YouTube

ಅತ್ಯುತ್ತಮ ಲೆಗ್‌ರೂಮ್‌ನೊಂದಿಗೆ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ದೊರೆಯುವ ಟಾಪ್ 10 ಹ್ಯಾಚ್‌ಬ್ಯಾಕ್‌ಗಳು

ಹೊಸ ಕಾರು ಖರೀದಿಸುವ ಪ್ರತಿಯೊಬ್ಬರು ಹಿಂಬದಿಯ ಆಸನದ ಸೌಕರ್ಯದ ಬಗ್ಗೆ ಗಮನ ಹರಿಸುತ್ತಾರೆ. ಸೆಡಾನ್‌ಗಳು ಮತ್ತು ದೊಡ್ಡ ಎಸ್‌ಯುವಿಗಳಲ್ಲಿ ಲೆಗ್‌ರೂಮ್ ಸಮಸ್ಯೆಯಾಗಿಲ್ಲದಿದ್ದರೂ, ಹ್ಯಾಚ್‌ಬ್ಯಾಕ್‌ಗಳಿಗೆ ಬಂದರೇ ಇದರ ಕೊರತೆ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ನಿಮ್ಮ ಕುಟುಂಬಕ್ಕೆ ಉತ್ತಮವಾದ ಲೆಗ್‌ರೂಮ್‌ನೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ 10 ಹ್ಯಾಚ್‌ಬ್ಯಾಕ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ.

ಟಾಟಾ ಆಲ್ಟ್ರೋಜ್
ಮೊದಲಿಗೆ ಮಧ್ಯಮ ವರ್ಗದ ಜನರು ಖರೀದಿ ಮಾಡಬಹುದಾದ ಟಾಟಾದಿಂದ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನೊಂದಿಗೆ ಪ್ರಾರಂಭಿಸೋಣ. ಉತ್ತಮ ಫೀಚರ್‌ಗಳು, ಸುರಕ್ಷತೆ ಮತ್ತು ಪ್ರೀಮಿಯಂ ಆಕರ್ಷಣೆಯನ್ನು ಬಯಸುವ ಗ್ರಾಹಕರಿಗೆ ಆಲ್ಟ್ರೋಜ್ ಅತ್ಯುತ್ತಮ ಕಾರ್ ಆಗಿದೆ. 2,501 ಎಂಎಂ ವ್ಹೀಲ್‌ಬೇಸ್‌ನೊಂದಿಗೆ ಲಭ್ಯವಿದೆ. ಅಲ್ಲದೆ, ಆಲ್ಟ್ರೋಜ್ ಅತ್ಯುತ್ತಮ ಲೆಗ್‌ರೂಮ್ ಹೊಂದಿದ್ದು, ಒಟ್ಟಾರೆ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ ಎಂದು ಹೇಳಬಹುದು. ಎಕ್ಸ್ ಶೋ ರೂಂ ಪ್ರಕಾರ, ಈ ಕಾರಿನ ಬೆಲೆ 6.34 ಲಕ್ಷ ರೂಪಾಯಿ ಇದೆ.

ಮಾರುತಿ ಬಲೆನೊ
ಅತ್ಯುತ್ತಮ ಲೆಗ್‌ರೂಮ್ ಹೊಂದಿರುವ ಈ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಮುಂದಿನದು ಮಾರುತಿ ಬಲೆನೊ. ಇದು ಟಾಟಾ Altrozಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಕ್ಯಾಬಿನ್ ಸ್ಥಳಾವಕಾಶ ಹಾಗೂ ಚಲನೆಯ ಗುಣಮಟ್ಟದಿಂದಾಗಿ ಬಲೆನೊ, ಈ ವಿಭಾಗದಲ್ಲಿ ಅತ್ಯಂತ ಆರಾಮದಾಯಕ ಕಾರುಗಳಲ್ಲಿ ಒಂದಾಗಿದೆ. 2,520ಎಂಎಂ ಉದ್ದದ ವೀಲ್‌ಬೇಸ್ ಹಿಂಭಾಗದ ಸೀಟಿನ ಪ್ರಯಾಣಿಕರಿಗೆ ಬಲೆನೊ ಅತ್ಯುತ್ತಮ ಲೆಗ್‌ರೂಮ್ ನೀಡಲು ಸಹಾಯ ಮಾಡುತ್ತದೆ. ಬಲೆನೊ ಆರಂಭಿಕ ಬೆಲೆ ರೂ. 6.49 ಲಕ್ಷ (ಎಕ್ಸ್ ಶೋ ರೂಂ ಪ್ರಕಾರ).

ಮಾರುತಿ ಸುಜುಕಿ ಸ್ವಿಫ್ಟ್
ಭಾರತೀಯರ ಅಚ್ಚುಮೆಚ್ಚಿನ ಕಾರುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಪ್ರಮುಖವಾಗಿದೆ. ಇದು ಅತ್ಯುತ್ತಮ ಲೆಗ್‌ರೂಮ್‌ನೊಂದಿಗೆ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ. ಈ ಕಾರಿನಲ್ಲಿ ಚಾಲನೆ ಮಾಡುವುದು ತುಂಬಾ ಆರಾಮದಾಯಕ ಹಾಗೂ ಮೋಜಿನಿಂದ ಕೂಡಿರುತ್ತದೆ. 2,450 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದ್ದು, ಹಿಂದಿನ ಸೀಟಿನ ಪ್ರಯಾಣಿಕರಿಗೆ ಗರಿಷ್ಠ ಲೆಗ್‌ರೂಮ್ ಇದೆ. ಈ ಮಾರುತಿ ಸುಜುಕಿ ಸ್ವಿಫ್ಟ್‌ನ ಆರಂಭಿಕ ಬೆಲೆ ರೂ. 5.92 ಲಕ್ಷ ಇದೆ (ಎಕ್ಸ್ ಶೋ ರೂಂ ಪ್ರಕಾರ).

ಹ್ಯುಂಡೈ i20
ಅತ್ಯುತ್ತಮ ಲೆಗ್‌ರೂಮ್ ಹೊಂದಿರುವ ಈ ಹ್ಯಾಚ್‌ಬ್ಯಾಕ್‌ಗಳಲ್ಲಿ ಅತ್ಯಂತ ದುಬಾರಿ ಕಾರು ಹ್ಯುಂಡೈ i20 ಆಗಿದೆ. ಎನ್-ಲೈನ್ ರೂಪಾಂತರಕ್ಕೆ ಮಾರುಕಟ್ಟೆಯಲ್ಲಿ ಬೆಲೆ 13 ಲಕ್ಷ ರೂಪಾಯಿ ಇದೆ. i20 ಅತ್ಯಂತ ಆರಾಮದಾಯಕವಾಗಿದ್ದು ಕ್ಯಾಬಿನ್ ತುಂಬಾ ವಿಶಾಲವಾಗಿದೆ. ಕಿಟಕಿಗಳು ಸಾಕಷ್ಟು ದೊಡ್ಡದಾಗಿದ್ದು, ಸಸ್ಪೆನ್ಷನ್ ತುಂಬಾ ಚೆನ್ನಾಗಿ ಟ್ಯೂನ್ ಆಗಿದೆ. ಸನ್‌ರೂಫ್‌ನಂತಹ ವೈಶಿಷ್ಟ್ಯಗಳು ಕ್ಯಾಬಿನ್ ಅನ್ನು ಹೆಚ್ಚು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಲೆಗ್‌ರೂಮ್ ಸಮಸ್ಯೆಯಲ್ಲ. ಏಕೆಂದರೆ, ಇದು 2,580ಎಂಎಂ ದೊಡ್ಡ ವೀಲ್‌ಬೇಸ್ ಅನ್ನು ಹೊಂದಿದೆ.

ಟೊಯೊಟಾ ಗ್ಲಾನ್ಜಾ, ಹ್ಯುಂಡೈ ಗ್ರಾಂಡ್ i10 ನಿಯೋಸ್
ಉತ್ತಮ ಲೆಗ್‌ರೂಮ್‌ನೊಂದಿಗೆ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಟೊಯೊಟಾ ಗ್ಲಾನ್ಜಾ ಕೂಡ ಪ್ರಮುಖವಾಗಿದ್ದು, ಬಲೆನೊದ ರೀತಿಯಲ್ಲೇ ವೀಲ್‌ಬೇಸ್ ಅನ್ನು ಹೊಂದಿದ್ದು, ಗ್ಲ್ಯಾನ್ಜಾ ಕಾರು ಸ್ವಲ್ಪ ಹೆಚ್ಚು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಮತ್ತೊಂದೆಡೆ, ಹ್ಯುಂಡೈ ಗ್ರಾಂಡ್ i10 ನಿಯೋಸ್ ಅತ್ಯುನ್ನತ ಆರಾಮದಾಯಕ ಕಾರುಗಳಲ್ಲಿ ಒಂದಾಗಿದೆ. 2,450ಎಂಎಂ ವ್ಹೀಲ್‌ಬೇಸ್, ಲೆಗ್‌ರೂಮ್ ಸಹ ಹೆಚ್ಚಿದ್ದು, ಹಿಂದಿನ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ನೀಡುತ್ತದೆ. i10 ಆರಂಭಿಕ ಬೆಲೆ 5.42 ಲಕ್ಷ ರೂ. (ಎಕ್ಸ್ ಶೋ ರೂಂ ಪ್ರಕಾರ) ಇದೆ.

ಮಾರುತಿ ಸುಜುಕಿ WagonR
ಅತ್ಯುತ್ತಮ ಲೆಗ್‌ರೂಮ್ ಹೊಂದಿರುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಸಹ ಒಂದಾಗಿದೆ. ಇದೇ ಕಾರಣಕ್ಕೆ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ ಎಂದು ಹೇಳಬಹುದು. ಇದು ಅತ್ಯುತ್ತಮ ಲೆಗ್‌ರೂಮ್ ಅನ್ನು ಹೊಂದಿದ್ದು, ಕ್ಯಾಬಿನ್ ಸಹ ಸಾಕಷ್ಟು ಅಗಲವಾಗಿದೆ. 2,435 ಎಂಎಂ ವ್ಹೀಲ್‌ಬೇಸ್ ಹೊಂದಿದ್ದರೂ ಸಹ, ವ್ಯಾಗನ್‌ಆರ್ ಅನ್ನು ಅತ್ಯಂತ ವಿಶಾಲವಾದ ಕಾರನ್ನಾಗಿ ಮಾಡಲು ಮಾರುತಿ ಸುಜಕಿ ಯಶಸ್ವಿಯಾಗಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಕಾರಿನ ಬೆಲೆ 5.47 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ ಪ್ರಕಾರ) ಇದೆ.

ರೆನಾಲ್ಟ್ ಕ್ವಿಡ್, ಮಾರುತಿ ಸೆಲೆರಿಯೊ
ಉತ್ತಮ ಲೆಗ್‌ರೂಮ್‌ನೊಂದಿಗೆ ಹ್ಯಾಚ್‌ಬ್ಯಾಕ್‌ಗಳಲ್ಲಿ ರೆನಾಲ್ಟ್ ಕ್ವಿಡ್ ಸಹ ಒಂದಾಗಿದೆ. ಇದರ ವೀಲ್‌ಬೇಸ್ 2,422ಎಂಎಂ ಇದ್ದು, ರೇರ್-ಸೆಂಟ್ರಲ್ ಆರ್ಮ್‌ರೆಸ್ಟ್ ಅನ್ನು ಸಹ ಹೊಂದಿದೆ. ಈ ಕ್ವಿಡ್‌ ಕಾರಿನ ಬೆಲೆ 4.64 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ ಪ್ರಕಾರ) ಇದೆ. ಸೆಲೆರಿಯೊ ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ಯಾಬ್ ಆಗಿದ್ದು, ಇದರ ವೀಲ್‌ಬೇಸ್ ವ್ಯಾಗನ್‌ಆರ್‌ ಅನ್ನು ಹೋಲುತ್ತದೆ. ಹಿಂಭಾಗದಲ್ಲಿ ಉತ್ತಮ ಸ್ಥಳಾವಕಾಶವಿದ್ದು, ಪ್ರಯಾಣಿಕರಿಗೆ ಸಾಕಷ್ಟು ಲೆಗ್‌ರೂಮ್, ಹೆಡ್‌ರೂಮ್ ಇದೆ. ಈ ಸೆಲೆರಿಯೊ ಕಾರಿನ ಬೆಲೆ ರೂ. 5.23 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ ಪ್ರಕಾರ) ಇದೆ.

ಟಾಟಾ ಟಿಯಾಗೊ
ಅತ್ಯುತ್ತಮ ಲೆಗ್‌ರೂಮ್ ಹೊಂದಿರುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಟಾಟಾ ಟಿಯಾಗೊ ಸಹ ಒಂದಾಗಿದೆ. ನಗರ ಪ್ರದೇಶಗಳಿಗೆ ಹೇಳಿ ಮಾಡಿಸಿದ ಕಾರು ಇದಾಗಿದೆ. ಟಿಯಾಗೊ ಪ್ಲಾಟ್‌ಫಾರ್ಮ್ ಟಾಟಾ ಟಿಗೋರ್‌ ಕಾರಿಗೆ ಹೋಲುತ್ತದೆ. 2,400ಎಂಎಂ ವ್ಹೀಲ್‌ಬೇಸ್ ಹೊಂದಿದ್ದು, ಇದು ಟೈಗೋರ್‌ಗಿಂತ ಕೇವಲ 50 ಮಿಮೀ ಕಡಿಮೆ ಇದೆ. ಆದರೆ 6 ಅಡಿ ಎತ್ತರವಿರುವ ವ್ಯಕ್ತಿಗಳಿಗೆ ಈ ಕಾರಿನಲ್ಲಿ ಸಾಕಷ್ಟು ಲೆಗ್‌ರೂಮ್ ಲಭ್ಯವಿದ್ದು, ಈ ಕಾರಿನ ಬೆಲೆ 5.45 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ ಪ್ರಕಾರ) ಇದೆ.

Most Read Articles

Kannada
English summary
Top 10 hatchbacks available in India at lowest prices with best legroom
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X