India
YouTube

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಸ್ಪೋರ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗಾಗಿ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಅಧಿಕೃತ ಬಿಡುಗಡೆಗೂ ಮುನ್ನವೇ ಕಂಪನಿಯು ಬೆಲೆ ಮಾಹಿತಿ ಹಂಚಿಕೊಂಡಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.64 ಕೋಟಿ ಬೆಲೆ ಹೊಂದಿರಲಿದೆ. ಹೊಸ ಕಾರು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಡೈನಾಮಿಕ್ ಎಸ್‌ಇ, ಡೈನಾಮಿಕ್ ಹೆಚ್ಎಸ್ಇ, ಆಟೋಬಯೋಗ್ರಫಿ ಮತ್ತು ಫಸ್ಟ್ ಎಡಿಷನ್ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ರೇಂಜ್ ರೋವರ್ ಸ್ಪೋರ್ಟ್ ಕಾರಿನ ಆರಂಭಿಕ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 1.64 ಕೋಟಿ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 1.84 ಕೋಟಿ ಬೆಲೆ ಹೊಂದಿರಲಿದ್ದು, ಹೊಸ ಕಾರು ಮಾದರಿಯು ಮುಂಬರುವ ನವೆಂಬರ್ ವೇಳೆಗೆ ಶೋರೂಂಗಳಿಗೆ ತಲುಪಲಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಹೊಸ ಕಾರು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಿಂದ ಭಾರತಕ್ಕೆ ಆಮದುಗೊಳ್ಳಲಿದ್ದು, ಹೊಸ ಕಾರು ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಎಂಜಿನ್ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಸುಧಾರಣೆಗೊಂಡಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

2022ರ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಸುಧಾರಿತ ಸ್ಟೈಲಿಂಗ್, ಸುಧಾರಿತ ಒಳಾಂಗಣ ಮತ್ತು ಪವರ್ ಫುಲ್ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದ್ದು, ಪ್ರಪಂಚದ ಅತ್ಯಂತ ಅಪೇಕ್ಷಣೀಯ ಆಧುನಿಕ ಐಷಾರಾಮಿ ಕಾರು ಮಾದರಿಗಳಲ್ಲಿ ಒಂದಾಗಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ರೇಂಜ್ ರೋವರ್ ಸ್ಪೋರ್ಟ್ ಅನ್ನು ಮೊದಲ ಬಾರಿಗೆ 2005ರಲ್ಲಿ ಪರಿಚಯಿಸಿದ್ದ ಲ್ಯಾಂಡ್ ರೋವರ್ ಕಂಪನಿಯು ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಇದೀಗ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯಲ್ಲಿ ಚಿಕ್ಕ ಓವರ್‌ಹ್ಯಾಂಗ್‌ಗಳು, ಬೋಲ್ಡ್ ಫ್ರಂಟ್ ಎಂಡ್ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಕಡಿದಾದ ಮೆರುಗುಗೊಳಿಸುವಿಕೆಯು ಹಿಂದಿನ ಪುನರಾವರ್ತನೆಯಿಂದ ಸಾಗಿಸಲ್ಪಟ್ಟ ಕೆಲವು ಟ್ರೇಡ್‌ಮಾರ್ಕ್ ರೇಂಜ್ ರೋವರ್ ಸ್ಪೋರ್ಟ್ ಸ್ಟೈಲಿಂಗ್‌ಗಳಾಗಿವೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಈ ಎಸ್‍ಯುವಿಯ ಹೊರಭಾಗವನ್ನು ಸ್ಟೆಲ್ತ್ ತರಹದ ಮುಂಭಾಗದ ಗ್ರಿಲ್ ಮತ್ತು ಡಿಜಿಟಲ್ ಎಲ್ಇಡಿ ಲೈಟಿಂಗ್ ಯುನಿಟ್ ಗಳೊಂದಿಗೆ ವಿವರಿಸಲಾಗಿದ್ದು, ಇದು ವಿಶಿಷ್ಟವಾದ ಡೇಟೈಮ್ ರನ್ನಿಂಗ್ ಲೈಟ್ (ಡಿಆರ್ಎಲ್) ಮತ್ತು ಸ್ಲಿಕ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ರೇಂಜ್ ರೋವರ್ ಸ್ಪೋರ್ಟ್ ಹಿಂಬದಿಯಲ್ಲಿರುವ ಬ್ರಾಂಡ್ ಅಕ್ಷರಗಳು ಸಹ ಹೊಸ ವೈಶಿಷ್ಟ್ಯದೊಂದಿಗೆ ಟೈಲ್‌ಗೇಟ್‌ನಿಂದ ಹಿಂಭಾಗವನ್ನು ಆವರಿಸಿದ್ದು, ಇದು ಅಸಾಮಾನ್ಯ ಎಲ್ಇಡಿ ಲೈಟ್, ಗ್ರಾಫಿಕ್ಸ್ ಸೌಲಭ್ಯಗಳು ರೇಂಜ್ ರೋವರ್ ಮಾದರಿಗೆ ಮತ್ತಷ್ಟು ಮೆರಗು ತಂದಿವೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಹೊಸದಾದ ಕಡಿಮೆ ಫೆಂಡರ್‌ಗಳು ಮತ್ತು ರೇಂಜ್ ರೋವರ್‌ ಸ್ಪಾಯ್ಲರ್ ವಿಸ್ತರಿಸಲು ಅನುವು ಮಾಡಿಕೊಟ್ಟಿದ್ದು, ಬೋಲ್ಡ್ ಬಾಹ್ಯ ಶೈಲಿಯಲ್ಲಿರುವಂತೆ ಒಳಭಾಗದಲ್ಲೂ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಅತ್ಯುತ್ತಮ ಫೀಚರ್ಸ್‌ಗಳನ್ನು ಜೋಡಿಸಲಾಗಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಹೊಸ ಎಸ್‍ಯುವಿಯಲ್ಲಿ 13.7-ಇಂಚಿನ ಡ್ರೈವರ್ ಡಿಸ್‌ಪ್ಲೇ ಹೈ-ಡೆಫಿನಿಷನ್ ಗ್ರಾಫಿಕ್ಸ್‌ನೊಂದಿಗೆ ಸಂವಾದಾತ್ಮಕವಾಗಿದ್ದು ಅದು ಪಿವಿ ಸಿಸ್ಟಮ್ ಅನ್ನು ಪುನರಾವರ್ತಿಸುತ್ತದೆ ಮತ್ತು ಕಸ್ಟಮೈಸ್ ಗೊಳಿಸಬಹುದಾಗಿದೆ. ಅಲೆಕ್ಸಾವನ್ನು ಇನ್ಫೋಟೈನ್‌ಮೆಂಟ್‌ನಲ್ಲಿ ಅಳವಡಿಸಲಾಗಿದೆ ಮತ್ತು "ಅಲೆಕ್ಸಾ" ಎಂದು ಹೇಳುವ ಮೂಲಕ ಅಥವಾ ಟಚ್‌ಸ್ಕ್ರೀನ್‌ನಲ್ಲಿರುವ ಅಲೆಕ್ಸಾ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದು.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಈ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಎರಡನ್ನೂ ಸ್ಟ್ಯಾಂಡರ್ಡ್ ಅಳವಡಿಸಲಾಗಿದೆ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸಹ ಇದೆ. ರೇಂಜ್ ರೋವರ್ ಹೊಸ ಮಾದರಿಯಲ್ಲಿ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಸಿದ್ಧಪಡಿಸಲಾದ ಸ್ಪರ್ಶ ಮತ್ತು ಹಗುರವಾದ ಅಲ್ಟ್ರಾಫ್ಯಾಬ್ರಿಕ್ಸ್ ಪ್ರೀಮಿಯಂ ಸಮರ್ಥನೀಯ ವಸ್ತುಗಳನ್ನು ಬಳಸಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಜೊತೆಗೆ ಡ್ಯಾಶ್‌ಬೋರ್ಡ್ ವಿಸ್ತರಿಸುವ ಆಯ್ಕೆಯನ್ನು ಸಹ ನೀಡಲಾಗಿದೆ ಮತ್ತು ಡೋರ್ ವಿವರಗಳನ್ನು ಸಹ ನೀಡಲಾಗುತ್ತದೆ. ವಿಂಡ್ಸರ್ ಅಥವಾ ಮೃದುವಾದ ಅನಿಲಿನ್ ಲೆದರ್ ಆಯ್ಕೆಗಳು ಆಯ್ಕೆಯಾಗಿರುತ್ತದೆ. ಕ್ಯಾಬಿನ್ ಅನ್ನು ಹೊಸ ಮೂನ್‌ಲೈಟ್ ಕ್ರೋಮ್ ಸಜ್ಜುಗೊಳಿಸಲಾಗಿದೆ, ಆದರೆ 29 ಮೆರಿಡಿಯನ್ ಆಡಿಯೊ ಸ್ಪೀಕರ್‌ಗಳನ್ನು ಹಿಂಭಾಗದ ಡೋರುಗಳ ಹಿಂದೆ ಮತ್ತು ಹೆಡ್‌ರೆಸ್ಟ್‌ಗಳಲ್ಲಿ ಮರೆಮಾಡಲಾಗಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಇನ್ನು ಹೊಸ ರೇಂಜ್ ರೋವರ್ ಸ್ಪೋರ್ಟ್ ಎಲೆಕ್ಟ್ರಿಫೈಡ್ ಪವರ್‌ಟ್ರೇನ್‌ಗಳ ಒಳಗೊಂಡಿದ್ದು, ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನವನ್ನು ಬಳಸಿಕೊಂಡು ಆರು-ಸಿಲಿಂಡರ್ ಇಂಜಿನಿಯಮ್ ಹೊಂದಿರುವ 3.0 ಲೀಟರ್ ಡೀಸೆಲ್ ಎಂಜಿನ್ ಮತ್ತು 3.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮತ್ತು ಬಿಎಂಡಬ್ಲ್ಯು ಕಂಪನಿಯಿಂದ ಎರವಲು ಪಡೆದುಕೊಳ್ಳಲಾದ 4.0 ಲೀಟರ್ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಆಯ್ಕೆ ನೀಡಲಾಗಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಹೊಸ ರೇಂಜ್ ರೋವರ್ ಸ್ಪೋರ್ಟ್ P510e PHEV ಲ್ಯಾಂಡ್ ರೋವರ್‌ನ 3.0-ಲೀಟರ್ ಆರು-ಸಿಲಿಂಡರ್ ಇಂಜಿನಿಯಮ್ ಪೆಟ್ರೋಲ್ ಎಂಜಿನ್‌ನಿಂದ 105kW ಎಲೆಕ್ಟ್ರಿಕ್ ಮೋಟಾರ್ ಮತ್ತು 38.2kWh ಬ್ಯಾಟರಿ ಒಳಗೊಂಡಿದ್ದು, ಪೆಟ್ರೋಲ್ ಮಾದರಿಯು 394 ಬಿಎಚ್‌ಪಿ ಮತ್ತು 434 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಡೀಸೆಲ್ ಮಾದರಿಯು ಸಹ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 346 ಬಿಎಚ್‌ಪಿ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

4.0 ಲೀಟರ್ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಮಾದರಿಯು 523 ಬಿಎಚ್‌ಪಿ ಮತ್ತು 750 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 4.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳಲಿವೆ. ಬರೋಬ್ಬರಿ ಎರಡು ಟನ್ ತೂಕ ಹೊಂದಿರುವ ಹೊಸ ಕಾರು ಮಾದರಿಗಾಗಿ ಸುಧಾರಿತ ಎಂಜಿನ್ ಸಾಕಷ್ಟು ಸಹಕಾರಿಯಾಗಲಿದ್ದು, ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ನೀಡಲಾಗಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಹಾಗೆಯೇ ಹೊಸ ರೇಂಜ್ ರೋವರ್ ಸ್ಪೋರ್ಟ್ ಹಿಂದಿನ ರೇಂಜ್ ರೋವರ್ ಸ್ಪೋರ್ಟ್‌ಗಿಂತಲೂ 35 ಪ್ರತಿಶತದಷ್ಟು ಹೆಚ್ಚಿನ ಬಿಗಿತವನ್ನು ಒದಗಿಸಲಿದ್ದು,ಹೊಸ ಕಾರು ಮಾದರಿಯು 4,946 ಎಂಎಂ ಉದ್ದ, 2,209 ಅಗಲ, 1,820 ಎತ್ತರ, 2,997 ಎಂಎಂ ವ್ಹೀಲ್‌ಬೆಸ್ ಮತ್ತು 216 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಆಫ್ ರೋಡಿಂಗ್ ಸಂಚಾರದ ಸಮಯದಲ್ಲಿ ಚಾಸಿಸ್‌ಗೆ ಆಗಬಹುದಾದ ಹಾನಿ ತಪ್ಪಿಸಲು ಕಂಪನಿಯು ಹೊಸ ಕಾರಿನ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಾಣಿಕೆ ಸೌಲಭ್ಯ ನೀಡಿದ್ದು, ಸಾಮಾನ್ಯ ರಸ್ತೆಗಳಲ್ಲಿ ಸಂಚಿಸುವಾಗ 216 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಸೌಲಭ್ಯವನ್ನು 281 ಎಂಎಂ ತನಕವು ಎತ್ತರವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಬಹುನೀರಿಕ್ಷಿತ 2022ರ ರೇಂಜ್ ರೋವರ್ ಸ್ಪೋರ್ಟ್ ಬೆಲೆ ಮಾಹಿತಿ ಹಂಚಿಕೊಂಡ ಲ್ಯಾಂಡ್ ರೋವರ್

ಇದರೊಂದಿಗೆ ಹೊಸ ಕಾರಿನಲ್ಲಿ ಟಾರ್ಕ್ ವೆಕ್ಟರಿಂಗ್‌ನೊಂದಿಗೆ ಎಲೆಕ್ಟ್ರಾನಿಕ್ ಆಕ್ಟಿವ್ ಡಿಫರೆನ್ಷಿಯಲ್ ಅನ್ನು ಆನ್ ಮತ್ತು ಆಫ್ ರೋಡ್‌ಗಳಿಗೆ ಹೊಂದಿಸಲಾಗಿದೆ. ARS-CoV-2 ವೈರಸ್ ಸೇರಿದಂತೆ ವಾಸನೆ, ಬ್ಯಾಕ್ಟೀರಿಯಾ ಮತ್ತು ಅಲರ್ಜಿನ್‌ಗಳನ್ನು ಕಡಿಮೆ ಮಾಡಲು PM2.5 ಶೋಧನೆ ಮತ್ತು ನ್ಯಾನೊ ಎಕ್ಸ್ ತಂತ್ರಜ್ಞಾನದೊಂದಿಗೆ ಮುಂದಿನ ಪೀಳಿಗೆಯ ಕ್ಯಾಬಿನ್ ಏರ್ ಪ್ಯೂರಿಫಿಕೇಶನ್ ಪ್ರೊ ಅನ್ನು ಸಹ ಪಡೆಯುತ್ತದೆ.

Most Read Articles

Kannada
English summary
New range rover sport india price revealed starts at rs 1 64 crore details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X