Just In
- 12 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 15 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 1 hr ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Sports
ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Movies
ಹೊಸ ಬಿಗ್ಬಾಸ್ಗೆ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಇಷ್ಟೋಂದಾ?
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಭಾರತದಲ್ಲಿ ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ಬಿಡುಗಡೆ
ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಹೊಸ ಕಂಪಾಸ್ ನೈಟ್ ಈಗಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ಆರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.95 ಲಕ್ಷವಾಗಿದೆ.

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ಮೂಲಭೂತವಾಗಿ ಮತ್ತು ಪ್ರಸ್ತುತ ಕಂಪಾಸ್‌ನ ಸಂಪೂರ್ಣ ಬ್ಲ್ಯಾಕ್ ಬಣ್ಣದ ಮಾದರಿಯಾಗಿದೆ, ಈ ಮಾದರಿಯ ಹೊರಗೆ ಮತ್ತು ಒಳಭಾಗದಲ್ಲಿ ಸಾಕಷ್ಟು ಗ್ಲಾಸ್ ಕಪ್ಪು ಬಣ್ಣವನ್ನು ಪಡೆಯುತ್ತದೆ. ಮೊದಲಿಗೆ, ಇದು ಗ್ಲಾಸ್ ಬ್ಲ್ಯಾಕ್ ಗ್ರಿಲ್ ಜೊತೆಗೆ ಅದೇ ರೀತಿ ಸಿದ್ಧಪಡಿಸಿದ ಗ್ರಿಲ್ ರಿಂಗ್‌ಗಳು, 18-ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು, ಬ್ಲ್ಯಾಕ್ ರೂಫ್ ರೈಲ್ ಗಳು, ಗ್ಲೋಸ್ ಬ್ಲ್ಯಾಕ್ ವಿಂಗ್ ಮಿರರ್‌ಗಳು ಮತ್ತು ಫಾಗ್ ಲ್ಯಾಂಪ್ ಬೆಜೆಲ್‌ಗಳನ್ನು ಪಡೆಯುತ್ತದೆ.

ಈ ಕಂಪಾಸ್ ನೈಟ್ ಈಗಲ್ ಎಡಿಷನ್ ಒಳಭಾಗದಲ್ಲಿ, ಪಿಯಾನೋ ಬ್ಲ್ಯಾಕ್ ಅಂಶಗಳೊಂದಿಗೆ ಬ್ಲ್ಯಾಕ್ ವಿನೈಲ್ ಸೀಟ್‌ಗಳೊಂದಿಗೆ ಲೈಟ್ ಟಂಗ್‌ಸ್ಟನ್ ಸ್ಟಿಚಿಂಗ್ ಮತ್ತು ಡೋರ್ ಟ್ರಿಮ್ ಮತ್ತು ಐಪಿಗಾಗಿ ಬ್ಲ್ಯಾಕ್ ನೈಲ್ ಇನ್‌ಸರ್ಟ್‌ಗಳೊಂದಿಗೆ ಬರುತ್ತದೆ.

ಇಂಟಿರಿಯರ್ ನಲ್ಲಿ 10.1-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 7-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಆಲ್-ಸ್ಪೀಡ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಅನ್ನು ಪಡೆಯುತ್ತದೆ.

ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಡೀಸೆಲ್ 2.0-ಲೀಟರ್, ನಾಲ್ಕು-ಸಿಲಿಂಡರ್ ಮಲ್ಟಿಜೆಟ್ ಟರ್ಬೊ ಯುನಿಟ್ ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ ಮತ್ತು ಪೆಟ್ರೋಲ್ 1.4-ಲೀಟರ್ ಮಲ್ಟಿಏರ್ ಟರ್ಬೊ ಪೆಟ್ರೋಲ್ ಯುನಿಟ್ ಅನ್ನು 7-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ನೀಡಲಾಗುತ್ತದೆ. ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ನಲ್ಲಿ 9-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗುವುದಿಲ್ಲ.

ಜೀಪ್ ಕಂಪನಿಯು ತನ್ನ ಕಂಪಾಸ್ ಮತ್ತು ಜೀಪ್ ಕಂಪಾಸ್ ಟ್ರೈಲ್ಹಾಕ್ ಬೆಲೆಗಳನ್ನು ಹೆಚ್ಚಿಸಿದೆ. ಇದರಿಂದ ಇದೀಗ ಜೀಪ್ ಕಂಪಾಸ್ ಮತ್ತು ಕಂಪಾಸ್ ಟ್ರೈಲ್‌ಹಾಕ್ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಜೀಪ್ ಕಂಪಾಸ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಬೆಲೆಯನ್ನು ರೂ,25,000 ಗಳಷ್ಟು ಹೆಚ್ಚಿಸಲಾಗಿದೆ. ಜೀಪ್ ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯ 80ನೇ ಆನುವರ್ಸರಿ ಎಡಿಷನ್ ಅನ್ನು ಸ್ಥಗಿತಗೊಳಿಸಲಾಗಿದೆ.

ಈ ಜೀಪ್ ಕಂಪಾಸ್ ಎಸ್‍ಯುವಿಯು ಬಗ್ಗೆ ಹೇಳುವುದಾದರೆ, ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಪರಿಚಯಿಸಿದ್ದರು. ಈ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ),ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಮಾಡೆಲ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಕೂಡ ಲಭ್ಯವಿದೆ. ವರ್ಷಗಳ ಬಳಿಕ ಜೀಪ್ ಕಂಪಾಸ್ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು,

ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ 2021ರ ಜೀಪ್ ಕಂಪಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ, ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದ್ದರೆ, ಫೀಚರ್ ಗಳ ವಿಭಾಗದಲ್ಲಿ ಗಣನೀಯ ನವೀಕರಣಗಳನ್ನು ಪಡೆದುಕೊಂಡಿದೆ. ಹೊರಗಿನ ನವೀಕರಣಗಳನ್ನು ಹತ್ತಿರದಿಂದ ಗಮನಿಸಿದರೆ ಮಾತ್ರ ತಿಳಿಯುತ್ತದೆ.

ಈ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಪಡೆದುಕೊಂಡಿತ್ತು. ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂನಿಂದ ಕೂಡಿದೆ. ಜೀಪ್ ಕಂಪಾಸ್ ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿವೆ.

ಈ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಕಂಪಾಸ್ ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಂದಿರುವ ಎಫ್‌ಸಿಎಯ ಹೊಸ ಯುಕನೆಕ್ಟ್ 5 ತಂತ್ರಜ್ಞಾನವನ್ನು ಒಳಗೊಂಡಿದೆ.ಇದ್ದರಿಂದ ಇದು ಈಗ ವಾಯ್ಸ್ ಕಮಾಂಡ್ ಅಸಿಸ್ಟ್ ಮತ್ತು ಓವರ್-ದಿ-ಏರ್ (ಒಟಿಎ) ಅಪ್‌ಡೇಟ್ ಫೀಚರ್ ಗಳನ್ನು ಒಳಗೊಂಡಿವೆ. ಹಿಲ್ ಅಸಿಸ್ಟ್ (ಎಚ್‌ಎ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಎಂಬ ಮೋಡ್ ಗಳನ್ನು ಈ ಕಂಪಾಸ್ ಎಸ್‍ಯುವಿಯನ್ನು ಕೂಡ ಒಳಗೊಂಡಿದೆ.

ಜೀಪ್ ಕಂಪಾಸ್ ಎಸ್‍ಯುವಿಯಲ್ಲಿ ಹೊಸ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎರಡು ಎಂಜಿನ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಆರು-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಕಂಪಾಸ್ ಪೆಟ್ರೋಲ್ ಏಳು-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ಡೀಸೆಲ್ ಒಂಬತ್ತು-ಸ್ಪೀಡ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ನೀಡಲಾಗಿದೆ.

2022ರ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯನ್ನು ರೂ.25,000 ಗಳಷ್ಟು ಹೆಚ್ಚಿಸಿದೆ. ನವೀಕರಿಸಿದ ಮಾದರಿಯು ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳೊಂದಿಗೆ ಮತ್ತು ಆಫ್-ರೋಡ್ ಕೇಂದ್ರೀಕೃತ ವೈಶಿಷ್ಟ್ಯಗಳೊಂದಿಗೆ ವೈಶಿಷ್ಟ್ಯದ ನವೀಕರಣಗಳೊಂದಿಗೆ ಬಂದಿದೆ. ಇನ್ನು ಹೊಸದಾಗಿ ಬಿಡುಗಡೆಗೊಂಡ ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.