2015ರಲ್ಲಿ ಬಿಡುಗಡೆಯಾಗಲಿರುವ ಕಾರುಗಳು

ಹೊಸ ವರ್ಷ ಬಂದಿದಾಯ್ತು, ಸಂಭ್ರಮ, ಸಡಗರ ಆಚರಣೆ ಮುಗಿಲು ಮುಟ್ಟಿದ್ದಾಯ್ತು. ಈಗ ಎಲ್ಲರೂ ಎಂದಿನಂತೆ ತಮ್ಮ ತಮ್ಮ ಕಾರ್ಯ ಕಲಾಪಗಳಲ್ಲಿ ಮಗ್ನವಾಗಿಬಿಟ್ಟಿದ್ದಾರೆ. ಹಾಗಿರುವಾಗ ವಾಹನ ಜಗತ್ತು ಕೂಡಾ ಹೊಸ ಹೊಸ ನಿರೀಕ್ಷೆಗಳೊಂದಿಗೆ 2015ನೇ ವರ್ಷವನ್ನು ಬರಮಾಡಿಕೊಂಡಿದೆ.

ಹೌದು, ಪ್ರಸಕ್ತ ಸಾಲಿನಲ್ಲಿ ಅನೇಕ ಹೊಸ ಕಾರುಗಳ ಬಿಡುಗಡೆಯನ್ನು ದೇಶ ಕಾಣಲಿದೆ. ಹಿಂದಿನ ವರ್ಷಗಿಂತಲೂ ಹೆಚ್ಚಿನ ಹುಮ್ಮಸ್ಸಿನಿಂದ ಪೈಪೋಟಿ ಕಾಣಸಿಗಲಿದೆ. ದೇಶದ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳೆಲ್ಲ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿದೆ.

ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಅಂದಾಜು 25ಕ್ಕೂ ಹೆಚ್ಚು ತಾಜಾ ಹಾಗೂ ಪರಿಷ್ಕೃತ ಮಾದರಿಗಳು ದೇಶದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ಹಿನ್ನಡೆಯಲ್ಲಿರುವ ವಾಹನ ಮಾರುಕಟ್ಟೆಗೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯಲ್ಲಿದೆ.

ಮಹೀಂದ್ರ ಮಿನಿ ಎಸ್‌ಯುವಿ

ಮಹೀಂದ್ರ ಮಿನಿ ಎಸ್‌ಯುವಿ

2014ನೇ ವರ್ಷ ಕಾಂಪಾಕ್ಟ್ ಸೆಡಾನ್ ಕಾರುಗಳ ಪಾಲಾಗಿದ್ದರೆ 2015ನೇ ಸಾಲು ಯುಟಿಲಿಟಿ ವಾಹನಗಳ ಪಾಲಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಯಾಕೆ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ತಮ್ಮ ಬಹು ಬಳಕೆಯ ವಾಹನಗಳೊಂದಿಗೆ ಸಾಲು ಸಾಲಾಗಿ ಮುಂದೆ ಬಂದು ನಿಂತಿದೆ. ಇದರಲ್ಲಿ ದೇಶದ ಅತಿ ದೊಡ್ಡ ಎಸ್‌ಯುವಿ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರದ ಮಿನಿ ಅಥವಾ ಮೈಕ್ರೋ ಎಸ್‌ಯುವಿ ಪ್ರಮುಖವಾಗಿದೆ. ಎಸ್101 ಎಂಬ ಕೋಡ್ ಪಡೆದುಕೊಂಡಿರುವ ಮಹೀಂದ್ರ ಮೈಕ್ರೋ ಎಸ್‌ಯುವಿ ನಾಲ್ಕರಿಂದ ಆರು ಲಕ್ಷ ರು.ಗಳ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ.

ನಿರೀಕ್ಷಿತ ಲಾಂಚ್: 2015 ಸೆಪ್ಟೆಂಬರ್, ಅಕ್ಟೋಬರ್

ನಿರೀಕ್ಷಿತ ದರ: 4-6 ಲಕ್ಷ ರು.

ದಟ್ಸನ್ ಗೊ ಪ್ಲಸ್

ದಟ್ಸನ್ ಗೊ ಪ್ಲಸ್

ಈಗಾಗಲೇ ನಾವು ವರದಿ ಮಾಡಿರುವಂತೆಯೇ ಫ್ಯಾಮಿಲಿ ವಿಭಾಗದಲ್ಲಿ ದಟ್ಸನ್ ಗೊ ಪ್ಲಸ್ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ. ನಾಲ್ಕು ಮೀಟರ್ ಉದ್ದ ಪರಿಮಿತಿಯನ್ನು ಕಾಯ್ದುಕೊಂಡಿರುವ ದಟ್ಸನ್ ಗೊ ಪ್ಲಸ್ ಅನ್ನು ದೊಡ್ಡ ಹ್ಯಾಚ್‌ಬ್ಯಾಕ್ ಕಾರು ಎಂದೇ ವರ್ಣಿಸಬಹುದು. ಈ ಏಳು ಸೀಟುಗಳ ಕಾರು ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ನಿರೀಕ್ಷಿತ ಲಾಂಚ್: 2015 ಜನವರಿ

ನಿರೀಕ್ಷಿತ ದರ: 5 ಲಕ್ಷ ರು. ಪರಿಧಿಯೊಳಗೆ

ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ

ಇದೇ ಸಂದರ್ಭದಲ್ಲಿ ದಟ್ಸನ್ ರೆಡಿ ಗೊ ಎಂಬ ಎಂಟ್ರಿ ಲೆವೆಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಜಪಾನ್ ಮೂಲದ ನಿಸ್ಸಾನ್ ಸಂಸ್ಥೆ ಹೊಂದಿದೆ. ಇನ್ನೊಂದೆಡೆ ರೆನೊ ಕೂಡಾ ಎಂಟ್ರಿ ಲೆವೆಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ನಿರೀಕ್ಷಿತ ಲಾಂಚ್: 2015 ಅಕ್ಟೋಬರ್

ನಿರೀಕ್ಷಿತ ದರ: 2,8 ಲಕ್ಷ ರು.

ಮಾರುತಿ ಸುಜುಕಿ ಎಸ್ ಕ್ರಾಸ್

ಮಾರುತಿ ಸುಜುಕಿ ಎಸ್ ಕ್ರಾಸ್

ಈ ನಡುವೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, 10 ಲಕ್ಷ ರು.ಗಳ ಪರಿಧಿಯಲ್ಲಿ ಹೊಸತಾದ ಕ್ರಾಸೋವರ್ ಮಾದರಿಯನ್ನು ಪರಿಚಯಿಸುವ ಯೋಜನೆ ಹೊಂದಿದೆ. ಇದು ಮಾರುತಿಯಿಂದ ದೇಶಕ್ಕೆ ಪರಿಚಯವಾಗಲಿರುವ ಮೊದಲ ಕ್ರಾಸೋವರ್ ಎನಿಸಿಕೊಳ್ಳಲಿದೆ.

ನಿರೀಕ್ಷಿತ ಲಾಂಚ್: 2015 ಮಾರ್ಚ್

ನಿರೀಕ್ಷಿತ ದರ: 9-12.5 ಲಕ್ಷ ರು.

ಸೆಲೆರಿಯೊ ಡೀಸೆಲ್

ಸೆಲೆರಿಯೊ ಡೀಸೆಲ್

ಇದೇ ಸಂದರ್ಭದಲ್ಲಿ ಪೆಟ್ರೋಲ್ ಮಾದರಿಯ ಯಶಸ್ಸಿನ ಬಳಿಕ ಸೆಲೆರಿಯೊ ಡೀಸೆಲ್ ಮಾದರಿ ಬಿಡುಗಡೆ ಮಾಡುವ ಯೋಜನೆಯನ್ನು ಮಾರುತಿ ಹೊಂದಿದೆ.

ನಿರೀಕ್ಷಿತ ಲಾಂಚ್: 2015 ಫೆಬ್ರವರಿ

ನಿರೀಕ್ಷಿತ ದರ: 4.3-5.5 ಲಕ್ಷ ರು.

ಹ್ಯುಂಡೈ ಐಎಕ್ಸ್25

ಹ್ಯುಂಡೈ ಐಎಕ್ಸ್25

ಮಾರುತಿಯ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಕೂಡಾ 2015ನೇ ಸಾಲಿನಲ್ಲಿ ಉತ್ತಮ ಮಾರುಕಟ್ಟೆಯನ್ನು ಗುರಿಯಿರಿಸಿಕೊಂಡಿದೆ. ಇದರಂತೆ ಅತಿ ಹೆಚ್ಚು ಬೇಡಿಕೆಯಿರುವ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮೋಡಿ ಮಾಡಲು ಹೊರಟಿರುವ ಸಂಸ್ಥೆಯು ಐಎಕ್ಸ್25 ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದು ಪ್ರಮುಖವಾಗಿಯು ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಮಾದರಿಗಳಿಗೆ ಪ್ರತಿಸ್ಪರ್ಧೆ ಓಡ್ಡಲಿದೆ.

ನಿರೀಕ್ಷಿತ ಲಾಂಚ್: 2015 ಸೆಪ್ಟೆಂಬರ್-ಅಕ್ಟೋಬರ್

ನಿರೀಕ್ಷಿತ ದರ: 7.5-10 ಲಕ್ಷ ರು.

ನ್ಯಾನೋ ಎಎಂಟಿ

ನ್ಯಾನೋ ಎಎಂಟಿ

ಕಳೆದ ಕೆಲವು ಸಮಯದಿಂದಲೇ ನ್ಯಾನೋ ಆಟೋಮ್ಯಾಟಿಕ್ ಕಾರಿನ ಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಇದೀಗ ವಿಶ್ವದ ಅತಿ ಅಗ್ಗದ ಕಾರಿಗೆ ಹೊಸ ಸ್ಪರ್ಶ ನೀಡಲು ಹೊರಟಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯು ನ್ಯಾನೋ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಮಾದರಿ ಪರಿಚಯಿಸುವ ಯೋಜನೆ ಹೊಂದಿದೆ.

ನಿರೀಕ್ಷಿತ ಲಾಂಚ್: 2015 ಜುಲೈ-ಆಗಸ್ಟ್

ನಿರೀಕ್ಷಿತ ದರ: 2.5-3.5 ಲಕ್ಷ ರು.

ಟಾಟಾ ಬೋಲ್ಟ್

ಟಾಟಾ ಬೋಲ್ಟ್

ಟಾಟಾದ ಹೊಸ ವಿನ್ಯಾಸ ತಂತ್ರಗಾರಿಕೆಯಲ್ಲಿ ನಿರ್ಮಾಣಗೊಂಡಿರುವ ಟಾಟಾ ಬೋಲ್ಟ್‌ ಬಿಡುಗಡೆ ಮೊದಲೇ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದು, ಬಿಡುಗಡೆ ಬಳಿಕವೂ ಇದೇ ಬೇಡಿಕೆ ಕಾಯ್ದುಕೊಳ್ಳುವ ನಿರೀಕ್ಷೆಯಿದೆ. ಇದು ಟಾಟಾ ಮೇಲಿರುವ ಟ್ಯಾಕ್ಸಿ ಕಪ್ಪು ಪಟ್ಟಿಯನ್ನು ಅಳಿಸಿ ಹಾಕುವ ನಿರೀಕ್ಷೆಯಲ್ಲಿದೆ.

ನಿರೀಕ್ಷಿತ ಲಾಂಚ್: 2015 ಜನವರಿ

ನಿರೀಕ್ಷಿತ ದರ:

ಟಾಟಾ ಸಂಸ್ಥೆಯು ಕೈಟ್ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಪ್ರಸ್ತುತ ಕಾರು ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು, ಆಗಸ್ಟ್‌ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಇದು 4ರಿಂದ 7 ಲಕ್ಷ ರು.ಗಳ ಬೆಲೆ ಪರಿಧಿಯನ್ನು ಪಡೆಯಲಿದೆ.

ಹ್ಯುಂಡೈ ಎಲೈಟ್ ಐ20 ಕ್ರಾಸ್

ಹ್ಯುಂಡೈ ಎಲೈಟ್ ಐ20 ಕ್ರಾಸ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದಲ್ಲಿ ಕ್ರಾಸೋವರ್ ವಿಭಾಗವು ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದೆ. ಇದು ಆಫ್ ರೋಡ್ ಪ್ರಿಯರ ಜೊತೆ ಫ್ಯಾಮಿಲಿ ಕಾರು ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಇದರಂತೆ ಹ್ಯುಂಡೈ ಸಂಸ್ಥೆಯು ಎಲೈಟ್ ಐ20 ಕ್ರಾಸ್ ಕ್ರಾಸೋವರ್ ಮಾದರಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಮಾರುತಿ ವೈಆರ್‌ಎ ಪ್ರೀಮಿಯಂ ಹ್ಯಾಚ್‌ಬ್ಯಾಕ್

ಮಾರುತಿ ವೈಆರ್‌ಎ ಪ್ರೀಮಿಯಂ ಹ್ಯಾಚ್‌ಬ್ಯಾಕ್

ಪ್ರಯಾಣಿಕ ವಿಭಾಗದಿಂದ ಮೇಲ್ದರ್ಜೆಯ ವಿಭಾಗದತ್ತವೂ ಕಣ್ಣಾಯಿಸಿರುವ ಮಾರುತಿಯು ವೈಆರ್‌ಎ ಕೋಡ್ ಹೆಸರನ್ನಿಟ್ಟಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಸ್ವಿಫ್ಟ್ ಮೇಲ್ಗಡೆ ಗುರುತಿಸಿಕೊಳ್ಳಲಿರುವ ಹೊಸ ಕಾರು, ಐಕಾನಿಕ್ ಮಾದರಿಯೊಂದಿಗೆ ತನ್ನ ವಿನ್ಯಾಸವನ್ನು ಹಂಚಿಕೊಳ್ಳಲಿದೆ. ಅಂದ ಹಾಗೆ ಮಾರುತಿಯ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಎರಡು ಪೆಟ್ರೋಲ್ (1.2 ಲೀಟರ್ ಮತ್ತು 1.4 ಲೀಟರ್) ಮತ್ತು ಡೀಸೆಲ್ ಎಂಜಿನ್ (1.3 ಲೀಟರ್) ಆಯ್ಕೆಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಏತನ್ಮಧ್ಯೆ ಮಾರುತಿ ಸಂಸ್ಥೆಯು ಸ್ವಿಫ್ಟ್ ಡಿಜೈರ್, ಎರ್ಟಿಗಾ ಹಾಗೂ ವ್ಯಾಗನಾರ್ ಫೇಸ್‌ಲಿಫ್ಟ್ ತಯಾರಿಯಲ್ಲಿ ತೊಡಗಿಸಿಕೊಂಡಿದೆ.

 ಹೋಂಡಾ ಜಾಝ್

ಹೋಂಡಾ ಜಾಝ್

ತವರೂರಾದ ಜಪಾನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶಸ್ಸು ಕಂಡಿರುವ ಹೋಂಡಾ ಜಾಝ್ ಕಳೆದ ವರ್ಷವೇ ದೇಶದ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿತ್ತಾದರೂ ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಪ್ರಸ್ತುತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಪ್ರಸಕ್ತ ಸಾಲಿನಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ರೆನೊ ಲೊಡ್ಜಿ ಎಂಪಿವಿ

ರೆನೊ ಲೊಡ್ಜಿ ಎಂಪಿವಿ

ನಾವು ಈಗಾಗಲೇ ವರದಿ ಮಾಡಿರುವಂತೆಯೇ ರೆನೊ ಲೊಡ್ಜಿ ಎಂಪಿವಿ ಕಾರನ್ನು ಇದೇ ಸಾಲಿನಲ್ಲಿ ಬಿಡುಗಡೆ ಮಾಡಲಿದೆ. ಇದರಂತೆ ಸಂಸ್ಥೆಯು ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಿದೆ. ಹಾಗಿದ್ದರೂ ಎಂಜಿನ್ ಹಾಗೂ ತಂತ್ರಜ್ಞಾನದ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

ಫೋರ್ಡ್ ಫಿಗೊ ಕಾಂಪಾಕ್ಟ್ ಸೆಡಾನ್

ಫೋರ್ಡ್ ಫಿಗೊ ಕಾಂಪಾಕ್ಟ್ ಸೆಡಾನ್

ಇಕೊಸ್ಪೋರ್ಟ್ ಯಶಸ್ಸಿನಿಂದ ಉತ್ಸಾಹಿತಗೊಂಡಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಇದೇ ಸಾಲಿನಲ್ಲಿ ಹೊಚ್ಚ ಹೊಸತಾದ ಫಿಗೊ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ. ಈ ಕಾರಿನಲ್ಲಿ ನೂತನ ತಂತ್ರಗಾರಿಕೆ ಆಳವಡಿಸುವ ಸಾಧ್ಯತೆಯಿದೆ.

ಇನ್ನುಳಿದಂತೆ ಫಿಯೆಟ್ ಅಬಾರ್ತ್ ಕಾರು ಸಹ ಪ್ರಸಕ್ತ ಸಾಲಿನಲ್ಲೇ ದೇಶದ ರಸ್ತೆ ಪ್ರವೇಶಸಿಲಿದೆ.

Most Read Articles

Kannada
English summary
While 2014 year belonged to compact sedans, 2015 will be a year of utility vehicles. At least 25 launches are expected next year.
Story first published: Friday, January 2, 2015, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X