ಆಟೋ ಎಕ್ಸ್‌ಪೋ 2023ರಲ್ಲಿ ಮುಂಬರುವ ಟಾಪ್ ಕಾರುಗಳು

ಕೆಲವೇ ದಿನಗಳಲ್ಲಿ 2022 ಕೊನೆಗೊಂಡು 2023 (ಹೊಸ ವರ್ಷ) ಆರಂಭವಾಗಲಿದ್ದು, ದೆಹಲಿಯಲ್ಲಿ ನಡೆಯಲಿರುವ ಬಹುನೀರಿಕ್ಷಿತ ಆಟೋ ಎಕ್ಸ್‌ಪೋಗೆ ಸ್ವಲ್ಪ ದಿನಗಳೇ ಬಾಕಿ ಉಳಿದಿದೆ. ಇಲ್ಲಿ ಅತ್ಯಾಕರ್ಷಕ ಹೊಸ ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಬಹು ನಿರೀಕ್ಷಿತ ಟಾಪ್ ಕಾರುಗಳ ಪಟ್ಟಿ ಇಲ್ಲಿದೆ.

ಹ್ಯುಂಡೈ ಕ್ರೆಟಾ:
ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹ್ಯುಂಡೈ, ಈಗಾಗಲೇ ಕೆಲವು ದೇಶಗಳಲ್ಲಿ ಕ್ರೆಟಾ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ಮುಂಬರುವ ಆಟೋ ಎಕ್ಸ್‌ಪೋ 2023ರಲ್ಲಿ ಕ್ರೆಟಾ ಎಸ್‌ಯುವಿಯ ಫೇಸ್‌ಲಿಫ್ಟ್ ಮಾದರಿಯನ್ನು ಬಹಿರಂಗಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ, ಹುಂಡೈ ಕ್ರೆಟಾದ ಈ ಫೇಸ್‌ಲಿಫ್ಟ್ ಆವೃತ್ತಿಯು ಹತ್ತು-ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ) ಮತ್ತು ಇತರೆ ಸುಧಾರಿತ ಫೀಚರ್ಸ್ ಜೊತೆ ಲಭ್ಯವಾಗಬಹುದು.

ಕಿಯಾ ಸೆಲ್ಟೋಸ್:
ಹುಂಡೈನಂತೆ, ಕಿಯಾ ಮೋಟಾರ್ಸ್ ಮುಂಬರುವ ಆಟೋ ಎಕ್ಸ್‌ಪೋ 2023ರಲ್ಲಿ ಕಿಯಾ ಸೆಲ್ಟೋಸ್ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಕಿಯಾ ಸೆಲ್ಟೋಸ್ ಎಸ್‌ಯುವಿಯ ಈ ಫೇಸ್‌ಲಿಫ್ಟ್ ಆವೃತ್ತಿಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಎಸಿಸಿ), ಲೇನ್ ಅಸಿಸ್ಟೆನ್ಸ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ರೇರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಟಾಟಾ ಹ್ಯಾರಿಯರ್:
ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ, ಹ್ಯಾರಿಯರ್ ಎಸ್‌ಯುವಿಯ ಮುಂಬರುವ ಫೇಸ್‌ಲಿಫ್ಟ್ ಆವೃತ್ತಿಯನ್ನು ಹಲವು ಬಾರಿ ಪರೀಕ್ಷೆಯನ್ನು ಮಾಡಿದೆ. ಮುಂಬರುವ ಆಟೋ ಎಕ್ಸ್‌ಪೋ 2023ರಲ್ಲಿ ಟಾಟಾ ಮೋಟಾರ್ಸ್ ಹ್ಯಾರಿಯರ್ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಪ್ರದರ್ಶಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಟಾಟಾ ಹ್ಯಾರಿಯರ್ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯು ರಿಫ್ರೆಶ್ಡ್ ಎಕ್ಸ್‌ಟೀರಿಯರ್ ಮತ್ತು ಎಡಿಎಎಸ್‌ ಸೇರಿದಂತೆ ಹಲವು ವೈಶಿಷ್ಟ್ಯಗಳಂದಿಗೆ ಮಾರುಕಟ್ಟೆಗೆ ಬರಬಹುದು ಎಂದು ಅಂದಾಜಿಸಲಾಗಿದೆ.

ಎಂಜಿ ಹೆಕ್ಟರ್:
ಎಂಜಿ ಮೋಟಾರ್ ತನ್ನ ಪ್ರಮುಖ ಹೆಕ್ಟರ್ ಕಾರಿನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಈ 5-ಆಸನಗಳ ಎಸ್‌ಯುವಿಯ ಭಾರೀ ಬೇಡಿಕೆ ಪಡೆದುಕೊಂಡಿತು. ಅಲ್ಲದೆ, ಹೊಸ ಖರೀದಿದಾರರನ್ನು ತನ್ನತ್ತ ಸೆಳೆದು, ದೇಶದಲ್ಲಿ ಕಂಪನಿಗೆ ಅಡಿಪಾಯವನ್ನು ಹಾಕಿತು ಎಂದು ಹೇಳಬಹುದು. ಚೀನಾ-ಮಾಲೀಕತ್ವ ಹೊಂದಿರುವ ಬ್ರಿಟಿಷ್ ಕಾರು ತಯಾರಕರ ಕಂಪನಿ ಎಂಜಿ, ಹೆಕ್ಟರ್ ಎಸ್‌ಯುವಿಯ ಬಹುನಿರೀಕ್ಷಿತ ಫೇಸ್‌ಲಿಫ್ಟ್ ಆವೃತ್ತಿಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋ 2023ರಲ್ಲಿ ಅನಾವರಣಗೊಳಿಸಬಹುದು.

ಮಾರುತಿ ಸುಜುಕಿ ಜಿಮ್ನಿ 5 - ಡೋರ್ ಎಸ್‌ಯುವಿ:
ಭಾರತದಲ್ಲಿ ಬಹು ನಿರೀಕ್ಷಿತ ಎಸ್‌ಯುವಿಗಳಲ್ಲಿ 'ಜಿಮ್ನಿ' ಸಹ ಒಂದಾಗಿದೆ. ಇಂಡೋ-ಜಪಾನೀಸ್ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ, ಮುಂಬರುವ ಆಟೋ ಎಕ್ಸ್‌ಪೋ 2023ರಲ್ಲಿ ಭಾಗವಹಿಸುವಿಕೆಯನ್ನು ದೃಢಪಡಿಸಿರುವುದರಿಂದ ಈವೆಂಟ್‌ನಲ್ಲಿ ಕಂಪನಿಯು ಮಾರುತಿ ಸುಜುಕಿ ಜಿಮ್ನಿ 5 - ಡೋರ್ ಎಸ್‌ಯುವಿಯನ್ನು ಅಧಿಕೃತವಾಗಿ ಬಹಿರಂಗಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇಷ್ಟೇ ಅಲ್ಲದೆ, ತನ್ನ ಕಂಪನಿಯ ಇತರೆ ಕಾರುಗಳನ್ನು ಸಹ ಅನಾವರಣಗೊಳಿಸುವ ಸಾಧ್ಯತೆಯಿದೆ.

ಈ ಎಸ್‌ಯುವಿಗಳು ಮಾತ್ರವಲ್ಲದೆ, ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಸಹ ಅನಾವರಣಗೊಳ್ಳುವ ಸಾಧ್ಯತೆಯಿದೆ. ಹೊಸ ತಲೆಮಾರಿನ ಸ್ವಿಫ್ಟ್‌ನ ಫೇಸ್‌ಲಿಫ್ಟ್ ಅನ್ನು ಬಹಿರಂಗಪಡಿಸಬಹುದು. ಇದರ ಅಂದಾಜು ಆರಂಭಿಕ ಬೆಲೆ 6 ಲಕ್ಷ ರೂ. ಇರಬಹುದು. ಅಲ್ಲದೆ, 2023ರಲ್ಲಿ ಕೈಗೆಟುವ ಬೆಲೆಯ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಹುಂಡೈ ಗ್ರಾಂಡ್ i10 ನಿಯೋಸ್ ಆರಂಭಿಕ ಬೆಲೆ 6 ಲಕ್ಷ ರೂ.ಗೆ ಮಾರುಕಟ್ಟೆಗೆ ಬರಬಹುದು. ಸಿಟ್ರೊಯೆನ್ ಎಸಿ 3 ಎಲೆಕ್ಟ್ರಿಕ್ ಆವೃತ್ತಿಯು ಲಾಂಚ್ ಆಗುವ ಸಾಧ್ಯತೆ ಇದ್ದು, ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರಲಿದೆ.

ಮುಂಬರುವ ಆಟೋ ಎಕ್ಸ್‌ಪೋ 2023 ಕುರಿತು ಆಲೋಚನೆಗಳು:
ಆಟೋ ಎಕ್ಸ್‌ಪೋ 2023 ಪ್ರಮುಖ ವಾಹನ ತಯಾರಿಕ ಕಂಪನಿಗಳಿಗೆ ತುಂಬಾ ಮುಖ್ಯ ಎಂದು ಹೇಳಬಹುದು. ಪ್ರಪಂಚದಾದ್ಯಂತದ ಅನೇಕ ವಾಹನ ತಯಾರಕರು ತಮ್ಮ ಮುಂಬರುವ ವಾಹನಗಳು ಮತ್ತು ಅವರ ಇತ್ತೀಚಿನ ಆವಿಷ್ಕಾರಗಳನ್ನು ಬಹಿರಂಗಪಡಿಸುತ್ತಾರೆ. ಇದಲ್ಲದೆ, ಕಾರ್ಯಕ್ರಮದಲ್ಲಿ ಭಾರತದಲ್ಲಿ ವಿವಿಧ ತಯಾರಕರಿಂದ ಮುಂಬರುವ ಹಲವಾರು ಕಾರುಗಳನ್ನು ಪ್ರದರ್ಶಿಸಲಾಗುತ್ತದೆ. ಇವು ಖಂಡಿತವಾಗಿ ಆಟೋಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Most Read Articles

Kannada
English summary
Top upcoming cars at auto expo 2023
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X