ಆಡಿ ಎ3 ಅಗ್ಗದ ಲಗ್ಷುರಿ ಸೆಡಾನ್ ಭಾರತಕ್ಕೆ ಎಂಟ್ರಿ

Written By:

ಆಡಿ ಎ3 ಕಾರು, ಅಗ್ಗದ ಸೆಡಾನ್ ಅಂದುಕೊಂಡರೆ ತಪ್ಪಾದಿತು. ಬದಾಲಾಗಿ ಇದು ಐಷಾರಾಮಿ ಕಾರುಗಳ ಪೈಕಿ ಲಭ್ಯವಾಗಲಿರುವ ಕಡಿಮೆ ದರದ ಸೆಡಾನ್ ಕಾರೆನಿಸಿಕೊಳ್ಳಲಿದೆ.

2014 ಆಟೋ ಎಕ್ಸ್ ಪೋ

ಹೌದು, ಪ್ರತಿಷ್ಠಿತ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಆಡಿ ಎ3 ಎಂಟ್ರಿ ಲೆವೆಲ್ ಸೆಡಾನ್ ಕಾರನ್ನು ಜರ್ಮನಿಯ ಈ ವಾಹನ ತಯಾರಕ ಸಂಸ್ಥೆ ಪರಿಚಯಿಸಿದೆ.

ಆಡಿ ಎ3 ಅಗ್ಗದ ಲಗ್ಷುರಿ ಸೆಡಾನ್ ಭಾರತಕ್ಕೆ ಎಂಟ್ರಿ

ಸಂಸ್ಥೆಯ ಪ್ರಕಾರ ಆಡಿ ಎ3 ಸೆಡಾನ್ ಕಾರು 2014 ಮಧ್ಯಂತರ ಅವಧಿಯಲ್ಲಿ ಭಾರತ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಆಡಿ ಎ3 ಅಗ್ಗದ ಲಗ್ಷುರಿ ಸೆಡಾನ್ ಭಾರತಕ್ಕೆ ಎಂಟ್ರಿ

ಇದು ಐಷಾರಾಮಿ ಕಾರುಗಳ ಪೈಕಿ ಅತಿ ಅಗ್ಗದ ಸೆಡಾನ್ ಕಾರೆನಿಸಿಕೊಳ್ಳಲಿದೆ. ಅಂದರೆ ಮರ್ಸಿಡಿಸ್ ಸಿ ಕ್ಲಾಸ್ ಮತ್ತು ಬಿಎಂಡಬ್ಲ್ಯು 3 ಸಿರೀಸ್‌ಗಿಂತಲೂ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

ಆಡಿ ಎ3 ಅಗ್ಗದ ಲಗ್ಷುರಿ ಸೆಡಾನ್ ಭಾರತಕ್ಕೆ ಎಂಟ್ರಿ

ಹಾಗಿದ್ದರೂ ನೂತನ ಕಾರಿನ ಬೆಲೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡುವಲ್ಲಿ ಕಂಪನಿ ನಿರಾಕರಿಸಿದೆ.

ಆಡಿ ಎ3 ಅಗ್ಗದ ಲಗ್ಷುರಿ ಸೆಡಾನ್ ಭಾರತಕ್ಕೆ ಎಂಟ್ರಿ

ಸರಿಯಾದ ಸಂದರ್ಭದಲ್ಲಿ ಸರಿಯಾದ ಕಾರು ಪರಿಚಯಿಸಲಾಗಿದೆ. ಇದು ವರ್ಷದ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಆಡಿ ತಿಳಿಸಿದೆ.

ಆಡಿ ಎ3 ಅಗ್ಗದ ಲಗ್ಷುರಿ ಸೆಡಾನ್ ಭಾರತಕ್ಕೆ ಎಂಟ್ರಿ

ಇದೇ ಸಂದರ್ಭದಲ್ಲಿ ಆಡಿ ಕ್ಯೂ3, ಆಡಿ ಕ್ಯೂ5 ಮತ್ತು ಕ್ಯೂ7 ಮತ್ತು ಆಡಿ ಆರ್‌ಎಸ್ ಕ್ರೀಡಾ ವರ್ಷನ್‌ಗಳನ್ನು ಸಹ ಆಡಿ ಅನಾವರಣಗೊಳಿಸಿತ್ತು.

English summary
Audi Unveils entry-level A3 sedan at 2014 Auto Expo
Story first published: Thursday, February 6, 2014, 11:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark