ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಜರ್ಮನ್ ಐಷಾರಾಮಿ ಕಾರು ತಯಾರಕರಾದ ಆಡಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ 2022ರ ಆಡಿ ಎ8 ಎಲ್ ಸೆಡಾನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 2022ರ ಆಡಿ ಎ8 ಎಲ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುಲಿರುವ ಬಹುನಿರೀಕ್ಷಿತ ಐಶಾರಾಮಿ ಕಾರುಗಳಲ್ಲಿ ಒಂದಾಗಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಆಡಿ ಎ8 ಎಲ್ ಇಂಗೋಲ್‌ಸ್ಟಾಡ್-ಆಧಾರಿತ ಕಾರು ತಯಾರಕರ ಪ್ರಮುಖ ಸೆಡಾನ್ ಆಗಿದೆ. 2022ರ ಆಡಿ ಎ8 ಎಲ್ ಐಷಾರಾಮಿ ಸೆಡಾನ್ ಕಾರು ಬಿಡುಗಡೆ ದಿನಾಂಕ ಬಹಿರಂಗವಾಗಿವೆ. ಈ ಹೊಸ ಐಷಾರಾಮಿ ಸೆಡಾನ್ 2022ರ ಜುಲೈ ತಿಂಗಳ 12 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನ ಹೆಸರಿನಲ್ಲಿರುವ ಎಲ್ ಸೂಚಿಸುವಂತೆ ಇದು ಲಾಂಗ್ ವ್ಹೀಲ್ ಬೇಸ್ ಮಾದರಿಯಾಗಿದೆ. ಈ 2022ರ ಆಡಿ ಎ8 ಎಲ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಆಸಕ್ತ ಗ್ರಾಹಕರು ಹೊಸ ಆಡಿ ಎ8 ಎಲ್ ಕಾರಿನ ಖರೀದಿಗಾಗಿ ರೂ.10 ಲಕ್ಷದ ಟೋಕನ್ ಮೊತ್ತವನ್ನು ಪಾವತಿಸಿಬೇಕಾಗುತ್ತದೆ. ನವೀಕರಿಸಿದ 2022ರ ಮಾದರಿಯು ಫೆಬ್ರವರಿ 2022 ರಲ್ಲೇ ಜಾಗತಿಕವಾಗಿ ಪಾದಾರ್ಪಣೆ ಮಾಡಿತು ಮತ್ತು ಕಾರು ಇಷ್ಟು ಬೇಗ ಭಾರತಕ್ಕೆ ಬರಲಿದೆ ಎಂಬುದು ಖಂಡಿತವಾಗಿಯೂ ಗಮನಾರ್ಹವಾಗಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಎ8 ಎಲ್ ಸೆಡಾನ್ ಕಾರಿನಲ್ಲಿ ದೊಡ್ಡದಾದ ಗ್ರಿಲ್ ಮತ್ತು ಹೆಚ್ಚು ಅಗ್ರೇಸಿವ್ ಮೆಶ್ ಮಾದರಿ ಮತ್ತು ದಪ್ಪವಾದ ಬಂಪರ್ ಅನ್ನು ಒಳಗೊಂಡಿರುವ ಸ್ಪೋರ್ಟಿ ನಿಲುವುಗಳೊಂದಿಗೆ ಬರುತ್ತದೆ. ಗ್ರಿಲ್ ದಪ್ಪ ಕ್ರೋಮ್‌ನಿಂದ ಸುತ್ತುವರಿದಿದೆ ಮತ್ತು ಕ್ರೋಮ್ ಮೆಶ್ ಮಾದರಿಯಲ್ಲಿಯೂ ನೀಡಲಾಗುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಐಷಾರಾಮಿ ಸೆಡಾನ್ ಕಾರು ದಪ್ಪ ಕ್ರೋಮ್ ಸ್ಟ್ರಿಪ್ ಇದೆ, ಅದು ಫಾಗ್ ಲ್ಯಾಂಪ್ ಹೌಸಿಂಗ್ ಅನ್ನು ಸುತ್ತುವರೆದಿದೆ ಮತ್ತು ಮುಂಭಾಗದ ಬಂಪರ್‌ನ ಅಗಲದಲ್ಲಿ ಚಲಿಸುತ್ತದೆ. ವಾಹನವು ದೊಡ್ಡದಾದ ಡಿಜಿಟಲ್ ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ OLED ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಆಡಿ ಎ8 ಎಲ್ ಕಾರು ಒಳಭಾಗದಲ್ಲಿ ನವೀಕರಿಸಲಾಗಿದೆ. ಕಾರಿನ ಮುಂಭಾಗದಲ್ಲಿ ರಡು ಡಿಸ್ಪ್ಲೇಗಳೊಂದಿಗೆ ನವೀಕರಿಸಿದ ಡ್ಯಾಶ್ಬೋರ್ಡ್ ಅನ್ನು 10.1-ಇಂಚಿನ ಮತ್ತು 8.6-ಇಂಚಿನ ಗಾತ್ರದಲ್ಲಿ ಹೆಡ್-ಅಪ್ ಡಿಸ್ ಪ್ಲೇ ಆಯ್ಜೆಯನ್ನು ಪಡೆಯುತ್ತದೆ. ಕಾರು ಸಂಪೂರ್ಣ ಡಿಜಿಟಲ್ ವರ್ಚುವಲ್ ಕ್ಲಸ್ಟರ್ ಮತ್ತು ಸ್ಪೋರ್ಟಿ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್ ಅನ್ನು ಸಹ ಪಡೆಯುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಸಂಗೀತ ಪ್ರಿಯರಿಗಾಗಿ, ಐಷಾರಾಮಿ ಸೆಡಾನ್ 23-ಸ್ಪೀಕರ್ ಬ್ಯಾಂಗ್ ಮತ್ತು ಒಲುಫ್ಸೆನ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ. ಇದು ನಾಲ್ಕು-ಝೋನ್ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ, ಮ್ಯಾಟ್ರಿಕ್ಸ್ LED ಲ್ಯಾಂಪ್ ಮತ್ತು ಕನೆಕ್ಟಿವಿಟಿ ಕಾರ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ನೀಡುವುದನ್ನು ಮುಂದುವರಿಸುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹಿಂಭಾಗದ ವಿಭಾಗಕ್ಕೆ ಸಂಬಂಧಿಸಿದಂತೆ, ಇದು ವಿಶಾಲವಾಗಿದೆ ಮತ್ತು ಕೆಲವು ಉನ್ನತ-ಮಟ್ಟದ ಸೌಕರ್ಯದ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಬರುತ್ತದೆ. ಎ8 ಎಲ್ ಹಲವಾರು ಹೊಂದಾಣಿಕೆ ಆಯ್ಕೆಗಳೊಂದಿಗೆ ವಿಶ್ರಾಂತಿ ಸೀಟ್ ಗಳೊಂದಿಗೆ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನ ಹಿಂಭಾಗದಲ್ಲಿ ಫುಟ್‌ರೆಸ್ಟ್‌ನೊಂದಿಗೆ ಬರುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಎ8 ಎಲ್ ಕಾರಿನಲ್ಲಿ 3.0-ಲೀಟರ್ TFSI ಎಂಜಿನ್‌ನಿಂದ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಚಾಲಿತವಾಗುತ್ತದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 540 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಐಕಾನಿಕ್ ಆಲ್-ವೀಲ್ ಡ್ರೈವ್ ಸಿಸ್ಟಮ್ ಅನ್ನು ಒಳಗೊಂದಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಇದರೊಂದಿಗೆ ಪ್ರಿಡಿಕ್ಟಿವ್ ಏರ್ ಸಸ್ಪೆಂಕ್ಷಬ್ ಅನ್ನು ಸಹ ಪಡೆಯುತ್ತದೆ. ಈ ಐಷಾರಾಮಿ ಸೆಡಾನ್ ಕಾರಿನಲ್ಲಿ ರಿಕ್ಲೈನರ್, ಫೂಟ್ ಮಸಾಜರ್ ಮತ್ತು ಹಲವಾರು ಇತರ ಸ್ಟ್ಯಾಂಡ್-ಔಟ್ ವೈಶಿಷ್ಟ್ಯಗಳೊಂದಿಗೆ ಹಿಂಭಾಗದ ವಿಶ್ರಾಂತಿ ಪ್ಯಾಕೇಜ್ ಸೇರಿದಂತೆ ಹಲವಾರು ಕಸ್ಟಮೈಸ್ ಪ್ಯಾಕೇಜ್‌ಗಳನ್ನು ಆಡಿ ನೀಡುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಆಡಿ ಹೊಸ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್ ಕಾರ್ ಅನ್ನು ಏಪ್ರಿಲ್ ತಿಂಗಳಿನಲ್ಲಿ ಅನಾವರಣಗೊಳಿಸಿತ್ತು ಈ ಹೊಸ ಆಡಿ ಅರ್ಬನ್‌ಸ್ಪಿಯರ್ ಮೂಲಭೂತವಾಗಿ ಆಟೋನೊಮಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾನ್ಸೆಪ್ಟ್ ಆಗಿದೆ. ಹೊಸ ಆಡಿ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್, ಸ್ಕೈಸ್ಪಿಯರ್ ಕೂಪ್ ಮತ್ತು ಗ್ರ್ಯಾಂಡ್‌ಸ್ಪಿಯರ್ ಸೆಡಾನ್ ಕಾನ್ಸೆಪ್ಟ್ ಸರಣಿಯನ್ನು ಸೇರುತ್ತದೆ. ಭವಿಷ್ಯದಲ್ಲಿ ಆಡಿ ಕಂಪನಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಕಾನ್ಸೆಪ್ಟ್ ಮಾದರಿಯಿಂದ ಉತ್ತರ ಸಿಗುತ್ತದೆ. ವಿನ್ಯಾಸ ಭಾಷೆಯು ಯಾವಾಗಲೂ 'ಭವಿಷ್ಯದ ಪ್ರಗತಿಶೀಲ ಪ್ರೀಮಿಯಂ ಚಲನಶೀಲತೆಯನ್ನು ವ್ಯಾಖ್ಯಾನಿಸುತ್ತದೆ' ಎಂದು ಜರ್ಮನ್ ಬ್ರ್ಯಾಂಡ್ ಹೇಳುತ್ತದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಬೀಜಿಂಗ್ ಆಟೋ ಶೋದಲ್ಲಿ ಆಡಿ ಅರ್ಬನ್‌ಸ್ಪಿಯರ್ ತನ್ನ ಚೊಚ್ಚಲ ಪ್ರದರ್ಶನವನ್ನು ರದ್ದುಗೊಳಿಸಿತು. ಆಡಿ ಅರ್ಬನ್‌ಸ್ಪಿಯರ್ ಕಾನ್ಸೆಪ್ಟ್ 5500 ಎಂಎಂ ಉದ್ದ ಮತ್ತು 1780 ಎಂಎಂ ಎತ್ತರವನ್ನು ಹೊಂದಿದೆ, ಇನ್ನು ಇದು 2000 ಮೀಟರ್‌ಗಿಂತಲೂ ಹೆಚ್ಚು ಅಗಲವಾಗಿರುತ್ತದೆ. ಮುಂಭಾಗದ ತುದಿಯು ದೊಡ್ಡ ಸಿಂಗಲ್‌ಫ್ರೇಮ್ ಗ್ರಿಲ್‌ನಿಂದ ಪ್ರಾಬಲ್ಯ ಹೊಂದಿದೆ, ಅದರ ಹಿಂದೆ ಡಿಜಿಟಲ್ ಲೈಟ್ ಹೊಂದಿದೆ. ಸಿಂಗಲ್ಫ್ರೇಮ್ನ ಮೇಲಿನ ಮತ್ತು ಕೆಳಗಿನ ಅಂಚುಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇನ್ನು ಲೈಟಿಂಗ್ ಎಲ್ಇಡಿಗಳಿಂದ ಲಂಬ ಸಂಪರ್ಕಗಳನ್ನು ರಚಿಸಲಾಗಿದೆ.

ಐಷಾರಾಮಿ 2022ರ ಆಡಿ ಎ8 ಎಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2022ರ ಆಡಿ ಎ8 ಎಲ್ ಐಷಾರಾಮಿ ಸೆಡಾನ್ ಕಾರು ಬಿಡುಗಡೆ ದಿನಾಂಕ ಬಹಿರಂಗವಾಗಿವೆ. ಈ ಐಷಾರಾಮಿ ಸೆಡಾನ್ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಹೊಸ ಆಡಿ ಎ8 ಎಲ್ ಕಾರು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.\

Most Read Articles

Kannada
Read more on ಆಡಿ audi
English summary
New 2022 audi a8 l india launch date revealed details
Story first published: Monday, June 13, 2022, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X