ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಜೀಪ್ ಇಂಡಿಯಾ ಭಾರತದಲ್ಲಿ ತನ್ನ ಪ್ರೀಮಿಯಂ ಕಂಪಾಸ್ ಎಸ್‌ಯುವಿ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ಮಾಹಿತಿಯ ಪ್ರಕಾರ ಜೀಪ್ ಕಂಪಾಸ್ 90,000 ರೂ. ಹೆಚ್ಚಳವಾಗಿದ್ದು, ಕಂಪಾಸ್‌ನ ಎಲ್ಲಾ ರೂಪಾಂತರಗಳಲ್ಲಿಯೂ ಈ ಬೆಲೆ ಹೆಚ್ಚಳವನ್ನು ಮಾಡಲಾಗಿದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಕಂಪನಿಯು ಏಪ್ರಿಲ್ 2022 ರಿಂದ ಮೂರು ಬಾರಿ ಬೆಲೆಗಳನ್ನು ಹೆಚ್ಚಿಸಿದೆ. ಈ ಹಿಂದೆ ಕೊನೆಯದಾಗಿ ಬೆಲೆ ಏರಿಕೆಯನ್ನು ಜುಲೈ 2022 ರಲ್ಲಿ ಮಾಡಲಾಗಿತ್ತು. ಹೊಸ ಬೆಲೆ ಪಟ್ಟಿಯ ಪ್ರಕಾರ, ಜೀಪ್‌ನ ಪ್ರಮುಖ ಕಂಪಾಸ್ ಎಸ್‌ಯುವಿ ಈಗ ರೂ. 19.29 ಲಕ್ಷ (ಎಕ್ಸ್ ಶೋ ರೂಂ) ನಿಂದ ರೂ. 32.22 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಮೂರು ಬಾರಿ ಬೆಲೆ ಏರಿಕೆಯಿಂದಾಗಿ ಈ ವರ್ಷ ಜೀಪ್ ಕಂಪಾಸ್ 1.50 ಲಕ್ಷ ರೂಪಾಯಿಗಳಷ್ಟು ದುಬಾರಿಯಾಗಿದೆ. ಕಳೆದ ತಿಂಗಳು, ಕಂಪನಿಯು ಕಂಪಾಸ್ ಬಿಡುಗಡೆಯ ಐದನೇ ವಾರ್ಷಿಕೋತ್ಸವವನ್ನು ಆಚರಿಸಿದೆ. ಜೀಪ್ ಕಂಪಾಸ್ ಅನ್ನು 2017 ರಲ್ಲಿ ಪ್ರಮುಖ SUV ಆಗಿ ಬಿಡುಗಡೆ ಮಾಡಲಾಯಿತು.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಇದು ಭಾರತದ 4-ವೀಲ್ ಡ್ರೈವ್ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ಕಂಪಾಸ್ ಮಾದರಿಯು ಜೀಪ್ ಕಂಪನಿಯಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ SUV ಆಗಿದೆ. ಜೀಪ್ ಭಾರತದಲ್ಲಿ ಕಂಪಾಸ್ ಎಸ್‌ಯುವಿಯನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ನೀಡುತ್ತದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಇದರಲ್ಲಿ ಮೊದಲನೆಯದು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು 163 Bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಎರಡನೆಯದು 2.0-ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, ಇದು 173 bhp ಶಕ್ತಿಯನ್ನು ಉತ್ಪಾದಿಸುತ್ತದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಈ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ. ಜೀಪ್ ಕಂಪಾಸ್ ಅನ್ನು ಜನವರಿ 2021 ರಲ್ಲಿ ಹೊಸ ಅವತಾರದಲ್ಲಿ ಪ್ರಾರಂಭಿಸಲಾಯಿತು. ಇದು ಜೀಪ್‌ನ 7 ಸ್ಲಾಟ್ ಗ್ರಿಲ್, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಟೈಲ್ ಲ್ಯಾಂಪ್‌ಗಳು ಮತ್ತು ದೊಡ್ಡ ಏರ್ ಡ್ಯಾಮ್ ಅನ್ನು ಪಡೆಯುತ್ತದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಕಾರ್ ಹಿಂಭಾಗದಲ್ಲಿ ಶಾರ್ಕ್ ಫಿನ್ ಆಂಟೆನಾ ಮತ್ತು ಸ್ಲಿಮ್ ರೂಫ್ ರೈಲ್‌ಗಳನ್ನು ಸಹ ಪಡೆಯುತ್ತದೆ. ಟ್ರೆಪೆಜಾಯ್ಡಲ್ ವೀಲ್ ಆರ್ಚ್‌ಗಳು ಮತ್ತು 18-ಇಂಚಿನ ಟ್ವಿನ್ 5-ಸ್ಪೋಕ್ ಅಲಾಯ್ ವೀಲ್‌ಗಳು ತುಂಬಾ ಸ್ಪೋರ್ಟಿ ನೋಟವನ್ನು ನೀಡುತ್ತವೆ. ಟೆಕ್ನೋ ಮೆಟಾಲಿಕ್ ಗ್ರೀನ್, ಗ್ಯಾಲಕ್ಸಿ ಬ್ಲೂ ಮತ್ತು ಬ್ರೈಟ್ ವೈಟ್ ಸೇರಿದಂತೆ ಮೂರು ಹೊಸ ಬಣ್ಣಗಳನ್ನು ಒಳಗೊಂಡಂತೆ ಏಳು ಬಣ್ಣದ ಆಯ್ಕೆಗಳಲ್ಲಿ ಕಂಪಾಸ್ ಲಭ್ಯವಿದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಕಂಪಾಸ್‌ನ ಕ್ಯಾಬಿನ್ ಸಾಕಷ್ಟು ಪ್ರೀಮಿಯಂ ಆಗಿದ್ದು ಗ್ರಾಹಕರು ಡ್ಯುಯಲ್-ಟೋನ್ ಅಥವಾ ಪೂರ್ಣ-ಕಪ್ಪು ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಹೊಸ ತಲೆಮಾರಿನ ಯುಕನೆಕ್ಟ್-5 ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ 10.1-ಇಂಚಿನ ಹೈ-ಡೆಫಿನಿಷನ್ ಫ್ಲೋಟಿಂಗ್ ಟಚ್‌ಸ್ಕ್ರೀನ್ ಈ ಕಾರಿನಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಇದು ವೈರ್‌ಲೆಸ್ Apple CarPlay ಮತ್ತು Android Auto ಅನ್ನು ಸಪೋರ್ಟ್ ಮಾಡುತ್ತದೆ. ಇದು 24 ಕಾನ್ಫಿಗರ್ ಮಾಡಬಹುದಾದ ಕಂಟೆಂಟ್ ಸ್ಕ್ರೀನ್‌ಗಳೊಂದಿಗೆ 10.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಜೀಪ್ ಕಂಪಾಸ್‌ನ ಇತರ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ ಏರ್ 8-ವೇ ಎಲೆಕ್ಟ್ರಾನಿಕ್-ಅಡ್ಜಸ್ಟಲ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ, ಒಂಬತ್ತು-ಸ್ಪೀಕರ್ ಆಲ್ಪೈನ್ ಆಡಿಯೊ ಸಿಸ್ಟಮ್, ಕ್ರೂಸ್ ಕಂಟ್ರೋಲ್, ರನ್ನಿಂಗ್ ಟೈಲ್‌ಗೇಟ್ ಮತ್ತು ಡ್ಯುಯಲ್-ಪ್ಯಾನ್ ಪನೋರಮಿಕ್ ಸನ್‌ರೂಫ್ ಪ್ರಮುಖ ವೈಶಿಷ್ಟ್ಯಗಳಾಗಿವೆ. ಡ್ರೈವರ್ ಸೀಟಿನಲ್ಲಿ ಮೆಮೊರಿ ಕಾರ್ಯವನ್ನು ಸಹ ಒದಗಿಸಲಾಗಿದ್ದು, ಇದನ್ನು ಎರಡು ಸ್ಥಾನಗಳಲ್ಲಿ ಹೊಂದಿಸಬಹುದು.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಹೋಲ್ಡ್ ಮತ್ತು ಹಿಲ್ ಡೀಸೆಂಟ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಪ್ಯಾನಿಕ್ ಬ್ರೇಕ್ ಅಸಿಸ್ಟ್, ಬ್ರೇಕ್ ಲಾಕ್ ಡಿಫರೆನ್ಷಿಯಲ್ ಮತ್ತು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಂತೆ SUV 50 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಜೀಪ್ ಕಂಪಾಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಂಪಾಸ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ 5 ವರ್ಷಗಳನ್ನು ಪೂರೈಸಿದ್ದು, 5ನೇ ವರ್ಷದ ಸಂಭ್ರಮಕ್ಕಾಗಿ ಕಂಪನಿಯು ಕಂಪಾಸ್ ಆ್ಯನಿವರ್ಸರಿ ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಆ್ಯನಿವರ್ಸರಿ ಎಡಿಷನ್‌ನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಪ್ರಮುಖ ಫೀಚರ್ಸ್‌ಗಳೊಂದಿಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಿದ್ದು, 5ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಗಮನಸೆಳೆಯುತ್ತದೆ.

ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆ ಪಡೆದುಕೊಂಡ ಜೀಪ್ ಕಂಪಾಸ್: ಹೊಸ ಬೆಲೆಗಳ ಮಾಹಿತಿ...

ಬ್ಯಾಡ್ಜಿಂಗ್ ಜೊತೆಗೆ ವಿಶೇಷ ಆವೃತ್ತಿಯಲ್ಲಿ ಕಂಪನಿಯು ಮುಂಭಾದಲ್ಲಿನ ಹೊಸ ಆಕರ್ಷಣೆಗಾಗಿ ಬಾಡಿ ಕಲರ್ ಹೊಂದಿರುವ ಸ್ಯಾಟಿನ್ ಗ್ರಾಫೈಟ್ ಕ್ರಿಸ್ಟಲ್ ಫಾಸಿಯಾ, ಫೆಂಡರ್ ಫ್ಲೈರ್, ಆಕ್ಸೆಂಟ್ ಕಲರ್ ಹೊಂದಿರುವ ರೂಫ್ ರೈಲ್ಸ್, ಬಾಡಿ ಕಲರ್ಡ್ ಕ್ಲಾಡಿಂಗ್ ಮತ್ತು ಸಿಲ್ ಮೊಲ್ಡಿಂಗ್, ಗ್ರೇ ಆಕ್ಸೆಂಟ್ ಹೊಂದಿರುವ ಬ್ಯಾಡ್ಜಿಂಗ್, ಗ್ಲಾಸ್ ಬ್ಲ್ಯಾಕ್ ಗ್ರಿಲ್ ಮತ್ತು ಗ್ರೇ ರಿಂಗ್ ನೀಡಲಾಗಿದೆ.

Most Read Articles

Kannada
Read more on ಜೀಪ್ jeep
English summary
Jeep Compass gets price hike for 3rd time in a year Rs 90 000 increase
Story first published: Tuesday, September 6, 2022, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X