Just In
- 20 min ago
2023ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ ಜೈವಿಕ ಇಂಧನ ಒಳಗೊಂಡ ಇ20 ಪೆಟ್ರೋಲ್ ಮಾದರಿ
- 1 hr ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 1 hr ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 2 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
Don't Miss!
- Sports
ಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ತಂಡಗಳು; ಪಂದ್ಯದ ದಿನಾಂಕ, ಸ್ಥಳ
- Finance
ಗೂಗಲ್ಪೇ, ಫೋನ್ಪೇ, ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಹೀಗೆ ಮಾಡಿ..
- Technology
ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್ಫೋನಿನ ಲಾಂಚ್ ಡೇಟ್ ಬಹಿರಂಗ!
- Movies
ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!
- News
ಮನೆ ಬಾಡಿಗೆ ಮೇಲೂ ಶೇಕಡಾ 18ರಷ್ಟು ಜಿಎಸ್ಟಿ ಕಟ್ಟಬೇಕಾ?: ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
- Lifestyle
ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಹೊಸ ಮೆರಿಡಿಯನ್ 7 ಸೀಟರ್ ಎಸ್‌ಯುವಿ ಅಧಿಕೃತ ಬುಕಿಂಗ್ ಆರಂಭಿಸಿದ ಜೀಪ್ ಇಂಡಿಯಾ
ಅಮೆರಿಕದ ಜನಪ್ರಿಯ ಕಾರು ತಯಾರಕ ಕಂಪನಿ ಜೀಪ್ ತನ್ನ ಹೊಚ್ಚ ಹೊಸ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ಅಧಿಕೃತ ಬುಕಿಂಗ್ ಆರಂಭಿಸಿದೆ.

ಜೀಪ್ ಹೊಸ ಮೆರಿಡಿಯನ್ ಎಸ್‌ಯುವಿ ಸ್ಟ್ಯಾಂಡರ್ಡ್ ಕಂಪಾಸ್ ಎಸ್‍ಯುವಿಯನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಹೊಸ ಕಾರು ಮುಂದಿನ ತಿಂಗಳು ಜೂನ್ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದೆ. ಸದ್ಯ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿರುವ ಜೀಪ್ ಕಂಪನಿಯು ಹೊಸ ಕಾರಿಗಾಗಿ ರೂ. 50 ಸಾವಿರ ಮುಂಗಡ ಹಣದೊಂದಿಗೆ ಬುಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಹೊಸ ಕಾರು ಮಾದರಿಯನ್ನು ಜೀಪ್ ಕಂಪನಿಯು ಮಹಾರಾಷ್ಟ್ರದ ಪುಣೆ ಬಳಿಯಿರುವ ರಂಜನ್‌ಗಾಂವ್ ಘಟಕದಲ್ಲಿ ಈಗಾಗಲೇ ಉತ್ಪಾದನೆಯನ್ನು ಆರಂಭಿಸಿದ್ದು, ಸಂಪೂರ್ಣವಾಗಿ ದೇಶಿಯ ಮಾರುಕಟ್ಟೆಯಲ್ಲಿಯೇ ನಿರ್ಮಾಣಗೊಂಡಿರುವ ಹೊಸ ಕಾರು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನವಾದ ಸ್ಟೈಲಿಂಗ್ ಅಂಶಗಳೊಂದಿಗೆ ಹೆಚ್ಚು ಬಲಿಷ್ಠತೆಯನ್ನು ಹೊಂದಿದೆ.

ಹೊಸ ಎಸ್‍ಯುವಿಯ ಮುಂಭಾಗದ ಫಾಸಿಯಾ ಕೂಡಾ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್, ಬಲಿಷ್ಠವಾದ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪದಾದ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಅನ್ನು ಹೊಂದಿದೆ.

ಹೊಸ ಮೆರಿಡಿಯನ್ ಎಸ್‍ಯುವಿಯು ಇತರೆ ಸ್ಟೈಲಿಂಗ್ ಮುಖ್ಯಾಂಶಗಳಲ್ಲಿ ಸ್ಕ್ವೇರ್-ಆಫ್ ವ್ಹೀಲ್ ಆರ್ಚ್‌ಗಳು, ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಮತ್ತು ಮುಂಭಾಗದ ಡೋರ್‌ಗಳು, ದೊಡ್ಡ ವಿಂಡೋ ಮತ್ತು ಪ್ರಮುಖವಾಗಿ ರೂಫ್ ರೈಲ್ ಗಳ ಮೇಲೆ ಮೆರಿಡಿಯನ್ ಬ್ಯಾಜ್ಡ್ ನೀಡಲಾಗಿದೆ.

ಮೆರಿಡಿಯನ್ ಎಸ್‍ಯುವಿಯಲ್ಲಿ ಜೀಪ್ ಕಂಪನಿಯು ಆಕರ್ಷಕವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಮತ್ತು ನೇರವಾದ ಟೈಲ್‌ಗೇಟ್ ಅನ್ನು ಜೋಡಿಸಲಾಗಿದ್ದು, ಹೊಸ ಮೆರಿಡಿಯನ್ ಅನ್ನು ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಸ್ಟ್ಯಾಂಡರ್ಡ್ ಕಂಪಾಸ್‌ಗೆ ಹೊಸ ಕಾರನ್ನು ಹೋಲಿಸಿದರೆ ಹೊಸದಾಗಿ ಮೂರು-ಸಾಲಿನೊಂದಿಗೆ ಮೆರಿಡಿಯನ್ ಎಸ್‍ಯುವಿಯು ಹೆಚ್ಚುವರಿಯಾಗಿ ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ.

ಹೊಸ ಎಸ್‌ಯುವಿಯು ಒಟ್ಟು 4,769 ಎಂಎಂ ಉದ್ದ, 1,859 ಎಂಎಂ ಅಗಲ, 1,682 ಎಂಎಂ ಎತ್ತರ, 2794 ಎಂಎಂ ವೀಲ್‌ಬೇಸ್ ಅನ್ನು ಹೊಂದಿದ್ದು, ಹೊಸ ಕಾರು ಒಟ್ಟು 2 ಆವೃತ್ತಿಗಳ ಆಯ್ಕೆಗಳನ್ನು ಹೊಂದಿದೆ.

ಹೊಸ ಕಾರಿನಲ್ಲಿ ಎಂಜಿನ್ ಅನ್ನು 6 ಸ್ಪೀಡ್ ಎಂಟಿ ಅಥವಾ 9 ಸ್ಪೀಡ್ ಎಟಿಯೊಂದಿಗೆ ಜೋಡಿಸಲಿದ್ದು, ಮೊದಲನೆಯದು 4×2 ಸಿಸ್ಟಂ ಮತ್ತು ಎರಡನೆಯದು 4×4 ಕಾನ್ಫಿಗರೇಶನ್‌ಗಳನ್ನು ಹೊಂದಿದೆ. ಇದು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದ್ದು, 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಹೊಂದಿದೆ.

ಹೊಸ ಕಾರಿನಲ್ಲಿ ಎಂಜಿನ್ ಅನ್ನು 6 ಸ್ಪೀಡ್ ಎಂಟಿ ಅಥವಾ 9 ಸ್ಪೀಡ್ ಎಟಿಯೊಂದಿಗೆ ಜೋಡಿಸಲಿದ್ದು, ಮೊದಲನೆಯದು 4×2 ಸಿಸ್ಟಂ ಮತ್ತು ಎರಡನೆಯದು 4×4 ಕಾನ್ಫಿಗರೇಶನ್‌ಗಳನ್ನು ಹೊಂದಿದೆ. ಇದು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದ್ದು, 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಹೊಂದಿದೆ.

ಜೀಪ್ ಮೆರಿಡಿಯನ್ ಮೂಲತಃ ಜೀಪ್ ಕಂಪಾಸ್ ಮಾದರಿಯ 7-ಸೀಟರ್ ಆವೃತ್ತಿಯಾಗಿದ್ದು, ಇದು ಈಗಾಗಲೇ ಕಮಾಂಡರ್ ಹೆಸರಿನಲ್ಲಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿದೆ.

ಆದರೆ ಭಾರತದಲ್ಲಿ ಅದೇ ಕಮಾಂಡರ್ ಕಾರು 'ಮೆರಿಡಿಯನ್' ಹೆಸರಿನಲ್ಲಿ ಬಿಡುಗಡೆಯಾಗುತ್ತಿದ್ದು, ಮಹೀಂದ್ರಾ ಕಂಪನಿಯು ಭಾರತದಲ್ಲಿ ಈಗಾಗಲೇ 'ಕಮಾಂಡರ್' ಹೆಸರಿನ ಟ್ರೇಡ್‌ಮಾರ್ಕ್ ಹೊಂದಿರುವುದರಿಂದ ಹೊಸ ಕಾರು ಮೆರಿಡಿಯನ್ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.

ಹೊಸ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯ ನಂತರ ಟೊಯೊಟಾ ಫಾರ್ಚೂನರ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಮತ್ತು ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಭಾರತದಲ್ಲಿ ಸ್ಥಗಿತಗೊಂಡಿರುವ ಫೋರ್ಡ್ ಎಂಡೀವರ್ ಸ್ಥಾನಕ್ಕೆ ಹೊಸ ಮೆರಿಡಿಯನ್ ಸೂಕ್ತ ಆಯ್ಕೆಯಾಗಿದೆ.

ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಅಳವಡಿಸಿದ್ದು, ಹೊಸ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 28 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.35 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.