ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಫೋಕ್ಸ್‌ವ್ಯಾಗನ್ ತನ್ನ MEB (ಮಾಡ್ಯುಲರ್ ಇ-ಆಂಟ್ರಿಬ್ಸ್-ಬೌಕಾಸ್ಟೆನ್) ಪ್ಲಾಟ್‌ಫಾರ್ಮ್‌ ಅನ್ನು ಬಳಸಿಕೊಳ್ಳಲು ಮಹೀಂದ್ರಾಗೆ ಪರವಾನಗಿ ನೀಡಿದೆ. ಮಹೀಂದ್ರಾ ಇದಕ್ಕೆ INGLO ಪ್ಲಾಟ್‌ಫಾರ್ಮ್ ಎಂದು ಹೆಸರಿಟ್ಟಿದೆ.

ಆಗಸ್ಟ್ 15 ರಂದು ಪ್ರದರ್ಶಿಸಲಾದ ಮಹೀಂದ್ರಾದ ಐದು ಎಲೆಕ್ಟ್ರಿಕ್ ಕಾರುಗಳು ಈ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಫೋರ್ಡ್ ನಂತರ ಫೋಕ್ಸ್‌ವ್ಯಾಗನ್ ಬಳಿ ಮಹೀಂದ್ರಾ MEB ಪ್ಲಾಟ್‌ಫಾರ್ಮ್‌ ಅನ್ನು ಪಡೆದ ಎರಡನೇ ಗ್ರಾಹಕ ಕಂಪನಿಯಾಗಿದೆ. ಈ ನಡುವೆ ಫೋಕ್ಸ್‌ವ್ಯಾಗನ್ ಸಹ ಭಾರತದಲ್ಲಿ ಹೆಚ್ಚುತ್ತಿರುವ EV ಜನಪ್ರಿಯತೆಯ ಮೇಲೆ ಒಂದು ಕಣ್ಣಿಟ್ಟಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಒಂದೆಡೆ ಭಾರತದಲ್ಲಿ MEB ಘಟಕಗಳೊಂದಿಗೆ ಮಹೀಂದ್ರಾಗೆ ಪೂರೈಸುತ್ತಿದ್ದರೆ, ಅದೇ ಪ್ಲಾಟ್‌ಫಾರ್ಮ್‌ನೊಂದಿಗೆ ತಮ್ಮ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಭವಿಷ್ಯದ OEM (ಮೂಲ ಸಲಕರಣೆ ತಯಾರಕ)ಗಳಿಗೆ ಪೂರ್ವನಿದರ್ಶನವನ್ನು ನೀಡಬಹುದಾಗಿದ್ದು ಫೋಕ್ಸ್‌ವ್ಯಾಗನ್ ಸರಣಿಯಲ್ಲಿ MEB ಪ್ಲಾಟ್‌ಫಾರ್ಮ್‌ ಬಳಕೆಯಾಗಬಹುದಾಗಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಈ ನಿಟ್ಟಿನಲ್ಲಿ ಕಳೆದ ಬಾರಿ ಮಹಾರಾಷ್ಟ್ರದ ಪುಣೆಯ ರಸ್ತೆಯೊಂದರಲ್ಲಿ ಪರೀಕ್ಷೆ ನಡೆಸುತ್ತಿದ್ದ 77 kWh ಬ್ಯಾಟರಿಯ Skoda Enyaq iV 80X ರೂಪಾಂತರವು ಕಂಡುಬಂದಿತ್ತು. ಆದರೆ ಈಗ VW ID.4 GTX ಅನ್ನು ಸಹ ಗುರುತಿಸಲಾಗಿದೆ. ಇದು Skoda Enyaq iV 80X ರೂಪಾಂತರದ ಅದೇ 77 kWh ಬ್ಯಾಟರಿಯನ್ನು ಒಳಗೊಂಡಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರ್

ಇತ್ತೀಚೆಗೆ ಗುರುತಿಸಲಾದ ಫೋಕ್ಸ್‌ವ್ಯಾಗನ್ ID.4 GTX ಉನ್ನತ-ಕಾರ್ಯಕ್ಷಮತೆಯ ರೂಪಾಂತರವು, ID.4 ಫೋಕ್ಸ್‌ವ್ಯಾಗನ್‌ನ ಉಳಿದ ಐಡಿ ಶ್ರೇಣಿಯಂತೆಯೇ ಕಾಣುತ್ತದೆ. ಇದು 2020 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ VW ನ ID ಕ್ರೋಜ್ ಪರಿಕಲ್ಪನೆಯನ್ನು ಆಧರಿಸಿದೆ. ಇದನ್ನು ಪ್ರಸ್ತುತ ಚಟ್ಟನೂಗಾ, USA ಮತ್ತು ಜರ್ಮನಿಯ ಹೊರಗೆ ಮತ್ತು ಚೀನಾದಲ್ಲಿ ತಯಾರಿಸಲಾಗುತ್ತಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಭಾರತದಲ್ಲಿ ಗುರುತಿಸಲಾದ GTX ರೂಪಾಂತರವು ಕೆಂಪು ಬಣ್ಣದೊಂದಿಗೆ ಆಸಕ್ತಿದಾಯಕ ಡ್ಯುಯಲ್-ಟೋನ್ ಅಲಾಯ್‌ವೀಲ್‌ಗಳೊಂದಿಗೆ ಕಾಣಿಸಿಕೊಂಡಿದೆ. ಈ ವೀಲ್‌ಗಳು ಸೈಜ್ 20 ಇದ್ದು, ಇದು ಸ್ಕೋಡಾ ಎನ್ಯಾಕ್‌ನ 19" ಗಿಂತ ದೊಡ್ಡದಾಗಿದೆ. ವೋಕ್ಸ್‌ವ್ಯಾಗನ್ ಯಾವಾಗಲೂ ತನ್ನ ಮಾದರಿಯನ್ನು ಸ್ಕೋಡಾಗಿಂತ ಮೇಲೆ ಮತ್ತು ಆಡಿಗಿಂತ ಕೆಳಗೆ ಪ್ರೀಮಿಯಂ ಕೊಡುಗೆಯಾಗಿ ಇರಿಸುತ್ತದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

VW ID.4 GTX ಮತ್ತು Skoda Enyaq iV 80X ಎರಡೂ ಭಾರತದಲ್ಲಿ ಸಂಪೂರ್ಣವಾಗಿ ಮರೆಮಾಚಿಸಿ ಪರೀಕ್ಷಿಸಲಾಗುತ್ತಿದೆ. ID.4 ರ ಪ್ರತಿಸ್ಪರ್ಧಿ Kia EV6 ನೊಂದಿಗೆ ನೋಡಿಕೊಂಡರೆ, ಆಮದು ಮಾಡಿಕೊಂಡವುಗಳನ್ನು ಸಾಮಾನ್ಯವಾಗಿ ಪರೀಕ್ಷಿಸುವಾಗ ಮರೆಮಾಚಲಾಗುವುದಿಲ್ಲ. ಹಾಗಂತ ಸಾಮಾನ್ಯವಾಗಿ ಅನಾವರಣಕ್ಕೆ ಸನ್ನಿಹಿತವಾಗಿದೆ ಎಂದು ಅರ್ಥವಲ್ಲ. ತಯಾರಕರು ತಮ್ಮ ಕೆಲವು ಘಟಕಗಳನ್ನು ಅಥವಾ ಅವುಗಳ ಪವರ್‌ಟ್ರೇನ್ ಅನ್ನು ಮಾತ್ರ ಪರೀಕ್ಷಿಸುತ್ತಿರಬಹುದು.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಮಹೀಂದ್ರಾದ INGLO ಪ್ಲಾಟ್‌ಫಾರ್ಮ್ VW ನ MEB ಜಾಗತಿಕ ಸ್ಕೇಲೆಬಲ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ VW ID.4 ಮತ್ತು Skoda Enyaq ಅನ್ನು ಸಹ ಬೆಂಬಲಿಸುತ್ತದೆ. ಈ ಎರಡೂ ಪರೀಕ್ಷಾ ಮಾದರಿಗಳೊಂದಿಗೆ ಭಾರತೀಯ ಪರಿಸ್ಥಿತಿಗಳಿಗಾಗಿ ಈ ಪ್ಲಾಟ್‌ಫಾರ್ಮ್ ಅನ್ನು ಪರೀಕ್ಷಿಸುತ್ತಿರುವ ಸಾಧ್ಯತೆಯಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ವಿಶೇಷತೆಗಳು ಮತ್ತು ಬೆಲೆ

ಎರಡೂ ಮಾದರಿಗಳು ಆಮದು ಮಾಡಿಕೊಂಡಿವುದರಿಂದ, ನಾವು ID.4 ನಲ್ಲಿ GTX ಮತ್ತು Enyaq ನಲ್ಲಿ 80X ನಂತಹ ಉನ್ನತ-ಸ್ಪೆಕ್ ಟ್ರಿಮ್‌ಗಳನ್ನು ಮಾತ್ರ ಪಡೆಯುವ ಸಾಧ್ಯತೆಯಿದೆ. VW ID.4 GTX 77 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು 302 bhp ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಈಗಾಗಲೇ ಕ್ಲೈಮ್ ಮಾಡಲಾದ ಶ್ರೇಣಿಯು ಉತ್ತರ ಅಮೆರಿಕಾದ ಮಾರುಕಟ್ಟೆಗಳಿಗೆ 418 ಕಿ.ಮೀ ಮತ್ತು WLTP ವೀಲ್‌ಗಲ್ಲಿ 522 ಕಿ.ಮೀ. ಶ್ರೇಣಿಯನ್ನು ಹೊಂದಿದೆ. ID.4 4,584mm ಉದ್ದವಿದ್ದು, 765mm ವ್ಹೀಲ್‌ಬೇಸ್ ಹೊಂದಿದೆ. ಇದು ಸುಮಾರು ಹ್ಯಾರಿಯರ್ ಗಾತ್ರವನ್ನು ಹೊಂದಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ID.5 ಮಾದರಿಯು ID.4 ರ ಕೂಪ್ ರೂಪಾಂತರವಾಗಿದ್ದು, ಇದು ಸ್ವಲ್ಪ ಉದ್ದವಾಗಿದೆ. ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರ್ ID.4 ಜಿಟಿಎಕ್ಸ್ ಜಾಗತಿಕ ಮಾಡೆಲ್ ಪಡೆಯುವ ಅದೇ ರೀತಿಯ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ. ಮಾರುಕಟ್ಟೆಗೆ ಇಳಿದ ನಂತರ ID.4 GTX Kia EV6 ಗೆ ಪ್ರತಿಸ್ಪರ್ಧಿಯಾಗಲಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾದ Volvo XC40 ರೀಚಾರ್ಜ್ ಮತ್ತು ಮುಂಬರುವ Ioniq 5 ಜೊತೆಗೆ ID.4 ನ ಜೆಕ್ ಸೋದರಸಂಬಂಧಿ ಎನ್ಯಾಕ್ ಸ್ಪರ್ಧಿಸಲಿದೆ.

ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು: ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ನಮ್ಮಲ್ಲಿ ಟಾಟಾ ನೆಕ್ಸಾನ್ EV ಚಾರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ, ಆದರೆ XUV400 ಎಲೆಕ್ಟ್ರಿಕ್ ಸೆಪ್ಟೆಂಬರ್ 8 ರಂದು ಅನಾವರಣಗೊಳ್ಳಲಿದ್ದು, ಬಿಡುಗಡೆ ಬಳಿಕ ಟಾಟಾ ಇವಿಗಳೊಂದಿಗೆ ಸ್ಪರ್ಧಿಸಲಿದೆ. ಮುಂದಿನ ದಿನಗಳಲ್ಲಿ ಟಾಟಾ ಹಾಗೂ ಮಹೀಂದ್ರಾ ಇವಿ ಕಾರುಗಳ ನಡುವೆ ಪೈಪೋಟಿ ಹೆಚ್ಚಾಗಿರಲಿದ್ದು ಲೆಕ್ಕಾಚಾರಗಳು ಹೇಗೆಲ್ಲಾ ಬದಲಾಗಲಿವೆ ಎಂಬುದನ್ನು ನೋಡಬೇಕಿದೆ.

Most Read Articles

Kannada
English summary
New Volkswagen electric car spotted during testing 2023 release possible
Story first published: Friday, September 2, 2022, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X