ಪ್ರತಿಸ್ಪರ್ಧಿಗಳಿಗೆ ಸೆಡ್ಡು ಹೊಡೆಯಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಕಿಯಾ ಸೆಲ್ಟೋಸ್

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ ತನ್ನ ಬಹುನಿರೀಕ್ಷಿತ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ನಡೆದ 2022ರ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ಅನಾವರಣಗೊಳಿಸಿತು.

2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಸ್ಟೈಲಿಂಗ್ ಮತ್ತು ಉನ್ನತ-ಮಟ್ಟದ ವೈಶಿಷ್ಟ್ಯಗಳ ವಿಷಯದಲ್ಲಿ ದೊಡ್ಡ ಬದಲಾವಣೆಗಳೊಂದಿಗೆ ಬರುತ್ತದೆ. ಕಿಯಾ ಸೆಲ್ಟೋಸ್‌ನ ಯುಎಸ್ ಸ್ಪೆಕ್ ಆವೃತ್ತಿಯನ್ನು ಅನಾವರಣಗೊಳಿಸಿದೆ, ಈ ಎಸ್‍ಯುವಿಯ ಬಗ್ಗೆ ಹೆಚ್ಚು ಮಾಹಿತಿ ಇಲ್ಲಿದೆ.

ವಿನ್ಯಾಸ
ಈ ಸೆಲ್ಟೋಸ್ ಎಸ್‍ಯುವಿಯು ಹೆಚ್ಚು ಪರಿಷ್ಕೃತ ಮುಂಭಾಗದ ಫಾಸಿಕದೊಂದಿಗೆ ಬರುತ್ತದೆ, ಪೂರ್ಣ-ಪ್ರೊಜೆಕ್ಷನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ದೊಡ್ಡ ಟೈಗರ್ ನೋಸ್ ಗ್ರಿಲ್ ಅನ್ನು ಒಳಗೊಂಡಿದೆ. ಇದು ಮುಂಭಾಗದ ಗ್ರಿಲ್‌ನಾದ್ಯಂತ ಸ್ಟಾರ್ ಮ್ಯಾಪ್ ಸಿಗ್ನೇಚರ್ ಲೈಟಿಂಗ್ ನೊಂದಿಗೆ ಬರುತ್ತದೆ ಮತ್ತು ಹೊಸ ಮುಂಭಾಗದ ಬಂಪರ್ ಡೇ ಟೈಮ್ ರನ್ನಿಂಗ್ ಲೈಟ್ ಗಳೊಂದಿಗೆ ಲಂಬ ಆಕಾರದ ಫಾಂಗ್ ಲ್ಯಾಂಪ್ ಗಳೊಂದಿಗೆ ಸಂಯೋಜಿಸುತ್ತದೆ.

ಇನ್ನು ಕೆಳಗಿನ ಬಂಪರ್‌ನಲ್ಲಿ ಬ್ಯಾಕ್‌ಅಪ್ ಲ್ಯಾಂಪ್ ಮತ್ತು ಹಿಂಭಾಗದ ಟೈಲ್‌ಗೇಟ್‌ನಲ್ಲಿ ಹಿಂಭಾಗದ ಲೈಟ್ ವಿನ್ಯಾಸವು ಮುಂಭಾಗದಲ್ಲಿ ಸಿಗ್ನೇಚರ್ ಲೈಟಿಂಗ್ ಅನ್ನು ಅನುಕರಿಸುತ್ತದೆ. ಇದು 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.25-ಇಂಚಿನ ಸೆಂಟರ್ ಡಿಸ್ಪ್ಲೇಯನ್ನು ಸಂಯೋಜಿಸುವ ಸೆಗ್ಮೆಂಟ್-ಮೊದಲ ಪನೋರಮಿಕ್ ಸ್ಕ್ರೀನ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡಿಜಿಟಲ್ ಗೇಜ್ ಅಪ್‌ಗ್ರೇಡ್ ಮತ್ತು ಹೊಸ ಡ್ಯಾಶ್ ಟ್ರಿಮ್‌ನೊಂದಿಗೆ 4.2-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯುತ್ತದೆ.

ಫೀಚರ್ಸ್
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿ 4 ಯುಎಸ್‌ಬಿ ಪೋರ್ಟ್‌ಗಳು, ಪವರ್ ಲಿಫ್ಟ್‌ಗೇಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಕಿಯಾ ಕನೆಕ್ಟ್ - ಕನೆಕ್ಟಿವಿಟಿ ಕಾರ್ ತಂತ್ರಜ್ಞಾನದೊಂದಿಗೆ ಬರುತ್ತದ, ಇದು ಡಿಜಿಟಲ್ ಕೀ 2 ಟಚ್ ಹೊಂದಿದ್ದು, ಐಫೋನ್, Apple ವಾಚ್ ಮತ್ತು Samsung Galaxy ಸ್ಮಾರ್ಟ್ ಸಾಧನಗಳನ್ನು ಲಾಕ್, ಅನ್‌ಲಾಕ್ ಮತ್ತು ಡ್ರೈವ್ ಮಾಡಲು ವರ್ಚುವಲ್ ವೆಹಿಕಲ್ ಕೀ ಆಗಿ ಬಳಸಲು ಅನುಮತಿಸುತ್ತದೆ.

ಈ ಕೀಗಳನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಬಹುದು. ಇದು ಮ್ಯಾಪ್ ಮತ್ತು ಇನ್ಫೋಟೈನ್‌ಮೆಂಟ್ ಓವರ್-ದಿ-ಏರ್ (OTA) ನವೀಕರಣಗಳೊಂದಿಗೆ ಬರುತ್ತದೆ. ಈ ರೂಪಾಂತರವು ಗನ್‌ಮೆಟಲ್ ಫಿನಿಶ್‌ನೊಂದಿಗೆ ವಿಶೇಷವಾದ ಮುಂಭಾಗದ ಗ್ರಿಲ್ ವಿನ್ಯಾಸದೊಂದಿಗೆ ಬರುತ್ತದೆ, ಇನ್ನು ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಅನನ್ಯವಾಗಿ ವಿನ್ಯಾಸಗೊಳಿಸಲಾದ 18-ಇಂಚಿನ ವ್ಹೀಲ್ ಗಳು, ರೂಫ್ ರ್ಯಾಕ್, ಡೋರುಗಳ ಅಲಂಕರಣ, ಎಕ್ಸ್-ಲೈನ್ ಬ್ಯಾಡ್ಜಿಂಗ್ ಮತ್ತು ಇತರವುಗಳನ್ನು ಹೊಂದಿವೆ.

ಎಂಜಿನ್
ಯುಎಸ್-ಸ್ಪೆಕ್ ಮಾದರಿಯು ಪರಿಷ್ಕೃತ 1.6-ಲೀಟರ್ ಟರ್ಬೊ GDI ನಾಲ್ಕು-ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 195 ಬಿಹೆಚ್‍ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿ 2.0-ಲೀಟರ್ 4-ಸಿಲಿಂಡರ್ MPI ಎಂಜಿನ್ ಅನ್ನು ಸಹ ಹೊಂದಿದೆ. ಈ ಎಂಜಿನ್ 147 ಬಿಹೆಚ್‍ಪಿ ಮತ್ತು 179 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ,

ತಂತ್ರಜ್ಞಾನ
ಈ ಹೊಸ ಎಸ್‍ಯುವಿಯಲ್ಲಿ ನಾರ್ಮಲ್, ಸ್ಮಾರ್ಟ್ ಮತ್ತು ಸ್ಪೋರ್ಟ್ ಎಂಬ ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಇದರೊಂದಿಗೆ ADAS ತಂತ್ರಜ್ಞಾನವನ್ನು ಹೊಂದಿದ್ದು, ಡ್ರೈವರ್ ಅಟೆನ್ಶನ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ಲೇನ್ ಫಾಲೋಯಿಂಗ್ ಅಸಿಸ್ಟ್, ರಿಯರ್ ವ್ಯೂ ಮಾನಿಟರ್, ಫಾರ್ವರ್ಡ್ ಕೊಲಿಷನ್ ಅವಾಯ್ಡೆನ್ಸ್ ಅಸಿಸ್ಟ್ ಮತ್ತು ಗೋ, ನ್ಯಾವಿಗೇಷನ್ ಆಧಾರಿತ ಸ್ಮಾರ್ಟ್ ಕ್ರೂಸ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
English summary
Top things about 2023 kia seltos suv details
Story first published: Wednesday, November 23, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X