Just In
- 17 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Auto Expo 2023: ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಜನಪ್ರಿಯ Tata Sierra
ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 2023ರ ಆಟೋ ಎಕ್ಸ್ ಪೋದಲ್ಲಿ ಉತ್ಪಾದನೆಗೆ ಸಿದ್ಧವಾಗಿರುವ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಟಾಟಾದ ಕಾರುಗಳ ಸರಣಿಯಲ್ಲಿ ಸಫಾರಿ ಎಸ್‍ಯುವಿ ಮಾದರಿಯ ಮೇಲಿನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅಲ್ಲದೇ ಇದನ್ನು ಐಸಿಇ ರೂಪಾಂತರದಲ್ಲಿಯೂ ಬಿಡುಗಡೆಯಾಗಲಿದೆ,
ಗ್ರೇಟರ್ ನೋಯ್ಡಾದಲ್ಲಿ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಯೆರಾ ಇವಿ ಕೂಡ ಒಂದಾಗಿದೆ. ಟಾಟಾದ ಲೈನಪ್‌ನ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ICE ವಾಹನಗಳನ್ನು ಹುಟ್ಟುಹಾಕಲು ಬಳಸಬಹುದಾದ ಸ್ಕೇಲೆಬಲ್ ಪ್ಲಾಟ್‌ಫಾರ್ಮ್‌ನಲ್ಲಿದೆ. ಟಾಟಾ ಸಿಯೆರಾ ಇವಿ 2020ದಲ್ಲಿ ಆಟೋ ಎಕ್ಸ್‌ಪೋದ ಹಿಂದಿನ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾನ್ಸೆಪ್ಟ್ ಗಿಂತ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಸಿಯೆರಾ ಇವಿಯ ಒಟ್ಟಾರೆ ನೋಟವು 2020 ರಿಂದ ಹೆಚ್ಚು ಬದಲಾಗಿಲ್ಲ.
ಹೊಸದಾಗಿ ಬಹಿರಂಗಪಡಿಸಿದ ಟಾಟಾ ಸಿಯೆರಾ ಎಸ್‍ಯುವಿಯ ನೋಟ ಹಿಂದೆಂದಿಗಿಂತಲೂ ಹೆಚ್ಚು ಸಿದ್ಧವಾಗಿದೆ. ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಮುಂಭಾಗದಲ್ಲಿ ಸಂಪೂರ್ಣ ಲೈಟ್‌ಬಾರ್-ಶೈಲಿಯ DRL ಸೆಟಪ್ ಅನ್ನು ಹೊಂದಿದ್ದು, ಅದರ ಕೆಳಗೆ ಟಾಟಾ ಬ್ಯಾಡ್ಜ್ ಅನ್ನು ಹೊಂದಿದೆ. ಇದರ ಕೆಳಗೆ ನಿಜವಾದ ಹೆಡ್‌ಲ್ಯಾಂಪ್‌ಗಳನ್ನು ಸಂಪರ್ಕಿಸುವ ಕ್ರೋಮ್ ಸ್ಟ್ರಿಪ್ ಇರುತ್ತದೆ. ಇನ್ನು ICE ರೂಪದಲ್ಲಿ ಸಿಯೆರಾಗಾಗಿ ತೆರೆಯಬಹುದಾದ ದೊಡ್ಡ ಫಾಕ್ಸ್ ಗ್ರಿಲ್ ಅನ್ನು ಕೂಡ ಚಿತ್ರದಲ್ಲಿ ಕಾಣಬಹುದು.
ಈ ಹೊಸ ಸಿಯೆರಾ ಇವಿಯ ಬದಿಗಳಲ್ಲಿ ಈ ಎಸ್‍ಯುವಿ ಉತ್ಪಾದನೆಗೆ ಸಿದ್ದವಾಗಿರುವ ಮಾದರಿಯಂತೆ ಕೆಲವು ಸುಳಿವಿನ ಅಂಶಗಳನ್ನು ಹೊಂದಿವೆ. ಟಾಟಾ ಮೋಟಾರ್ಸ್‌ನ ಸಿಯೆರಾ ಇವಿ ಎಸ್‍ಯುವಿ ಸಾಂಪ್ರದಾಯಿಕ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳ ಒಳಗೆ ಇರುವ ವ್ಹೀಲ್ ಗಳು ಉತ್ಪಾದನಾ ವಾಹನದಲ್ಲಿ ಸಾಮಾನ್ಯವಾಗಿ ಕಾಣುತ್ತವೆ. ಇನ್ನು ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಹಿಂಭಾಗದಲ್ಲಿ, ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸಾಂಪ್ರದಾಯಿಕ ಟೈಲ್‌ಗೇಟ್‌ಗಳಂತೆ ಸಮಗ್ರ ರೂಫ್ ಸ್ಪಾಯ್ಲರ್ ಗೋಚರಿಸುತ್ತದೆ.
ಡ್ಯಾಶ್‌ನಲ್ಲಿ ಕಂಡುಬರುವ ಡ್ಯುಯಲ್ ಡಿಸ್ ಪ್ಲೇ ಸೆಟಪ್‌ನೊಂದಿಗೆ ಒಳಾಂಗಣಗಳು ಹೆಚ್ಚು ಸಾಂಪ್ರದಾಯಿಕವಾಗಿ ಕಾಣುತ್ತವೆ, ಇದು ಉಳಿದ ಕ್ಯಾಬಿನ್‌ನೊಂದಿಗೆ ಡ್ಯುಯಲ್-ಟೋನ್ ನೋಟವನ್ನು ಹೊಂದಿದೆ. ಟಾಟಾ ಮೋಟಾರ್ಸ್ ಸಿಯೆರಾ ಇವಿಯ ನಿಜವಾದ ಪವರ್‌ಟ್ರೇನ್ ಮತ್ತು ಅದರ ಬಿಡುಗಡೆಯ ಟೈಮ್‌ಲೈನ್ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ. ಟಾಟಾ Gen 2 ಎಲೆಕ್ಟ್ರಿಕ್ ವಾಹನಗಳ ಸರಣಿಯು 2025ರ ವೇಳೆಗೆ ಬಿಡುಗಡೆಯಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ಸಿಯೆರಾ ಯಾವಾಗ ಬೇಕಾದರೂ ಆಗಮಿಸುವ ನಿರೀಕ್ಷೆಯಿದೆ.
ಮುಂದಿನ ದಿನಗಳಲ್ಲಿ ಈ ಹೊಸ ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಇನ್ನು ಈ ಹೊಸ ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಬ್ಯಾಟರಿ ಸ್ಪೆಕ್ಸ್ ಮತ್ತು ರೇಂಜ್ ಬಗ್ಗೆ ಮಾಹಿತಿಗಳನ್ನು ಟಾಟಾ ಬಹಿರಂಗಪಡಿಸಿಲ್ಲ. ಆದರೆ ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು ಸುಮಾರು 500 ಕಿ.ಮೀ ರೇಂಜ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಟಾಟಾ ಕಂಪನಿಯು ಜೆನ್ 2 ಇವಿಗಳೊಂದಿಗೆ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಇನ್ನು ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸ್ಥಿರವಾಗಿ ದಾಖಲಿಸುತ್ತಿವೆ.
ಇದೇ ವೇಳೆಯಲ್ಲಿ ಟಾಟಾ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವದೇಶಿ ಟಾಟಾ ಮೋಟರ್ಸ್ ಕಂಪನಿಯು ದೇಶದಲ್ಲಿ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಹಲವು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ.