'ಜೀಪ್' ಎಸ್‌ಯುವಿ ಬೆಲೆ ಜನವರಿ 2023ರಿಂದ ಭಾರೀ ಏರಿಕೆ: ಮಾರುತಿ ಸುಜುಕಿ, ಟಾಟಾ...

ದೇಶೀಯ ಮಾರುಕಟ್ಟೆಯಲ್ಲಿ ಹಲವು ವಾಹನ ತಯಾರಿಕ ಕಂಪನಿಗಳು ಮುಂಬರುವ ಹೊಸ ವರ್ಷ (2023 ಜನವರಿ) ಆರಂಭದಿಂದ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧತೆಯನ್ನು ನಡೆಸುತ್ತಿವೆ. ಸದ್ಯ, ಈ ಪಟ್ಟಿಗೆ 'ಜೀಪ್' ಕಂಪನಿ ಸಹ ಸೇರುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ಅಮೇರಿಕದ ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಜೀಪ್, ಹೊಸದಾಗಿ ಬಿಡುಗಡೆಯಾದ 'ಗ್ರಾಂಡ್ ಚೆರೋಕೀ' ಸೇರಿದಂತೆ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಎಸ್‌ಯುವಿಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಿದೆ ಎಂದು ಸದ್ಯ ವರದಿಯಾಗಿದೆ. ಜನವರಿ 1, 2023 ರಿಂದ ಜಾರಿಗೆ ಬರಲಿರುವ ಬೆಲೆ ಏರಿಕೆಯು ಶೇಕಡ 2 ರಿಂದ 4 ರವರೆಗೆ ಇರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ಬೆಲೆ ಏರಿಕೆಯು ಮಾದರಿಗಳನ್ನು ಆಧರಿಸಿ ವಿಭಿನ್ನವಾಗಿರುತ್ತದೆ.

ಜೀಪ್ ಎಸ್‌ಯುವಿ ಬೆಲೆ ಜನವರಿ 2023ರಿಂದ ಭಾರೀ ಏರಿಕೆ: ಮಾರುತಿ ಸುಜುಕಿ, ಟಾಟಾ...

ಮೂರು ತಿಂಗಳೊಳಗೆ ಜೀಪ್ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಎಸ್‌ಯುವಿಗಳ ಬೆಲೆಯನ್ನು ಎರಡನೇ ಬಾರಿಗೆ ಏರಿಕೆ ಮಾಡಿದೆ. ಕಂಪನಿಯು ನವೆಂಬರ್‌ನಲ್ಲಿ 'ಕಂಪಾಸ್‌' ಮಾದರಿ ಬೆಲೆಯನ್ನು 1.8 ಲಕ್ಷ ರೂ.ವರೆಗೆ ಹೆಚ್ಚಿಸಿತ್ತು. ಆ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಆರಂಭಿಕ ಬೆಲೆ ರೂ.20 ಲಕ್ಷದ ಗಡಿ ದಾಟಿತ್ತು. ಜೀಪ್ ಕಂಪಾಸ್ ಪ್ರಸ್ತುತ ರೂ.20.89 ಲಕ್ಷದಿಂದ ಆರಂಭವಾಗಿ ಟಾಪ್-ಎಂಡ್ ಟ್ರಯಲ್‌ಹಾಕ್ ಮಾದರಿಗೆ ರೂ.32.67 ಲಕ್ಷದವರೆಗೆ ಇದೆ. ಮುಂಬರುವ ಬೆಲೆ ಏರಿಕೆಯೊಂದಿಗೆ, ಈ ಎಸ್‌ಯುವಿಯ ಆರಂಭಿಕ ಬೆಲೆ ರೂ.21 ಲಕ್ಷಕ್ಕೆ ತಲುಪಬಹುದು.

ಜೀಪ್, ಗ್ರ್ಯಾಂಡ್ ಚೆರೋಕೀ ಅನ್ನು ಇತ್ತೀಚೆಗೆ ಒಂದೇ ಸಿಂಗಲ್-ಲೋಡ್ ವೆರಿಯಂಟ್ ಆಗಿ ಪರಿಚಯಿಸಿತ್ತು. ಇದರ ಬೆಲೆ ರೂ.77.5 ಲಕ್ಷ (ಎಕ್ಸ್ ಶೋ ರೂಂ) ಇತ್ತು. ಆದಾಗ್ಯೂ, ಬೆಲೆ ಏರಿಕೆಯು ಈ ಐಷಾರಾಮಿ ಎಸ್‌ಯುವಿಯ ಬೆಲೆಯನ್ನು ರೂ.80 ಲಕ್ಷಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಅಂದಾಜಿಸಲಾಗಿದೆ. ಈ ಗ್ರ್ಯಾಂಡ್ ಚೆರೋಕಿಯ ಬೆಲೆಯು BMW X5ನ ಆಸುಪಾಸಿನಲ್ಲಿರುತ್ತದೆ. ಕಂಪಾಸ್ ಮತ್ತು ಗ್ರ್ಯಾಂಡ್ ಚೆರೋಕೀ ಹೊರತುಪಡಿಸಿ, ಜೀಪ್ ಪ್ರಸ್ತುತ ಭಾರತದಲ್ಲಿ ಎರಡು ಇತರೆ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ ಮೆರಿಡಿಯನ್ 7-ಸೀಟ್ ಎಸ್‌ಯುವಿ ಮತ್ತು ರಾಂಗ್ಲರ್.

ಇಷ್ಟೇ ಅಲ್ಲದೆ, ದಕ್ಷಿಣ ಕೊರಿಯಾದ ಪ್ರಸಿದ್ಧ ವಾಹನ ತಯಾರಿಕ ಕಂಪನಿ 'ಕಿಯಾ ಮೋಟಾರ್ಸ್‌' ಸಹ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಲು ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ. ಜನವರಿ 01, 2023ರಿಂದ ನೂತನ ದರಗಳು ಜಾರಿಗೆ ಬರಲಿವೆ. ಕಂಪನಿಯು ತನ್ನ ಕಾರುಗಳ ಬೆಲೆಯನ್ನು ರೂ. 50,000 ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಕಡ್ಡಾಯ ಎಮಿಷನ್ ಮಾನದಂಡಗಳಿಂದಾಗಿ ಇನ್‌ಪುಟ್ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧವಾಗಿದೆ.

ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ದೃಢಪಡಿಸಿದೆ ಎಂದು ವರದಿಯಾಗಿದೆ. ಆದರೂ ಹೆಚ್ಚಳವು ಮಾದರಿಯನ್ನು ಅವಲಂಬಿಸಿ, ಬೇರೆ-ಬೇರೆಯಾಗಿರುತ್ತದೆ. ಸರಕುಗಳ ಬೆಲೆಗಳ ಏರಿಕೆಯ ಹೊರತಾಗಿಯು ವಿವಿಧ ಕಾರಣಗಳಿಗೆ ಬೆಲೆ ಏರಿಕೆಯಾಗಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಪ್ರಸ್ತುತ, ಇಂಡೋ-ಜಪಾನ್ ವಾಹನ ತಯಾರಕರು, ಆಲ್ಟೊ ಕೆ10, ಬಲೆನೊ, ಬ್ರೆಝಾ, ಸೆಲೆರಿಯೊ, ಸಿಯಾಜ್, ಡಿಜೈರ್, ಇಕೊ, ಎರ್ಟಿಗಾ, ಗ್ರ್ಯಾಂಡ್ ವಿಟಾರಾ, ಇಗ್ನಿಸ್, ಎಸ್-ಪ್ರೆಸ್ಸೊ, ಸ್ವಿಫ್ಟ್, ವ್ಯಾಗನ್ ಆರ್ ಮತ್ತು ಎಕ್ಸ್‌ಎಲ್ 6 ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ವಾಹನ ತಯಾರಿಕೆಗೆ ಬಳಸುವ ಸರಕುಗಳ ಜೊತೆಗೆ ದೇಶದಲ್ಲಿ ಮುಂಬರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ವಾಹನಗಳನ್ನು ರೆಡಿ ಮಾಡಬೇಕಾಗಿರುವುದರಿಂದ ಬೆಲೆಗಳನ್ನು ಹೆಚ್ಚಳ ಮಾಡಬೇಕಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ ಎಂದು ವರದಿಯಾಗಿದೆ. ಟಾಟಾ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ Altroz, Harrier, Nexon, Nexon EV, Punch, Safari, Tiago, Tiago EV, Tigor ಮತ್ತು Tigor EV ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ ಎಂದು ಹೇಳಬಹುದು.

ಒಟ್ಟಾರೆಯಾಗಿ ಜೀಪ್, ಮಾರುತಿ ಸುಜುಕಿ, ಟಾಟಾ, ಕಿಯಾ, ಆಡಿ, ಮರ್ಸಿಡಿಸ್-ಬೆನ್ಜ್ ಮತ್ತು ರೆನಾಲ್ಟ್ ಸೇರಿದಂತೆ ಹಲವು ಕಂಪನಿಗಳು, ತಮ್ಮ ಕಾರು ಮತ್ತು ಎಸ್‌ಯುವಿಗಳಿಗೆ ಜನವರಿ 2023 ರಿಂದ ಬೆಲೆ ಏರಿಕೆ ಘೋಷಿಸಿವೆ. ಜೊತೆಗೆ ಈ ತಯಾರಕರು, ಹೆಚ್ಚುತ್ತಿರುವ ಇನ್‌ಪುಟ್ ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಕಾರಣವನ್ನು ನೀಡುತ್ತಿದ್ದಾರೆ. ಇದರಿಂದ ಐಷಾರಾಮಿ ವಾಹನ ಖರೀದಿಸುವವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಮಧ್ಯಮ ವರ್ಗದವರು ಖರೀದಿಸುವ ವಾಹನಗಳ ಬೆಲೆ ಏರಿಕೆಯು ಕೊಂಚ ಮಟ್ಟಿಗೆ ಪರಿಣಾಮ ಬೀರಬಹುದು.

Most Read Articles

Kannada
Read more on ಜೀಪ್ jeep
English summary
Jeep suv price to increase heavily from january 2023
Story first published: Monday, December 12, 2022, 13:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X