ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ಸೊನೆಟ್ ಎಕ್ಸ್-ಲೈನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

Recommended Video

Toyota Urban Cruiser Hyryder Kannada Walkaround | ಹೈಬ್ರಿಡ್ ಎಂಜಿನ್, ಗೇರ್ ಬಾಕ್ಸ್, ವೈಶಿಷ್ಟ್ಯತೆಗಳು..

ಈ ಹೊಸ ಕಿಯಾ ಸೊನೆಟ್ ಎಕ್ಸ್-ಲೈನ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.39 ಲಕ್ಷವಾಗಿದೆ. ಹೊಸ ಕಿಯಾ ಸೊನೆಟ್ ಎಕ್ಸ್-ಲೈನ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಎಸ್‍ಯುವಿಯ ಟಾಪ್-ಸ್ಪೆಕ್ GTX+ ರೂಪಾಂತರವನ್ನು ಆಧರಿಸಿದೆ. ಸೊನೆಟ್ ಎಕ್ಸ್-ಲೈನ್ ಸ್ಟ್ಯಾಂಡರ್ಡ್ ಮಾದರಿಯೊಂದಿಗೆ ತನ್ನನ್ನು ಪ್ರತ್ಯೇಕಿಸಲು ಕೆಲವು ನವೀಕರಣಗಳನ್ನು ಪಡೆದುಕೊಂಡಿದೆ, ಕಿಯಾ ಸೋನೆಟ್ ಎಕ್ಸ್ ಲೈನ್‌ನ ಅತಿದೊಡ್ಡ ಕಾಸ್ಮೆಟಿಕ್ ಬದಲಾವಣೆಯು ಎಸ್‌ಯುವಿಯ ಮ್ಯಾಟ್ ಗ್ರೇ ಪೇಂಟ್ ಸ್ಕೀಮ್‌ನ ರೂಪದಲ್ಲಿ ಬರುತ್ತದೆ, ಇದು ಭಾರತದಲ್ಲಿ ಸಬ್ -4-ಮೀಟರ್ ಎಸ್‌ಯುವಿಗೆ ಹೊಸ ಬಣ್ಣದ ಆಯ್ಕೆಯಾಗಿದೆ. ಈ ಹೊಸ ಸೊನೆಟ್ ಎಕ್ಸ್ ಲೈನ್ ಎಸ್‍ಯುವಿಯಲ್ಲಿ 'ಟೈಗರ್ ನೋಸ್' ಗ್ರಿಲ್, ಮುಂಭಾಗ ಮತ್ತು ಹಿಂಭಾಗದ ಸ್ಕೀಡ್ ಪ್ಲೇಟ್‌ಗಳು ಮತ್ತು ORVM ಗಳು ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಸ್ಕಿಡ್ ಪ್ಲೇಟ್‌ಗಳು ಡಾರ್ಕ್ ಹೈಪರ್ ಮೆಟಲ್ ಹೈಲೈಟ್‌ಗಳನ್ನು ಒಳಗೊಂಡಿರುವಾಗ ಫಾಗ್ ಲ್ಯಾಂಪ್ ಸುತ್ತುವರೆದಿರುವ ಡಾರ್ಕ್ ಕ್ರೋಮ್ ಅಸ್ಸೆಟ್ ಅಳಿವೆ. ಕಿಯಾ ಸೊನೆಟ್ ಎಕ್ಸ್ ಲೈನ್ 16-ಇಂಚಿನ ಕ್ರಿಸ್ಟಲ್ ಕಟ್, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಕಿಯಾ ಸೊನೆಟ್ ಎಕ್ಸ್ ಲೈನ್ ರೂಪಾಂತರವು ಸಿಲ್ವರ್ ಬ್ರೇಕ್ ಕ್ಯಾಲಿಪರ್‌ಗಳನ್ನು ಪಡೆಯುತ್ತದೆ ಮತ್ತು ಶಾರ್ಕ್ ಫಿನ್ ಆಂಟೆನಾ ಮತ್ತು ಹೊಸ ಎಕ್ಸ್ ಲೈನ್ ಬ್ಯಾಡ್ಜಿಂಗ್ ಎರಡಕ್ಕೂ ಮ್ಯಾಟ್ ಫಿನಿಶ್ ನೀಡುತ್ತದೆ. ಒಟ್ಟಾರೆ ಕಿಯಾ ಸೊನೆಟ್ ಎಕ್ಸ್ ಲೈನ್ ವಿನ್ಯಾಸವು ಸ್ಪೋರ್ಟಿ ಲುಕ್ ನೊಂದಿಗೆ ಆಕರ್ಷಕವಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಕಿಯಾ ಸೊನೆಟ್ ಎಕ್ಸ್ ಲೈನ್ ಒಳಭಾಗದಲ್ಲಿ ಹೊಸ ಡ್ಯುಯಲ್-ಟೋನ್ ಸಿಲ್ವರ್ ಸೇಜ್ ಇಂಟೀರಿಯರ್ ಥೀಮ್‌ನಿಂದ ನಿಮ್ಮನ್ನು ಸ್ವಾಗತಿಸಲಾಗುತ್ತದೆ. ಲೆಥೆರೆಟ್ ಸೀಟ್‌ಗಳು ಮತ್ತು ಎಕ್ಸ್ ಲೈನ್ ಲೋಗೊಗಳನ್ನು ಒಳಗೊಂಡಿರುತ್ತವೆ ಆದರೆ ಹೆಡ್‌ಲೈನರ್ ಈಗ ಬ್ಲ್ಯಾಕ್ ಬಣ್ಣದಲ್ಲಿದೆ. ಲೆದರ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಹೊಸ ಕಿಯಾ ಸೊನೆಟ್ ಎಕ್ಸ್-ಲೈನ್ ಅನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಪವರ್‌ಪ್ಲಾಂಟ್ ಅಥವಾ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಕಿಯಾ ಸೋನ್ ಎಕ್ಸ್ ಲೈನ್‌ನಲ್ಲಿರುವ ಪೆಟ್ರೋಲ್ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಇನ್ನು ಡೀಸೆಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಹೊಸ ಸೊನೆಟ್ ಎಕ್ಸ್ ಲೈನ್ ಬಿಡುಗಡೆ ಸಮಾರಂಭದಲ್ಲಿ ಕಿಯಾ ಇಂಡಿಯಾದ ಮುಖ್ಯ ಮಾರಾಟ ಅಧಿಕಾರಿ ಮ್ಯುಂಗ್-ಸಿಕ್ ಸೊಹ್ನ್ ಅವರು ಮಾತನಾಡಿ, ನಾವು ಕಿಯಾ ಇಂಡಿಯಾದಲ್ಲಿ ಅತ್ಯಾಕರ್ಷಕ ಉತ್ಪನ್ನಗಳ ಮೂಲಕ ಆಧುನಿಕ ಯುಗದ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಸೊನೆಟ್ ಎಕ್ಸ್-ಲೈನ್ ನಾವು ನಮ್ಮ ವಿನ್ಯಾಸ ಕೌಶಲ್ಯವನ್ನು ಪ್ರದರ್ಶಿಸಿದ್ದೇವೆ ಮತ್ತು ಅತ್ಯಾಕರ್ಷಕ ಹೊರಭಾಗಗಳು ಮತ್ತು ಶಕ್ತಿಯುತ ಒಳಾಂಗಣಗಳಿಗೆ ನಿಜವಾಗಿಯೂ ಪೂರಕವಾಗಿರುವ ಸೊಗಸಾದ ಮತ್ತು ವಿಭಿನ್ನ-ಕಾಣುವ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ನೀಡಿದ್ದೇವೆ. ಎಕ್ಸ್-ಲೈನ್ ಮೊಬೈಲ್, ಯುವಜನರ ನಡುವೆ ಬ್ರ್ಯಾಂಡ್‌ನ ಪ್ರೊಫೈಲ್ ಅನ್ನು ಉನ್ನತೀಕರಿಸುತ್ತದೆ ಎಂದು ನಮಗೆ ಖಚಿತವಾಗಿದೆ. ಈ ಹಬ್ಬದ ಸೀಸನ್ ನಲ್ಲಿ ಪ್ರೀಮಿಯಂ ಮತ್ತು ವಿಶೇಷವಾದ ಎಸ್‍ಯುವಿಯನ್ನು ಬಯಸುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಇನ್ನು ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಸೆಲ್ಟೋಸ್, ಕಾರ್ನಿವಲ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಈ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕಿಯಾ ಇಂಡಿಯಾ ಇದೀಗ ಸೊನೆಟ್ ಎಕ್ಸ್-ಲೈನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಕಿಯಾ ಸೊನೆಟ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ. ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಸ್ಪೋರ್ಟಿ ಲುಕ್‍‍‍ನಲ್ಲಿ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಿಯಾ ಸೊನೆಟ್ ಎಕ್ಸ್ ಲೈನ್ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಹೊಸ ಮಾದರಿಯು ಸ್ಪೋರ್ಟಿ ಲುಕ್ ನೊಂದಿಗೆ ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯಬಹುದು. ಅಲ್ಲದೇ ಮುಂದೆ ಹಬ್ಬದ ಸೀಸನ್ ಇರುವುದರಿಂದ ಈ ಮಾದರಿಯು ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡಬಹುದು.

Most Read Articles

Kannada
English summary
New kia sonet x line launched price look interior update details
Story first published: Thursday, September 1, 2022, 13:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X