ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವೈಶಿಷ್ಟ್ಯಗಳ ಮಾಹಿತಿ...

ಕುಶಾಕ್ ಎಸ್‌ಯುವಿ ಭಾರತದಲ್ಲಿ ಸ್ಕೋಡಾಗೆ ಗೇಮ್ ಚೇಂಜರ್ ಆಗಿದ್ದು, ಇದೇ ಮಾದರಿಯಿಂದ ಕಂಪನಿಗೆ ಮತ್ತಷ್ಟು ಲಾಭ ಹೆಚ್ಚಾಸಿಕೊಳ್ಳಲು ಹೊಸ ಆವೃತ್ತಿಯೊಂದಿಗೆ ಬಂದಿದ್ದಾರೆ. ಈಗ ಹೇಗೋ ಹಬ್ಬದ ಸೀಸನ್ ಕೂಡ ಇರುವುದರಿಂದ ಮಾರಾಟದ ಲಾಭ ಪಡೆಯಲು ಕುಶಾಕ್ ಎಸ್‌ಯುವಿಯ ವಾರ್ಷಿಕೋತ್ಸವ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಈಗ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ವಿಶೇಷ ಆವೃತ್ತಿಯ ಎಸ್‌ಯುವಿಯ ಬೆಲೆಗಳು ಮತ್ತು ಇತರ ವಿವರಗಳನ್ನು ಕೂಡ ಬಹಿರಂಗಪಡಿಸಲಾಗಿದೆ. ಇದರ ಬೆಲೆ ರೂ. 15.59 ಲಕ್ಷ. ಇದ್ದು, ಪ್ರಸ್ತುತ ಸ್ಟೈಲ್ 1.0 ಮತ್ತು ಸ್ಟೈಲ್ 1.5 ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...
Engine Kushaq Style Kushaq Anniversary Edition Premium
1-litre TSI MT ₹15.29 Lakh ₹15.59 Lakh ₹30,000
1-litre TSI AT ₹16.99 Lakh ₹17.29 Lakh ₹30,000
1.5-litre TSI MT ₹17.19 Lakh ₹17.49 Lakh ₹30,000
1.5-litre TSI DSG ₹18.79 Lakh ₹19.09 Lakh ₹30,000
ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಸ್ಟೈಲ್ 1.0 ಬೆಲೆ ರೂ. 15.59 ಲಕ್ಷವಾದರೆ (ಎಕ್ಸ್ ಶೋ ರೂಂ, ಭಾರತ) ಸ್ಟೈಲ್ 1.5 ಬೆಲೆ ರೂ. 19.09 ಲಕ್ಷವಿದೆ (ಎಕ್ಸ್ ಶೋ ರೂಂ, ಭಾರತ). ಹೊಸ 'ಕುಶಾಕ್ ಆನಿವರ್ಸರಿ ಎಡಿಷನ್' ದೇಶೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದ್ದು, ಅದರ ಸ್ಟ್ಯಾಂಡರ್ಡ್ ಮಾದರಿಗೆ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಬಹುಮಟ್ಟಿಗೆ ಒಂದೇ ಆಗಿರುತ್ತದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಬಾಹ್ಯ ಬಣ್ಣವು ಹಿಂದಿನ ಮಾದರಿಯಂತೆಯೇ ಇರುತ್ತದೆ. ಆದರೆ ಅದರಲ್ಲಿ ಕೆಲವು ನವೀಕರಣಗಳನ್ನು ಗಮನಿಸಬಹುದು. ಕುಶಾಕ್ ಆನಿವರ್ಸರಿ ಎಡಿಷನ್ ಹೊಸ ಫೋಕ್ಸ್‌ವ್ಯಾಗನ್ ಟಿಗುವಾನ್ ಆನಿವರ್ಸರಿ ಎಡಿಷನ್‌ನಂತೆಯೇ ಸ್ಟೀರಿಂಗ್ ವೀಲ್‌ನಲ್ಲಿನ 'ಆನಿವರ್ಸರಿ ಎಡಿಷನ್' ಬ್ಯಾಡ್ಜ್ ಅನ್ನು ಹೊಂದಿದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಹಾಗೆಯೇ ಹೊಸ ಡೋರ್-ಎಡ್ಜ್ ಪ್ರೊಟೆಕ್ಟರ್‌ಗಳು, ಹೊಸ ಕಾಂಟ್ರಾಸ್ಟ್ ಸ್ಟಿಚಿಂಗ್ ಮತ್ತು ಕ್ರೋಮ್ ಅಪ್ಲಿಕ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಇನ್ನು ಮುಂಭಾಗದ ಬಂಪರ್, ಸನ್‌ರೂಫ್ ಮತ್ತು 17-ಇಂಚಿನ ಅಲಾಯ್ ವೀಲ್‌ಗಳಲ್ಲಿ ಫಾಕ್ಸ್ ಡಿಫ್ಯೂಸರ್ ಅಂಶವನ್ನು ಪಡೆದುಕೊಂಡಿದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಬೆಂಬಲದೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದಲ್ಲದೆ, ಇದು ಡಿಜಿಟಲ್ ಡ್ರೈವರ್ ಇನ್ಫರ್ಮೇಷನ್ ಡಿಸ್ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸಹ ಪಡೆದಿದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಹೊಸ ಕುಶಾಕ್ ಆನಿವರ್ಸರಿ ಆವೃತ್ತಿಯು ಟಾಪ್-ಸ್ಪೆಕ್ ಸ್ಟೈಲ್ 1.0 ಮತ್ತು 1.5 ಟ್ರಿಮ್‌ಗಳನ್ನು ಆಧರಿಸಿದೆ. ಆದ್ದರಿಂದ ಇದು 1.0-ಲೀಟರ್, ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

1.0-ಲೀಟರ್, ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 115 bhp ಪವರ್ ಮತ್ತು 175 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿರುತ್ತದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

1.5 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 150 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಜೊತೆಗೆ 7-ಸ್ಪೀಡ್ DSG ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಸುರಕ್ಷತೆಯ ದೃಷ್ಟಿಯಿಂದ ಇದು ಸುಧಾರಿತ ವೈಶಿಷ್ಟ್ಯಗಳನ್ನು ಸಹ ಪಡೆದಿದೆ. ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್‌ಗಳು, ಐಸೊಫಿಕ್ಸ್ ಸೀಟ್‌ಗಳು, ಆಟೋ ಹೆಡ್‌ಲೈಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದ್ದರೇ ಬ್ರೇಕ್‌ಗಳು ABD ಜೊತೆಗೆ EBD ದೊಂದಿಗೆ ಬರುತ್ತವೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಸ್ಕೋಡಾ ಕುಶಾಕ್‌ನ ವಾರ್ಷಿಕ ಆವೃತ್ತಿಯು ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ನಿಸ್ಸಾನ್ ಕಿಕ್ಸ್, ಎಂಜಿ ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಹಾಗಾಗಿ ತೀವ್ರ ಪೈಪೋಟಿ ಎದುರಿಸಬೇಕಾಗಿದೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಸದ್ಯ ಈ ಕಾರು ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವನ್ನು ಹೊಂದಿರುವುದರಿಂದ ಹೊಸ ಆವೃತ್ತಿ ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ. ಅಲ್ಲದೇ ಇವು ಸೀಮಿತ ಯೂನಿಟ್‌ಗಳಾಗಿ ಉತ್ಪಾದನೆಯಾಗುವುದರಿಂದ ಇವಕ್ಕೆ ಸಾಮಾನ್ಯವಾಗಿಯೇ ಮಾರಾಟ ಹೆಚ್ಚಾಗುವ ಸಾಧ್ಯತೆಗಳಿವೆ.

ಹೊಸ ಸ್ಕೋಡಾ ಕುಶಾಕ್ ಆನಿವರ್ಸರಿ ಎಡಿಷನ್ ಬಿಡುಗಡೆ...ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಮಾಹಿತಿ...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸ್ಕೋಡಾ ಕಂಪನಿಯ ಮಾರಾಟ ಹೆಚ್ಚಳಕ್ಕೆ ಕುಶಾಕ್ ಪ್ರಮುಖ ಕಾರಣ ಎಂದು ಹೇಳಬಹುದು. ಏಕೆಂದರೆ ಈ SUV ತನ್ನ ಆಧುನಿಕ ವಿನ್ಯಾಸ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಖರೀದಿದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಕುಶಾಕ್ ವಾರ್ಷಿಕೋತ್ಸವ ಆವೃತ್ತಿಯನ್ನು ಬಿಡುಗಡೆ ಮಾಡುವುದರಿಂದ ಉತ್ತಮ ಮಾರಾಟವನ್ನು ಪಡೆಯಲು ಸಹಾಯ ಮಾಡುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
New Skoda Kushak Anniversary Edition Launched Price Design Features Info
Story first published: Friday, October 21, 2022, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X