ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ದೇಶಿಯ ಮಾರುಕಟ್ಟೆಯಲ್ಲಿನ ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಲೆಕ್ಸಸ್ ಇಂಡಿಯಾ ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದೆ.

Recommended Video

Toyota Urban Cruiser Hyryder Kannada Walkaround | ಹೈಬ್ರಿಡ್ ಎಂಜಿನ್, ಗೇರ್ ಬಾಕ್ಸ್, ವೈಶಿಷ್ಟ್ಯತೆಗಳು..

ಹೊಸ ಕಾರ್ಯಕ್ರಮದಡಿ ಕಂಪನಿಯು ಹಳೆಯ ಕಾರುಗಳನ್ನು ಪರೀಕ್ಷಿಸಲು ಮತ್ತು ಖರೀದಿ ಮಾಡಲು ಸಹಾಯ ಮಾಡುವುದರ ಜೊತೆಗೆ ಉಚಿತ ಸೇವೆ ಮತ್ತು ವಾರಂಟಿ ಸೌಲಭ್ಯಗಳನ್ನು ನೀಡಲಾಗುತ್ತದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಭಾರತದಲ್ಲಿ ಹೆಚ್ಚುತ್ತಿರುವ ಬಳಕೆ ಮಾಡಿದ ಕಾರು ಮಾರಾಟ ಉದ್ಯಮವನ್ನು ಸಂಘಟಿತಗೊಳಿಸಲು ಪ್ರಮುಖ ಕಾರು ಮಾರಾಟ ಕಂಪನಿಗಳು ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಇದೀಗ ಲೆಕ್ಸಸ್ ಇಂಡಿಯಾ ಕೂಡಾ ಹೊಸ ಕಾರ್ಯಕ್ರಮದಡಿಯಲ್ಲಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಹೊಸ ಕಾರ್ಯಕ್ರಮದಡಿಯಲ್ಲಿರುವ ಕಂಪನಿಯು ತನ್ನದೇ ಬ್ರಾಂಡ್ ಕಾರುಗಳ ಮರು ಮಾರಾಟಕ್ಕೆ ಮತ್ತು ಆಸಕ್ತ ಗ್ರಾಹಕರಿಗೆ ಖರೀದಿಸಲು ನೆರವಾಗಲಿದ್ದು, ಪ್ರಮಾಣೀಕೃತ ಮೌಲ್ಯಮಾಪನದೊಂದಿಗೆ ಉತ್ತಮ ಬೆಲೆಗಳಲ್ಲಿ ಬಳಸಿದ ಕಾರುಗಳನ್ನು ಮರುಮಾರಾಟ ಮಾಡಲು ಮತ್ತು ಖರೀದಿಸಲು ಅನುಕೂಲಕರವಾಗಲಿದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಬಳಸಿದ ಕಾರುಗಳ ಬೇಡಿಕೆಯು ಭಾರತೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಹೆಚ್ಚುತ್ತಿದ್ದು, ಕೇವಲ ಮಧ್ಯಮ ಕ್ರಮಾಂಕದ ಕಾರುಗಳ ಮಾತ್ರವಲ್ಲದೆ ಐಷಾರಾಮಿ ಕಾರುಗಳ ವಿಭಾಗದಲ್ಲೂ ಸಹ ಮರು ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಹೆಚ್ಚುತ್ತಿದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಇಂತಹ ಪರಿಸ್ಥಿತಿಯಲ್ಲಿ ಪ್ರಮುಖ ಐಷಾರಾಮಿ ಕಾರು ಕಂಪನಿಗಳು ಹೊಸ ಅವಕಾಶವನ್ನು ಬಳಸಿಕೊಳ್ಳಲು ಹೊಸ ಪ್ಲ್ಯಾಟ್‌ಫಾರ್ಮ್ ಆರಂಭಿಸುತ್ತಿದ್ದು, ಲೆಕ್ಸಸ್ ಸಹ ಮಾರ್ಗದಲ್ಲಿ ಉಪಯೋಗಿಸಿದ ಕಾರುಗಳನ್ನು ಮಾರಾಟ ಮತ್ತು ಖರೀದಿಗೆ ಮೊದಲು ಸಂಪೂರ್ಣವಾಗಿ ಪರಿಶೀಲಿಸಲು ಹೊಸ ಪ್ರಮಾಣೀಕೃತ ಕಾರ್ಯಕ್ರಮ ಪರಿಚಯಿಸಿದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಹೊಸ ಯೋಜನೆಯಡಿ ಹೆಚ್ಚಿನ ಗ್ರಾಹಕರಿಗೆ ಲೆಕ್ಸಸ್‌ ನಿರ್ಮಾಣದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಉತ್ತಮ ಬೆಲೆಗೆ ಮರು ಮಾರಾಟ ಮಾಡಲು ಮತ್ತು ಖರೀದಿಸಲು ಸಹಕಾರಿಯಾಗಲಿದ್ದು, ಹಳೆಯ ಕಾರಿನ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಲು ಕಂಪನಿಯು 203-ಪಾಯಿಂಟ್‌ಗಳಲ್ಲಿ ಪರಿಶೀಲಿಸುತ್ತದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಇದರಿಂದ ಲೆಕ್ಸಸ್‌ನಿಂದ ಬಳಸಿದ ಕಾರುಗಳನ್ನು ಖರೀದಿಸಲಿರುವ ಗ್ರಾಹಕರಿಗೆ ಕಾರಿನ ಬಗ್ಗೆ ಭರವಸೆ ಹೊಂದಲು ಸಾಧ್ಯವಾಗಲಿದ್ದು, ಇಲ್ಲಿ ಯಾವುದೇ ರೀತಿಯ ಮೋಸದ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಆದರೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಮೋಸ ವ್ಯವಹಾರಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಬಹುತೇಕ ಆಟೋ ಕಂಪನಿಗಳು ಹೊಸ ವಾಹನಗಳ ಮಾರಾಟದ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಉದ್ಯಮದ ಮೇಲೂ ಭಾರೀ ಹೂಡಿಕೆ ಮಾಡುತ್ತಿವೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಈ ನಿಟ್ಟಿನಲ್ಲಿ ಲೆಕ್ಸಸ್ ಇಂಡಿಯಾ ಕಂಪನಿಯು ನುರಿತ ಉದ್ಯೋಗಿಗಳ ತಂಡದೊಂದಿಗೆ ಹೊಸ ಉದ್ಯಮ ವ್ಯವಹಾರಕ್ಕೆ ಚಾಲನೆ ನೀಡಿದ್ದು, ಹಳೆಯ ಕಾರುಗಳ ಮರು ಮಾರಾಟ ಮತ್ತು ಖರೀದಿ ಸಂದರ್ಭದಲ್ಲಿ ಕುಲಂಕುಶವಾಗಿ ಪರಿಶೀಲನೆ ಮಾಡಿದ ನಂತರವೇ ಕಾರು ಮಾರಾಟ ಮಾಡಲಿದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಹೆಚ್ಚುವರಿಯಾಗಿ ಲೆಕ್ಸಸ್ ಎಲ್ಲಾ ಬಳಸಿದ ಕಾರುಗಳ ಸೂಕ್ತ ದಾಖಲೆಗಳು ಮತ್ತು ಸೇವಾ ಇತಿಹಾಸವನ್ನು ಖಚಿತಪಡಿಸಲಿದ್ದು, ಬಳಸಿದ ಕಾರು ಖರೀದಿಸಿದ ನಂತರವೂ ಲೆಕ್ಸಸ್ ಗ್ರಾಹಕರಿಗೆ ಎರಡು ವರ್ಷ ಅಥವಾ 30,000 ಕಿ.ಮೀ ವರೆಗೆ ವಾರಂಟಿ ಸಹ ನೀಡಲಾಗುತ್ತದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಸಾಮಾನ್ಯವಾಗಿ ಅಸಂಘಟಿತ ಮಾರುಕಟ್ಟೆಯಲ್ಲಿ ಬಳಸಿದ ಕಾರನ್ನು ಖರೀದಿಸುವುದು ಯಾವುದೇ ರೀತಿಯ ಖಾತರಿಯೊಂದಿಗೆ ಬರುವುದಿಲ್ಲ. ಆದ್ದರಿಂದ ಇದು ಲೆಕ್ಸಸ್ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದ್ದು, ಯಾವುದೇ ರೀತಿಯ ತಾಂತ್ರಿಕ ತೊಂದರೆಗೆ ಕಂಪನಿಯೇ ವಾರಂಟಿ ಸಿಗುತ್ತದೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಹೊಸ ಕಾರ್ಯಕ್ರಮದ ಕುರಿತಾಗಿ ಮಾತನಾಡಿರುವ ಕಂಪನಿಯ ಅಧ್ಯಕ್ಷ ನವೀನ್ ಸೋನಿ ಅವರು ಲೆಕ್ಸಸ್ ಪ್ರಮಾಣೀಕೃತ ಕಾರ್ಯಕ್ರಮದಡಿಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳ ಬಗೆಗೆ ಭರವಸೆ ನೀಡುತ್ತಿದ್ದು, ಉತ್ತಮ ಮಾಲೀಕತ್ವದ ಅನುಭವವನ್ನು ಒದಗಿಸಲು ಕಂಪನಿಯು ಬದ್ದವಾಗಿದೆ ಎಂದಿದ್ದಾರೆ.

ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಪ್ರಮಾಣೀಕೃತ ಕಾರ್ಯಕ್ರಮ ಆರಂಭಿಸಿದ ಲೆಕ್ಸಸ್ ಇಂಡಿಯಾ

ಲೆಕ್ಸಸ್ ಕಂಪನಿಯು ಪ್ರಸ್ತುತ ಸೆಡಾನ್‌, ಎಸ್‌ಯುವಿಗಳು ಇತ್ಯಾದಿಗಳನ್ನು ಒಳಗೊಂಡಿರುವ ಹಲವಾರು ಹೈಬ್ರಿಡ್ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಕಾರ್ಯಕ್ರಮದಡಿಯಲ್ಲಿ ಗ್ರಾಹಕರು ಉತ್ತಮ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಬಹುದಾಗಿದೆ.

Most Read Articles

Kannada
English summary
Lexus starts certified program for pre owned vehicles in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X