ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿ ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ತನ್ನ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.22 ಕೋಟಿ ಆಗಿದೆ. ಈ ಹೊಸ ಎಸ್‍ಯುವಿಯು ಎರಡು ರೂಪಾಂತರಗಳಲ್ಲಿ ಲಬ್ಯವಿರಲಿದೆ.

ಹೆಚ್ಚುವರಿಯಾಗಿ, ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯನ್ನು ಸ್ಥಳೀಯವಾಗಿ ಜರ್ಮನ್ ವಾಹನ ತಯಾರಕರ ಚೆನ್ನೈನಲ್ಲಿರುವ ಅತ್ಯಾಧುನಿಕ ಘಟಕದಲ್ಲಿ ಉತ್ಪಾದಿಸಲಾಗಿದೆ. ಬಿಎಂಡಬ್ಲ್ಯು ಕಂಪನಿಯು ಈಗಾಗಲೇ ಭಾರತದಲ್ಲಿನ ಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಹೊಸದಾಗಿ ಬಿಡುಗಡೆಯಾದ ಬಿಎಂಡಬ್ಲ್ಯು X7 ಎಸ್‍ಯುವಿಯ ವಿತರಣೆಯು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯು ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಹೊಸ ಬಿಎಂಡಬ್ಲ್ಯು X7 ಎಸ್‍ಯುವಿ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯು ಮಿನರಲ್ ವೈಟ್, ಬ್ಲ್ಯಾಕ್ ಸಫೈರ್, ಕಾರ್ಬನ್ ಬ್ಲಾಕ್, ದ್ರಾವಿಟ್ ಗ್ರೇ, ಮತ್ತು ಟಾಂಜಾನೈಟ್ ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇವುಗಳಲ್ಲಿ, ನಂತರದ ಎರಡು ಬಣ್ಣ ಆಯ್ಕೆಗಳು ಬಿಎಂಡಬ್ಲ್ಯು ಇಂಡಿವಿಜುವಲ್ ಪೇಂಟ್‌ವರ್ಕ್‌ಗಳ ಭಾಗವಾಗಿದೆ. ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಈ ಎಸ್‍ಯುವಿಯಲ್ಲಿ 3.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್ 6, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 380 ಬಿಹೆಚ್‍ಪಿ ಪವರ್ ಮತ್ತು 520 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 3.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್ 6, ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಎಂಜಿನ್ ಆಯ್ಕೆಗಳು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 48V ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತವೆ,

ಇದು 12 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಪರಿಣಾಮವಾಗಿ, ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಎಂಡಬ್ಲ್ಯು X7 ಎಸ್‍ಯುವಿಯು ಕೇವಲ 5.8 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದಲ್ಲದೆ, ಬಳಕೆದಾರರು ಕಂಫರ್ಟ್, ಎಫಿಶಿಯೆಂಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಮೋಡ್‌ಗಳ ನಡುವೆ ಶಫಲ್ ಮಾಡುವ ಮೂಲಕ ಎಸ್‌ಯುವಿಯ ಪಾತ್ರವನ್ನು ಬದಲಾಯಿಸಬಹುದು. ಇದರ ಜೊತೆಯಲ್ಲಿ, BMW X- ಡ್ರೈವ್ ಆಲ್-ವೀಲ್ ಡ್ರೈವ್ ತಂತ್ರಜ್ಞಾನವು ಡ್ರೈವಿಂಗ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತದೆ.

ಇದರೊಂದಿಗೆ ಈ ಐಷಾರಾಮಿ ಬಿಎಂಡಬ್ಲ್ಯು X7 ಎಸ್‍ಯುವಿಯಲ್ಲಿ ಗರಿಷ್ಠ ಟ್ರ್ಯಾಕ್ಷನ್, ಚುರುಕುತನ ಮತ್ತು ವಾಹನದ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸ್ವತಃ ಸರಿಹೊಂದಿಸುತ್ತದೆ. ಇದಲ್ಲದೆ, ಈ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿ ಅಡಾಪ್ಟಿವ್ 2-ಆಕ್ಸಲ್ ಏರ್ ಸಸ್ಪೆನ್ಷನ್ ಮತ್ತು ಆಟೋಮ್ಯಾಟಿಕ್ ಡಿಫರೆನ್ಷಿಯಲ್ ಬ್ರೇಕ್‌ಗಳು/ಲಾಕ್ಸ್' (ADB-X), ವಿಸ್ತೃತ 'ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್' (DTC), ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಡಿಜಿಟಲ್ ಕೀ ಮುಂತಾದ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಇದರೊಂದಿಗೆ ಕ್ರೂಸ್ ಕಂಟ್ರೋಲ್, ಅಟೆನ್ಟಿವ್ನೆಸ್ ಅಸಿಸ್ಟೆಂಟ್, ಪಾರ್ಕಿಂಗ್ ಅಸಿಸ್ಟೆಂಟ್ ಪ್ರೊಫೆಷನಲ್, ಎಮರ್ಜೆನ್ಸಿ ಕಾಲ್, ರಿಯಲ್-ಟೈಮ್ ಟ್ರಾಫಿಕ್ ಮಾಹಿತಿ, ಮತ್ತು ರಿಮೋಟ್ ಸರ್ವಿಸ್ ಗಳನ್ನು ಹೊಂದಿವೆ. ಈ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯಲ್ಲಿ ಗಮನಾರ್ಹ ವೈಶಿಷ್ಟ್ಯಗಳು ದೊಡ್ಡ ಸ್ಕೈ ಲೌಂಜ್ ಪನೋರಮಿಕ್ ಗ್ಲಾಸ್ ಸನ್‌ರೂಫ್, 16-ಸ್ಪೀಕರ್ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್, ನೈಜ-ಸಮಯದ ಟ್ರಾಫಿಕ್ ಮಾಹಿತಿ ಮತ್ತು ವರ್ಧಿತ ವೀಕ್ಷಣೆಯೊಂದಿಗೆ ಬಿಎಂಡಬ್ಲ್ಯು ಕರ್ವ್ ಡಿಸ್ ಪ್ಲೇ, 12.3-ಇಂಚಿನ ಡಿಜಿಟಲ್ ಇನ್ಫೋರಮೆಷನ್ ಡಿಸ್ ಪ್ಲೇಯನ್ನು ನೀಡಿದೆ.

ಇನ್ನು ಈ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಲ್ಲಿ ದೊಡ್ಡದಾದ 14.9. ಇಂಚಿನ ಕಂಟ್ರೋಲ್ ಡಿಸ್ ಪ್ಲೇ ಮತ್ತು ಕಲರ್ ಹೆಡ್-ಅಪ್ ಡಿಸ್ ಪ್ಲೇಯನ್ನು ಹೊಂದಿದೆ, ಈ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿ ಜರ್ಮನ್ ವಾಹನ ತಯಾರಕರ ಪ್ರಮುಖ ಎಸ್‍ಯುವಿಯಾಗಿದೆ. ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯು ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್ನು ಈ ಐಷಾರಾಮಿ ಬಿಎಂಡಬ್ಲ್ಯು ಎಸ್‍ಯುವಿಯು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ.

Most Read Articles

Kannada
English summary
New bmw x7 launched in india specs features details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X