ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಮಹೀಂದ್ರಾ ಅಂಗಸಂಸ್ಥೆಯಾದ ಮಹೀಂದ್ರಾ ಎಲೆಕ್ಟ್ರಿಕ್ ಮೊಲಿಬಿಟಿ ಲಿಮಿಟೆಡ್ ಕಂಪನಿಯು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಈಗಾಗಲೇ ಪ್ರಮುಖ ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

Recommended Video

India’s First Commercial EV With A Manual Gearbox — ಎಕ್ಸ್‌ಕ್ಲೂಸಿವ್ ಡ್ರೈವ್ | Log9 & Northway

ಇದೀಗ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ತನ್ನ ಜೋರ್ ಸರಣಿ ಮಧ್ಯಮ ಕ್ರಮಾಂಕದ ವಾಣಿಜ್ಯ ವಾಹನದಲ್ಲಿ ಹೊಸದಾಗಿ ಜೋರ್ ಗ್ರ್ಯಾಂಡ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಹೊಚ್ಚ ಹೊಸ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.60 ಲಕ್ಷ ಬೆಲೆ ಹೊಂದಿದೆ. ಹೊಸ ವಾಣಿಜ್ಯ ವಾಹನದಲ್ಲಿ ಕಂಪನಿಯು ಹಲವಾರು ಬೆಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್‌ಗಳನ್ನು ನೀಡಿದ್ದು, ಫ್ಲಿಟ್ ಕಾರ್ಯಾಚರಣೆಯಲ್ಲಿ ಹೆಚ್ಚಿನ ಲಾಭಾಂಶ ತಂದುಕೊಡುವ ಭರವಸೆ ಹೊಂದಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನದಲ್ಲಿ ಮಹೀಂದ್ರಾ ಕಂಪನಿಯು 12 kW ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಿದ್ದು, ಹೊಸ ಬ್ಯಾಟರಿ ಪ್ಯಾಕ್ ಉತ್ತಮ ಮೈಲೇಜ್‌ನೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಜೊತೆಗೆ ಹೊಸ ಎಲೆಕ್ಟ್ರಿಕ್ ವಾಹನವು ಈ ವಿಭಾಗದಲ್ಲಿ ಅತ್ಯುತ್ತಮವಾದ 11.5 ಡಿಗ್ರಿ ತನಕ ದುಡ್ಡಗಾಡು ರಸ್ತೆಗಳಲ್ಲೂ ಸುಲಭವಾಗಿ ಚಾಲನೆಗೊಳ್ಳಲಿದ್ದು, 50 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಪಿಕ್ಅಪ್ ಖಾತ್ರಿಪಡಿಸುತ್ತದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಹಾಗೆಯೇ ಕ್ಲಚ್ ರಹಿತ, ಗೇರ್‌ ರಹಿತ ಮತ್ತು ಯಾವುದೇ ಶಬ್ದವಿಲ್ಲದ ವಾಹನ ಚಾಲನೆಯು ಆರಾಮದಾಯಕ ಅನುಭವ ನೀಡಲಿದ್ದು, ಗುಣಮಟ್ಟದ ಉತ್ಪಾದನಾ ಸೌಲಭ್ಯವು ಹೆಚ್ಚಿನ ಬಾಳ್ವಿಕೆಗೆ ಸಹಕಾರಿಯಾಗಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಹೊಸ ವಾಹನದಲ್ಲಿರುವ 12 kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್‌ಗೆ ಲೋಡ್ ಸಹಿತ ಗರಿಷ್ಠ 100 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಬ್ಯಾಟರಿ ಪ್ಯಾಕ್ ಅನ್ನು ಪೂರ್ತಿಯಾಗಿ ಚಾರ್ಜ್‌ ಮಾಡಲು ಗರಿಷ್ಠ 4 ಗಂಟೆ ತೆಗೆದುಕೊಳ್ಳುತ್ತದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಹೊಸ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಮಹೀಂದ್ರಾ ಕಂಪನಿಯ ಪ್ರಕಾರ, ಹೊಸ ಜೋರ್ ಗ್ರ್ಯಾಂಡ್ ಬಳಕೆಯು ಸಾಂಪ್ರದಾಯಿಕ ಡೀಸೆಲ್ ಮಾದರಿಗಳಿಂತಲೂ ಮಾಲೀಕರಿಗೆ ಹೆಚ್ಚಿನ ಲಾಭಾಂಶ ನೀಡಲಿದ್ದು, ಸತತ 5 ವರ್ಷಗಳ ಬಳಕೆಯ ನಂತರ ಗರಿಷ್ಠ ರೂ. 6 ಲಕ್ಷ ಉಳಿತಾಯ ಮಾಡುತ್ತದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಇದು ಡೀಸೆಲ್ ಮತ್ತು ಸಿಎನ್‌ಜಿ ಮಾದರಿಗಳ ರೂ. 3 ಲಕ್ಷ ಉಳಿತಾಯಕ್ಕೆ ಹೋಲಿಕೆ ಮಾಡಿದರೆ ಶೇ. 50 ರಷ್ಟು ಲಾಭಾಂಶ ಹೆಚ್ಚಳದೊಂದಿಗೆ ಸಾವಿರಾರು ಕೆಜಿ ಇಂಗಾಲ ಹೊರಸೂಸುವಿಕೆಯನ್ನು ತಡೆಯುವ ಮೂಲಕ ಪರಿಸರ ಸ್ನೇಹಿ ಮಾದರಿಯಾಗಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಜೋರ್ ಗ್ರ್ಯಾಂಡ್ ವಾಣಿಜ್ಯ ವಾಹನದ ನಿರ್ವಹಣೆಗಾಗಿ ಕಂಪನಿಯು ಒಂದೇ ಸೂರಿನಡಿ ಹಲವಾರು ಮಾಹಿತಿಗಳನ್ನು ನೀಡುವ ನಿಮೊ(NEMO) ಕನೆಕ್ಟೆಡ್ ಸೌಲಭ್ಯವನ್ನು ನೀಡಿದ್ದು, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ರೇಂಜ್, ಸ್ಪೀಡೋ ಮೀಟರ್, ಬ್ಯಾಟರಿ ಹೆಲ್ತ್ ಇಂಡಿಕೇಟರ್‌ ಹೊಂದಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಹೊಸ ಇವಿ ವಾಣಿಜ್ಯದಲ್ಲಿ ಮಹೀಂದ್ರಾ ಕಂಪನಿಯು 6 ಅಡಿಯಷ್ಟು ಸರಕು ಸಾಗಾಣಿಕೆಯ ಸ್ಥಳಾವಕಾಶದೊಂದಿಗೆ 140/170 ಕ್ಯೂಬಿಕ್ ಡೆಲಿವರಿ ಬಾಕ್ಸ್ ಜೋಡಣೆ ಮಾಡಿದ್ದು, ಬ್ಯಾಟರಿ ಮೇಲೆ ಕಂಪನಿಯು 5 ವರ್ಷ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ನೀಡುತ್ತದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಇದಲ್ಲದೆ ವಾಹನದ ಮೇಲೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 80 ಸಾವಿರ ಕಿ.ಮೀ ಮೇಲೆ ವಾರಂಟಿ ಸಿಗಲಿದ್ದು, ಇವಿ ವಾಹನಗಳ ಗ್ರಾಹಕರ ಸೇವೆಗಳಿಗಾಗಿ ಕಂಪನಿಯು ದೇಶಾದ್ಯಂತ 800 ಟಚ್‌ಪಾಯಿಂಟ್ ತೆರೆದಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಹೊಸ ವಾಣಿಜ್ಯ ವಾಹನ ಬಿಡುಗಡೆಯೊಂದಿಗೆ ಮಹೀಂದ್ರಾ ಕಂಪನಿಯು ಈಗಾಗಲೇ 12 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕಿಂಗ್ ಸ್ವಿಕರಿಸಿದ್ದು, ಸರಕು ಸಾಗಾಣಿಕಾಗಿ ಮಹೀಂದ್ರಾ ಲಾಜಿಸ್ಟಿಕ್, ಮೆಜೆಂಟಾ ಇವಿ ಸಲ್ಯೂಷನ್, ಮೂವಿಂಗ್, ಯೆಲೊ ಇವಿ ಮತ್ತು ಜೈಂಗೊ ಕಂಪನಿಗಳು ಹೊಸ ಇವಿ ವಾಹನಕ್ಕೆ ಬೇಡಿಕೆ ಸಲ್ಲಿಸಿವೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಹೊಸ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಇನ್ನು ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಇವಿ ಅಂಗಸಂಸ್ಥೆಯ ಅಭಿವೃದ್ದಿಗಾಗಿ ಈಗಾಗಲೇ ಸುಮಾರು ರೂ. 12 ಸಾವಿರ ಕೋಟಿ ಹೆಚ್ಚಿನ ಹೂಡಿಕೆಯೊಂದಿಗೆ ವಿವಿಧ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ ಜೋರ್ ಗ್ರ್ಯಾಂಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ

ಸದ್ಯಕ್ಕೆ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲಿಯೇ ಹೊಸ ತಲೆಮಾರಿನ ಪ್ರಯಾಣಿಕರ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಇವಿ ಮಾದರಿಗಳ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Mahindra zor grand electric launched with advanced li ion battery tech and metal body
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X