ಕಾರು ಡ್ಯಾಶ್‌ಬೋರ್ಡ್ ವಾರ್ನಿಂಗ್ ಲೈಟ್ಸ್

Written By:

ಅರೆರೆ... ಕಾರು ಖರೀದಿಸಿ ತಿಂಗಳುಗಳೇ ಉರುಳಿತು. ಇನ್ನೂ ಸಹ ಕಾರಿನ ಡ್ಯಾಶ್ ಬೋರ್ಡ್ ಎಂದರೇನು? ಅದರಲ್ಲಿರುವ ವಾರ್ನಿಂಗ್ ಲೈಟ್ಸ್ ಹೇಗೆ ಕಾರ್ಯಾಚರಿಸುತ್ತದೆ ಎಂಬುದರ ಬಗ್ಗೆ ನಿಮಗೆ ಗೊತ್ವಿಲ್ವೆ?

ಹೌದು, ಹೊಸದಾಗಿ ಕಾರು ಖರೀದಿಸಿದ ಅನೇಕರಿಗೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಕಾರ್ಯ ನಿರ್ವಹಿಸುವ ವಾರ್ನಿಂಗ್ ಲೈಟ್ಸ್ (Warning Lights) ಬಗ್ಗೆ ತಿಳುವಳಿಕೆಯಿರುವುದಿಲ್ಲ. ಇದೇ ಕಾರಣಕ್ಕಾಗಿ ಹಲವಾರು ಬಾರಿ ಪೇಚಿಗೆ ಸಿಲುಕಿಕೊಳ್ಳಬೇಕಾಗುತ್ತದೆ.

ಕಾರು ಕೊಂಡುಕೊಂಡ ಪ್ರತಿಯೊಬ್ಬರು ತಮ್ಮ ಕಾರಿನ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿರಬೇಕಾಗಿರುವುದು ಅತಿ ಅಗತ್ಯ. ಅದರಲ್ಲೂ ಪ್ರಮುಖವಾಗಿಯೂ ಚಾಲನೆ ವೇಳೆ ನಿಮ್ಮ ನೆರವಿಗೆ ಬರುವ ಡ್ಯಾಶ್‌ಬೋರ್ಡ್ ಎಚ್ಚರಿಕಾ ಬೆಳಕಿನ ಕುರಿತು ಕಿಂಚಿತ್ತು ಸಂಶಯಗಳು ಇರಕೂಡದು.

ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಓದುಗರಿಗಾಗಿ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಕಾಣಸಿಗುವ ಎಚ್ಚರಿಕಾ ಸನ್ನೆಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದು ನಿಮ್ಮ ಚಾಲನಾ ಕೌಶಲ್ಯವನ್ನು ಇಮ್ಮಡಿಗೊಳಿಸುವ ಭರವಸೆ ನಮ್ಮದ್ದು.

ಡ್ಯಾಶ್‌ಬೋರ್ಡ್ ಎಂದರೇನು?

ಡ್ಯಾಶ್‌ಬೋರ್ಡ್ ಎಂದರೇನು?

ಕಾರಿನ ಎದುರುಗಡೆ ಡ್ರೈವರ್ ಎಡಭಾಗದಲ್ಲಿ ಕಂಡುಬರುವ ಡ್ಯಾಶ್‌ಬೋರ್ಡನ್ನು ಸಾಮನ್ಯವಾಗಿ ಡ್ಯಾಶ್ ಅಥವಾ ಇನ್ಸ್ಟ್ರುಮೆಂಟ್ ಪ್ಯಾನೆಲ್ ಅಥವಾ ಫ್ರಂಟ್ ಫೇಸಿಯಾ ಎಂದು ಕರೆಯಲ್ಪಡುತ್ತದೆ. ಇದನ್ನು ಚಾಲಕರ ನಿಯಂತ್ರಣ ಫಲಕ (ಕಂಟ್ರೋಲ್ ಪ್ಯಾನೆಲ್) ಎಂಬುದಾಗಿ ಚುಟುಕಾಗಿ ವಿವರಿಸಬಹುದು. ಅಂತೆಯೇ ಇದು ವಾಹನದ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತದೆ.

ಏನೆಲ್ಲ ಇರುತ್ತೇ?

ಏನೆಲ್ಲ ಇರುತ್ತೇ?

ಸ್ಟೀರಿಂಗ್ ವೀಲ್ ಸೇರಿದ ಇನ್ಸ್ಟ್ರುಮೆಂಟ್ ಕ್ಲಸ್ಟರನ್ನು ಡ್ಯಾಶ್‌ಬೋರ್ಡ್ ಹೊಂದಿರುತ್ತದೆ. ಇದು ಸ್ಪೀಡೋ ಮೀಟರ್, ವೇಗಮಾಪಕ, ದೂರ ಮಾಪಕ, ಫ್ಯೂಯಲ್ ಗೇಜ್ ಜತೆಗೆ ಗೇರ್ ಶಿಫ್ಟ್ ಮಾಹಿತಿ, ಸೀಟ್ ಬೆಲ್ಟ್ ವಾರ್ನಿಂಗ್ ಲೈಟ್, ಪಾರ್ಕಿಂಗ್-ಬ್ರೇಕ್ ವಾರ್ನಿಂಗ್ ಲೈಟ್ ಹಾಗೂ ಎಂಜಿನ್ ಅಸಮರ್ಪಕ ಲೈಟ್ಸ್ ಸೂಚಕಗಳನ್ನು (ಇಂಡಿಕೇಟರ್) ಹೊಂದಿರುತ್ತದೆ. ಅಷ್ಟೇ ಅಲ್ಲದೆ ಕಡಿಮೆ ಇಂಧನ, ಕಡಿಮೆ ಇಂಧನ ಒತ್ತಡ, ಏರ್‌ಬ್ಯಾಗ್‌ನಲ್ಲಿ ಇನ್ನಿತರ ತೊಂದರೆಗಳು, ತಾಪಕ ಹಾಗೂ ಗಾಳಿ ನಿಯಂತ್ರಣ ಕಂಟ್ರೋಲ್, ಲೈಟಿಂಗ್ ಕಂಟ್ರೋಲ್, ಆಡಿಯೋ ಸಾಧನ ಹಾಗೂ ಆಟೋಮೋಟಿವ್ ನೇವಿಗೇಷನ್ ಸಿಸ್ಟಂಗಳು ಡ್ಯಾಶ್‌ಬೋರ್ಡ್‌ನಲ್ಲಿ ಲಗತ್ತಿಸಲಾಗಿರುತ್ತದೆ.

ಕಡಿಮೆ ಇಂಧನ ಸೂಚಕ

ಕಡಿಮೆ ಇಂಧನ ಸೂಚಕ

ಇದು ಕಾರಿನಲ್ಲಿ ಕಡಿಮೆ ಇಂಧನ ಸೂಚನೆಯನ್ನು (Low Fuel Indicator) ತೋರಿಸುತ್ತದೆ. ಇದು ರಿಸರ್ವ್ ಹಂತವನ್ನು ತಲುಪಿದ್ದಲ್ಲಿ ತುರ್ತಾಗಿ ನೀವು ಇಂಧನ ತುಂಬತಕ್ಕದ್ದು.

ಒನ್ ಬೋರ್ಡ್ ಡಯಾಗ್ನೊಸ್ಟಿಕ್ ಇಂಡಿಕೇಟರ್

ಒನ್ ಬೋರ್ಡ್ ಡಯಾಗ್ನೊಸ್ಟಿಕ್ ಇಂಡಿಕೇಟರ್

ಒನ್ ಬೋರ್ಡ್ ಡಯಾಗ್ನೊಸ್ಟಿಕ್ ಇಂಡಿಕೇಟರ್ (OBD) ಕಾರಿನ ಎಂಜಿನ್ ನಿರ್ವಹಣಾ ವ್ಯವಸ್ಥೆ ಅಥವಾ ಹೊಗೆ ಹೊರಸೂಸುವಿಕೆಯಲ್ಲಿ ಏನಾದರೂ ತೊಂದರೆಯಿದೆಯೇ ಎಂಬುದನ್ನು ನಿಗಾವಹಿಸುವುದಲ್ಲದೆ ಸವಾರರಿಗೆ ವಾರ್ನಿಂಗ್ ಲೈಟ್ಸ್ ಮೂಲಕ ಎಚ್ಚರಿಕೆಯನ್ನು ರವಾನಿಸಲಿದೆ.

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಇಂಡಿಕೇಟರ್

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಇಂಡಿಕೇಟರ್

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂನಲ್ಲಿ (ಎಬಿಎಸ್) ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡ್ಡಲ್ಲಿ ವಾರ್ನಿಂಗ್ ಲೈಟ್ ಆನ್ ಆಗಲಿದೆ.

ಬ್ಯಾಟರಿ ಹಾಗೂ ಚಾರ್ಜಿಂಗ್ ಇಂಡಿಕೇಟರ್

ಬ್ಯಾಟರಿ ಹಾಗೂ ಚಾರ್ಜಿಂಗ್ ಇಂಡಿಕೇಟರ್

ಬಹುತೇಕರಿಗೆ ತಿಳಿದಿರುವಂತೆಯೇ ಬ್ಯಾಟರಿ ಸರಿಯಾಗಿ ಚಾರ್ಜ್ ಆಗಿಲ್ಲವಾದ್ದಲ್ಲಿ ಇದು ಕಾರ್ಯಾಚರಿಸಲಿದೆ.

ಎಂಜಿನ್ ತಾಪಮಾನ ಎಚ್ಚರಿಕೆ

ಎಂಜಿನ್ ತಾಪಮಾನ ಎಚ್ಚರಿಕೆ

ಎಂಜಿನ್ ಅತಿಯಾಗಿ ಬಿಸಿಯಾಗಿದ್ದಲ್ಲಿ ಈ ತಂತ್ರಗಾರಿಕೆ ನಿಮ್ಮನ್ನು ಎಚ್ಚರಿಸಲಿದೆ. ಈ ವೇಳೆಯಲ್ಲಿ ಸ್ವಲ್ಪ ಹೊತ್ತು ಎಂಜಿನ್ ಆಫ್ ಮಾಡಿದರೆ ಉತ್ತಮ.

ಒಯಿಲ್ ಒತ್ತಡ ಎಚ್ಚರಿಕೆ

ಒಯಿಲ್ ಒತ್ತಡ ಎಚ್ಚರಿಕೆ

ಕಡಿಮೆ ಒಯಿಲ್ ಒತ್ತಡದಿಂದಾಗಿ ಎಂಜಿನ್‌ಗೆ ಬಲವಾದ ಪೆಟ್ಟಾಗುವ ಸಂಭವವಿದೆ. ಹಾಗಿದ್ದರೂ ತುರ್ತಾಗಿ ಸರ್ವೀಸ್ ಮಾಡುವುದರಿಂದ ಇಂತಹ ಅಪಾಯವನ್ನು ತಪ್ಪಿಸಬಹುದು.

ಫಾಗ್ ಲ್ಯಾಂಪ್ ಇಂಡಿಕೇಟರ್

ಫಾಗ್ ಲ್ಯಾಂಪ್ ಇಂಡಿಕೇಟರ್

ಫಾಗ್ ಲ್ಯಾಂಪ್ ಆನ್ ಆಗಿದ್ದಲ್ಲಿ ಇದು ಕಾರ್ಯಾಚರಿಸಲಿದೆ.

ಫುಲ್ ಬೀಮ್ ಇಂಡಿಕೇಟರ್

ಫುಲ್ ಬೀಮ್ ಇಂಡಿಕೇಟರ್

ಹಾಗೆಯೇ ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ಚಲಿಸುವಾಗ ಫುಲ್ ಬೀಮ್ ಲೈಟ್ ಪ್ರಯೋಗಿಸಿದ್ದಲ್ಲಿ ಇಂಡಿಕೇಟರ್ ನಿಮಗೆ ಸೂಚನೆ ನೀಡಲಿದೆ.

ಫ್ರಂಟ್ ಏರ್ ಬ್ಯಾಗ್

ಫ್ರಂಟ್ ಏರ್ ಬ್ಯಾಗ್

ಮ್ಯಾನುವಲ್ ಆಗಿ ಫ್ರಂಟ್ ಏರ್ ಬ್ಯಾಗ್ ಆಫ್ ಮೋಡಲ್ಲಿರಿಸಿದರೆ ಇದರ ಎಚ್ಚರಿಕೆ ಬೆಳಕು ಕಾರ್ಯಾಚರಿಸಲಿದೆ.

ಚಕ್ರಗಳ ಒತ್ತಡ ಸೂಚಕ

ಚಕ್ರಗಳ ಒತ್ತಡ ಸೂಚಕ

ಹಾಗೆಯೇ ಚಕ್ರಗಳ ಮೇಲಿನ ಒತ್ತಡ ಸೆನ್ಸಾರ್ ಕೂಡಾ ಕಾರಿನಲ್ಲಿ ಲಗತ್ತಿಸಲಾಗಿರುತ್ತದೆ. ಇದನ್ನು ಆದಷ್ಟು ಬೇಗನೇ ಸರಿಪಡಿಸುವುದರಿಂದ ಉತ್ತಮ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

ಕಾರ್ ಡೋರ್ ಇಂಡಿಕೇಟರ್

ಕಾರ್ ಡೋರ್ ಇಂಡಿಕೇಟರ್

ನೀವು ಕಾರನ್ನು ಪಾರ್ಕ್ ಮಾಡಿದ ಬಳಿಕ ತೆರಳುವಾಗ ಸರಿಯಾಗಿ ಲಾಕ್ ಆಗದಿದ್ದಲ್ಲಿ ನಿಮ್ಮನ್ನು ಎಚ್ಚರಿಸಲಿದೆ. ಅಷ್ಟೇ ಯಾಕೆ ಕೆಲವು ಕಾರುಗಳಂತೂ ಎಷ್ಟು ಆಧುನಿಕೆಯತೆಯನ್ನು ಪಡೆದುಕೊಂಡಿದೆ ಅಂದರೆ ಕಾರಿನ ಡೋರುಗಳು ಸಂಪೂರ್ಣವಾಗಿ ಮುಚ್ಚದಿದ್ದಲ್ಲಿ ಅಂತಹ ಕಾರುಗಳನ್ನು ಸ್ಟಾರ್ಟ್ ಮಾಡುವುದು ಅಸಾಧ್ಯದ ಮಾತು.

ಸೀಟ್ ಬೆಲ್ಟ್ ರಿಮೈಂಡರ್

ಸೀಟ್ ಬೆಲ್ಟ್ ರಿಮೈಂಡರ್

ಇನ್ನು ಸೀಟ್ ಬೆಲ್ಟ್ ಬಿಗಿಯಾಗಿ ಧರಿಸದಿದ್ದಲ್ಲಿ ಇದು ವಾರ್ನಿಂಗ್ ನೀಡಲಿದೆ. ಇಲ್ಲೂ ಅಷ್ಟೇ ಈ ವ್ಯವಸ್ಥೆ ಹೊಂದಿರುವ ಕೆಲವು ಕಾರುಗಳನ್ನು ಸ್ಟಾರ್ಟ್ ಮಾಡಲು ಸಾಧ್ಯವಿಲ್ಲ.

ಬ್ರೇಕ್ ಅಲರ್ಟ್ ಇಂಡಿಕೇಟರ್

ಬ್ರೇಕ್ ಅಲರ್ಟ್ ಇಂಡಿಕೇಟರ್

ಕೆಲವು ಮಂದಿ ಕಾರು ಆಫ್ ಮಾಡಿದ ಬಳಿಕ ಹ್ಯಾಂಡ್ ಬ್ರೇಕ್ ಹಾಕಲು ಮರೆತು ಬಿಡುತ್ತಾರೆ. ಇನ್ನು ಕೆಲವು ಬಾರಿ ಹ್ಯಾಂಡ್ ಬ್ರೇಕ್ ಆಫ್ ಮಾಡದೇ ಕಾರು ಸ್ಟಾರ್ಟ್ ಮಾಡುವ ಗೋಜಿಗೆ ಹೋಗುತ್ತಾರೆ. ಈ ತಪ್ಪಾದ ಪ್ರಕ್ರಿಯೆ ಸಂದರ್ಭದಲ್ಲಿ ಬ್ರೇಕ್ ಅಲರ್ಟ್ ಇಂಡಿಕೇಟರ್ ನೆರವಿಗೆ ಬರಲಿದೆ.

ಹಜಾರ್ಡ್ ಲ್ಯಾಂಪ್

ಹಜಾರ್ಡ್ ಲ್ಯಾಂಪ್

ರಾತ್ರಿ ವೇಳೆಯಲ್ಲಿ ಹಜಾರ್ಡ್ ಲ್ಯಾಂಪ್ ಹೆಚ್ಚು ಬಳಕೆಗೆ ಬರುತ್ತದೆ. ಇದನ್ನು ಆನ್ ಮಾಡಿದ್ದಲ್ಲಿ ಹಿಂದೆ ಬರುವ ಸವಾರರನ್ನು ಎಚ್ಚರಿಸುತ್ತದೆ.

ವಿಂಡ್ ಶೀಲ್ಡ್ ಡಿಫ್ರಾಸ್ಟ್

ವಿಂಡ್ ಶೀಲ್ಡ್ ಡಿಫ್ರಾಸ್ಟ್

ಇದು ಪ್ರಮುಖವಾಗಿಯೂ ಮಳೆಗಾಲ ಹಾಗೂ ಚಳಿಗಾಲದಲ್ಲಿ ಹೆಚ್ಚಾಗಿ ಬಳಕೆಗೆ ಬರುತ್ತದೆ.

ಗ್ಲೋ ಪ್ಲಗ್ ವಾರ್ನಿಂಗ್

ಗ್ಲೋ ಪ್ಲಗ್ ವಾರ್ನಿಂಗ್

ಸಾಮಾನ್ಯವಾಗಿ ಡೀಸೆಲ್ ಎಂಜಿನ್‌ಗಳಲ್ಲಿ ಗ್ಲೋ ಪ್ಲಗ್ ಬಳಕೆಯಾಗುತ್ತದೆ. ಇದು ತಪ್ಪಾದ ಗ್ಲೋ ಪ್ಲಗ್ ಅಥವಾ ಎಂಜಿನ್ ನಿರ್ವಹಣಾ ವ್ಯವಸ್ಥೆಯಲ್ಲಿ ತೊಂದರೆಗಳಿದ್ದರೆ ಆನ್ ಆಗುತ್ತದೆ.

 ಚೈಲ್ಡ್ ಸೇಫ್ಟಿ ಲಾಕ್

ಚೈಲ್ಡ್ ಸೇಫ್ಟಿ ಲಾಕ್

ಇಂದೊಂದು ಉತ್ತಮ ಎಚ್ಚರಿಕಾ ಸೂಚಕವಾಗಿದ್ದು, ಕಾರು ಚೈಲ್ಡ್ ಲಾಕ್ ಆನ್ ಮಾಡಿದಾಗ ನಿಮಗೆ ಲೈಟ್ಸ್ ಮೂಲಕ ವಾರ್ನಿಂಗ್ ನೀಡುತ್ತದೆ.

ಕ್ರೂಸ್ ಕಂಟ್ರೋಲ್

ಕ್ರೂಸ್ ಕಂಟ್ರೋಲ್

ಕ್ರೂಸ್ ಕಂಟ್ರೋಲ್ ಆಕ್ಟಿವ್ ಆಗಿದ್ದಲ್ಲಿ ಬಟನ್ ಆನ್ ಆಗಲಿದೆ. ಇದು ಹೆದ್ದಾರಿಯಲ್ಲಿ ಚಲಿಸುವಾಗ ನಿಮ್ಮ ವೇಗತೆಗೆ ಅನುಸಾರವಾಗಿ ನಿರ್ವಹಿಸಬಹುದು.

ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್

ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್

ವಿದ್ಯುನ್ಮಾನ ನಿಯಂತ್ರಿತ ಪವರ್ ಸ್ಟೀರಿಂಗ್‌ನಲ್ಲಿ ಏನಾದರೂ ತೊಂದರೆಗಳು ಕಾಣಿಸಿಕೊಂಡಲ್ಲಿ ಇದು ಆನ್ ಆಗಲಿದೆ.

ರಿಯರ್ ಫಾಗ್ ಲ್ಯಾಂಪ್

ರಿಯರ್ ಫಾಗ್ ಲ್ಯಾಂಪ್

ಹಿಂದುಗಡೆ ಲಗತ್ತಿಸಲಾಗಿರುವ ಫಾಗ್ ಲ್ಯಾಂಪ್ ಆನ್ ಆಗಿದ್ದಲ್ಲಿ ಇದು ತೋರಿಸಲಿದೆ.

ರಿಯರ್ ವಿಂಡೋ ಡಿಫಾಗರ್

ರಿಯರ್ ವಿಂಡೋ ಡಿಫಾಗರ್

ಇನ್ನು ಫ್ರಂಟ್ ಮಿರರ್ ಡಿಫಾಗರ್ ತರಹನೇ ರಿಯರ್ ವಿಂಡೋ ಡಿಫಾಗರ್ ಕಾರ್ಯಾಚರಿಸಲಿದೆ.

ಟರ್ನ್ ಸಿಗ್ನಲ್

ಟರ್ನ್ ಸಿಗ್ನಲ್

ಹಾಗೆಯೇ ತಿರುವಿನ ವೇಳೆ ಎಡ ಹಾಗೂ ಬಲ ತಿರುವುಗಳನ್ನು ಇದು ಸೂಚಿಸಲಿದೆ.

English summary
The dashboard, instrument cluster is an extremely important part of any car. The speedometer, rev counter, fuel and odometer are the most prominent needles and numbers. They are also the ones which we notice the most while driving every single time. Having said that, there are other, more subtle lamps and symbols which adorn the dashboard of a modern car.
Story first published: Tuesday, October 29, 2013, 14:33 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more