ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಟಾಟಾ ನಿರ್ಮಾಣದ ನೆಕ್ಸಾನ್ ಇವಿ ಅಗ್ರಸ್ಥಾನದಲ್ಲಿದ್ದು, ಗ್ರಾಹಕರಿಂದ ಹೆಚ್ಚು ಮೆಚ್ಚುಗೆ ಪಡೆದುಕೊಂಡ ಇವಿ ಮಾದರಿಯಾಗಿದೆ.

Recommended Video

Toyota Urban Cruiser Hyryder Kannada Walkaround | ಹೈಬ್ರಿಡ್ ಎಂಜಿನ್, ಗೇರ್ ಬಾಕ್ಸ್, ವೈಶಿಷ್ಟ್ಯತೆಗಳು..

ಕಳೆದ ತಿಂಗಳು ಬ್ಯಾಟರಿ ಸಮಸ್ಯೆಯಿಂದ ನೆಕ್ಸಾನ್ ಇವಿ ಮಾದರಿಯೊಂದು ಬೆಂಕಿಗಾಹುತಿಯಾದ ಪ್ರಕರಣವನ್ನು ಹೊರತುಪಡಿಸಿ ಇತರೆ ನೆಕ್ಸಾನ್ ಇವಿ ಮಾದರಿಯಲ್ಲಿ ಇದುವರೆಗೆ ಯಾವುದೇ ರೀತಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಿಲ್ಲ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ನೆಕ್ಸಾನ್ ಇವಿ ಮಾದರಿಯು ದೇಶಾದ್ಯಂತ ಇದುವರೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟದೊಂದಿಗೆ ಗ್ರಾಹಕ ಆಯ್ಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಹೆಚ್ಚುವರಿ ವಾರಂಟಿ ಮತ್ತು ಗುಣಮಟ್ಟದ ಬ್ಯಾಟರಿ ಆಯ್ಕೆಯು ಹೊಸ ಇವಿ ಕಾರಿನ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಹೊಸ ನೆಕ್ಸಾನ್ ಇವಿ ಕಾರು ಮಾದರಿಯನ್ನು ಬಿಡುಗಡೆಗೂ ಮುನ್ನ ಹಲವಾರು ಹಂತಗಳಲ್ಲಿ ಪರೀಕ್ಷೆಗೆ ಒಳಪಟ್ಟ ನಂತರವೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇತ್ತೀಚೆಗೆ ಮುಂಬೈ‌ನಲ್ಲಿ ನಡೆದ ಬ್ಯಾಟರಿಯಲ್ಲಿನ ತಾಂತ್ರಿಕ ದೋಷದಿಂದ ನೆಕ್ಸಾನ್ ಇವಿ ಮಾದರಿಯೊಂದು ಬೆಂಕಿಗಾಹುತಿಯಾದ ಪ್ರಕರಣ ಹೊರತುಪಡಿಸಿ ಇಂತಹ ಅನಾಹುತಗಳು ಸಂಭವಿಸಿಲ್ಲ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಆದರೆ ನೆಕ್ಸಾನ್ ಇವಿಯ ಬ್ಯಾಟರಿಯಲ್ಲಿ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಕಲಬುರಗಿ ಮೂಲದ ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗ್ರಾಹಕರ ಮನವಿ ಆಧರಿಸಿ ಟಾಟಾ ಕಂಪನಿಯು ನೆಕ್ಸಾನ್ ಇವಿಯಲ್ಲಿನ ದೋಷಪೂರಿತ ಬ್ಯಾಟರಿ ಪ್ಯಾಕ್ ಅನ್ನು ಹೊಸ ಬ್ಯಾಟರಿ ಪ್ಯಾಕ್‌ಗೆ ಬದಲಾಯಿಸಿಕೊಟ್ಟಿರುವುದಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಕಲಬುರಗಿ ಮೂಲದ ದೊಡ್ಡಪ್ಪ ಎಸ್ ನಿಷ್ಠಿ ಎನ್ನುವವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ಇತ್ತೀಚೆಗೆ ತಾಂತ್ರಿಕ ದೋಷಕ್ಕೆ ತುತ್ತಾಗಿದ್ದ ನೆಕ್ಸಾನ್ ಇವಿ ಮಾದರಿಯನ್ನು ಕಳೆದ ಎರಡು ವರ್ಷಗಳ ಖರೀದಿ ಮಾಡಲಾಗಿತ್ತು ಎನ್ನಲಾಗಿದ್ದು, ಇದುವರೆಗೆ ಸುಮಾರು 68 ಸಾವಿರ ಕಿ.ಮೀ ಚಾಲನೆ ಮಾಡಲಾಗಿತ್ತು.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಆದರೆ ಎರಡು ವರ್ಷಗಳ ಹಿಂದಷ್ಟೇ ಖರೀದಿ ಮಾಡಲಾಗಿದ್ದ ನೆಕ್ಸಾನ್ ಇವಿ ಕಾರಿನಲ್ಲಿ ಪದೇ ಪದೇ ಬ್ಯಾಟರಿ ಸಮಸ್ಯೆ ಎದುರಾಗುತ್ತಿದ್ದ ಬಗೆಗೆ ಮಾಲೀಕರು ಅಸಮಾಧಾನಗೊಂಡಿದ್ದರು. ನೆಕ್ಸಾನ್ ಇವಿಯಲ್ಲಿನ ಬ್ಯಾಟರಿ ಪ್ಯಾಕ್ ಇನ್ನು ಶೇ.15 ರಷ್ಟು ಇರುವಾಗಲೇ ಕಾರ್ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತಿತ್ತು ಎನ್ನಲಾಗಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಇದರಿಂದ ಕಾರಿನ ಮೈಲೇಜ್ ಮೇಲೆ ಪರಿಣಾಮ ಬೀರುತ್ತಿರುವ ಬಗೆಗೆ ಮಾಲೀಕರು ಟಾಟಾ ಮೋಟಾರ್ಸ್ ಕಂಪನಿಯನ್ನು ಸಂಪರ್ಕಿಸಿದ್ದರು. ಗ್ರಾಹಕರ ಮನವಿಗೆ ಸಕರಾತ್ಮಕವಾಗಿಯೇ ಪ್ರತಿಕ್ರಿಯೆಸಿದ ಟಾಟಾ ಮೋಟಾರ್ಸ್ ಕಂಪನಿಯು ಬ್ಯಾಟರಿಯಲ್ಲಿನ ನಿರ್ದಿಷ್ಟ ಸಮಸ್ಯೆಯನ್ನು ಸರಿಪಡಿಸುವ ಬದಲು ಸಂಪೂರ್ಣವಾಗಿ ಹೊಸ ಬ್ಯಾಟರಿ ಪ್ಯಾಕ್ ಅನ್ನೇ ಅಳವಡಿಸಿದೆ ಎಂದು ಗ್ರಾಹಕರು ಮಾಹಿತಿ ನೀಡಿದ್ದಾರೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಹೊಸ ಬ್ಯಾಟರಿ ಅಳವಡಿಕೆಗೆ ಕಂಪನಿಯು ಅಂದಾಜು ರೂ. 7 ಲಕ್ಷ ಖರ್ಚು ಮಾಡಿರುವ ಬಗೆಗೆ ಕಾರು ಮಾಲೀಕರು ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರಿನ ಬ್ಯಾಟರಿ ಮೇಲೆ ಗರಿಷ್ಠ ವಾರಂಟಿ ಹಿನ್ನಲೆ ಹೊಸ ಬ್ಯಾಟರಿ ಪ್ಯಾಕ್ ಅಳವಡಿಕೆ ಸಂಪೂರ್ಣವಾಗಿ ಉಚಿತವಾಗಿ ಮಾಡಿಕೊಡಲಾಗಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಹೊಸ ಬ್ಯಾಟರಿ ಪ್ಯಾಕ್ ಅನ್ನು ವಾರಂಟಿ ಅಡಿ ಜೋಡಣೆ ಮಾಡಲಾಗಿದ್ದು, ನೆಕ್ಸಾನ್ ಇವಿ ಮಾದರಿಯ ಬ್ಯಾಟರಿಯು 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಆಧರಿಸಿ ವಾರಂಟಿ ಹೊಂದಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಆದರೆ ಇಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರಿನಲ್ಲಿದ್ದ ದೋಷಪೂರಿತ ಬ್ಯಾಟರಿ ಪ್ಯಾಕ್ ಅನ್ನು ದುರಸ್ತಿ ಮಾಡದೆ ಸಂಪೂರ್ಣವಾಗಿ ಬದಲಾವಣೆ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಬ್ಯಾಟರಿ ದುರಸ್ತಿಗೊಳಿಸುವ ಬದಲಾಗಿ ಸಂಪೂರ್ಣವಾಗಿ ಹೊಸ ಬ್ಯಾಟರಿ ಪ್ಯಾಕ್ ಅನ್ನು ಜೋಡಣೆ ಮಾಡಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಸದ್ಯ ಬ್ಯಾಟರಿ ತಂತ್ರಜ್ಞಾನವನ್ನು ಸುಧಾರಿಸಲು ಕಾರು ಉತ್ಪಾದನಾ ಕಂಪನಿಗಳು ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಹೊಸ ಬ್ಯಾಟರಿ ಪ್ಯಾಕ್ ಸಿದ್ದಪಡಿಸುವುದಕ್ಕಿಂತಲೂ ಹೆಚ್ಚು ದುರಸ್ತಿ ಕಾರ್ಯಗಳಿಗೆ ಖರ್ಚು ತಗುಲಬಹುದು ಎನ್ನುತ್ತವೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಹೀಗಾಗಿ ದೋಷಪೂರಿತ ಬ್ಯಾಟರಿ ಪ್ಯಾಕ್ ಅನ್ನು ದುರಸ್ತಿಗೊಳಿಸುವ ಬದಲು ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮಾದರಿಗೆ ಹೊಸ ಬ್ಯಾಟರಿ ಪ್ಯಾಕ್ ಅಳವಡಿಸಿದ್ದು, ದೋಷಪೂರಿತ ಬ್ಯಾಟರಿ ಪ್ಯಾಕ್ ಅನ್ನು ಅದು ವಿವಿಧ ಅಧ್ಯಯನಕ್ಕೆ ಒಳಪಡಿಸುವ ಸಾಧ್ಯತೆಗಳಿವೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ದೋಷರೂರಿತ ಬ್ಯಾಟರಿ ಪ್ಯಾಕ್‌ನಲ್ಲಿ ಕಂಡುಬರುತ್ತಿರುವ ಸಮಸ್ಯೆ ಕುರಿತು ವಿವಿಧ ಹಂತದ ಅಧ್ಯಯನಗಳ ನಂತರ ಭವಿಷ್ಯದಲ್ಲಿನ ಬ್ಯಾಟರಿ ಪ್ಯಾಕ್‌ಗಳ ಅಭಿವೃದ್ದಿಯಲ್ಲಿ ಸುಧಾರಣೆ ತಂದುಕೊಳ್ಳಬಹುದಾಗಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಇದೇ ಕಾರಣಕ್ಕೆ ಸದ್ಯ ಇವಿ ವಾಹನಗಳು ಇಂಧನ ಚಾಲಿತ ವಾಹನಗಳಿಂತ ದುಬಾರಿಯಾಗಲು ಪ್ರಮುಖ ಕಾರಣವಾಗಿದ್ದು, ಬ್ಯಾಟರಿ ಪ್ಯಾಕ್ ಎಲೆಕ್ಟ್ರಿಕ್ ವಾಹನಗಳ ಮುಖ್ಯ ತಾಂತ್ರಿಕ ಘಟಕವಾಗಿರುವುದರಿಂದ ಈ ವಿಭಾಗದಲ್ಲಿ ಇನ್ನು ಹಲವಾರು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯ ಅವಶ್ಯವಿದೆ ಎನ್ನಬಹುದು.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ಇದಕ್ಕಾಗಿಯೇ ಸದ್ಯಕ್ಕೆ ಇವಿ ಬ್ಯಾಟರಿಗಳ ಮೇಲೆ ಗರಿಷ್ಠ ವಾರಂಟಿ ನೀಡುತ್ತಿರುವ ಇವಿ ವಾಹನ ಉತ್ಪಾದನಾ ಕಂಪನಿಯು ಬ್ಯಾಟರಿ ತಂತ್ರಜ್ಞಾನವನ್ನು ನಿರಂತರವಾಗಿ ಪರಿಷ್ಕರಣೆ ಮಾಡಿದ್ದು, ನೆಕ್ಸಾನ್ ಇವಿ ಮಾಲೀಕರಿಗೂ ಟಾಟಾ ಮೋಟಾರ್ಸ್ ಕಂಪನಿಯು ಗರಿಷ್ಠ ವಾರಂಟಿ ನೀಡಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

ನೆಕ್ಸಾನ್ ಇವಿ ಮಾದರಿಯು ಸದ್ಯಕ್ಕೆ ಎರಡು ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಸಾಮಾನ್ಯ ಮಾದರಿಯು 30kWh ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿದ್ದರೆ ಹೊಸದಾಗಿ ಬಿಡುಗಡೆಯಾಗಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸುಧಾರಿತ ತಂತ್ರಜ್ಞಾನ ಹೊಂದಿರುವ 40.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರಾಟಗೊಳ್ಳುತ್ತಿವೆ.

ನೆಕ್ಸಾನ್ ಇವಿ ಕಾರಿನ ಬ್ಯಾಟರಿ ಬದಲಾವಣೆಗೆ ಬರೋಬ್ಬರಿ ರೂ. 7 ಲಕ್ಷ ಖರ್ಚು!

30kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 312 ಕಿ.ಮೀ ಹಿಂದಿರುಗಿಸದರೆ 40.5kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 437 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಎಕ್ಸ್‌ಶೋರೂಂ ಪ್ರಕಾರ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಕಾರುಗಳು ಆರಂಭಿಕವಾಗಿ ರೂ. 14.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19.84 ಲಕ್ಷ ಬೆಲೆ ಹೊಂದಿವೆ.

Most Read Articles

Kannada
English summary
Tata nexon ev battery replaced cost rs 7 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X