ಬಜಾಜ್‌ನಿಂದ ಕಾನ್ಸೆಪ್ಟ್ ಕಾರು 'ಯು' ಪ್ರದರ್ಶನ

Written By:

ಬಜಾಜ್ ಕ್ವಾಡ್ರಾಸೈಕಲ್ ನಾಲ್ಕು ಚಕ್ರದ ವಾಹನ ಇನ್ನೇನು ಕೆಲವು ತಿಂಗಳೊಳಗೆ ಭಾರತ ರಸ್ತೆ ಪ್ರವೇಶ ಪಡೆಯಲಿದೆ. ಇದು ತ್ರಿಚಕ್ರ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆ ವಾಹನ ಎಂದೇ ಬಿಂಬಿಸಲಾಗುತ್ತಿದೆ.

2014 ಆಟೋ ಎಕ್ಸ್ ಪೋ ಲೈವ್

ಈ ನಡುವೆ ರಾಷ್ಟ್ರ ರಾಜಧಾನಿಯ ಸಮೀಪದ ಗ್ರೇಟರ್ ನೋಯ್ಢಾದಲ್ಲಿ ಸಾಗುತ್ತಿರುವ 2014 ಆಟೋ ಎಕ್ಸ್ ಪೋದಲ್ಲಿ ಬಜಾಜ್ ಆಟೋ ಮಗದೊಂದು ನಾಲ್ಕು ಚಕ್ರದ ಕಾನ್ಸೆಪ್ಟ್‌ನೊಂದಿಗೆ ಮುಂದಿದೆ. ಅಷ್ಟಕ್ಕೂ ಬಜಾಜ್ ನೂತನ ಕಾನ್ಸೆಪ್ಟ್ ಮಾದರಿ ಯಾವುದು? ಕುತೂಹಲಕಾರಿ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ಬಜಾಜ್‌ನಿಂದ ಕಾನ್ಸೆಪ್ಟ್ 'ಯು' ಕಾರು ಪ್ರದರ್ಶನ

ದೆಹಲಿಯಲ್ಲಿ ಸಾಗುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್ ನೂತನ ಕಾನ್ಸೆಪ್ಟ್ 'ಯು' ಕಾರನ್ನು ಪ್ರದರ್ಶಿಸಿದೆ.

ಬಜಾಜ್‌ನಿಂದ ಕಾನ್ಸೆಪ್ಟ್ 'ಯು' ಕಾರು ಪ್ರದರ್ಶನ

ನಾಲ್ಕು ಚಕ್ರದ ಯು ಕಾನ್ಸೆಪ್ಟ್ ಕಾರು ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ.

ಬಜಾಜ್‌ನಿಂದ ಕಾನ್ಸೆಪ್ಟ್ 'ಯು' ಕಾರು ಪ್ರದರ್ಶನ

ಬಜಾಜ್ ಆರ್‌ಇ60 ಮುಂದುವರಿದ ಆವೃತ್ತಿಯಂತೆ ಗೋಚರಿಸುತ್ತಿರುವ ನೂತನ ಕಾರು ಯಾವಾಗ ಉತ್ಪಾದನೆ ವರ್ಷನ್ ಪಡೆದುಕೊಳ್ಳಲಿದೆ ಎಂಬುದಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.

ಬಜಾಜ್‌ನಿಂದ ಕಾನ್ಸೆಪ್ಟ್ 'ಯು' ಕಾರು ಪ್ರದರ್ಶನ

ಇದು ಪ್ರಮುಖವಾಗಿಯೂ ನಗರ ಪ್ರದೇಶದ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಇದು ಫೋರ್ ವಾಲ್ವೆ, ಟ್ರಿಪರ್ ಸ್ಪಾರ್ಕ್ ಗ್ಯಾಸೋಲೈನ್ ‌ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಬಜಾಜ್‌ನಿಂದ ಕಾನ್ಸೆಪ್ಟ್ 'ಯು' ಕಾರು ಪ್ರದರ್ಶನ

ಇದಕ್ಕೂ ಮೊದಲು ಬಜಾಜ್ ಸಂಸ್ಥೆಯು ಪಲ್ಸರ್ 400 ಹಾಗೂ ಪಲ್ಸರ್ ಸಿಎಸ್400 ಕ್ರೂಸರ್ ಬೈಕ್‌ಗಳನ್ನು ಅನಾವರಣಗೊಳಿಸಿತ್ತು.

ಬಜಾಜ್‌ನಿಂದ ಕಾನ್ಸೆಪ್ಟ್ 'ಯು' ಕಾರು ಪ್ರದರ್ಶನ

ಸದ್ಯ ಮೊದಲ ಮಾದರಿಯಲ್ಲಿರುವ (ಪ್ರೊಟೊಟೈಪ್) ಬಜಾಜ್ ನೂತನ ಕಾನ್ಸೆಪ್ಟ್‌ನ 'ಯು' ನಾಮಕರಣದಲ್ಲಿ ಏನಾದರೂ ವಿಶಿಷ್ಟತೆಯಿದೆಯೇ ಎಂಬುದೂ ಕೂಡಾ ತಿಳಿದು ಬಂದಿಲ್ಲ.

English summary
Bajaj Auto unveils concept car 'U' at 2014 Auto Expo
Story first published: Wednesday, February 5, 2014, 17:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark