ಟಾಟಾ ಟಿಯಾಗೊ ಇವಿಗೆ ಪ್ರತಿಸ್ಪರ್ಧಿಯಾಗಿ ಸಿಟ್ರನ್ eC3 ಅನಾವರಣ: 320km ರೇಂಜ್ ನೀಡುತ್ತೆ!

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಇದೀಗ ಫ್ರೆಂಚ್ ಕಾರು ತಯಾರಕ ಸಿಟ್ರನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಅನಾವರಣ ಮಾಡಿದೆ. ಈ ಹೊಸ ಕಾರು, ಒಂದೇ ಚಾರ್ಜ್‌ನಲ್ಲಿ 320 ಕಿಮೀ ರೇಂಜ್ ನೀಡುತ್ತದೆ.

ಸಿಟ್ರನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗಾಗಿ ಬುಕಿಂಗ್‌ ಜನವರಿ 22 ರಂದು ಪ್ರಾರಂಭವಾಗುತ್ತದೆ. ಈ ನೂತನ eC3, ಇಂಧನ ಚಾಲಿತ C3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟಾಟಾ ಟಿಯಾಗೊ ಇವಿಗೆ ಪ್ರತಿಸ್ಪರ್ಧಿಯಾಗಿದೆ. eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಬೆಲೆಗಳು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳುವ ನಿರೀಕ್ಷೆಯಿದ್ದು, ಮುಂದಿನ ತಿಂಗಳು ಈ ಕಾರು, ಶೋರೂಂ ತಲುಪುವ ಸಾಧ್ಯತೆಯಿದೆ. ಇದರ ಬೆಲೆ ಸುಮಾರು ರೂ.9 ಲಕ್ಷ (ಎಕ್ಸ್-ಶೋರೂಂ)ದಿಂದ ಆರಂಭವಾಗಲಿದೆ.

ಟಾಟಾ ಟಿಯಾಗೊ ಇವಿಗೆ ಪ್ರತಿಸ್ಪರ್ಧಿಯಾಗಿ ಸಿಟ್ರನ್ eC3 ಅನಾವರಣ: 320km ರೇಂಜ್ ನೀಡುತ್ತೆ!

ಸಿಟ್ರನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ 29.2kWh ಬ್ಯಾಟರಿ ಪ್ಯಾಕ್, ಒಂದೇ ಚಾರ್ಜ್‌ನಲ್ಲಿ 320 km ರೇಂಜ್ ನೀಡಲಿದೆ. ಇದು 56.2 bhp ಗರಿಷ್ಠ ಪವರ್ ಮತ್ತು 143Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ಮೋಟರ್‌ ಹೊಂದಿದೆ. ಸಿಟ್ರನ್ eC3, 6.8 ಸೆಕೆಂಡುಗಳಲ್ಲಿ 0 - 60 ಕಿಮೀ / ಗಂ ವೇಗವನ್ನು ತಲುಪುತ್ತದೆ. ಅಲ್ಲದೆ, ಗಂಟೆಗೆ 107 ಕಿಮೀ ಟಾಪ್ ಸ್ವೀಡ್ ಹೊಂದಿದ್ದು, ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಎರಡು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ ಮತ್ತು ಸ್ಟ್ಯಾಂಡರ್ಡ್.

ಈ ಕಾರಿನ ಬ್ಯಾಟರಿಯನ್ನು 50kW DC ಫಾಸ್ಟ್ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 57 ನಿಮಿಷಗಳಲ್ಲಿ ಶೇಕಡ 10 ರಿಂದ 80 ರಷ್ಟು ಚಾರ್ಜ್ ಆಗುತ್ತದೆ. ಆದರೆ, ಹೋಮ್ ಚಾರ್ಜರ್ (3.3kW AC ಸೆಟಪ್) ಬಳಸಿ, ಬ್ಯಾಟರಿಯು ಶೇಕಡ 10 ರಿಂದ 100 ರಷ್ಟು ಚಾರ್ಜ್ ಆಗಲು 10.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸಿಟ್ರನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಬಂದ ಮೇಲೆ ಕಡಿಮೆ ಬೆಲೆಗೆ ದೊರೆಯುವ ಸಾಧ್ಯತೆಯಿರುವುದರಿಂದ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು.

ಟಾಟಾ ಟಿಯಾಗೊ ಇವಿಗೆ ಪ್ರತಿಸ್ಪರ್ಧಿಯಾಗಿ ಸಿಟ್ರನ್ eC3 ಅನಾವರಣ: 320km ರೇಂಜ್ ನೀಡುತ್ತೆ!

ಆದಾಗ್ಯೂ, ಹಿಂದಿನ ಇಂಧನ ಚಾಲಿತ ಕಾರಿಗೆ ಹೋಲಿಸಿದರೆ, ಸಿಟ್ರನ್ eC3 ಎಲೆಕ್ಟ್ರಿಕ್ ಕಾರ್ ಆಗಿರುವುದರಿಂದ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಸಿಟ್ರನ್ eC3 ಬ್ಯಾಟರಿ ಪ್ಯಾಕ್ ಅನ್ನು 7 ವರ್ಷಗಳ/140,000 km ವಾರಂಟಿಯೊಂದಿಗೆ ನೀಡಲಾಗುತ್ತಿದೆ. ಎಲೆಕ್ಟ್ರಿಕ್ ಮೋಟರ್‌ನ ವಾರಂಟಿಯು 5 ವರ್ಷಗಳು/100,000 ಕಿಮೀ ವರೆಗೆ ಇರಲಿದೆ. ಆದರೆ, ಹೊಸ eC3 ಕಾರಿಗೆ 3 ವರ್ಷ/125,000 ಕಿಮೀ ವಾರಂಟಿಯನ್ನು ಕೊಡಲಾಗುತ್ತದೆ.

ಸಿಟ್ರನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 26 cm ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ, ಎಮರ್ಜೆನ್ಸಿ ಸರ್ವಿಸ್ ಕಾಲ್, ಆಟೋ ಕ್ರ್ಯಾಶ್ ನೋಟಿಫಿಕೇಶನ್, OTA ಸಾಫ್ಟ್‌ವೇರ್ ಅಪ್ಡೇಟ್ ಅನ್ನು ಹೊಂದಿರಲಿದೆ. ಈ ಕಾರಿನ ಬೂಟ್ ಸ್ಪೇಸ್ 315 ಲೀಟರ್ ಸಾಮರ್ಥ್ಯ ಹೊಂದಿದ್ದು, ವೀಲ್ ಬೇಸ್ 2540 ಮಿಮೀ ಇದೆ. ಒಟ್ಟು 13 ಬಾಹ್ಯ ಬಣ್ಣದ ಆಯ್ಕೆಗಳನ್ನು ಹೊಂದಿದೆ.

ಟಾಟಾ ಟಿಯಾಗೊ ಇವಿಗೆ ಪ್ರತಿಸ್ಪರ್ಧಿಯಾಗಿ ಸಿಟ್ರನ್ eC3 ಅನಾವರಣ: 320km ರೇಂಜ್ ನೀಡುತ್ತೆ!

ಅಲ್ಲದೆ, ಸಿಟ್ರನ್ eC3 ಎಲೆಕ್ಟ್ರಿಕ್ ಕಾರಿನ ಡ್ರೈವರ್ ಸೀಟಿನ ಹೈಟ್ ಅನ್ನು ಅಡ್ಜಸ್ಟ್ ಮಾಡಬಹುದು. ಜೊತೆಗೆ ಕನೆಕ್ಟ್ದ್ ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ, 2 ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಅನ್ನು ನೀಡಲಾಗಿದ್ದು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಎಂಜಿನ್ ಇಮೊಬಿಲೈಜರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಸ್ಪೀಡ್ ಸೆನ್ಸಿಟಿವ್ ಆಟೋ ಟೂರ್ ಲಾಕ್‌ನಂತಹ ಸುರಕ್ಷತೆಯ ವೈಶಿಷ್ಟ್ಯಗಳನ್ನೂ ಹೊಂದಿದ್ದು, ಈ ಕಾರು ಖರೀದಿದಾರರಿಗೆ ಖಂಡಿತ ಇಷ್ಟವಾಗುತ್ತದೆ.

ಹೊಸ ಸಿಟ್ರನ್ eC3 ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಇವಿಗೆ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಕಾರು, ಖರೀದಿದಾದಾರಿಗೆ ಕೈಗೆಟುಕುವ ಬೆಲೆಯಲ್ಲಿ ಬರುವ ನಿರೀಕ್ಷೆ ಇದ್ದು, ಗ್ರಾಹಕರು ಖರೀದಿಗೆ ಮನಸ್ಸು ಮಾಡಬಹುದು. ಇನ್ನು, ಮಾರುಕಟ್ಟೆಯಲ್ಲಿರುವ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ ಟಾಟಾ ಟಿಯಾಗೊ ಇವಿ, ಆರಂಭಿಕ ಬೆಲೆ ರೂ.8.49 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.11.79 ಲಕ್ಷ ಇದೆ ಎಂದು ಹೇಳಬಹುದು.

Most Read Articles

Kannada
English summary
Citroen ec3 revealed specs range features details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X