ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಟೆಸ್ಲಾ ಸಿಇಒ ಎಲನ್ ಮಸ್ಕ್ ಅವರು ಭಾರತದಲ್ಲಿ ತಮ್ಮ ಕಾರುಗಳನ್ನು ಬಿಡುಗಡೆ ಮಾಡುವ ಬಗ್ಗೆ ತಮ್ಮ ಮೌನವನ್ನು ಮುರಿದಿದ್ದಾರೆ. ಇತ್ತೀಚೆಗೆ, ಟ್ವಿಟರ್‌ನಲ್ಲಿ ಅವರ ಫಾಲೋವರ್ ಒಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸಲು ಭಾರತ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಇದರೊಂದಿಗೆ, ಭಾರತ ಸರ್ಕಾರವು ಮೊದಲು ತನ್ನ ಕಾರುಗಳನ್ನು ಮಾರಾಟ ಮಾಡಲು ಅನುಮತಿಸಿದರೆ, ಆನಂತರ ಮಾತ್ರ ಭಾರತದಲ್ಲಿ ಟೆಸ್ಲಾ ಸ್ಥಾವರವನ್ನು ಸ್ಥಾಪಿಸುವುದಾಗಿ ಅವರು ಹೇಳಿದ್ದಾರೆ. ವರದಿಯ ಪ್ರಕಾರ, ಚೀನಾದ ಶಾಂಘೈನಲ್ಲಿ ಗಿಗಾಫ್ಯಾಕ್ಟರಿಯನ್ನು ಪ್ರಾರಂಭಿಸಿದ ನಂತರ, ಟೆಸ್ಲಾ ಈಗ ಇಂಡೋನೇಷ್ಯಾದಲ್ಲಿ ತನ್ನ ಎರಡನೇ ಗಿಗಾಫ್ಯಾಕ್ಟರಿಯನ್ನು ಸ್ಥಾಪಿಸಲು ಯೋಜಿಸುತ್ತಿದೆ.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಟೆಸ್ಲಾ ಕಾರುಗಳ ಆಮದು ತೆರಿಗೆಯನ್ನು ಕಡಿತಗೊಳಿಸಲು ಕಳೆದ ಕೆಲವು ವರ್ಷಗಳಿಂದ ಟೆಸ್ಲಾ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಕಾರುಗಳ ಮೇಲಿನ ಹೆಚ್ಚಿನ ಆಮದು ತೆರಿಗೆಯಿಂದಾಗಿ, ತನ್ನ ಕಾರುಗಳು ದುಬಾರಿಯಾಗಬಹುದು ಎಂದು ಕಂಪನಿಯು ಸರ್ಕಾರಕ್ಕೆ ತಿಳಿಸಿತ್ತು.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಟೆಸ್ಲಾ ಅವರ ಬೇಡಿಕೆಯನ್ನು ಸರ್ಕಾರ ಒಪ್ಪಲಿಲ್ಲ, ಯಾವುದೇ ಒಂದು ಕಂಪನಿಗೆ ತೆರಿಗೆ ನೀತಿಗಳನ್ನು ಬದಲಾಯಿಸಲಾಗುವುದಿಲ್ಲ ಎಂದು ಹೇಳಿದೆ. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಗೆ ಸಂಬಂಧಿಸಿದಂತೆ ಟೆಸ್ಲಾ ಮತ್ತು ಭಾರತ ಸರ್ಕಾರದ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಭಾರತದಲ್ಲಿ ಟೆಸ್ಲಾ ಹೂಡಿಕೆಯ ಮಾರ್ಗವನ್ನು ಇನ್ನೂ ತೆರವುಗೊಳಿಸಲಾಗಿಲ್ಲ.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಟೆಸ್ಲಾ ಭಾರತದಲ್ಲಿ ಉತ್ಪಾದನೆಯನ್ನು ಪುನರಾರಂಭಿಸುವ ಸುದ್ದಿಯು ಕಳೆದ ವರ್ಷ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆಯುವುದರೊಂದಿಗೆ ತೀವ್ರಗೊಂಡಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2021 ರ ಆರಂಭದಿಂದ ಭಾರತದಲ್ಲಿ ಟೆಸ್ಲಾ ತನ್ನ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ ಎಂದು ಸಹ ಹೇಳಿದ್ದರು.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಆದರೆ ನಂತರ ಟೆಸ್ಲಾ ಅವರು ಚೀನಾದಿಂದ ಭಾರತಕ್ಕೆ ಕಾರುಗಳನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದರು, ಅದರೆ ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ. ಉತ್ಪಾದನಾ ನೀತಿಗಳನ್ನು ಉಲ್ಲೇಖಿಸಿದ ಭಾರತ ಸರ್ಕಾರ, ಕಂಪನಿಯು ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಿದರೆ, ಅವುಗಳನ್ನು ಭಾರತದಲ್ಲಿಯೇ ತಯಾರಿಸಬೇಕಾಗುತ್ತದೆ ಎಂದು ಹೇಳಿತ್ತು.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಟೆಸ್ಲಾ ಭಾರತದಲ್ಲಿ ಒಂದೇ ಒಂದು ಮಾಡೆಲ್ 3 ಕಾರನ್ನು ವಿತರಿಸದಿರಬಹುದು, ಆದರೆ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಇದನ್ನು ವಿತರಿಸಲಾಗುತ್ತಿದೆ. ಮಾಹಿತಿಯ ಪ್ರಕಾರ, ಟೆಸ್ಲಾ ಜಾಗತಿಕ ಮಾರುಕಟ್ಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಮಾಡೆಲ್ 3 ಕಾರುಗಳನ್ನು ವಿತರಿಸಿದೆ.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಈ ಕಾರಣದಿಂದಾಗಿ, ಭಾರತೀಯ ಗ್ರಾಹಕರು ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮೇಲೆ ತುಂಬಾ ಕೋಪಗೊಂಡಿದ್ದಾರೆ ಮತ್ತು ಭಾರತದೊಂದಿಗಿನ ಅವರ ವ್ಯವಹಾರ ನೀತಿಗಳನ್ನು ಪ್ರಶ್ನಿಸುತ್ತಿದ್ದಾರೆ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಟೆಸ್ಲಾ ಮಾಡೆಲ್ 3 ಅನ್ನು ಬುಕ್ ಮಾಡಿದ ಅನೇಕ ಗ್ರಾಹಕರು ಈಗ ಮರುಪಾವತಿಯನ್ನು ಬಯಸುತ್ತಿದ್ದಾರೆ.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಜನರು ಮರುಪಾವತಿಗಾಗಿ ಟೆಸ್ಲಾಗೆ ಹಲವಾರು ಬಾರಿ ವಿನಂತಿಸುತ್ತಿದ್ದಾರೆ. ಟೆಸ್ಲಾ ಕಾರುಗಳನ್ನು ಬುಕ್ ಮಾಡಿದ ಗ್ರಾಹಕರು ಮರುಪಾವತಿಗಾಗಿ ಕಂಪನಿಗೆ ಹಲವಾರು ಬಾರಿ ಮೇಲ್ ಮಾಡಬೇಕಾಗಿದ್ದು, ಇದಕ್ಕೆ ಕಂಪನಿಯ ಪ್ರತಿಕ್ರಿಯೆಯು ನಿರಾಶಾದಾಯಕವಾಗಿದೆ. ಕೆಲವು ಗ್ರಾಹಕರಿಗೆ, ಕಂಪನಿಯು ಕಳೆದ ವರ್ಷ ಮರುಪಾವತಿ ಮೊತ್ತವನ್ನು ಹಿಂದಿರುಗಿಸಿತು.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ನವೆಂಬರ್ 2021 ರಲ್ಲಿ, ಟೆಸ್ಲಾ ಶಾಂಘೈನಲ್ಲಿ $ 200 ಮಿಲಿಯನ್ ಹೂಡಿಕೆಯೊಂದಿಗೆ ಕಾರ್ಖಾನೆಯನ್ನು ವಿಸ್ತರಿಸುವುದಾಗಿ ಈಗಾಗಲೇ ಘೋಷಿಸಿದೆ. ಬೆಳವಣಿಗೆಗಳನ್ನು ಪತ್ತೆಹಚ್ಚುವ ಏಜೆನ್ಸಿಯ ಪ್ರಕಾರ, ಟೆಸ್ಲಾ ಚೀನಾದಲ್ಲಿ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ತಯಾರಿ ನಡೆಸುತ್ತಿದೆ.

ಮೊದಲು ಭಾರತದಲ್ಲಿ ಮಾರಾಟಕ್ಕೆ ಅನುಮತಿಸಿ, ಬಳಿಕ ಸ್ಥಾವರವನ್ನು ಸ್ಥಾಪಿಸುತ್ತೇವೆ: ಟೆಸ್ಲಾ ಸಿಇಒ ಎಲನ್ ಮಸ್ಕ್

ಚೀನಾದಲ್ಲಿ ಟೆಸ್ಲಾ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ರಫ್ತುಗಾಗಿ, ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ಈ ಕಾರ್ಖಾನೆಯ ನಿರ್ಮಾಣ ಪೂರ್ಣಗೊಂಡ ನಂತರ, ಪ್ರತಿ ವರ್ಷ ಇಲ್ಲಿ ಒಂದು ಮಿಲಿಯನ್ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಾಗುತ್ತದೆ.

Most Read Articles

Kannada
Read more on ಟೆಸ್ಲಾ tesla
English summary
Elon musk says no plant in india before sales permission details
Story first published: Sunday, May 29, 2022, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X