ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಮಾಂಟ್ರಾ ಎಲೆಕ್ಟ್ರಿಕ್ ತ್ರಿ ಚಕ್ರ ಆಟೋ ಮಾದರಿಯು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಹೊಸ ಇವಿ ಆಟೋ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 3.02 ಲಕ್ಷ ಬೆಲೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ದೇಶಾದ್ಯಂತ ಇವಿ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವೈಯಕ್ತಿಕ ಬಳಕೆಯ ವಾಹನ ಮಾದರಿಗಳಲ್ಲಿ ಮಾತ್ರವಲ್ಲದೆ ವಾಣಿಜ್ಯ ಬಳಕೆಯ ಇವಿ ವಾಹನಗಳ ವಿಭಾಗದಲ್ಲೂ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆಯುತ್ತಿವೆ.

ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಂಪನಿಗಳು ವಿನೂತನ ಮಾದರಿಗಳನ್ನು ರಸ್ತೆಗಿಳಿಸುತ್ತಿದ್ದು, ಇದೀಗ ತಮಿಳುನಾಡು ಮೂಲದ ಟಿಐ ಕ್ಲಿನ್ ಮೊಲಿಬಿಟಿ ಕಂಪನಿಯು ತನ್ನ ಹೊಸ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ ಮಾಡಿದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಚೆನ್ನೈ ಮೂಲದ ಮುರುಗಪ್ಪ ಗ್ರೂಪ್‌ ಎಲೆಕ್ಟ್ರಿಕ್ ಮೊಬಿಲಿಟಿ ಭಾಗವಾಗಿರುವ ಟಿಐ ಕ್ಲಿನ್ ಮೊಲಿಬಿಟಿ ಕಂಪನಿಯು ಮಾಂಟ್ರಾ ಎಲೆಕ್ಟ್ರಿಕ್ ಆಟೋ ಮಾದರಿಯನ್ನು ಪರಿಚಯಿಸಿದ್ದು, ಹೊಸ ವಾಹನವು ತನ್ನ ವಿಭಾಗದಲ್ಲಿಯೇ ಅತಿಹೆಚ್ಚು ಫೀಚರ್ಸ್ ಹೊಂದಿದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಟಿಐ ಕ್ಲೀನ್ ಮೊಬಿಲಿಟಿಯು ಭಾರತೀಯ ಇವಿ ಮಾರುಕಟ್ಟೆಯಲ್ಲಿ ಕೊನೆಯ ಮೈಲಿ ಚಲನಶೀಲತೆಯ ವಲಯದಲ್ಲಿ ಹೊಸ ಕ್ರಾಂತಿಯನ್ನುಂಟುಮಾಡಲು ಮಾಂಟ್ರಾ ಎಲೆಕ್ಟ್ರಿಕ್ ತ್ರಿಚಕ್ರ ಆಟೋವನ್ನು ಪರಿಚಯಿಸಿದ್ದು, ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಮಾಂಟ್ರಾ ಆಟೋ 10kWh ಬ್ಯಾಟರಿ ಪ್ಯಾಕ್ ಹೊಂದಿದೆ.

10kWh ಬ್ಯಾಟರಿ ಪ್ಯಾಕ್ಅಪ್ ಮೂಲಕ ಹೊಸ ಇವಿ ವಾಹನವು ಪ್ರತಿ ಚಾರ್ಜ್‌ಗೆ ಗರಿಷ್ಠ 197 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಪ್ರಯಾಣಿಕ ಸಾಗಾಣಿಕೆಯೊಂದಿಗೆ ಕನಿಷ್ಠ 155 ಕಿ.ಮೀ ರಿಯಲ್ ವರ್ಲ್ಡ್ ಮೈಲೇಜ್ ಖಾತ್ರಿಪಡಿಸುತ್ತದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಜೊತೆಗೆ ಹೊಸ ಇವಿ ಆಟೋದಲ್ಲಿರುವ ಬ್ಯಾಟರಿ ಪ್ಯಾಕ್ 60ಎನ್ಎಂ ಟಾರ್ಕ್ ಉತ್ಪಾದನೆಯು ಉದ್ಯಮದ ಅತ್ಯುತ್ತಮ ಟಾರ್ಕ್ ಔಟ್‌ಪುಟ್ ಅನ್ನು ನೀಡುವ ಏಕೈಕ ಎಲೆಕ್ಟ್ರಿಕ್ ವಾಹನವಾಗಿದ್ದು, ಉತ್ತಮ ಆರ್ಥಿಕತೆಗಾಗಿ ಹಲವಾರು ಡ್ರೈವ್ ಮೋಡ್‌ಗಳನ್ನು ಸಹ ನೀಡುತ್ತದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಜೊತೆಗೆ ಹೊಸ ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ಪಾರ್ಕ್ ಅಸಿಸ್ಟ್ ಮೋಡ್ ಅನ್ನು ಸಹ ನೀಡಲಾಗಿದ್ದು, ಮುಂಭಾಗದಲ್ಲಿ ಅವಳಿ ಫೋರ್ಕ್‌ಗಳನ್ನು ಹೊಂದಿದೆ. ಹಾಗೆಯೇ ಅತ್ಯುತ್ತಮವಾಗಿರುವ ಮೆತ್ತನೆಯ ಡ್ರೈವರ್‌ ಸೀಟ್ ನೀಡಲಾಗಿದ್ದು, ಹೆಚ್ಚಿನ ಸಕರು ಸರಂಜಾಮುಗಾಗಿ ದೊಡ್ಡ ಗಾತ್ರ ಬೂಟ್ ಸ್ಪೆಸ್ ಸಹ ನೀಡುತ್ತದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಟಿಐ ಕ್ಲೀನ್ ಮೊಬಿಲಿಟಿಯು ಹೊಸ ಮಾಂಟ್ರಾ ಎಲೆಕ್ಟ್ರಿಕ್ ಆಟೋದಲ್ಲಿ ಟೆಲಿಮ್ಯಾಟಿಕ್ಸ್ ಮತ್ತು ವಾಹನದ ಹಿಂಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟೆಲಿಮ್ಯಾಟಿಕ್ಸ್ ಮತ್ತು ಅಪ್ಲಿಕೇಶನ್‌ಗಳನ್ನು ಸಹ ನೀಡುತ್ತದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಇದು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದ್ದು, ಖರೀದಿಗಾಗಿ ಡಿಜಿಟಲ್ ಫೈನಾನ್ಸಿಂಗ್, 24 x 7 ರಸ್ತೆಬದಿಯ ನೆರವು, 2 ವರ್ಷಗಳ ವಿಸ್ತೃತ ವಾರಂಟಿ ಆಯ್ಕೆ ಮತ್ತು 3 ವರ್ಷಗಳ ಬ್ಯಾಟರಿ ವಾರಂಟಿ ನೀಡುತ್ತಿದೆ. ಸದ್ಯ ಕಂಪನಿಯು ಹೊಸ ಮಾಂಟ್ರಾ ಇವಿ ಆಟೋ ಬಿಡುಗಡೆಯೊಂದಿಗೆ ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಚಾಲನೆ ನೀಡಿದ್ದು, ಹಂತ-ಹಂತವಾಗಿ ದೇಶಾದ್ಯಂತ ಮಾರಾಟ ಆರಂಭಿಸುವ ಯೋಜನೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯ ಜೊತೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ರಾಜ್ಯ ಮಟ್ಟದ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿವೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಇವಿ ವಾಹನಗಳ ಅಳವಡಿಕೆ ಸಬ್ಸಡಿ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿವೆ.

ಪ್ರತಿ ಚಾರ್ಜ್‌ಗೆ 197 ಕಿ.ಮೀ ಮೈಲೇಜ್ ನೀಡುವ ಮಾಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಕಳೆದ ವರ್ಷದ ಸಬ್ಸಡಿ ಯೋಜನೆಯಿಂದಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ಇವಿ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಕಳೆದ ಕೆಲ ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ವಾಹನಗಳ ವಿಭಾಗದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

Most Read Articles

Kannada
English summary
Ti clean mobility montra electric 3w auto launched in india details
Story first published: Wednesday, September 7, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X