ಹೊಸ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನ ವಿತರಣೆ ಮಾಹಿತಿ ಬಹಿರಂಗ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.60 ಕೋಟಿ ಆಗಿದೆ.

ಇದೀಗ ಬಿಎಂಡಬ್ಲ್ಯು ಕಂಪನಿಯು ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನ ವಿತರಣೆಯ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರು ವಿತರಣೆಯು ಈ ವರ್ಷದ ಮೇ ತಿಂಗಳಿನಿಂದ ಪ್ರಾರಂಭವಾಗಲಿದೆ. ಬಿಎಂಡಬ್ಲ್ಯು ಎಕ್ಸ್ಎಂ 1970ರ ದಶಕದ ಕೊನೆಯಲ್ಲಿ ಮತ್ತು 80ರ ದಶಕದ ಆರಂಭದಲ್ಲಿ ನಿರ್ಮಿಸಲಾದ M1 ಸೂಪರ್‌ಕಾರ್‌ನ ನಂತರ ಜರ್ಮನ್ ಐಷಾರಾಮಿ ಕಾರು ತಯಾರಕರ ಮೋಟಾರ್‌ಸ್ಪೋರ್ಟ್ಸ್ (M) ವಿಭಾಗದ ಮೊದಲ ಬೆಸ್ಪೋಕ್ ಕಾರ್ ಆಗಿದೆ.

ಹೊಸ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನ ವಿತರಣೆ ಮಾಹಿತಿ ಬಹಿರಂಗ

ಬಿಎಂಡಬ್ಲ್ಯು ಎಕ್ಸ್ಎಂ ಅನ್ನು ಪ್ರಸ್ತುತ 50e ಟ್ರಿಮ್ ಮಟ್ಟದಲ್ಲಿ ಮಾತ್ರ ನೀಡಲಾಗುತ್ತದೆ ಮತ್ತು ಬಿಎಂಡಬ್ಲ್ಯು ಪ್ರಸ್ತುತ ಎಸ್‍ಯುವಿಯ ಹೆಚ್ಚು ಶಕ್ತಿಯುತ ಆವೃತ್ತಿಯನ್ನು 'ಲೇಬಲ್ ರೆಡ್' ಎಂದು ಕರೆಯಲಾಗುತ್ತಿದ್ದು ಅದನ್ನು ಮುಂದಿನ ದಿನಗಳಲ್ಲಿ ಜಗತ್ತಿಗೆ ಸರಿಯಾಗಿ ಪರಿಚಯಿಸಲಾಗುವುದು. ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನಲ್ಲಿ S68 ಟ್ವಿನ್ ಟರ್ಬೋಚಾರ್ಜ್ಡ್ 4.4-ಲೀಟರ್ V8 ಇಂಜಿನ್ ಮತ್ತು ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಈ S68 ಟ್ವಿನ್ ಟರ್ಬೋಚಾರ್ಜ್ಡ್ ಎಂಜಿನ್ ಸಂಯೋಜಿತವಾಗಿ 644 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಸಹಾಯದಿಂದ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಈ ಬಿಎಂಡಬ್ಲ್ಯು ಎಕ್ಸ್ಎಂ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಹೈಬ್ರಿಡ್ ಎಸ್‍ಯುವಿಯಲ್ಲಿ 4.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರು 2,750 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಐಷಾರಾಮಿ ಕಾರು 250 ಕಿ.ಮೀ ಟಾಪ್ ಸ್ಪೀಡ್'ಗೆ ಸೀಮಿತವಾಗಿದೆ.

ಇದನ್ನು M ಡ್ರೈವರ್ಸ್ ಪ್ಯಾಕೇಜ್‌ನೊಂದಿಗೆ 270 ಕಿ.ಮೀ.ಗೆ ಹೆಚ್ಚಿಸಬಹುದು. ಇದು ಹೈಬ್ರಿಡ್ ಆಗಿರುವುದರಿಂದ, 9.5kWh ಬ್ಯಾಟರಿ ಪ್ಯಾಕ್‌ನಿಂದ ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 88 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ಐಷಾರಾಮಿ ಕಾರು 7.4kW ಚಾರ್ಜರ್‌ನೊಂದಿಗೆ ಬ್ಯಾಟರಿ ಪ್ಯಾಕ್‌ಗೆ ಚಾರ್ಜ್ ಮಾಡುವ ಸಮಯ 4.25 ಗಂಟೆಗಳಾಗಿದೆ. ಈ ಬಿಎಂಡಬ್ಲ್ಯು ಎಕ್ಸ್ಎಂ ಕೇವಲ ಎಲೆಕ್ಟ್ರಿಕ್ ಮೋಡ್‌ನಲ್ಲಿ ಗರಿಷ್ಠ ವೇಗವು ಕೇವಲ 140 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.

ಈ ಬಿಎಂಡಬ್ಲ್ಯು ಎಕ್ಸ್ಎಂ ಕಾರು 5,110 ಎಂಎಂ ಉದ್ದ, 2,210 ಎಂಎಂ ಅಗಲ ಮತ್ತು 1,755 ಎಂಎಂ ಎತ್ತರವನ್ನು ಹೊಂದಿದೆ. ಈ ಕಾರಿನ ವೀಲ್‌ಬೇಸ್ 3,105 ಎಂಎಂ ಅನ್ನು ಹೊಂದಿದೆ. ಇನ್ನು ಈ ಕಾರಿನ ಬೂಟ್ ಸ್ಪೇಸ್ 527-ಲೀಟರ್ ಆಗಿದೆ. ಈ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್ಎಂ ಕಾರು ಕಿಡ್ನಿ ಗ್ರಿಲ್‌ಗಳಿಗೆ ಜರ್ಮನ್ ಸಂಸ್ಥೆಯ ಒಲವನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಹೊಸ X7 ಮತ್ತು 7 ಸೀರಿಸ್ ಗಳಿಂದ ಪಡೆದ ಸ್ಪ್ಲಿಟ್ ಹೆಡ್‌ಲೈಟ್‌ಗಳ ಸೆಟ್‌ನಿಂದ ಎರಡೂ ಬದಿಯಲ್ಲಿ ಸುತ್ತುವರೆದಿರುವ ಕಿಡ್ನಿ ಗ್ರಿಲ್‌ಗಳು ಆಕರ್ಷಕವಾಗಿದೆ.

ಇನ್ನು ಈ ಕಾರು ಮುಂಭಾಗದ ಬಂಪರ್ ತನ್ನ ಕೆಳಭಾಗದಲ್ಲಿ ದೊಡ್ಡ ಸೆಂಟ್ರಲ್ ಏರ್ ಡ್ಯಾಂ ಅನ್ನು ಹೊಂದಿದೆ. ಇದು ADAS ಸೆಟಪ್‌ಗಾಗಿ ಕೆಲವು ಸೆನ್ಸರ್ ಗಳನ್ನು ಸಹ ಹೊಂದಿದೆ. ಈ ಐಷಾರಾಮಿ ಕಾರು ಸ್ಪೋರ್ಟಿ ಸೈಡ್ ಪ್ರೊಪೈಲ್ ನೊಂದಿಗೆ 21-ಇಂಚುಗಳಿಂದ ಪ್ರಾರಂಭವಾಗುವ ಮತ್ತು 23-ಇಂಚಿನ ದೊಡ್ಡ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಎಸ್‍ಯುವಿಯ ವಿಂಡೋ ಲೈನ್ ಮತ್ತು ಶೋಲ್ಡರ್ ಲೈನ್‌ನಲ್ಲಿ ಸ್ವಲ್ಪ ಕ್ರೋಮ್ ಕೂಡ ಇದೆ. ಬ್ಯಾಟರಿ ಪ್ಯಾಕ್‌ಗಾಗಿ ಚಾರ್ಜಿಂಗ್ ಪೋರ್ಟ್ ಅನ್ನು ಮುಂಭಾಗದಲ್ಲಿ ಕಾಣಬಹುದು.

ಈ ಹೊಸ ಬಿಎಂಡಬ್ಲ್ಯು ಎಸ್‍ಯುವಿ ನಯವಾದ LED ಟೈಲ್‌ಲೈಟ್‌ಗಳನ್ನು ಮತ್ತು ದಪ್ಪನಾದ ಡಿಫ್ಯೂಸರ್ ಅಂಶದ ಎರಡೂ ಬದಿಗಳಲ್ಲಿ ಲಂಬವಾಗಿ ಜೋಡಿಸಲಾದ ಡ್ಯುಯಲ್ ಎಕ್ಸಾಸ್ಟ್‌ಗಳನ್ನು ಹೊಂದಿದೆ. ಬಿಎಂಡಬ್ಲ್ಯು ಎಕ್ಸ್ಎಂ ಕಾರಿನಲ್ಲಿ ಡ್ರೈವರ್ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡ್ಯುಯಲ್ 14.5-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ವಿಂಟೇಜ್ ಕಾಫಿ ಮೆರಿನೊ ಲೆದರ್ ಮತ್ತು ಮೃದುವಾದ ಬ್ಲೂ ನ್ಯಾಪ್ಪಾ ಲೆದರ್ ಅಪ್ಹೋಲ್ಸ್ಟರಿಯೊಂದಿಗೆ ಕ್ಯಾಬಿನ್ನ ಪ್ರತಿಯೊಂದು ಪ್ಯಾನೆಲ್ ಅನ್ನು ಒಳಗೊಂಡಿರುವ ಡ್ಯುಯಲ್-ಟೋನ್ ಥೀಮ್ ಅನ್ನು ಒಳಾಂಗಣವು ಒಳಗೊಂಡಿದೆ.

Most Read Articles

Kannada
English summary
New bmw xm suv deliveries will begin from may 2023 in india details
Story first published: Wednesday, January 4, 2023, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X