ಬಹುನಿರೀಕ್ಷಿತ 2023ರ ಆಟೋ ಎಕ್ಸ್‌ಪೋ ನಾಳೆಯಿಂದ ಪ್ರಾರಂಭ: ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಕಳೆದ ಆಟೋ ಎಕ್ಸ್‌ಪೋ 2020ರ ಫೆಬ್ರವರಿ ತಿಂಗಳಿನಲ್ಲಿ ನಡೆಯಿತು. ಇನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ಆಟೋ ಎಕ್ಸ್‌ಪೋ ನಡೆಯಬೇಕಿತ್ತು ಆದರೆ ಕೋವಿಡ್ -19 ಕಾರಣ ಅದನ್ನು ರದ್ದುಗೊಳಿಸಲಾಯಿತು. ವಾಹನಗಳ ಪ್ರದರ್ಶನವಾದ 2023ರ ಆಟೋ ಎಕ್ಸ್‌ಪೋ (Auto Expo) ನಾಳೆಯಿಂದ ಗ್ರೇಟರ್ ನೋಯ್ಡಾದಲ್ಲಿ (Greater Noida) ದಲ್ಲಿ ನಡೆಯಲಿದೆ.

ಭಾರತದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಆಟೋ ಎಕ್ಸ್‌ಪೋಗಾಗಿ ವಾಹನ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ವಾಹನ ಪ್ರಿಯರಿಗೆ ಇದು ಒಂದು ಹಬ್ಬವಾಗಿದೆ. ಬಹುನಿರೀಕ್ಷಿತ 2023ರ ಆಟೋ ಎಕ್ಸ್‌ಪೋ ನಾಳೆ (ಜನವರಿ 11) ಪ್ರಾರಂಭವಾಗುತ್ತದೆ ಮತ್ತು ಮೆಗಾ ಆಟೋಮೋಟಿವ್ ಈವೆಂಟ್‌ನ ಆರಂಭಿಕ ಎರಡು ದಿನಗಳಾದ ಜನವರಿ 11 ಮತ್ತು ಜನವರಿ 12 ರಂದು ಮಾಧ್ಯಮಗಳಿಗೆ ನಿಗದಿಪಡಿಸಲಾಗಿದೆ. ವಾಹನ ಪ್ರಿಯರ ಹಬ್ಬ ಆಟೋ ಎಕ್ಸ್‌ಪೋ ಹದಿನಾರನೇ ವರ್ಷಕ್ಕೆ ಕಾಲಿಟ್ಟಿದೆ.

ಬಹುನಿರೀಕ್ಷಿತ 2023ರ ಆಟೋ ಎಕ್ಸ್‌ಪೋ ನಾಳೆಯಿಂದ ಪ್ರಾರಂಭ

ಭಾಗವಹಿಸುವ ಪ್ರಮುಖ ಕಂಪನಿಗಳು:
2023ರ ಆಟೋ ಎಕ್ಸ್‌ಪೋದಲ್ಲಿ 48 ವಾಹನ ತಯಾರಕರು ಸೇರಿದಂತೆ 114 ಕ್ಕೂ ಹೆಚ್ಚು ಉದ್ಯಮದ ಪಾಲುದಾರರು ಭಾಗವಹಿಸಲಿದ್ದಾರೆ. ಪ್ರದರ್ಶನವು ಐದು ಜಾಗತಿಕ ಪ್ರೀಮಿಯರ್‌ಗಳನ್ನು ಒಳಗೊಂಡಿರುವ 75 ಕ್ಕೂ ಹೆಚ್ಚು ವಾಹನ ಬಿಡುಗಡೆಗಳು ಮತ್ತು ಅನಾವರಣಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕಾಂಪೊನೆಂಟ್ ಶೋನಲ್ಲಿ, ಕಂಪನಿಗಳು ತಮ್ಮ ಘಟಕಗಳು ಮತ್ತು ತಂತ್ರಜ್ಞಾನವನ್ನು ವಿವಿಧ ಪವಿಲಿಯನ್ಗಳಲ್ಲಿ ಪ್ರದರ್ಶಿಸುತ್ತವೆ. ಉತ್ಪನ್ನ ಬಿಡುಗಡೆ ಹಾಗೂ ಕಾರ್ಯಕ್ರಮಗಳು ನಡೆಯಲಿವೆ.

2023 ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುವ ವಾಹನ ತಯಾರಕರು ತುಲನಾತ್ಮಕವಾಗಿ ಕಡಿಮೆಯಿದ್ದರೂ, ಮಾರುತಿ ಸುಜುಕಿ, ಹ್ಯುಂಡೈ, ಎಂಜಿ, ಕಿಯಾ ಮತ್ತು ಇತರ ಪ್ರಮುಖ ತಯಾರಕರು ತಮ್ಮ ಜಾಗತಿಕ ಉತ್ಪನ್ನಗಳನ್ನು ಪ್ರದರ್ಶಿಸುವುದಲ್ಲದೆ, ಅವುಗಳಲ್ಲಿ ಕೆಲವನ್ನು ಬಿಡುಗಡೆ ಮಾಡುತ್ತಾರೆ. ಇನ್ನು ಎಲೆಕ್ಟ್ರಿಕ್ ವಿಭಾಗದಲ್ಲಿ, BYD ಇಂಡಿಯಾ, ವೇವ್ ಮೊಬಿಲಿಟಿ, ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಪ್ರವೈಗ್ ಡೈನಾಮಿಕ್ಸ್ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಗ್ರೀವ್ಸ್ ಕಾಟನ್, ಟಾರ್ಕ್ ಮೋಟಾರ್ಸ್, ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್, ಮೋಟೋವೋಲ್ಟ್ ಮೊಬಿಲಿಟಿ ಮತ್ತು LML ತಮ್ಮ ವಾಹನಗಳನ್ನು ಪ್ರದರ್ಶಿಸಲಿದೆ.

ಪ್ರದರ್ಶಿಸಲಾಗುವ ಬಹುನಿರೀಕ್ಷಿತ ಕಾರುಗಳು
2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಕೆಲವು ನಿರೀಕ್ಷಿತ ಕಾರುಗಳಂದರೆ, 5-ಡೋರುಗಳ ಮಾರುತಿ ಸುಜುಕಿ ಜಿಮ್ನಿ, ಹ್ಯುಂಡೈ ಐಯೊನಿಕ್ 5 ಎಲೆಕ್ಟ್ರಿಕ್ ಕಾರು, ಬಿವೈಡಿ ಇವಿ, ಟಾಟಾ ಮೋಟಾರ್ಸ್ Curvv ಕಾನ್ಸೆಪ್ಟ್, ಎಂಜಿ ಹೆಕ್ಟರ್ ಮತ್ತು ಇನ್ನೂ ಹಲವು ಪ್ರಮುಖ ಕಾರುಗಳು ಒಳಗೊಂಡಿವೆ. ಇನ್ನು ಹಲವಾರು ಜನಪ್ರಿಯ ಕಾರುಗಳು ಕೂಡ ಅನಾವರಣವಾಗು ನಿರೀಕ್ಷಿಯಿದೆ. ಅಲ್ಲದೇ ಈ ಬಾರೀ ವಿಶೇಷವಾಗಿ ಹಲವು ಹೊಸ ಎಲೆಕ್ಟ್ರಿಕ್ ವಾಹನ ತಯಾರಕರು ತಮ್ಮ ಹೊಸ ವಾಹನಗಳನ್ನು ಪರಿಚಯಿಸಲಿದೆ.

ದಿನಾಂಕ ಮತ್ತು ಟೆಕೆಟ್
2023ರ ಟೋ ಎಕ್ಸ್‌ಪೋ ಮೊದಲ ಎರಡು ದಿನಗಳಲ್ಲಿ ಮಾಧ್ಯಮಗಳಿಗೆ ಆದ್ಯತೆ ನೀಡಲಾಗುತ್ತದೆ. ಜನವರಿ 13 ರಿಂದ ಜನವರಿ 18 ರವರೆಗೆ ಸಾರ್ವಜನಿಕರು ಭಾಗವಹಿಸಲು ಸಾಧ್ಯವಾಗುತ್ತದೆ. ಸಂದರ್ಶಕರು ಜನವರಿ 13 ರಂದು ಸಾಮಾನ್ಯ ಟಿಕೆಟ್‌ಗಿಂತ ಹೆಚ್ಚು ದುಬಾರಿ ಟಿಕೆಟ್ ಖರೀದಿಸಬೇಕು. ಜನವರಿ 13 ರಂದು ಆಟೋ ಎಕ್ಸ್‌ಪೋ 2023 ರ ಟಿಕೆಟ್‌ಗಳ ಬೆಲೆ 750 ರೂ. ಆಗಿದೆ. 2023ರ ಆಟೋ ಎಕ್ಸ್‌ಪೋ ಸಂಜೆ 7:00 ರವರೆಗೆ ನಡೆಯುತ್ತದೆ.

ಈ ಆಟೋ ಎಕ್ಸ್‌ಪೋ ಜನವರಿ 14 ರಿಂದ ಜನವರಿ 18 ವರೆಗೆ ಬೆಳಿಗ್ಗೆ 11:00 ರಿಂದ ರಾತ್ರಿ 8:00 ರವರೆಗೆ ಸಾರ್ವಜನಿಕರಿಗೆ ಪ್ರವೇಶಿಸಬಹುದಾಗಿದೆ. ಜನವರಿ 14 ಮತ್ತು 15 ರ ವಾರಾಂತ್ಯದ ಆಟೋ ಎಕ್ಸ್‌ಪೋ 2023 ಟಿಕೆಟ್‌ನ ದರ 475 ರೂ. ಆದರೆ, ಉಳಿದ ದಿನಗಳ ಟೆಕೆಟ್ ದರ ರೂ. 350 ಆಗಿದೆ. 2023ರ ಆಟೋ ಎಕ್ಸ್‌ಪೋವನ್ನು ವೀಕ್ಷಿಸಲು ಬಯಸುವ ಗ್ರಾಹಕರು BookMyShow.com ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಡ್ರೈವ್‌ಸ್ಪಾರ್ಕ್ ತಂಡದಿಂದ ವಿಶೇಷ ಕವರೇಜ್
2023ರ ಆಟೋ ಎಕ್ಸ್‌ಪೋವನ್ನು ವರದಿ ಮಾಡಲು ನಮ್ಮ ತಂಡ ಈಗಾಗಲೇ ತೆರಳಿದೆ. ಇಂದು ಮದ್ಯಾಹ್ನದ ವೇಳೆಗೆ ನಮ್ಮ ತಂಡ ದೆಹಲಿಯನ್ನು ತಲುಪಿದೆ. ನಾಳೆಯಿಂದ ನಡೆಯಲಿರುವ ಆಟೋ ಎಕ್ಸ್‌ಪೋ ಬಗ್ಗೆ ನೀವು ಕನ್ನಡದಲ್ಲಿ ನಮ್ಮ ಆಟೋ ಎಕ್ಸ್‌ಪೋ 2023 ಪುಟ್ಟದಲ್ಲಿ ನಿರಂತರವಾದ ವಿಸ್ತಾರವಾದ ವರದಿಗಳನ್ನು ಓದಬಹುದು. ಅಲ್ಲದೇ ಡ್ರೈವ್‌ಸ್ಪಾರ್ಕ್ ಇತರ ಭಾಷಗಳಲ್ಲಿಯು ಲಭ್ಯವಿದೆ. 2023 ಆಟೋ ಎಕ್ಸ್‌ಪೋ ವರದಿಗಳು ಡ್ರೈವ್‌ಸ್ಪಾರ್ಕ್ ಐದು ಭಾಷೆಗಳಲ್ಲಿ ನಾಳೆಯಿಂದ ನಿರಂತರವಾಗಿ ಪ್ರಕಟವಾಗಲಿದೆ.

Most Read Articles

Kannada
English summary
Auto expo 2023 begins tomorrow tickets timing and other details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X