ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಕಳೆದ ವರ್ಷ ಲಾಸ್‍‍ವೇಗಾಸ್‍‍ನಲ್ಲಿ ತನ್ನ ಹೊಸ ಓಷಿಯನ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣಗೊಳಿಸಿದ್ದ ಕ್ಯಾಲಿಫೋರ್ನಿಯಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಫಿಸ್ಕರ್ ಇಂಕ್ ಇದೀಗ ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಫಿಸ್ಕರ್ ಹೊಸ ಇವಿ ಕಾರು ಮುಂದಿನ ವರ್ಷ ಜುಲೈನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಫಿಸ್ಕರ್ ಕಂಪನಿಯು ಹೊಸ ಇವಿ ಎಸ್‍‍ಯುವಿಯನ್ನು ಈ ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ಬಿಡುಗಡೆ ಮಾಡಲಿದ್ದು, ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಚಾಲನೆ ನೀಡಲಿದೆ. ತದನಂತರ ಕಂಪನಿಯು ಯುರೋಪ್ ಹಾಗೂ ಚೀನಾ ಮಾರುಕಟ್ಟೆಗಳಿಗೂ ಲಗ್ಗೆಯಿಡಲಿದ್ದು, ಹೊಸ ಇವಿ ಎಸ್‍‍ಯುವಿಯನ್ನು ಭಾರತದಲ್ಲಿಯೇ ತಯಾರಿಸಿ ಪ್ರಮುಖ ದೇಶಗಳಿಗೂ ಸಹ ರಫ್ತು ಮಾಡಲಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಫಿಸ್ಕರ್ ಓಷಿಯನ್ ಇವಿಯನ್ನು ಕಂಪನಿಯು ಹಲವಾರು ಪ್ರಾಯೋಗಿಕ ಅಂಶಗಳೊಂದಿಗೆ ಹೆಚ್ಚಿನ ಮಟ್ಟದ ದಕ್ಷತೆಯಿಂದ ವಿನ್ಯಾಸಗೊಳಿಸಿದ್ದು, ಇದರಿಂದಾಗಿ ಮಧ್ಯಮ ಗಾತ್ರದ ಎಸ್‌ಯುವಿ ಸೆಗ್‍ಮೆಂಟ್‍‍ನಲ್ಲಿ ಹೊಸ ಕಾರು ಸ್ಪರ್ಧಾತ್ಮಕ ಬೆಲೆಯೊಂದಿಗೆ ಪೈಪೋಟಿ ನೀಡಲಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಹೊಸ ಕಾರಿನ ದರ ಇಳಿಕೆಗಾಗಿ ಕಂಪನಿಯು ಭಾರತದಲ್ಲಿಯೇ ನಿರ್ಮಾಣ ಯೋಜನೆ ಹೊಂದಿದ್ದು, ಸುಸ್ಥಿರ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍‍ಯುವಿಯ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಎಲೆಕ್ಟ್ರಿಕ್ ಕಾರು ಉತ್ಪಾದನಾ ಯೋಜನೆಗಾಗಿ ಕಂಪನಿಯು ಈಗಾಗಲೇ ಹೈದ್ರಾಬಾದ್‌ನಲ್ಲಿ ತನ್ನ ಮುಖ್ಯ ಕಚೇರಿ ತೆರೆದಿದ್ದು, ಅಂಗಸಂಸ್ಥೆಯನ್ನು ಫಿಸ್ಕರ್ ವಿಗ್ಯಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ನಾಮಕರಣ ಮಾಡಲಾಗಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಪ್ರಮುಖ ವಾಹನ ತಯಾರಕ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಯಶಸ್ಸನ್ನು ಕಾಣುತ್ತಿದ್ದು, ಇವಿ ವಾಹನ ವಲಯದಲ್ಲಿ ದೀರ್ಘಕಾಲದವರೆಗೆ ಇರುವ ಕೆಲವೇ ಬ್ರ್ಯಾಂಡ್‌ಗಳಲ್ಲಿ ಫಿಸ್ಕರ್ ಕೂಡ ಒಂದಾಗಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಫಿಸ್ಕರ್ ಇಂಕ್ ಕಂಪನಿಯನ್ನು 2016 ರಲ್ಲಿ ಹೆನ್ರಿಕ್ ಫಿಸ್ಕರ್ ಮತ್ತು ಅವರ ಪತ್ನಿ ಗೀತಾ ಗುಪ್ತಾ-ಫಿಸ್ಕರ್ ಸ್ಥಾಪಿಸಿದರು. ಅದಕ್ಕೂ ಮೊದಲು ಬ್ರಾಂಡ್ ಅನ್ನು ಹೆನ್ರಿಕ್ ಫಿಸ್ಕರ್ ಒಬ್ಬರೇ ಮೊದಲ ಬಾರಿಗೆ 2007ರಲ್ಲಿ ಫಿಸ್ಕರ್ ಆಟೋಮೋಟಿವ್ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಆ ವೇಳೆ ಫಿಸ್ಕರ್ ಕರ್ಮ ಎಂಬ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿತ್ತು. ಇದು ಫಿಸ್ಕರ್‌ನ ಖ್ಯಾತಿಯನ್ನು ಹೆಚ್ಚಿಸಿತ್ತು. ಕರ್ಮ ಹೆಸರನ್ನು ಖಚಿತಪಡಿಸಿಕೊಳ್ಳುವ ಮೊದಲೇ ಇದರ ಹಕ್ಕುಗಳು ಪ್ರಪಂಚದಾದ್ಯಂತ 2,000 ಕ್ಕೂ ಹೆಚ್ಚು ಫಿಸ್ಕರ್ ಕರ್ಮ ಮಾದರಿಗಳನ್ನು ಮಾರಾಟ ಮಾಡಲಾಗಿತ್ತು.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಬಳಿಕ ಅದರ ಎಲ್ಲಾ ವಿನ್ಯಾಸ ಮತ್ತು ತಂತ್ರಜ್ಞಾನವನ್ನು 2014 ರಲ್ಲಿ ಚೈನೀಸ್ ಕಂಪನಿಯೊಂದು ಖರೀದಿಸಿದ್ದು, ನಂತರ 2016ರಲ್ಲಿ ಫಿಸ್ಕರ್ ಇಂಕ್ ಅಸ್ತಿತ್ವಕ್ಕೆ ಬಂದು ಹೊಸ ಇವಿಗಳ ಪರಿಚಯದಿಂದ ತ್ವರಿತವಾಗಿ ಅಭಿವೃದ್ಧಿಗೊಂಡಿತು.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಫಿಸ್ಕರ್ ಮುಖ್ಯವಾಹಿನಿಯ ಇವಿ ವಾಹನಗಳಲ್ಲಿ ಉತ್ತಮ ಮಟ್ಟದ ಕಾರ್ಯಕ್ಷಮತೆ ಮತ್ತು ಶ್ರೇಣಿಯನ್ನು ಪರಿಚಯಿಸಿದ ವಿಶ್ವದ ಮೊದಲ ಇವಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.

ಹೊಸ ಫಿಸ್ಕರ್ ಓಷಿಯನ್ ಎಸ್‍‍ಯುವಿಯು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಸರಳವಾದ ಡ್ಯಾಶ್‍‍ಬೋರ್ಡ್ ಅನ್ನು ಹೊಂದಿದೆ. ಈ ಡ್ಯಾಶ್‍‍ಬೋರ್ಡ್ ಮಧ್ಯ ಭಾಗದಲ್ಲಿ ದೊಡ್ಡ ಗಾತ್ರದ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸ್ಕ್ರೀನ್ ಅನ್ನು ಹೊಂದಿದೆ. ಈ ಎಸ್‍‍ಯುವಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಹೆಡ್ಸ್ ಅಪ್ ಡಿಸ್‍‍ಪ್ಲೇಗಳನ್ನು ಹೊಂದಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ನ್ಯಾವಿಗೇಷನ್ ಹಾಗೂ ವೇಗದ ಬಗ್ಗೆ ಮಾಹಿತಿಯನ್ನು ನೀಡುವುದರ ಜೊತೆಗೆ ಈ ಎಲೆಕ್ಟ್ರಿಕ್ ಎಸ್‍‍ಯುವಿಯಲ್ಲಿ ಅಳವಡಿಸಲಾಗಿರುವ ಹೆಚ್‍‍ಯುಡಿ ವಿವಿಧ ಮೋಡ್‍ಗಳಲ್ಲಿ ಹಾಡಿನ ಸಾಹಿತ್ಯವನ್ನು ಸಹ ತೋರಿಸುತ್ತದೆ. ಓಷಿಯನ್ ಎಸ್‍‍ಯುವಿಯು ದೊಡ್ಡ ಗಾತ್ರದ ಸನ್‍‍ರೂಫ್ ಸೇರಿದಂತೆ ಒಟ್ಟು 9 ವಿಂಡೊಗಳನ್ನು ಹೊಂದಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಓಷಿಯನ್ ಎಲೆಕ್ಟ್ರಿಕ್ ಎಸ್‍‍ಯುವಿಯ ಮತ್ತೊಂದು ಮುಖ್ಯ ಅಂಶವೆಂದರೆ ಕ್ಯಾಲಿಫೋರ್ನಿಯಾ ಮೋಡ್. ಈ ಮೋಡ್‌ನಲ್ಲಿ ಸನ್‍‍ರೂಫ್, ರೇರ್ ವಿಂಡೋ ಸ್ಕ್ರೀನ್ ಸೇರಿದಂತೆ ಎಲ್ಲಾ 9 ವಿಂಡೊಗಳನ್ನು ಪುಶ್ ಬಟನ್‍‍ನಿಂದ ತೆರೆಯುತ್ತದೆ. ಫಿಸ್ಕರ್ ಓಷಿಯನ್ ಎಸ್‍‍ಯುವಿಯಲ್ಲಿ 80 ಕಿ.ವ್ಯಾನ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 300ರಿಂದ 450 ಕಿ.ಮೀ ತನಕ ಚಲಿಸುತ್ತದೆ. ಈ ಎಸ್‍‍ಯುವಿಯು ಸೊನ್ನೆಯಿಂದ 100 ಕಿ.ಮೀ ಅನ್ನು ಕೇವಲ ಮೂರು ಸೆಕೆಂಡುಗಳನ್ನು ಆಕ್ಸೆಲೆರೇಟ್ ಮಾಡುತ್ತದೆ. ಫಿಸ್ಕರ್ ಕಂಪನಿಯು ಈ ಎಲೆಕ್ಟ್ರಿಕ್ ಎಸ್‍‍ಯುವಿಯ ಪವರ್ ಉತ್ಪಾದನೆಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಭಾರತದಲ್ಲಿ 2023ಕ್ಕೆ ತನ್ನ ಹೊಸ ಇವಿ ಕಾರು ಬಿಡುಗಡೆಗೆ ಸಿದ್ದವಾದ ಫಿಸ್ಕರ್

ಆದರೆ ಈ ಎಸ್‍‍ಯುವಿಯನ್ನು ಟೂ ವ್ಹೀಲ್ ಡ್ರೈವ್ ಹಾಗೂ ಫೋರ್ ವ್ಹೀಲ್ ಡ್ರೈವ್‍‍ನಲ್ಲಿ ಮಾರಾಟವಾಗುವುದು ಎನ್ನಲಾಗಿದ್ದು, ಭಾರತದ ರೂಪಾಯಿ ಮೌಲ್ಯದಲ್ಲಿ ಇದು ಎಕ್ಸ್‌ಶೋರೂಂ ಪ್ರಕಾರ ರೂ. 23 ಲಕ್ಷದಿಂದ ರೂ. 25 ಲಕ್ಷ ಬೆಲೆಯಲ್ಲಿ ಮಾರಾಟಗೊಳ್ಳಲಿದೆ.

Most Read Articles

Kannada
English summary
Fisker india planning to launch electric suv next year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X