ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಹೊಸ ಕಾರು ಮಾದರಿಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟ ಪಾಲನ್ನು ಹೆಚ್ಚಿಸಿದ್ದು, ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯು ಉತ್ತಮ ಬೇಡಿಕೆ ಕಾಯ್ದುಕೊಂಡಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಕೋವಿಡ್‌ನಿಂದಾಗಿರುವ ಆರ್ಥಿಕ ಏರಿಳಿತ ನಡುವೆಯೂ ಹೊಸ ಕಾರುಗಳ ಮಾರಾಟವು ಉತ್ತಮ ಬೆಳವಣಿಗೆ ಕಾಣುತ್ತಿದ್ದು, ನಿಸ್ಸಾನ್ ಇಂಡಿಯಾ ಕಂಪನಿಯು ಕಳೆದ ತಿಂಗಳು 3,010 ಯುನಿಟ್ ಕಾರು ಮಾರಾಟ ಮೂಲಕ ಶೇ. 159 ರಷ್ಟು ಬೆಳವಣಿಗೆ ಸಾಧಿಸಿದೆ. ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಾದ ಮ್ಯಾಗ್ನೈಟ್ ಆವೃತ್ತಿಯ ಮೂಲಕ ನಿಸ್ಸಾನ್ ಕಂಪನಿಯು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ವರ್ಷದ ಆರಂಭದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಹೊಸ ಮ್ಯಾಗ್ನೈಟ್ ಮಾದರಿಯೊಂದಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ನಿಸ್ಸಾನ್ ಕಾರುಗಳ ಮಾರಾಟವು ಶೇ.323 ರಷ್ಟು ಬೆಳವಣಿಗೆ ಕಂಡಿದ್ದು, 2021ರಲ್ಲಿ ಕಂಪನಿಯು ಒಟ್ಟು 27,965 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಮ್ಯಾಗ್ನೈಟ್ ಕಾರು ಬಿಡುಗಡೆಗೂ ಮುನ್ನ 2020ರ ಅವಧಿಯಲ್ಲಿ ಕೇವಲ 6,609 ಯುನಿಟ್ ಕಾರುಗಳನ್ನು ಮಾತ್ರ ಮಾರಾಟ ಮಾಡಿದ್ದ ಕಂಪನಿಯು ಕಳೆದ ಒಂದು ವರ್ಷದಿಂದ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ನಿಸ್ಸಾನ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ಕಾರು ರಫ್ತು ಪ್ರಮಾಣವನ್ನು ದ್ವಿಗುಣಗೊಳಿಸಿದ್ದು, ಕಳೆದ ಒಂದು ವರ್ಷ ಅವಧಿಯಲ್ಲಿ ಕಂಪನಿಯು 28,582 ಯುನಿಟ್ ಕಾರುಗಳನ್ನು ರಫ್ತುಗೊಳಿಸುವ ಮೂಲಕ ಶೇ.61 ರಷ್ಟು ಬೆಳವಣಿಗೆ ಸಾಧಿಸಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಕಂಪನಿಯ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಹೊಸ ಕಾರು ವಿನೂತನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಕಂಪಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆಯುತ್ತಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಹೊಸ ಕಾರಿನ ಮೂಲಕ ನಿಸ್ಸಾನ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು ಕಾರು ಮಾರಾಟದಲ್ಲಿ ಶೇ. 1.38ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 0.37 ರಷ್ಟು ಇದ್ದ ಮಾರುಕಟ್ಟೆ ಪಾಲು ಇದೀಗ ಸಾಕಷ್ಟು ಏರಿಕೆಯಾಗಿದ್ದು, ಹೊಸ ಕಾರು ಮಾದರಿಯು ನಿಸ್ಸಾನ್ ಇಂಡಿಯಾ ಕಂಪನಿಗೆ ಮರುಜೀವ ನೀಡಿದೆ ಎನ್ನಬಹುದು.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ಕಾರುಗಳನ್ನು ಮಾರಾಟ ಮಾಡುವ ನಿಸ್ಸಾನ್ ಕಂಪನಿಯು ಭಾರತದಲ್ಲಿ ಮಾತ್ರ ಸಣ್ಣ ಪ್ರಮಾಣದಲ್ಲಿ ಕಾರು ಮಾರಾಟ ಪಾಲನ್ನು ಹೊಂದಿದ್ದು, ಮಾಗ್ನೈಟ್ ಕಾರು ಮಾದರಿಯು ನಿಸ್ಸಾನ್ ಕಂಪನಿಯ ಮಾರಾಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದರೂ ಕೂಡಾ ಸತತ ಹಿನ್ನಡೆ ಅನುಭವಿಸಿದ್ದ ನಿಸ್ಸಾನ್ ಕಂಪನಿಗೆ ಮ್ಯಾಗ್ನೈಟ್ ಕಾರು ಬಿಡುಗಡೆ ಉತ್ತಮ ಆದಾಯ ತಂದುಕೊಡುತ್ತಿದ್ದು, ಕಂಪನಿಯು ಇದುವರೆಗೆ 75 ಸಾವಿರ ಬುಕ್ಕಿಂಗ್‌ನಲ್ಲಿ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು ಯುನಿಟ್ ವಿತರಣೆ ಮಾಡಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಹೊಸ ಕಾರು ಕೂಡಾ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ರೆನಾಲ್ಟ್ ಕಿಗರ್ ಜೊತೆ ಪ್ಲ್ಯಾಟ್‌ಫಾರ್ಮ್ ಹಂಚಿಕೊಂಡಿರುವ ಹೊಸ ಕಾರು ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.15 ಲಕ್ಷ ಬೆಲೆ ಪಡೆದುಕೊಂಡಿದ್ದು, ಬಿಡಿಭಾಗಗಳ ಬೆಲೆ ಹೆಚ್ಚಳ ಹಿನ್ನಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಹೊಸ ಕಾರಿನ ಬೆಲೆಯು ತುಸು ಹೆಚ್ಚಳವಾಗಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಂತರ ಹೊಸ ಕಾರು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಈ ಮೂಲಕ ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ನಾಲ್ಕು ಸ್ಟಾರ್ ರೇಟಿಂಗ್ ಪಡೆದಕೊಂಡಿರುವುದು ಕೂಡಾ ಮತ್ತಷ್ಟು ಬೇಡಿಕೆ ಹೆಚ್ಚಿಸಿದೆ.

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ನಿಸ್ಸಾನ್

ಮ್ಯಾಗ್ನೈಟ್ ಕಾರು ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಿಸ್ಸಾನ್ ಕಂಪನಿಯು ಮೊದಲ ವರ್ಷದ ಸಂಭ್ರಮಕ್ಕಾಗಿ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಮ್ಯಾಗ್ನೈಟ್ ಎಕ್ಸ್‌ವಿ ಎಕ್ಸಿಕ್ಯೂಟಿವ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Most Read Articles

Kannada
English summary
Nissan india wholesale 3010 units in december 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X