MG ಆಸ್ಟರ್ ಫೇಸ್‌ಲಿಫ್ಟ್, ZS EV ಪೇಟೆಂಟ್‌ ಸೋರಿಕೆ... ಕಾರಿನ ವಿವರ ಬಹಿರಂಗ

ಬ್ರಿಟಿಷ್ ಕಾರು ತಯಾರಿಕಾ ಕಂಪನಿ 'MG' ಸಿದ್ಧಪಡಿಸುತ್ತಿರುವ ZS EV ಪ್ರಸ್ತುತ ಭಾರತದಲ್ಲಿ ಉತ್ಪಾದನೆ ಹಂತದಲ್ಲಿರುವ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಮುಂದಿನ ವರ್ಷ ಮಾರುಕಟ್ಟೆಗೆ ಬರಲಿಯುವ ಈ 'ZS EV' ಹಾಗೂ 'ಆಸ್ಟರ್ ಫೇಸ್‌ಲಿಫ್ಟ್' ಕಾರಿನ ಪೇಟೆಂಟ್ ಚಿತ್ರಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಪ್ರಮುಖ ವಿವರಗಳ ಬಗ್ಗೆ ಒಂದಷ್ಟು ಮಾಹಿತಿ ಬಹಿರಂಗವಾಗಿದೆ.

ಭಾರತದಲ್ಲಿ ಇಂಧನ ಚಾಲಿತ ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಯೊಂದು ಕಾರ್ ತಯಾರಿಕಾ ಕಂಪನಿಯು ಎಲೆಕ್ಟ್ರಿಕ್ ವಾಹನ ತಯಾರಿಕೆಯತ್ತ ಮುಖಮಾಡಿವೆ. 2023ರಲ್ಲಿ ಅನಾವರಣಗೊಳ್ಳಲು ಸಿದ್ದವಾಗಿರುವ MG ZS EV, Nexon EV ಮತ್ತು Kona ಎಲೆಕ್ಟ್ರಿಕ್‌ ಕಾರುಗಳಿಗೆ ತೀವ್ರ ಪೈಪೋಟಿ ನೀಡಬಹುದು ಎಂದು ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದಾರೆ. ಮತ್ತೊಂದೆಡೆ MG ಆಸ್ಟರ್ ಖರೀದಿದಾರರಿಗೆ ಇದೇ ರೀತಿಯ ಉತ್ತಮ ಪ್ಯಾಕೇಜ್ ಅನ್ನು ನೀಡುತ್ತಿದ್ದು, ICE ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಿಗಲಿದೆ.

MG ಆಸ್ಟರ್ ಫೇಸ್‌ಲಿಫ್ಟ್, ZS EV ಪೇಟೆಂಟ್‌ ಸೋರಿಕೆ: ಕಾರಿನ ವಿವರ ಬಹಿರಂಗ

ಮೊದಲಿಗೆ, ಸೋರಿಕೆಯಾಗಿರುವ ಪೇಟೆಂಟ್ ಚಿತ್ರಗಳಲ್ಲಿ ಈ ಎರಡು ಎಸ್‌ಯುವಿಗಳ ಮುಂಭಾಗದಲ್ಲಿ ಸಾಕಷ್ಟು ಬದಲಾವಣೆ ಆಗಿರುವುದನ್ನು ಕಾಣಬಹುದು. ಅದು ZS EV ಅನ್ನು ಮೊದಲಿಗಿಂತ ಹೆಚ್ಚು ತೀಕ್ಷ್ಣ ಮತ್ತು ಅಗ್ರೆಸಿವ್ ಆಗಿ ಕಾಣುವಂತೆ ಮಾಡುತ್ತದೆ. ಪ್ರಮುಖವಾಗಿ ಎಲ್ಇಡಿ ಲೈಟ್ಸ್, ದೊಡ್ಡದಾದ ಮುಂಭಾಗದ ಬಂಪರ್ ಮತ್ತು ಸಣ್ಣ ಏರ್ ಡ್ಯಾಮ್ ಜೊತೆ ಕ್ಲೋಸ್ಡ್ ನ್ಯೂ ಗ್ರಿಲ್ ಅನ್ನು ಪಡೆದಿದೆ. ಅಲ್ಲದೆ, ಎಸ್‌ಯುವಿಯ ಸೈಡ್ ಪ್ರೊಫೈಲ್‌ಗೆ ಸೂಕ್ಷ್ಮವಾಗಿ ನವೀಕರಣಗಳನ್ನು ಮಾಡಲಾಗಿದೆ. ಆದರೆ, ಕಾರಿನ ಹಿಂಭಾಗದಲ್ಲಿ ಸಣ್ಣದಾದ ಕೆಲವೊಂದು ಬದಲಾವಣೆಯಾಗಿರುವುದನ್ನು ನಿರೀಕ್ಷಿಸಬಹುದಾಗಿದೆ.

ಒಟ್ಟಾರೆಯಾಗಿ, ಈ ಎಲ್ಲಾ ಬದಲಾವಣೆಗಳು ಮತ್ತು ನವೀಕರಣಗಳು ಹೊಸ ZS EV ಮತ್ತು ಆಸ್ಟರ್ ಎಸ್‌ಯುವಿಗೆ ಪವರ್ ಫುಲ್ ಮತ್ತು ಅಗ್ರೆಸಿವ್ ಲುಕ್ ನೀಡುತ್ತದೆ ಎಂದು ಹೇಳಬಹುದು. ಜೊತೆಗೆ ಈ ನೂತನ ಕಾರುಗಳನ್ನು ಮತ್ತಷ್ಟು ಹೊಸ ಬಣ್ಣ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಜೊತೆಗೆ ಒಳಭಾಗದಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ರಿಫ್ರೆಶ್ ಮಾಡಿದ ಸೆಂಟ್ರಲ್ ಕನ್ಸೋಲ್ ವಿನ್ಯಾಸಕ್ಕಾಗಿ ಡ್ಯಾಶ್‌ಬೋರ್ಡ್ ಲೇಔಟ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ ಎಂದು ಹೇಳಲಾಗಿದೆ.

ಹೊಸ ZS EV ಫೇಸ್‌ಲಿಫ್ಟ್ ಮತ್ತು ಆಸ್ಟರ್ ಫೇಸ್‌ಲಿಫ್ಟ್ ಮಾದರಿಗಳು MG 4 EVಯಿಂದ ಪ್ರೇರಿತವಾಗಿರುವ ಒಳಾಂಗಣ ವಿನ್ಯಾಸವನ್ನು ಪಡೆದಿರಬಹುದು ಎಂದು ಅಂದಾಜು ಮಾಡಲಾಗಿದೆ. ವೈಶಿಷ್ಟ್ಯಗಳ ಕುರಿತಂತೆ ಹೇಳುವುದಾದರೆ ಮುಂಭಾಗದಲ್ಲಿ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕನೆಕ್ಟೆಡ್ ಮೊಬೈಲ್ ಕನೆಕ್ಟಿವಿಟಿ, ದೊಡ್ಡದಾದ ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್, ವೆಂಟಿಲೇಟೆಡ್ ಸೀಟ್‌ಗಳು ಸೇರಿದಂತೆ ಇನ್ನೂ ಅನೇಕ ನವೀನ ಫೀಚರ್ ಅನ್ನು ನೂತನ ಫೇಸ್‌ಲಿಫ್ಟ್ ಮಾದರಿಗಳಲ್ಲಿ MG ಕಂಪನಿ ಒದಗಿಸುವ ನಿರೀಕ್ಷೆಯಿದೆ.

ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್-ಟ್ರಾಫಿಕ್ ಅಸಿಸ್ಟೆನ್ಸ್ ಮತ್ತು ಡ್ರೈವರ್ ಅಟೆನ್ಷನ್ ಮಾನಿಟರಿಂಗ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ADAS ಸೂಟ್ ಸೇರಿದಂತೆ ಉತ್ತಮ ಸುರಕ್ಷತಾ ತಂತ್ರಜ್ಞಾನವನ್ನು ಈ ಕಾರುಗಳಲ್ಲಿ MG ಕಂಪನಿ ಒದಗಿಸುವ ನಿರೀಕ್ಷೆಯಿದೆ. MG ಆಸ್ಟರ್, ಪ್ರಸ್ತುತ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.3-ಲೀಟರ್ ಟರ್ಬೊ-ಪೆಟ್ರೋಲ್ ಮೋಟಾರ್ 138 BHP ಪವರ್ ಮತ್ತು 230Nm ಟಾರ್ಕ್, 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ವಾಹನವು 109 BHP ಪವರ್ ಮತ್ತು 144 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹಿಂದಿನ MG ZS EV ಮಾದರಿ 50.3 kWh ಬ್ಯಾಟರಿಯನ್ನು ಹೊಂದಿದ್ದು, 174 BHP ಪವರ್ ಮತ್ತು 353 Nm ಪೀಕ್ ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನಿಂದ ಚಲಿಸುತ್ತದೆ. ZS EVಯ ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿದರೆ ಗರಿಷ್ಠ 461km ದೂರದವರೆಗೆ ಪ್ರಯಾಣಿಸಬಹುದು. ಕೇವಲ 8.5 ಸೆಕೆಂಡುಗಳಲ್ಲಿ 0-100 kmph ತಲುಪುವ ಸಾಮರ್ಥ್ಯ ಹೊಂದಿದೆ. ಆದರೆ, ಹೊಸ ಕಾರಿನ ಎಂಜಿನ್ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಕೆಲವು ದಿನಗಳ ಹಿಂದಷ್ಟೇ ದೇಶಿಯ ಕಾರು ತಯಾರಿಕಾ ಕಂಪನಿ 'ಮಹೀಂದ್ರಾ' ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ XUV400' ಕಾರಿನ ಟೀಸರ್ ಬಿಡುಗಡೆ ಮಾಡಿತ್ತು. ಈ ಕಾರು, 456 ಕಿ.ಮೀ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಮಹೀಂದ್ರಾ XUV400 ಎಲೆಕ್ಟ್ರಿಕ್ SUV, ಲೆಥೆರೆಟ್ ಅಪ್ಹೋಲ್ಸ್ಟರಿ, IRVM, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ORVM, 17-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ ಮತ್ತು TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್)ಗಳನ್ನು ಹೊಂದಿರಲಿದ್ದು, ಇದರ ಬೆಲೆ 18 ಲಕ್ಷದಿಂದ 23 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Mg aster facelift zs ev patent leak car details revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X