Just In
- 10 hrs ago
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- 12 hrs ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 12 hrs ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 13 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Movies
Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಾಟಾ ಮೋಟಾರ್ಸ್, ಮಹೀಂದ್ರಾ ಡೀಸೆಲ್ ವಾಹನಗಳನ್ನು ಕೈಬಿಟ್ಟಿಲ್ಲ ಏಕೆ ಗೊತ್ತಾ?
ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ & ಮಹೀಂದ್ರಾ ಡೀಸೆಲ್ ಮಾದರಿ ವಾಹನಗಳನ್ನು ನವೀಕರಣ ಮಾಡುತ್ತಿವೆ. ಇದೇ ವೇಳೆ, ಹಲವು ಕಾರು ತಯಾರಕ ಕಂಪನಿಗಳು ತಮ್ಮ ವೆಚ್ಚ ಕಡಿಮೆ ಮಾಡಲು ಜೊತೆಗೆ ಎಮಿಷನ್ ಮಾನದಂಡದ ಕಾರಣ, ಈ ವಿಭಾಗದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮರು ವಿನ್ಯಾಸದ ಕೆಲಸ ಆರಂಭಿಸಿವೆ.
BS-VI ಎಮಿಷನ್ ಮಾನದಂಡಗಳ ಎರಡನೇ ಹಂತದ ಪರಿವರ್ತನೆ ಬಳಿಕ, ಇಂಧನ ಆಧಾರಿತವಾಗಿ ಚಲಿಸುವ ವಾಹನಗಳ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಮಾರಾಟದಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ ವಾಹನಗಳ ಸರಾಸರಿ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಹಿಡಿತ ಹೊಂದಿರುವ ಮಾರುತಿ ಸುಜುಕಿ, ರೆನಾಲ್ಟ್-ನಿಸ್ಸಾನ್ ಕಂಪನಿಗಳ ಹೊರತಾಗಿ ಈ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಟಾಟಾ ಹಾಗೂ ಮಹೀಂದ್ರಾ ಕಂಪನಿಗಳು ಆಸಕ್ತಿ ತೋರಿವೆ. ವೋಕ್ಸ್‌ವ್ಯಾಗನ್ ಗ್ರೂಪ್, ಏಪ್ರಿಲ್ 2020ರ ನಂತರ ಇಂತಹ ವಾಹನ ತಯಾರಿಕೆಯಿಂದ ದೂರವಿರಲು ತೀರ್ಮಾನಿಸಿತ್ತು.
ಸ್ಥಳೀಯ ಮಾರುಕಟ್ಟೆಯಲ್ಲಿ ಒಟ್ಟಾರೆ ಪ್ರಯಾಣಿಕ ವಾಹನ ಮಾರಾಟದಲ್ಲಿ SUVಗಳ ಪಾಲು ಐದು ವರ್ಷಗಳಲ್ಲಿ ಶೇಕಡ 40ರಷ್ಟು ದ್ವಿಗುಣಗೊಂಡಿದೆ. ಡೀಸೆಲ್ ಇಂಧನ ವಾಹನಗಳ ಅತ್ಯುತ್ತಮವಾದ ಕಾರ್ಯಕ್ಷಮತೆಯಿಂದ ಸಾಂಪ್ರದಾಯಿಕವಾಗಿ ಈ ವಿಭಾಗದಲ್ಲಿ ಆಯ್ಕೆಯ ಇಂಧನವಾಗಿದೆ. ಡೀಸೆಲ್ ರೂಪಾಂತರಗಳು ಮಧ್ಯಮ-SUV ವಿಭಾಗದಲ್ಲಿ ಶೇಕಡ 64ರಷ್ಟು ಕೊಡುಗೆ ನೀಡಿವೆ. 2021ರ ಆರ್ಥಿಕ ವರ್ಷದಲ್ಲಿ ಉನ್ನತ-ಮಟ್ಟದ SUVಗಳಲ್ಲಿ ಶೇಕಡ 94ರಷ್ಟು ಕೊಡುಗೆ ನೀಡಿವೆ. ಈ ಅನುಪಾತವು ಇಂದಿಗೂ ಸಹ ಹೆಚ್ಚುತ್ತಲೆ ಇದೆ ಎನ್ನುವುದು ಗಮನಾರ್ಹ ಸಂಗತಿ.
ಖಚಿತವಾಗಿ ಹೇಳುವುದಾದರೆ, ಒಟ್ಟಾರೆ ಕಾರು ಮಾರಾಟದಲ್ಲಿ ಡೀಸೆಲ್ ವಾಹನಗಳ ಪಾಲು 2020ರ ಆರ್ಥಿಕ ವರ್ಷದಲ್ಲಿ ಶೇಕಡ 29 ರಿಂದ 18ಗೆ ಇಳಿದಿತ್ತು. ದೇಶದಲ್ಲಿ ಏಪ್ರಿಲ್ 2020 ರಿಂದ BS-VI ಮಾನದಂಡಗಳು ಜಾರಿಯಾಗಿದ್ದರಿಂದ 42 ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು ಎಂಟ್ರಿ SUVಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ನಿಲ್ಲಿಸಲು ಪ್ರಮುಖ ಕಾರು ತಯಾರಕರು ತೀರ್ಮಾನಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧ್ಯವಾಗುತ್ತಿದ್ದು, ಮಾರಾಟದ ಪ್ರಮಾಣವು ಕಳೆದ ಎರಡು ವರ್ಷಗಳಲ್ಲಿ ಸ್ಥಿರವಾಗಿದೆ ಎಂದು ಆಟೋಮೊಬೈಲ್ ಉದ್ಯಮದ ನಿಪುಣರು ಹೇಳಿದ್ದಾರೆ.
ಹಿಂದಿನಂತೆ ಗ್ರಾಹಕರು ವೆಚ್ಚವನ್ನು ಮನದಲ್ಲಿ ಇಟ್ಟುಕೊಂಡು ಡೀಸೆಲ್ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಡೀಸೆಲ್ ಎಂಜಿನ್ ಚಾಲಿತ ವಾಹನಗಳು, ಹೆಚ್ಚಿನ ಟಾರ್ಕ್ ಮತ್ತು ಪವರ್ ಅನ್ನು ಉತ್ಪಾದಿಸುತ್ತವೆ ಎಂದು ಹೆಸರು ಹೇಳಲು ಇಚ್ಛಿಸದ ಆಟೋಮೊಬೈಲ್ ಉದ್ಯಮದ ಹಿರಿಯ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ. ವಾಸ್ತವವಾಗಿ, ಹೊಸದಾಗಿ ಬಿಡುಗಡೆಯಾದ ಮಹೀಂದ್ರಾ ಥಾರ್ ಮತ್ತು ಮಹೀಂದ್ರಾ XUV700ಯ ಸುಮಾರು ಮೂರನೇ ಎರಡರಷ್ಟು ಮಾರಾಟವು ಡೀಸೆಲ್ ರೂಪಾಂತರಗಳಿಗೆ ಬಂದಿವೆ. ಸ್ಕಾರ್ಪಿಯೋ ಕಾರಿನ ಮಾರಾಟ ಪ್ರಮಾಣ ಶೇಕಡ 75 ರಷ್ಟಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಗಳನ್ನು ಒದಗಿಸುವ ಟಾಟಾ ಮೋಟಾರ್ಸ್, ಬಿಎಸ್ VI (II) ಮಾನದಂಡಗಳ ಅನುಷ್ಠಾನದ ನಂತರವು ಕಂಪನಿಯ ಡೀಸೆಲ್ ರೂಪಾಂತರಗಳು ಉತ್ತಮವಾಗಿ ಮಾರಾಟವಾಗುತ್ತದೆ ಎಂಬುದನ್ನು ಬಲವಾಗಿ ನಂಬಿದೆ. ಟಾಟಾ ಮೋಟಾರ್ಸ್‌ನ ಉಪಾಧ್ಯಕ್ಷ (ಸೇಲ್ಸ್, ಮಾರ್ಕೆಟಿಂಗ್ ಮತ್ತು ಕಸ್ಟೋಮರ್ ಸರ್ವಿಸ್) ರಾಜನ್ ಅಂಬಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಡೀಸೆಲ್ ವಾಹನಗಳು ಉತ್ತಮ ಮಾರುಕಟ್ಟೆಯನ್ನು ಹೊಂದಿವೆ. ಕೆಲವು ಕಂಪನಿಗಳು ಮಾನದಂಡಗಳಿಗೆ ಅನುಗುಣವಾಗಿ ತಮ್ಮ ವಾಹನಗಳನ್ನು ಪರಿವರ್ತನೆ ಮಾಡಲು ಅಸಮರ್ಥವಾಗಿವೆ. ಆದರೆ, ನಾವು ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.
ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಇನ್ನೋವಾ ಡೀಸೆಲ್ ರೂಪಾಂತರದ ಬುಕಿಂಗ್ ಅನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ), ಕಳೆದ ವಾರವಷ್ಟೇ ಇನ್ನೋವಾ ಹೈಕ್ರಾಸ್‌ನ ಗ್ಯಾಸೋಲಿನ್ ಮತ್ತು ಹೈಬ್ರಿಡ್ ರೂಪಾಂತರಗಳ ಜೊತೆಗೆ ಡೀಸೆಲ್ ಇನ್ನೋವಾ ಕ್ರಿಸ್ಟಾವನ್ನು ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದೆ. 'ಬುಕಿಂಗ್‌ಗಳು ಆಗುತ್ತಿವೆ. ನಮ್ಮ ಗ್ರಾಹಕರಿಗೆ ವಿತರಣಾ ದಿನಾಂಕವನ್ನು ಖಚಿತಪಡಿಸಲು ನಮಗೆ ಸಾಧ್ಯವಾಗಲಿಲ್ಲ. ನಾವು ತಾತ್ಕಾಲಿಕವಾಗಿ ಬುಕಿಂಗ್ ಅನ್ನು ಸ್ಥಗಿತಗೊಳಿಸಿದ್ದೇವೆ. ಆದರೆ ಶೀಘ್ರದಲ್ಲೇ ಅದನ್ನು ಮತ್ತೆ ತೆರೆಯುತ್ತೇವೆ' ಎಂದು ಟೊಯೊಟಾ ಕಿರ್ಲೋಸ್ಕರ್ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರಾ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.