ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ಸೌಲಭ್ಯ ತೆರೆದ ಕಿಯಾ

ಕಿಯಾ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಇವಿ6 ಮಾದರಿಯೊಂದಿಗೆ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

Recommended Video

ಪ್ರತಿ ಚಾರ್ಜ್‌ಗೆ 530 ಕಿ.ಮೀ ಮೈಲೇಜ್ ನೀಡುವ KIA EV6 ವಿಮರ್ಶೆ | RWD & AWD | 350KW DC Fast Charging & More

ಹೊಸ ಇವಿ ಕಾರು ಬಿಡುಗಡೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಇವಿ ಮೂಲಭೂತ ಸೌಕರ್ಯಗಳನ್ನು ಭಾರತದಲ್ಲೂ ಪರಿಚಯಿಸುತ್ತಿದ್ದು, ಕಂಪನಿಯು ಇದೀಗ ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣವನ್ನು ಆರಂಭಿಸಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ದೇಶದಲ್ಲಿ ಇವಿ ವಾಹನಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಕಿಯಾ ಕಂಪನಿಯು ಕೂಡಾ ತನ್ನ ಹೊಸ ಇವಿ6 ಮಾದರಿಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಇವಿ ಕಾರು ಮಾದರಿಗಾಗಿ ಕಂಪನಿಯು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ನಿರ್ಮಾಣ ಮಾಡುತ್ತಿದ್ದು, ಕಂಪನಿಯು ಇದೀಗ ದೇಶದ ಅತಿದೊಡ್ಡ ಮತ್ತು ಹೆಚ್ಚು ವೇಗವಾಗಿ ಚಾರ್ಜ‌ಿಂಗ್ ಒದಗಿಸುವ 240kWh ಅಲ್ಟ್ರಾ ಫಾಸ್ಟ್ ಡಿಸಿ ಚಾರ್ಜರ್ ಸ್ಥಾಪನೆ ಮಾಡಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಕಿಯಾ ಕಂಪನಿಯು ದೇಶದ ಪ್ರಮುಖ ಮಾಹಾನಗರಗಳಲ್ಲಿ ಹೊಸ ಇವಿ6 ಕಾರು ಮಾರಾಟ ಮಾರಾಟ ಆರಂಭಿಸುವುದರ ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಸ್ಥಾಪಿಸುತ್ತಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಈ ಮೊದಲ 150kWh ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ್ದ ಕಿಯಾ ಕಂಪನಿಯು ಇದೀಗ ಮತ್ತಷ್ಟು ಬಲಿಷ್ಠವಾಗಿರುವ 240kWh ಅಲ್ಟ್ರಾ ಫಾಸ್ಟ್ ಡಿಸಿ ಚಾರ್ಜರ್ ಸೌಲಭ್ಯವನ್ನು ತೆರೆದಿದೆ. ಕೇರಳದ ಕೊಚ್ಚಿನ್ ಹೊಸ ಅಲ್ಟ್ರಾ ಫಾಸ್ಟ್ ಡಿಸಿ ಚಾರ್ಜರ್ ಸೌಲಭ್ಯವನ್ನು ತೆರೆಯಲಾಗಿದ್ದು, ಹೊಸ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಇವಿ6 ಕಾರನ್ನು ಕೆಲವೇ ನಿಮಿಷಗಳಲ್ಲಿಯೇ ಪೂರ್ತಿಯಾಗಿ ಚಾರ್ಜ್ ಮಾಡಬಹುದಾಗಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಹೊಸ ಇವಿ6 ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್(E-GMP) ಅನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಬ್ರ್ಯಾಂಡ್‌ನ ಭವಿಷ್ಯದ ಶ್ರೇಣಿಯ ಎಲೆಕ್ಟ್ರಿಕ್ ಕೊಡುಗೆಗಳ ಆಧಾರವಾಗಿದೆ. ಹೊಸ ಕಾರಿನಲ್ಲಿ ಕಂಪನಿಯು 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ರೇಂಜ್ ಖಚಿತಪಡಿಸುತ್ತದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪೂರ್ತಿಯಾಗಿ ಚಾರ್ಜಿಂಗ್ ಮಾಡಲು 11kWh ಹೋಂ ಚಾರ್ಜರ್ ಮೂಲಕ ಚಾರ್ಜ್‌ ಮಾಡಲು ಕನಿಷ್ಠ 22 ಗಂಟೆಗಳ ಕಾಲ ತೆಗೆದುಕೊಳ್ಳಲಿದ್ದರೆ 50kWh ಡಿಸಿ ಫಾಸ್ಟ್ ಚಾರ್ಜರ್ ಮೂಲಕ 2 ಗಂಟೆಗಳಿಂತಲೂ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳುತ್ತದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಇದೀಗ ಕಿಯಾ ಕಂಪನಿಯು ಕೆಲವೇ ನಿಮಿಷಗಳಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜಿಂಗ್ ಒದಗಿಸುವ 150kWh ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜರ್ 240kWh ಸಾಮರ್ಥ್ಯ ಅಲ್ಟ್ರಾ ಫಾಸ್ಟ್ ಡಿಸಿ ಚಾರ್ಜರ್ ಪರಿಚಯಿಸುತ್ತಿದ್ದು, ಹೊಸ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಶೇ. 80 ರಷ್ಟು ಚಾರ್ಜಿಂಗ್ ಒದಗಿಸುತ್ತದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಇವಿ6 ಹೊಸ ಕಾರಿನ ಬ್ಯಾಟರಿ ಪ್ಯಾಕ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಸೂಪರ್ ಚಾರ್ಜಿಂಗ್ ಮೂಲಕ ಕೇವಲ 4.5 ನಿಮಿಷಗಳ ಚಾರ್ಜಿಂಗ್ ಮೂಲಕ ಕನಿಷ್ಠ 100 ಕಿ.ಮೀ ಕ್ರಮಿಸುವಷ್ಟು ಚಾರ್ಜ್ ಮಾಡಬಹುದು.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಜೊತೆಗೆ ಹೊಸ ಕಾರಿನಲ್ಲಿ 350kW ಫಾಸ್ಟ್ ಚಾರ್ಜರ್ ನಿಂದ 50kWh ಡಿಸಿ ಫಾಸ್ಟ್ ಚಾರ್ಜರ್‌ ಆಯ್ಕೆಗಳಿದ್ದು, ಇವು ಕ್ರಮವಾಗಿ 18 ನಿಮಿಷ ಮತ್ತು 73 ನಿಮಿಷಗಳಲ್ಲಿ ಶೇ. 10 ರಿಂದ ಶೇ. 80ರ ವರೆಗಿನ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಹೊಸ ಇವಿ6 ಮಾದರಿಯ ಬಿಡುಗಡೆಯೊಂದಿಗೆ ಕಿಯಾ ಕಂಪನಿಯು ದೇಶದ ಪ್ರಮುಖ 12 ಡೀಲರ್ಸ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ 12 ಡೀಲರ್ಸ್‌ಗಳಲ್ಲೂ ಕಂಪನಿಯು 150kWh ಡಿಸಿ ಫಾಸ್ಟ್ ಚಾರ್ಜರ್ ಇಲ್ಲವೇ 240kWh ಅಲ್ಟ್ರಾ ಫಾಸ್ಟ್ ಡಿಸಿ ಚಾರ್ಜರ್ ಸೌಲಭ್ಯ ಒದಗಿಸುವ ಗುರಿಹೊಂದಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಹೊಸ ಚಾರ್ಜಿಂಗ್ ಸೌಲಭ್ಯದ ಕುರಿತಂತೆ ಮಾತನಾಡಿರುವ ಕಿಯಾ ಇಂಡಿಯಾ ಮುಖ್ಯಸ್ಥರು ಭಾರತದಲ್ಲಿ ಇವಿ ವಾಹನ ಮಾರಾಟ ಮಾತ್ರವಲ್ಲದೇ ಮಾರಾಟದ ನಂತರ ಗ್ರಾಹಕರ ಸೇವೆಗಳಲ್ಲೂ ಕಂಪನಿಯು ಮಹತ್ವದ ಹೆಜ್ಜೆಯಿರಿಸಲಿದೆ ಎಂದಿದ್ದಾರೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿದ್ದರೂ ಐಷಾರಾಮಿ ಫೀಚರ್ಸ್‌ಗಳೊಂದಿಗೆ ಪ್ರಮುಖ ಜರ್ಮನ್ ಕಾರು ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಸದ್ಯ ಕಂಪನಿಯು ಭಾರತದಲ್ಲಿ ಹೊಸ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಸದ್ಯ ಕಿಯಾ ಕಂಪನಿಯು ಇವಿ6 ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಜಿಟಿ ಲೈನ್ ಫ್ರಂಟ್ ವ್ಹೀಲ್ ಡ್ರೈವ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 59.95 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ಜಿಟಿ ಲೈನ್ ಆಲ್ ವ್ಹೀಲ್ ಡ್ರೈವ್ ಮಾದರಿಯು ರೂ. 64.95 ಲಕ್ಷ ಬೆಲೆ ಹೊಂದಿದೆ.

ಭಾರತದ ಮೊದಲ ಅತಿ ವೇಗದ ಅಲ್ಟ್ರಾ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣ ತೆರೆದ ಕಿಯಾ

ಹೊಸ ಕಾರನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡಿರುವುದರಿಂದ ತುಸು ದುಬಾರಿ ಎನ್ನಿಸಲಿರುವ ಹೊಸ ಕಾರು ಮುಂಬರುವ ಕೆಲವು ವರ್ಷಗಳಲ್ಲಿ ಭಾರತದಲ್ಲಿಯೇ ಜೋಡಣೆಯಾಗಲಿದ್ದು, ಇವಿ6 ಜೊತೆಗೆ ಕಂಪನಿಯು ಶೀಘ್ರದಲ್ಲಿಯೇ ತನ್ನ ಬಜೆಟ್ ಇವಿ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Kia inaugurates a 240kwh ev charging station in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X