ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್ 10 CNG ಕಾರುಗಳು.. ಮಾರುತಿ ಸುಜುಕಿಯದ್ದೇ ಸಿಂಹಪಾಲು

ದೇಶದಲ್ಲಿ ಸದ್ಯ ಹೊಸ ಕಾರು ಖರೀದಿಸುವ ಗ್ರಾಹಕರು, ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳನ್ನು ಬಿಟ್ಟು ಹೊಸ ಆಯ್ಕೆಯನ್ನು ಹುಡುಕುತ್ತಿದ್ದು, ಅದರಲ್ಲೂ ಸಿಎನ್‌ಜಿ ಕಾರುಗಳು ಈಗ ಜನಪ್ರಿಯತೆ ಗಳಿಸುತ್ತಿವೆ. ಏಕೆಂದರೆ, ಈ ಇಂಧನಗಳಿಗೆ ಹೋಲಿಕೆ ಮಾಡಿದರೆ ಸಿಎನ್‌ಜಿ ಬೆಲೆ ಕೊಂಚ ಕಡಿಮೆ ಎಂದು ಹೇಳಬಹುದು.

ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಸೇರಿದಂತೆ ಹಲವು ಕಾರು ತಯಾರಿಕಾ ಕಂಪನಿಗಳು ತಮ್ಮ ಸಿಎನ್‌ಜಿ ಕಾರು ಮಾದರಿಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಈ ಮೂಲಕ ಭಾರತದ ಗ್ರಾಹರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಅದರಲ್ಲೂ ಸಿಎನ್‌ಜಿ ಕಾರುಗಳಲ್ಲಿ ಮಾರುತಿ ಸುಜುಕಿ ಕಂಪೆನಿಯದ್ದೇ ಸಿಂಹಪಾಲು ಎನ್ನಬಹುದು. 2022ರಲ್ಲಿ ಬರೋಬ್ಬರಿ ಏಳು ಕಾರು ಲಾಂಚ್ ಮಾಡಿದೆ. ಟಾಟಾ ಎರಡು, ಟೊಯೊಟಾ ಒಂದು ಕಾರು ಸಹ ಬಿಡುಗಡೆಯಾಗಿದೆ. ದೇಶದಲ್ಲಿ 10 ಹೊಸ ಸಿಎನ್‌ಜಿ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್ 10 CNG ಕಾರುಗಳು.. ಮಾರುತಿ ಸುಜುಕಿಯದ್ದೇ ಸಿಂಹಪಾಲು

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ/ ಟೊಯೊಟಾ ಗ್ಲ್ಯಾನ್ಜಾ:
ದೇಶದ ಪ್ರಮುಖ ಸಿಎನ್‌ಜಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿ ಮಾರುತಿ ಬಲೆನೊ ಸಿಎನ್‌ಜಿ ಮತ್ತು ಟೊಯೊಟಾ ಗ್ಲಾನ್ಜಾ ಸಿಎನ್‌ಜಿ ಕಾರುಗಳು ಸೇರಿವೆ. ಇದರ ಬೆಲೆಗಳು ಕ್ರಮವಾಗಿ 8.28 ಲಕ್ಷ ರೂ. ಮತ್ತು 8.43 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಎರಡು ಕಾರುಗಳು 1.2L K12 ಬಿ-ಫ್ಯೂಯೆಲ್ CNG ಎಂಜಿನ್‌ನೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಇದು ಕ್ರಮವಾಗಿ 77 bhp ಪವರ್ ಮತ್ತು 98.5 Nm ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಮಾರುತಿ ಸುಜುಕಿ ಆಲ್ಟೊ ಕೆ 10 ಸಿಎನ್‌ಜಿ/ ಸೆಲೆರಿಯೊ ಸಿಎನ್‌ಜಿ/ ಎಸ್-ಪ್ರೆಸ್ಸೊ:
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಹೊಸ ಆಲ್ಟೊ ಕೆ 10, ಸೆಲೆರಿಯೊ ಮತ್ತು ನವೀಕರಿಸಿದ ಎಸ್-ಪ್ರೆಸ್ಸೊವನ್ನು ಈ ವರ್ಷ ಬಿಡುಗಡೆ ಮಾಡಿದೆ. ಎಲ್ಲಾ ಮೂರು ಹ್ಯಾಚ್‌ಬ್ಯಾಕ್‌ಗಳು ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗುತ್ತಿವೆ. ಈ ಹ್ಯಾಚ್‌ಬ್ಯಾಕ್‌ಗಳು 1.0L K10C ಎಂಜಿನ್ ಅನ್ನು ಹೊಂದಿದ್ದು, ಅದು CNG ಮೋಡ್‌ನಲ್ಲಿ 57 bhp ಪವರ್ ಮತ್ತು 82 Nm ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರುತಿ ಡಿಜೈರ್ ಸಿಎನ್‌ಜಿ/ ಸ್ವಿಫ್ಟ್ ಸಿಎನ್‌ಜಿ:
ದೇಶದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಮಾರುತಿ ಸುಜುಕಿ ಡಿಜೈರ್ ಮತ್ತು ಸ್ವಿಫ್ಟ್ ಕೂಡ ಪ್ರಮುಖವಾಗಿವೆ. ಅವುಗಳ ಆಕರ್ಷಕ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂ ಪ್ಯಾಕೇಜ್‌ಗಳು ಖರೀದಿದಾರರನ್ನು ಆಕರ್ಷಿಸುತ್ತದೆ. ಬ್ರ್ಯಾಂಡ್ ಇತ್ತೀಚೆಗೆ CNG ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಎರಡು ಕಾರುಗಳನ್ನು ಪರಿಚಯಿಸಿತ್ತು. ಈ ಸ್ವಿಫ್ಟ್ ಮತ್ತು ಡಿಜೈರ್‌ ಅಗ್ಗದ ಇಂಧನ ಬಳಕೆಯನ್ನು ನೋಡುತ್ತಿರುವ ಖರೀದಿದಾರರಿಗೆ ಉತ್ತಮವಾಗಿದೆ. ಈ ಕಾರು, 1.2L 4-ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, ಅದು ಕ್ರಮವಾಗಿ 77 bhp ಪವರ್ ಮತ್ತು 98.5 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರುತಿ ಸುಜುಕಿ XL6:
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ XL6 ಕಿಯಾ Carens ಕಾರಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ. ಬ್ರ್ಯಾಂಡ್ ಇತ್ತೀಚೆಗೆ ದೇಶದಲ್ಲಿ ಹೊಸ XL6 ಸಿಎನ್‌ಜಿ ಕಾರನ್ನು 12.24 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ (ಎಕ್ಸ್ ಶೋರೂಂ, ದೆಹಲಿ). 88 bhp ಪವರ್ ಮತ್ತು 121.5 Nm ಪೀಕ್ ಟಾರ್ಕ್ ಉತ್ಪಾದಿಸುವ ಈ ಕಾರು, 1.5L K15C ಎಂಜಿನ್ ಅನ್ನು ಹೊಂದಿದೆ. ಇದು 26.32 ಕಿಮೀ/ಕೆಜಿ ಇಂಧನ ಕಾರ್ಯಕ್ಷಮತೆಯನ್ನು ಹೊಂದಿದೆ.

ಟಾಟಾ ಟಿಯಾಗೊ ಸಿಎನ್‌ಜಿ/ ಟಿಗೊರ್ ಸಿಎನ್‌ಜಿ:
ಟಾಟಾ ಟಿಯಾಗೊ ಮತ್ತು ಟಿಗೊರ್ ಭಾರತೀಯ ಮಾರುಕಟ್ಟೆಯಲ್ಲಿ 10 ಲಕ್ಷದೊಳಗೆ ದೊರೆಯುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಅದು 1.2 ಲೀ ರೆವೊಟ್ರಾನ್ ಪೆಟ್ರೋಲ್ ಮತ್ತು 1.2 ಲೀ ರೆವೊಟ್ರಾನ್ ಬೈ-ಫ್ಯುಯೆಲ್ ಸಿಎನ್‌ಜಿ. CNG ಪವರ್‌ಟ್ರೇನ್ ಗರಿಷ್ಠ ಶಕ್ತಿ, ಕ್ರಮವಾಗಿ 73 bhp ಪವರ್ ಮತ್ತು 95 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.

ಟಾಟಾ ಟಿಯಾಗೊ ಸಿಎನ್‌ಜಿ, ಟಿಗೊರ್ ಕಾರುಗಳು 26.49 km/kg ಇಂಧನ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಎರಡು ಕಾರುಗಳು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಸುರಕ್ಷಿತ ಮತ್ತು ಆರಾಮದಾಯಕ CNG ಕಾರನ್ನು ಹುಡುಕುತ್ತಿರುವ ಖರೀದಿದಾರರಿಗೆ ಅತ್ಯಂತ ಉತ್ತಮವೆಂದು ಹೇಳಬಹುದು. ಒಟ್ಟಾರೆಯಾಗಿ ಸಿಎನ್‌ಜಿ ಕಾರುಗಳು ಇವತ್ತಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹರನ್ನು ಸೆಳೆಯುತ್ತಿದ್ದು, ಪೆಟ್ರೋಲ್, ಡೀಸೆಲ್ ಚಾಲಿತ ಕಾರುಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಬಹುದು.

Most Read Articles

Kannada
English summary
Top 10 cng cars launched in India this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X