Just In
- 57 min ago
ಬಿಡುಗಡೆಗೆ ಸಜ್ಜಾಗಿರುವ 2023 ಹೋಂಡಾ ಸಿಟಿ ಫೇಸ್ಲಿಫ್ಟ್ನಲ್ಲಿ ಇವೆಲ್ಲವನ್ನು ನಿರೀಕ್ಷಿಸಬಹುದು!
- 1 hr ago
ಟೊಯೊಟಾ, ಮಾರುತಿಯ ಈ ಎಸ್ಯುವಿಗಳಿಗೆ ಭಾರೀ ಬೇಡಿಕೆ: ಗ್ರಾಹಕರು ಮತ್ತಷ್ಟು ಕಾಯಬೇಕು
- 1 hr ago
ಕೈಗೆಟುಕುವ ಬೆಲೆಯ ಹುಂಡೈ ಔರಾ, ಡಿಜೈರ್, ಅಮೇಜ್, ಟಿಗೋರ್ ಕಾರುಗಳು: ಯಾವುದು ಉತ್ತಮ!
- 2 hrs ago
ಟಾಟಾ ಪಂಚ್ ಎಂಜಿನ್ನಲ್ಲಿ ಭಾರೀ ಬದಲಾವಣೆ... ಇನ್ಮುಂದೆ ಕಡಿಮೆ ಕಂಪನ, ಒಳಗೆ ಪಿನ್ಡ್ರಾಪ್ ಸೈಲೆನ್ಸ್
Don't Miss!
- News
ಅವನಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ: ಮಂಚದ ವಿಚಾರ ಕೆಣಕಿದ ಡಿಕೆಶಿ- ಇದಕ್ಕೆ ಜಾರಕಿಹೊಳಿ ಹೇಳಿದ್ದೇನು?
- Sports
ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?
- Movies
ಬೆಂಗಳೂರಲ್ಲಿ ವಾರಿಸು ಹಿಂದಿಕ್ಕಿ ದೊಡ್ಡ ಬಿಡುಗಡೆ ಕಂಡ ಪಠಾಣ್ ಚಿತ್ರವನ್ನು ಹಿಂದಿಕ್ಕುತ್ತಾ 'ಕ್ರಾಂತಿ'?
- Technology
Co-Win ಬಗ್ಗೆ ನಿಮಗೆಲ್ಲಾ ಗೊತ್ತು U-WIN ಬಗ್ಗೆ ಗೊತ್ತಾ!: ಇಲ್ಲಿದೆ ಸಂಪೂರ್ಣ ವಿವರ!
- Finance
ಭಾರೀ ವಂಚನೆಗೆ ಕೈಹಾಕಿತೇ ಅದಾನಿ ಗ್ರೂಪ್: ಏನಿದು ವರದಿ? ಒಂದೇ ದಿನದಲ್ಲಿ ₹ 46,000 ಕೋಟಿ ಕಳೆದುಕೊಂಡಿದ್ದೇಕೆ?
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿ
ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಜನಪ್ರಿಯ ಕಂಪಾಸ್ ಎಸ್‌ಯುವಿ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಜನಪ್ರಿಯ ಜೀಪ್ ಕಂಪಾಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಿದೆ.

ಬೆಲೆ ಏರಿಕೆಯ ಬಳಿಕ ಜೀಪ್ ಕಂಪಾಸ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.20.89 ಲಕ್ಷವಾಗಿದೆ. ಡೀಸೆಲ್ ಪವರ್‌ಟ್ರೇನ್ ಮತ್ತು ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಅಳವಡಿಸಲಾಗಿರುವ ಜೀಪ್ ಕಂಪಾಸ್ ಎಸ್‌ಯುವಿಯ 'ಸ್ಪೋರ್ಟ್' ರೂಪಾಂತರದ ಬೆಲೆ 20.89 ಲಕ್ಷ ರೂ. ಒಂದೇ ಆಗಿರುತ್ತವೆ. ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ ಜೀಪ್ ಕಂಪಾಸ್ ಎಸ್‌ಯುವಿಯ ಬೇಸ್ 'ಸ್ಪೋರ್ಟ್' ಟ್ರಿಮ್‌ನಲ್ಲಿ ರೂ 1.80 ಲಕ್ಷದ ಅತ್ಯಧಿಕ ಬೆಲೆ ಏರಿಕೆ ಕಂಡುಬಂದಿದೆ.

ಈ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಪರಿಚಯಿಸಿದ್ದರು. ಈ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ),ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಮಾಡೆಲ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಕೂಡ ಲಭ್ಯವಿದೆ.

ವರ್ಷಗಳ ಬಳಿಕ ಜೀಪ್ ಕಂಪಾಸ್ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು, ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ 2021ರ ಜೀಪ್ ಕಂಪಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ, ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದ್ದರೆ, ಫೀಚರ್ ಗಳ ವಿಭಾಗದಲ್ಲಿ ಗಣನೀಯ ನವೀಕರಣಗಳನ್ನು ಪಡೆದುಕೊಂಡಿದೆ.

ಈ ಎಸ್‍ಯುವಿಯ ಹೊರಗಿನ ನವೀಕರಣಗಳನ್ನು ಹತ್ತಿರದಿಂದ ಗಮನಿಸಿದರೆ ಮಾತ್ರ ತಿಳಿಯುತ್ತದೆ. ಇನ್ನು ಈ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಪಡೆದುಕೊಂಡಿತ್ತು. ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿರುತ್ತದೆ.

ಈ ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿವೆ. ಈ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಈ ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಂದಿರುವ ಎಫ್‌ಸಿಎಯ ಹೊಸ ಯುಕನೆಕ್ಟ್ 5 ತಂತ್ರಜ್ಞಾನವನ್ನು ಒಳಗೊಂಡಿದೆ. ಇದ್ದರಿಂದ ಇದು ಈಗ ವಾಯ್ಸ್ ಕಮಾಂಡ್ ಅಸಿಸ್ಟ್ ಮತ್ತು ಓವರ್-ದಿ-ಏರ್ (ಒಟಿಎ) ಅಪ್‌ಡೇಟ್ ಫೀಚರ್ ಗಳನ್ನು ಒಳಗೊಂಡಿವೆ.

ಹಿಲ್ ಅಸಿಸ್ಟ್ (ಎಚ್‌ಎ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಎಂಬ ಮೋಡ್ ಗಳನ್ನು ಈ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕೂಡ ಒಳಗೊಂಡಿದೆ. ಈ ಜೀಪ್ ಕಂಪಾಸ್ ಎಸ್‍ಯುವಿಯಲ್ಲಿ ಹೊಸ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಹೊಂದಿದೆ. ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ,

ಈ ಎರಡು ಎಂಜಿನ್‌ಗಳು ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಕಂಪಾಸ್ ಪೆಟ್ರೋಲ್ ಏಳು-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ಡೀಸೆಲ್ 9-ಸ್ಪೀಡ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ಕೂಡ ಹೊಂದಿದೆ.

ಇನ್ನು ಜೀಪ್ ತನ್ನ ಗ್ರ್ಯಾಂಡ್ ಚೆರೋಕೀ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಜೀಪ್ ಈ ಹೊಸ ಗ್ರ್ಯಾಂಡ್ ಚೆರೋಕೀ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಈ ಹೊಸ ಜೀಪ್ ಗ್ರ್ಯಾಂಡ್ ಚೆರೋಕೀ ಎಸ್‍ಯುವಿಯು ಇದೇ ನವೆಂಬರ್ 11 ರಂದು ಬಿಡುಗಡೆಯಾಗಲಿದೆ.

ಇದೇ ತಿಂಗಳ ಅಂತ್ಯದ ವೇಳೆಗೆ ವಿತರಣೆಗಳು ಪ್ರಾರಂಭವಾಗುವ ಸಾಧ್ಯತೆಯಿದೆ. ಪುಣೆಯಲ್ಲಿರುವ ಕಂಪನಿಯ ರಂಜನ್‌ಗಾಂವ್ ಘಟಕದಲ್ಲಿ ಇದು ಬ್ರಾಂಡ್‌ನ ನಾಲ್ಕನೇ ಮಾದರಿಯಾಗಿದೆ. ಹೊಸ ಗ್ರ್ಯಾಂಡ್ ಚೆರೋಕೀ ತನ್ನ ವಿನ್ಯಾಸದ ಕೆಲವು ಅಂಶಗಳನ್ನು ವ್ಯಾಗನೀರ್ ಮತ್ತು ಮೆರಿಡಿಯ ಎರವಲು ಪಡೆಯಲಿದೆ.

ಕ್ಯಾಬಿನ್ ಒಳಗೆ ಕೆಲವು ಬದಲಾವಣೆಗಳು ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಸಹ ಮಾಡಲಾಗುವುದು. ಈ ಬಾರಿ, ಎಸ್‌ಯುವಿಯನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಈ ಹೊಸ ಗ್ರ್ಯಾಂಡ್ ಚೆರೋಕೀ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 2.0 ಲೀಟರ್ ಟರ್ಬೊ ಗ್ಯಾಸೋಲಿನ್ ಮೋಟಾರ್ ಅನ್ನು ಬಳಸುತ್ತದೆ.

ಇದು Quadra-Trac I 4X4 ಸಿಸ್ಟಂ ಮತ್ತು ಆಯ್ಕೆ ಮಾಡಬಹುದಾದ ಭೂಪ್ರದೇಶ ವಿಧಾನಗಳೊಂದಿಗೆ ಬರುತ್ತದೆ. ಜಾಗತಿಕವಾಗಿ, ಅಮೇರಿಕನ್ ಎಸ್‍ಯುವಿ ತಯಾರಕರು ಇದನ್ನು ಎರಡು ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಾರೆ. ಇದು 5-ಸೀಟುಗಳು ಮತ್ತು ಮೂರು-ಸಾಲು ಗ್ರ್ಯಾಂಡ್ ಚೆರೋಕೀ ಆಗಿದೆ.

ಭಾರತದಲ್ಲಿ, ಕಂಪನಿಯು ಎಸ್‍ಯುವಿಯ 5-ಸೀಟರ್ ಆವೃತ್ತಿಯನ್ನು ಪರಿಚಯಿಸುತ್ತದೆ. ಹೊಸ 2023ರ ಜೀಪ್ ಗ್ರ್ಯಾಂಡ್ ಚೆರೋಕೀ ಎಸ್‍ಯುವಿಯು 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಹೊಸ ಜೀಪ್ ಗ್ರ್ಯಾಂಡ್ ಚೆರೋಕೀ ಎಸ್‍ಯುವಿ ಪರಿಷ್ಕೃತ 7-ಸ್ಲಾಟ್ ಗ್ರಿಲ್, LED DRL ಗಳೊಂದಿಗೆ ಸ್ಲಿಮ್ ಹೆಡ್‌ಲ್ಯಾಂಪ್‌ಗಳು, ಡಿ-ಪಿಲ್ಲರ್‌ನಲ್ಲಿ ಫ್ಲೋಟಿಂಗ್ ರೂಫ್ ಎಫೆಕ್ಟ್ ಮತ್ತು ನವೀಕರಿಸಿದ ಹಿಂಭಾಗದ ಪಿಲ್ಲರ್‌ಗಳನ್ನು ಒಳಗೊಂಡಿದೆ.