ಆಗಸ್ಟ್ ತಿಂಗಳು ಕಾರು ಖರೀದಿಗೆ ಸೂಕ್ತ ಕಾಲವೇ?

Written By:

ಕಳೆದ ಕೆಲವು ಸಮಯಗಳಿಂದ ಕಾರು ಮಾರುಕಟ್ಟೆ ಹಿನ್ನಡೆ ಅನುಭವಿಸಿರುವ ಹಿನ್ನಲೆಯಲ್ಲಿ ಜುಲೈ ತಿಂಗಳಲ್ಲೂ ಕೆಲವು ಪ್ರಮುಖ ಕಾರು ತಯಾರಕ ಸಂಸ್ಥೆಗಳು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ತನ್ನ ಜನಪ್ರಿಯ ಮಾಡೆಲ್‌ಗಳಿಗೆ ಡಿಸ್ಕೌಂಟ್‌ಗಳನ್ನು ಘೋಷಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಕೆಲವು ನಿರ್ದಿಷ್ಟ ಮಾಡೆಲ್‌ಗಳನ್ನು ಹೊರತುಪಡಿಸಿದರೆ ಇತರೆಲ್ಲ ಮಾದರಿಗಳು ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಂಪನಿಯಿಂದ ಇಂತಹದೊಂದು ನಡೆ ಕೈಗೊಂಡಿದೆ.

ಅಂದ ಹಾಗೆ ಈ ಆಗಸ್ಟ್ ತಿಂಗಳಲ್ಲಿ ದೇಶದ ಯಾವೆಲ್ಲ ಪ್ರಮುಖ ಕಾರು ತಯಾರಕ ಸಂಸ್ಥೆಗಳು ಹಾಗೂ ಅವುಗಳು ನೀಡುತ್ತಿರುವ ರಿಯಾಯಿತಿ ದರಗಳನ್ನು ಪಟ್ಟಿ ಮಾಡುವ ಪ್ರಯತ್ನವನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಮಾಡುತ್ತಿದೆ.

ಮಾರುತಿ ಸುಜುಕಿ

ಮಾರುತಿ ಸುಜುಕಿ

ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ವ್ಯಾಗನಾರ್ ಆವೃತ್ತಿಗೆ ಆಕರ್ಷಕ ರಿಯಾಯಿತಿ ದರ ಘೋಷಿಸಿದ್ದು, ರು. 42,000 ವರೆಗೆ ಉಳಿತಾಯ ಮಾಡಬಹುದಾಗಿದೆ. ಇದರ ಜತೆಗೆ 20,000 ರು.ಗಳ ಎಕ್ಸ್‌ಚೇಂಜ್ ಬೋನಸ್ ಕೂಡಾ ಮುಂದಿಡುತ್ತಿದೆ. ವಿಎಕ್ಸ್‌ಐ ಹಾಗೂ ವಿಎಕ್ಸ್‌ಐ ಎಬಿಎಸ್ ಮಾಡೆಲ್ ಹೊರತುಪಡಿಸಿ ಇತರೆಲ್ಲ ಮಾದರಿಗಳಿಗೆ ಇದು ಅನ್ವಯವಾಗಲಿದೆ.

ಫೋಕ್ಸ್‌ವ್ಯಾಗನ್ ಜೆಟ್ಟಾ

ಫೋಕ್ಸ್‌ವ್ಯಾಗನ್ ಜೆಟ್ಟಾ

ಜೆಟ್ಟಾ ಪೆಟ್ರೋಲ್ ಹಾಗೂ ಎಲ್ಲ ಡೀಸೆಲ್ ಮ್ಯಾನುವಲ್ ವರ್ಷನ್‌ಗಳಿಗೆ ಒಂದು ವರ್ಷದ ವಿಮೆಯನ್ನು ಉಚಿತವಾಗಿ ಒದಗಿಸಿಕೊಡುತ್ತಿದ್ದು, ಅಂದರೆ 60,000 ರು.ಗಳನ್ನು ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಈ ಸೌಲಭ್ಯವು ವೆರಿಯಂಟ್ ಅವಲಂಬಿಸಿರಲಿದೆ. ಹಾಗೆಯೇ ನಿಮ್ಮಲ್ಲಿರುವ ಹಳೆ ಕಾರನ್ನು ಮಾರಾಟ ಮಾಡಲು ಬಯಸುವುದಾದರೆ ಎಕ್ಸ್‌ಚೇಂಜ್ ಆಫರ್ ಲಭ್ಯವಿರಲಿದ್ದು, ಇದರಿಂದ ಹೆಚ್ಚುವರಿ 20,000 ರು.ಗಳನ್ನು ಉಳಿಸಬಹುದಾಗಿದೆ.

ಆಡಿ

ಆಡಿ

ಆಡಿ ಕ್ಯೂ ಎಸ್‌ಯುವಿ ಖರೀದಿ ವೇಳೆ ಬರೋಬ್ಬರಿ 3.5 ಲಕ್ಷ ರು.ಗಳನ್ನು ಸೇವ್ ಮಾಡಬಹುದಾಗಿದೆ. ಡೀಸೆಲ್ ವರ್ಷನ್‌ಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ.

ಬಿಎಂಡಬ್ಲ್ಯು

ಬಿಎಂಡಬ್ಲ್ಯು

ಬಿಎಂಡಬ್ಲ್ಯು ಎಕ್ಸ್1 ಆವೃತ್ತಿಗೂ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದ್ದು, ರು. 2.5 ಲಕ್ಷಗಳನ್ನು ಉಳಿತಾಯ ಮಾಡಬಹುದಾಗಿದೆ.

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ಪೆಟ್ರೋಲ್ ಬೀಟ್- 38,000 ರು. ವರೆಗೆ ಡಿಸ್ಕೌಂಟ್,

ಡೀಸೆಲ್ ಬೀಟ್- 32,000 ರು. ವರೆಗೆ ಡಿಸ್ಕೌಟ್,

ಎಕ್ಸ್‌ಚೇಂಜ್ ಬೋನಸ್ಸು ರು. 15,000 ವರೆಗೆ,

ಲಾಯಲ್ಟಿ ಬೋನಸ್ಸು ರು. 10,000 ವರೆಗೆ

ಷೆವರ್ಲೆ ಕ್ರೂಜ್

ಷೆವರ್ಲೆ ಕ್ರೂಜ್

ಷೆವರ್ಲೆ ಕ್ರೂಜ್- 60,000 ರು. ವರೆಗೆ ಡಿಸ್ಕೌಂಟ್

ಎಕ್ಸ್‌ಚೇಂಜ್ ಬೋನಸ್ಸು ರು. 15,000 ವರೆಗೆ

ಫಿಯೆಟ್

ಫಿಯೆಟ್

ಪುಂಟೊ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗೆ ರು. 50,000 ವರೆಗೆ ಎಕ್ಸ್‌ಚೇಂಜ್ ಬೋನಸ್,

20,000 ರು.ಗಳ ಗಿಫ್ಟ್ ಚೆಕ್,

ಮೊದಲ ವರ್ಷದ ಉಚಿತ ವಿಮೆ- 25,000 ರು. ವರೆಗೆ ಉಳಿತಾಯ (ವೆರಿಯಂಟ್ ಆಧರಿಸಿ)

ರೆನೊ

ರೆನೊ

ಪಲ್ಸ್‌ ಆವೃತ್ತಿಗೆ ರು. 25,000 ವರೆಗೆ ಡಿಸ್ಕೌಂಟ್,

ಉಚಿತ ವಿಮೆ ಮೂಲಕ 26,000 ರು.ಗಳ ಉಳಿತಾಯ (ವೆರಿಂಯಟ್ ಆಧರಿಸಿ),

ಎಕ್ಸ್‌ಚೇಂಜ್ ಬೋನಸ್ಸು ರು. 10,000 ವರೆಗೆ

ರೆನೊ ಫ್ಲೂಯೆನ್ಸ್

ರೆನೊ ಫ್ಲೂಯೆನ್ಸ್

ರು. 20,000 ವರೆಗೆ ರಿಯಾಯಿತಿ,

ಮೊದಲ ವರ್ಷದ ಉಚಿತ ವಿಮೆ (ರು. 60,000 ವರೆಗೆ ಉಳಿತಾಯ),

ಇದರ ಜತೆಗೆ ಕಾರ್ಪೋರೇಟ್ ಡಿಸ್ಕೌಂಟ್ ರು. 20,000 ವರೆಗೆ

ಸ್ಕೋಡಾ

ಸ್ಕೋಡಾ

ಸ್ಕೋಡಾ ಯೆಟಿ ಎಸ್‌ಯುವಿಗೆ 1.5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್

ಸ್ಕೋಡಾ ಲೌರಾ

ಸ್ಕೋಡಾ ಲೌರಾ

1.5 ಲಕ್ಷ ರು.ಗಳ ವರೆಗೆ ರಿಯಾಯಿತಿ ದರ,

ಎಲ್ಲ ವೆರಿಯಂಟ್‌ಗಳಿಗೆ ಲಭ್ಯ

ನಿಸ್ಸಾನ್

ನಿಸ್ಸಾನ್

ನಿಸ್ಸಾನ್ ಇವಾಲಿಯಾ ಎಂಪಿವಿ ಎಕ್ಸ್‌ಇ ವೆರಿಯಂಟ್‌ಗೆ ರು. 70,000 ವರೆಗೆ ಡಿಸ್ಕೌಂಟ್,

ಅದೇ ಹೊತ್ತಿಗೆ ಟಾಪ್ ಎಂಡ್ ಎಕ್ಸ್‌ವಿ ಮಾಡೆಲ್‌ಗೆ 1 ಲಕ್ಷ ರು.ಗಳ ವರೆಗೆ ರಿಯಾಯಿತಿ ದರ ಲಭ್ಯವಿರಲಿದೆ.

English summary
Have a read to find out some of the best deals and discounts for the month of August 2013.
Story first published: Tuesday, August 6, 2013, 9:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark