳಿಸಿದೆ. ಟೆಸ್ಲಾ ಕಂಪನಿಯು ಸದ್ಯಕ್ಕೆ ವಿಶ್ವಾದ್ಯಂತ ಮಾಡೆಲ್ 3, ಮಾಡೆಲ್ ಎಸ್, ಮಾಡೆಲ್ ವೈ ಹಾಗೂ ಮಾಡೆಲ್ ಎಕ್ಸ್ ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತದೆ.

Most Read Articles

Kannada
Read more on ಟೆಸ್ಲಾ tesla
English summary
Elon musk on tesla india entry latest updates details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X